#ಲೋಕೇಶ್_ಈಸೂರು_ಹೆಸರು_ಕೇಳದವರು_ಇಲ್ಲ
#ಅವರ_ಹೋರಾಟಗಳು_ಜನಮಾನಸದಲ್ಲಿದೆ
#ಅವರು_ಕರ್ನಾಟಕದ_ಗದ್ದರ್.
#ದಲಿತ_ಸಂಘರ್ಷ_ಸಮಿತಿ_ಸಂಸ್ಥಾಪಕರಾದ_ಬಿ_ಕೃಷ್ಣಪ್ಪರು_ಪರಿಚಯಿಸಿದ
#ಈಸೂರು_ಲೋಕೇಶ್_ನಮ್ಮ_ಇಡೀ_ಪರಿವಾರಕ್ಕೆ_ಆಪ್ತರಾಗಿದ್ದರು
#esoorulokesh #dss #bkrishnappa #shivamogga #advocates #gaddar
ಲೋಕೇಶ್ ಈಸೂರು ಹೆಸರು ಕೇಳದವರು ಇಲ್ಲ ಅವರ ಹೋರಾಟಗಳು ಜನಮಾನಸದಲ್ಲಿದೆ ಅವರು ಕರ್ನಾಟಕದ ಗದ್ದರ್.
ಅವರನ್ನ ಪ್ರಥಮ ಬಾರಿಗೆ ನಾನು ನೋಡಿದ್ದು1984 ರಲ್ಲಿ ಶಿವಮೊಗ್ಗದಲ್ಲಿ ಅವತ್ತು ದಲಿತ ಸಂಘರ್ಷ ಸಮಿತಿಯನ್ನು ಸಂಸ್ಥಾಪನೆ ಮಾಡಿದ ಬಿ. ಕೃಷ್ಣಪ್ಪನವರು ಆನಂದಪುರಂದ ರೈತ ಬಂಧು ಗ್ರಾಮೋದ್ಯೋಗದ ಕಾರ್ಮಿಕರ ಬೃಹತ್ ಸೈಕಲ್ ರ್ಯಾಲಿ ಶಿವಮೊಗ್ಗ ಸರ್ಕ್ಯೂಟ್ ಹೌಸ್ ಹತ್ತಿರ ಸ್ವಾಗತಿಸಿ ನಂತರ ಡಿಸಿ ಕಚೇರಿಯಲ್ಲಿ ದರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿ ನಂತರ ಸೈಕಲ್ ರ್ಯಾಲಿಯ ಎಲ್ಲಾ ಗೆಳೆಯರನ್ನು ಸಹ್ಯಾದ್ರಿ ಕಾಲೇಜಿನ ವಿದ್ಯಾರ್ಥಿನಿಲಯಕ್ಕೆ ಕರೆದೊಯ್ದು ಅಲ್ಲಿ ವಿದ್ಯಾರ್ಥಿ ನಾಯಕ ಪೈಲ್ವಾನ್ ಲೋಕೇಶ್ ಈಸೂರಿಗೆ ನಮ್ಮನ್ನೆಲ್ಲ ಪರಿಚಯಿಸಿ ಎಲ್ಲರೂ ಊಟ ಮಾಡಿ ಹೋಗುವಂತೆ ತಿಳಿಸಿದ್ದರು.
ವಿದ್ಯಾರ್ಥಿ ನಿಲಯದ ಮುಖಂಡ ಲೋಕೇಶ್ ಈಸೂರು ನಮ್ಮೆಲ್ಲರನ್ನು ಆತ್ಮೀಯವಾಗಿ ಕರೆದು ಹೊಟ್ಟೆ ತುಂಬ ಊಟ ಬಡಿಸಿ ವಿದಾಯ ಹೇಳಿದ್ದರು.
ನಂತರ ನಿರಂತರವಾಯಿತು.
ಪ್ರಗತಿಪರ ವಿದ್ಯಾರ್ಥಿ ಕೇಂದ್ರ (PVK) ಇತ್ಯಾದಿ ಸಂಘಟನೆಗಳ ಕಾರ್ಯಕ್ರಮಕ್ಕಾಗಿ ನಮ್ಮ ಕೈಲಾದ ಸಹಾಯ ನೀಡುವಂತೆ ಲೋಕೇಶರ ವಿನಂತಿಗೆ ನಾನು ಕೈ ಜೋಡಿಸುತ್ತಿದ್ದೆ.
ನಮ್ಮ ಊರ ಮಾರ್ಗದಲ್ಲಿ ಬಂದಾಗೆಲ್ಲ ಊಟ ವಾಸ್ತವ್ಯ ನಮ್ಮ ಮನೆಯಲ್ಲೇ ಆಗುತ್ತಿತ್ತು ಈ ರೀತಿ ಲೋಕೇಶ್ ಈಸೂರು ನನಗೆ ಮಾತ್ರ ಅಲ್ಲ ನನ್ನ ಇಡೀ ಕುಟುಂಬಕ್ಕೆ ಆತ್ಮೀಯರಾದರು.
ಸಾಗರ ತಾಲೂಕಿನ ಕೃಷಿ ಇಲಾಖೆಯ ಅವ್ಯವಹಾರ ಬಯಲು ಮಾಡುವ ನಮ್ಮ ಹೋರಾಟದಲ್ಲಿ ಅವರು ನೀಡಿದ ಮಾರ್ಗದರ್ಶನ ನಾನು ಶಿರಸಾ ವಹಿಸಿ ಪಾಲಿಸಿದೆ ಆದ್ದರಿಂದ ಹೋರಾಟ ಅಂತಿಮವಾಗಿ ಗುರಿ ಮುಟ್ಟಿ ತಪ್ಪು ಮಾಡಿದವರು ಜೈಲಿಗೆ ಹೋಗುವಂತಾಯಿತು.
ಆನಂದಪುರಂ ಜಿಲ್ಲಾ ಪಂಚಾಯತ್ ಕ್ಷೇತ್ರದಲ್ಲಿ ಅನೇಕ ಜನಜಾಗೃತಿ ಕಾರ್ಯಕ್ರಮಗಳನ್ನ ಲೋಕೇಶ್ ಈಸೂರ್ ಅವರ ಸಲಹೆ ಮೇರೆಗೆ ಮಾರ್ಗದರ್ಶನದ ಮೇರೆಗೆ ಹಮ್ಮಿಕೊಂಡಿದ್ದೇವು.
ಜನರ ಸಹಭಾಗಿತ್ವದೊಂದಿಗೆ ಸರ್ಕಾರದ ಕಾಮಗಾರಿಗಳ ಗುಣಮಟ್ಟದ ನಿರ್ವಹಣೆಗೆ ಹಳ್ಳಿಹಳ್ಳಿಗಳಲ್ಲಿ ನಾನು ಗ್ರಾಮ ಸಮಿತಿ ರಚಿಸಿದೆ ಆ ಸಮಿತಿಗಳಿಗೆ ಮಾರ್ಗದರ್ಶನ ನೀಡಲು ಲೋಕೇಶ್ ಈಸೂರು ಬರುತ್ತಿದ್ದರು.
ಆನಂದಪುರಂನಲ್ಲಿ ನಡೆದ ಜಿಲ್ಲಾ ಮಟ್ಟದ ಯುವಜನ ಮೇಳದಲ್ಲಿ ಲೋಕೇಶ್ ಈಸೂರ್ ಅವರನ್ನೇ ಎಲ್ಲಾ ಸಾಂಸ್ಕೃತಿಕ ಕಾರ್ಯಕ್ರಮಗಳ ತೀರ್ಪುಗಾರರ ಮುಖ್ಯಸ್ಥರನ್ನಾಗಿ ನೇಮಿಸಿದ್ದೆ ಇದು ದೊಡ್ಡಸುದ್ದಿ ಆಗಿತ್ತು, ಅಧಿಕಾರಿಗಳು ಮತ್ತು ಹಳೆಯ ತೀರ್ಪುಗಾರರು ಇವರ ಆಯ್ಕೆ ದೊಡ್ಡದಾಗಿ ವಿರೋಧಿಸಿದ್ದರು.
ಆದರೆ ನಮಗೆ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದ ಕೆ ಶಿವರಾಂ ಅವರ ಬೆಂಬಲ ಇದ್ದಿದ್ದರಿಂದ ನಮ್ಮ ಮಾತೇ ನಡೆಯಿತು.
ಈ ಫೋಟೋದ ಬ್ಯಾನರ್ ಪ್ರಕಾರ 1999 ಮಾರ್ಚ್ ತಿಂಗಳಲ್ಲಿ ಆನಂದಪುರಂನಲ್ಲಿ ನಡೆದ ನಮ್ಮ ಪ್ರತಿಭಟನಾ ಸಭೆ,ಸುಮಾರು 25 ವರ್ಷದ ಹಿಂದಿನ ಚಿತ್ರ ಆನಂದಪುರಂನ ಬಸ್ ನಿಲ್ದಾಣದ ಸಮೀಪ ನಡೆದ ಪ್ರತಿಭಟನಾ ಸಭೆಯ ಚಿತ್ರ ಯಾವ ಪ್ರತಿಭಟನೆ ಎನ್ನುವುದು ಮರೆತು ಹೋಗಿದೆ.
ಈ ಚಿತ್ರದಲ್ಲಿ ನಮ್ಮ ವೇದಿಕೆ ಹಳೆಯ ಲಾರಿ ಒಂದರ ಹಿಂಭಾಗ, ಅದರ ಮೇಲೆ ವೇದಿಕೆ ಮಾಡಿ ನಾವೆಲ್ಲ ಕುಳಿತಿದ್ದೇವೆ.
ನನ್ನ ಹಿರಿಯ ಗೆಳೆಯರಾದ ಗನ್ನಿಸಾಹೇಬರು ಇದ್ದಾರೆ,
ವೇದಿಕೆಯಲ್ಲಿ ಭಾಷಣ ಮಾಡುತ್ತಿರುವುದು ಲೋಕೇಶ್ ಈಸೂರು.
ನಂತರ ಲೋಕೇಶ್ ಈಸೂರು ನೋ ಎಂಟ್ರಿಗೆ ಸೇರಿದರು, ಅವರು ನಕ್ಸಲೈಟ್ ಹೋರಾಟದ ಕಡೆ ಆಕರ್ಷಿತರಾದರು ನಂತರ ನನ್ನ ಅವರ ಸಂಪರ್ಕ ಕಡಿಮೆ ಆಯಿತು ಅದರ ನಂತರ ಅವರು ಕಾನೂನು ಪದವಿ ವಿದ್ಯಾಭ್ಯಾಸ ಪ್ರಾರಂಭಿಸಿ ವಕೀಲರೂ ಆದರು ಆನಂತರ ಅನಾರೋಗ್ಯದಿಂದ ಸಣ್ಣ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದರು.
ಜನಪರ ಹೋರಾಟಗಾರರಾದ ಈಸೂರು ಲೋಕೇಶ್ ಅವರು ಅತ್ಯುತ್ತಮ ವಾಗ್ಮಿ ಆಗಿದ್ದರು.
ವೇದಿಕೆಯ ಮೇಲೆ ಗಂಡು ಧ್ವನಿಯಲ್ಲಿ ಗದ್ದರ್ ರಂತೆ ಹಾಡುವ ಚಾತುರ್ಯ ಅವರದ್ದು.
ಪೈಲ್ವಾನರಾಗಿದ್ದ ಈಸೂರು ಲೋಕೇಶ್ ಗೆ ಹುಟ್ಟಿನಿಂದಲೇ ಬಂದಿದ್ದ ಈ ಬಳುವಳಿಗಳಿಂದ ಅವರ ಮಾತು ಹಾಡು ಕೇಳಲು ಜನ ಹಾತೊರೆಯುತ್ತಿದ್ದರು ಮತ್ತು ಗಂಟೆಗಟ್ಟಲೆ ಕಾಯುತ್ತಿದ್ದರು.
ಆ ಕಾಲದಲ್ಲಿ ನಮ್ಮ ಹೋರಾಟಗಳು ಕ್ಯಾಮರದಲ್ಲಿ ಚಿತ್ರಿಕರಿಸಲು ಬೇಕಾದ ಹಣ ಹೊಂದಿಸಲು ಸಾಧ್ಯವಿಲ್ಲದ ಕಾಲವಾದ್ದರಿಂದ ಲೋಕೇಶ್ ಈಸೂರು ಅವರ ಫೋಟೋಗಳು ನನ್ನಲ್ಲಿ ಇಲ್ಲವೇ ಇಲ್ಲ.
ಈ ಫೋಟೋ 25 ವರ್ಷದ ಹಿಂದಿನ ನೆನಪು ಮರುಕಳಿಸಿದೆ ಈ ಲೇಖನ ಗೆಳೆಯ ದಿವಂಗತ ಲೋಕೇಶ್ ಈಸೂರಿಗೆ ಅರ್ಪಣೆ.
Comments
Post a Comment