#ಶಿವಮೊಗ್ಗದ_ಹಿರಿಯ_ಪತ್ರಕರ್ತ_ಎಸ್_ಚಂದ್ರಕಾಂತ್
#ಶಿವಮೊಗ್ಗ_ಟೈಮ್ಸ್_ಸಂಪಾದಕರು
#ರಾಜ್ಯೋತ್ಸವ_ಪ್ರಶಸ್ತಿ_ವಿಜೇತರು_ಮುಂದಿನ_ತಿಂಗಳು
#ಅಕ್ಟೋಬರ್_15_ಇವರ_74ನೇ_ಹುಟ್ಟು_ಹಬ್ಬ
#ಶಿವಮೊಗ್ಗದಲ್ಲಿ_1978ರಲ್ಲಿ_ರಾಜ್ಯಮಟ್ಟದ_ಕಾರ್ಯನಿರತ_ಪತ್ರಕರ್ತರ_ಸಮ್ಮೇಳನ_ನಡೆಸಿದ್ದರು.
#ಕೇಂದ್ರ_ವಿದೇಶಾಂಗ_ಸಚಿವರಾಗಿದ್ದ_ವಾಜಪೇಯಿ_ಈ_ಸಮ್ಮೇಳನ_ಉದ್ಘಾಟಿಸಿದ್ದರು
#shimogatimes #ShivamoggaNews #PressConference #karnataka #pressclubbangalore #PressClub #stateworkingjournalist
ಶಿವಮೊಗ್ಗದ ಹಿರಿಯ ಪತ್ರಕರ್ತರಾದ ಶಿವಮೊಗ್ಗ ಟೈಮ್ಸ್ ಸಂಪಾದಕರಾದ #ಎಸ್_ಚಂದ್ರಕಾಂತ್ 74ರ ಹುಟ್ಟು ಹಬ್ಬದ ಹೊಸ್ತಿನಲ್ಲಿದ್ದಾರೆ ಇವರ ಜನ್ಮ ದಿನಾಂಕ 15 ಅಕ್ಟೋಬರ್ 1951.
ಎಸ್ ಚಂದ್ರಕಾಂತ್ ರಾಜ್ಯ ಪ್ರಶಸ್ತಿ ಪುರಸ್ಕೃತರು ಕೂಡ
ಇವರು 1978ರಲ್ಲಿ ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಂಟಿ ಪ್ರಧಾನ ಕಾರ್ಯದರ್ಶಿಗಳಾಗಿದ್ದರು ಆಗ ಶಿವಮೊಗ್ಗ ಜಿಲ್ಲಾ ಕಾರ್ಯ
ನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದವರು #ಶರಾವತಿ_ವಾರಪತ್ರಿಕೆ ಸಂಪಾದಕರಾದ ಮಲ್ಲಾರಾಧ್ಯರು.
ಆಗ ಕರ್ನಾಟಕ ರಾಜ್ಯ ಕಾರ್ಯನಿರತಪತ್ರಕರ್ತರ ಸಂಘದ ಅಧ್ಯಕ್ಷರಾಗಿದ್ದವರು ವಡ್ದರ್ಸೇ ರಘುರಾಮ್ ಶೆಟ್ಟರು ಇವರೆಲ್ಲರೂ ಸೇರಿ 1978 ರಲ್ಲಿ #ಶಿವಮೊಗ್ಗದಲ್ಲಿ_ರಾಜ್ಯಮಟ್ಟದ_ಕಾರ್ಯನಿರತ_ಪತ್ರಕರ್ತರ_ಸಮ್ಮೇಳನ ನಡೆಸಿದ್ದರು.
ಆಗ ಕೇಂದ್ರ ಸರ್ಕಾರದಲ್ಲಿ ವಿದೇಶಾಂಗ ಸಚಿವರಾಗಿದ್ದ #ವಾಜಪೇಯಿ ಅವರನ್ನು ಮತ್ತು ಕಾರ್ಮಿಕ ಸಚಿವರಾಗಿದ್ದ ರವೀಂದ್ರರನ್ನು ಆಹ್ವಾನಿಸಿದ್ದರು.
ಇವರು ಶಿವಮೊಗ್ಗದಲ್ಲಿ ಎಸ್ ಎಸ್ ಎಲ್ ಸಿ ಓದುವಾಗ ಆಗಿನ ಪತ್ರಕರ್ತರಾದ ಮಲ್ಲರಾಧ್ಯರ ಶರಾವತಿ ವಾರಪತ್ರಿಕೆ ಕಾರ್ಯಾಲಯಕ್ಕೆ ಹೋಗಿ ಅವರಿಗೆ ಕಾಫಿ ಸಿಗರೇಟು ತಂದುಕೊಟ್ಟು ಒಂದು ಪೇಜ್ ವರದಿ ಬರೆದು ಶಾಲೆಗೆ ಹೋಗುತ್ತಿದ್ದರಂತೆ.
ಮಲ್ಲಾರಾಧ್ಯರು ಆ ಕಾಲದಲ್ಲಿ ಬಿಎ- ಎಲ್ ಎಲ್ ಬಿ ವ್ಯಾಸಂಗ ಮಾಡಿ ಮೈಸೂರಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದವರು ಅವರು ಶಿವಮೊಗ್ಗ ಜಿಲ್ಲೆಯ ಮೊದಲ ಪತ್ರಿಕೋದ್ಯಮ ಪದವಿ ಪಡೆದವರು ಅವರ ವಾರಪತ್ರಿಕೆ ಶರಾವತಿ ವಾರಪತ್ರಿಕೆ.
1977 ರಲ್ಲಿ ನಾವಿಕ ಪತ್ರಿಕೆ ಪ್ರಾರಂಭಿಸಿದ ಚಂದ್ರಕಾಂತ್ ಸ್ವತಃ ವರದಿಗಾರರು ಸಂಪಾದಕರು ಆಗಿದ್ದರು ಜೊತೆಗೆ ಪತ್ರಿಕೆಗೆ ಅಕ್ಷರ ಜೋಡಿಸುವ ಪ್ರಿಂಟಿಂಗ್ ಪ್ರೆಸ್ ನಲ್ಲಿ ಅಕ್ಷರ ಜೋಡಿಸಿ, ಆಕಾಲದ ಪೆಡಲು ತುಳಿದು ಪ್ರಿಂಟ್ ಮಾಡುವ ಪ್ರಿಂಟಿಂಗ್ ಯಂತ್ರದಲ್ಲಿ ನಾವಿಕ ಪತ್ರಿಕೆ ಪ್ರಿಂಟ್ ಮಾಡಿ ನಂತರ ಸೈಕಲ್ ಮೇಲೆ ಗಲ್ಲಿ ಗಲ್ಲಿಯಲ್ಲಿ ವಿತರಣೆ ಕೂಡ ಮಾಡಿದವರು ಈ ರೀತಿ ಪತ್ರಿಕೆಯ ಎಲ್ಲಾ ಹಂತದ ಕೆಲಸ ಮಾಡಿದ ಅನುಭವ ಇವರದ್ದು.
ಆಗ ನಾವಿಕ ಪತ್ರಿಕೆಯ ಸರ್ಕ್ಯುಲೇಷನ್ 500ರಷ್ಟಿತ್ತು,ಬಿಡಿ ಪತ್ರಿಕೆ ಬೆಲೆ 10 ಪೈಸೆ ಮತ್ತು ಮಾಸಿಕ ಚೆಂದ ಎರಡು ರೂಪಾಯಿಆಗ ಪತ್ರಿಕೆಯ ಸೈಜ್ ಕ್ರೌನ್ ಸಣ್ಣ ಆಕೃತಿ ಆಗಿತ್ತು.
ನಂತರ ಸತತ 25 ವರ್ಷ ನಾವಿಕ ಪತ್ರಿಕೆ ಶಿವಮೊಗ್ಗ ನಗರದ ನಂಬರ್ ಒನ್ ಸರ್ಕ್ಯುಲೇಶನ್ ಪತ್ರಿಕೆ ಆಯ್ತು 10,000ಕ್ಕೂ ಹೆಚ್ಚು ಪ್ರತಿ ಪ್ರತಿದಿನ ಮುದ್ರಣ ಆಗುತ್ತಿತ್ತು.
ಈಗ ಎಸ್. ಚಂದ್ರಕಾಂತ್ ಶಿವಮೊಗ್ಗ ಟೈಮ್ಸ್ ಪತ್ರಿಕೆಯ ಸಂಪಾದಕರು ಈ ಪತ್ರಿಕೆ ಕೂಡ ಶಿವಮೊಗ್ಗದ ಇವತ್ತಿನ ನಂಬರ್ ಒನ್ ಸರ್ಕ್ಯುಲೇಶನ್ ಪತ್ರಿಕೆ, ಇದು ಪ್ರತಿದಿನ 8,000 ಪ್ರತಿ ಅಚ್ಚಾಗುತ್ತಿದೆ.
ಇವತ್ತಿನ ಶಿವಮೊಗ್ಗ ಟೈಮ್ಸ್ ಬಿಡಿ ಪ್ರತಿ ಬೆಲೆ ಎರಡು ರೂಪಾಯಿ, ಮಾಸಿಕ ಚಂದಾ 50 ರೂಪಾಯಿ.
ಇವರು 1978ರಲ್ಲಿ ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಂಟಿ ಪ್ರಧಾನ ಕಾರ್ಯದರ್ಶಿಗಳಾಗಿದ್ದರು ಆಗ ಶಿವಮೊಗ್ಗ ಜಿಲ್ಲಾ ಕಾರ್ಯ
ನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದವರು ಶರಾವತಿ ವಾರಪತ್ರಿಕೆ ಸಂಪಾದಕರಾದ ಮಲ್ಲಾರಾಧ್ಯರು.
ಆಗ ಕರ್ನಾಟಕ ರಾಜ್ಯ ಕಾರ್ಯನಿರತಪತ್ರಕರ್ತರ ಸಂಘದ ಅಧ್ಯಕ್ಷರಾಗಿದ್ದವರು ವಡ್ದರ್ಸೇ ರಘುರಾಮ್ ಶೆಟ್ಟರು ಎಲ್ಲರೂ ಸೇರಿ 1978 ರಲ್ಲಿ ಶಿವಮೊಗ್ಗದಲ್ಲಿ ರಾಜ್ಯಮಟ್ಟದ ಕಾರ್ಯನಿರತ ಪತ್ರಕರ್ತರ ಸಮ್ಮೇಳನ ನಡೆಸಿದ್ದರು.
ಆಗ ಕೇಂದ್ರ ಸರ್ಕಾರದಲ್ಲಿ ವಿದೇಶಾಂಗ ಸಚಿವರಾಗಿದ್ದ ವಾಜಪೇಯಿ ಅವರನ್ನು ಮತ್ತು ಕಾರ್ಮಿಕ ಸಚಿವರಾಗಿದ್ದ ರವೀಂದ್ರರನ್ನು ಆಹ್ವಾನಿಸಿದ್ದರು.
ಅವತ್ತು ಶಿವಮೊಗ್ಗದ ಕರ್ನಾಟಕ ಸಂಘದಲ್ಲಿ ಪ್ರದಾನ ಕಾರ್ಯದರ್ಶಿ ಬಿವಿ ಮೂರ್ತಿಯವರು ವಿಶ್ವ ಪತ್ರಿಕೆಗಳ ಪ್ರದರ್ಶನ ಹಮ್ಮಿಕೊಂಡಿದ್ದರು.
ಎರಡು ದಿನದ ರಾಜ್ಯಮಟ್ಟದ ಕಾರ್ಯನಿರತ ಪತ್ರಕರ್ತರ ಸಮಾವೇಶ ವೀರಶೈವ ಕಲ್ಯಾಣ ಮಂಟಪದಲ್ಲಿ ನಡೆದಿತ್ತು. ವಾಜಪೇಯಿ ಅವರ ಉಪಸ್ಥಿತಿ ಈ ಸಮ್ಮೇಳನಕ್ಕೆ ವಿಶೇಷ ಕಳೆತಂದಿತ್ತು.
ತುರ್ತು ಪರಿಸ್ಥಿತಿಯ ನಂತರದ ಜನತಾ ಪಕ್ಷದ ಸರ್ಕಾರದಲ್ಲಿ ಸನ್ಮಾನ್ಯ ವಾಜಪೇಯಿ ಅವರು ವಿದೇಶಾಂಗ ಮಂತ್ರಿಗಳಾಗಿದ್ದರು ಅವರನ್ನ ಶಿವಮೊಗ್ಗದಲ್ಲಿ ನಡೆದ ರಾಜ್ಯ ಮಟ್ಟದ ಸಮಾವೇಶಕ್ಕೆ ಕರೆತಂದದ್ದು ದೊಡ್ಡ ಸಂಚಲನದ ಸುದ್ದಿ ಆಗಿತ್ತು.
ಈ ಸಮಾವೇಶದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಂಟಿ ಪ್ರಧಾನ ಕಾರ್ಯದರ್ಶಿಗಳಾಗಿದ್ದ ಎಸ್ ಚಂದ್ರಕಾಂತ್ ಅವರ ಶ್ರಮ ಕಾರ್ಯಕ್ರಮದ ಯಶಸ್ವಿಗೆ ಕಾರಣ ಆಗಿತ್ತು.
ಅವತ್ತು ಶಿವಮೊಗ್ಗದಲ್ಲಿ ಜಾಗೃತಿ -ಸಹ್ಯಾದ್ರಿ - ಮಿಂಚು - ನಾಗೇಂದ್ರರಾವ್ ಎಚ್ಚರಿಕೆ -ನಾವಿಕ -ಜನಾರ್ಧನ್ ರಾಯರ ಛಲಂಧಂಕಮಲ್ಲ- ಏಕಲವ್ಯ - ಮಲ್ಲಾರಾಧ್ಯರ ಶರಾವತಿ ವಾರಪತ್ರಿಕೆ- ರಾಮಪ್ಪನವರ ಶಿವಮೊಗ್ಗ ಟೈಮ್ಸ್ - ಭೂಪಾಳಂ ಚಂದ್ರಶೇಖರ್ ರವರ ಮಲೆನಾಡು ವಾರ್ತೆ ಪ್ರಮುಖ ಪತ್ರಿಕೆಗಳಾಗಿತ್ತು.
Comments
Post a Comment