#ಕೇವಲ_ತಿರುಪತಿ_ತಿರುಮಲ_ಟ್ರಸ್ಟಿನ_ಲಡ್ಡು_ಮಾತ್ರ_ಕಳಪೆ_ತುಪ್ಪದಲ್ಲಿ_ತಯಾರಾಗಿದೆ
#ಅಂತ_ಬಾವಿಸಬೇಡಿ_ನಮ್ಮ_ನಿಮ್ಮ_ಪರಿಸರದಲ್ಲಿ_ತಯಾರಾಗುವ_ಸಿಹಿ_ತಿಂಡಿಗಳಲ್ಲಿ
#ಬಳಸುವ_ತುಪ್ಪಗಳು_ಕೂಡ_ಇದೆ_ಕಲಬೆರಕೆ_ತುಪ್ಪದ್ದೇ_ಆಗಿದೆ.
#tirupathi #laddu #pureghee #NandiniGhee
ಪ್ರಾಣಿ ಜನ್ಯ ಕೊಬ್ಬು ಎಂದರೆ ದೊಡ್ಡ ದೊಡ್ಡ ಮಾಂಸದ ಕಸಾಯಿಖಾನೆಯಲ್ಲಿ ಹರಿದು ಬರುವ ರಕ್ತದಲ್ಲಿರುವ ಕೊಬ್ಬು... ಇದನ್ನು ತುಪ್ಪದಲ್ಲಿ ಕಲಬೆರಕೆ ಮಾಡುವುದು ಅದನ್ನ ತಿರುಪತಿ ತಿರುಮಲ ದೇವಸ್ಥಾನದಲ್ಲಿ ಪ್ರಸಾದದ ಲಡ್ಡು ತಯಾರಲ್ಲಿ ಬಳಸುವುದು ಅಕ್ಷಮ್ಯ ಅಪರಾದವೇ ಆಗಿದೆ....
ಪುಸ್ತಕದಲ್ಲಿರುವ ಕಲಬೆರಕೆ ಕಾಯಿದೆ ಮಾತ್ರ ಇನ್ನೂ ಜಾರಿಯಾಗುವುದು ಯಾವಾಗ...
ಆಹಾರ ಕಲಬೆರಕೆ ತಡೆಯಲು ಭಾರತೀಯ ಕಾನೂನು ತೀಕ್ಷ್ಣವಾಗಿ ಇದೆ ಆದರೆ ಕಾನೂನು ಮಾತ್ರ ಎಲ್ಲೂ ಜಾರಿಯಲ್ಲಿ ಇಲ್ಲ.
ಈಗ ತಿರುಪತಿ ತಿಮ್ಮಪ್ಪನ ಲಡ್ಡುವಿನಲ್ಲಿ ಪ್ರಾಣಿಜನ್ಯ ಕೊಬ್ಬು ಇದೆ ಎಂಬ ಲ್ಯಾಬ್ ರಿಪೋರ್ಟ್ ಹೆಚ್ಚು ಸುದ್ದಿ ಮಾಡುತ್ತಿದೆ.
ಶುದ್ಧ ನಂದಿನಿ ತುಪ್ಪ ಕರ್ನಾಟಕದಿಂದ ತಿರುಪತಿ ತಿರುಮಲ ದೇವಾಲಯಕ್ಕೆ ಸರಬರಾಜು ಆಗುತ್ತಿತ್ತು ಆದರೆ ಅತಿ ಕಡಿಮೆ ಬೆಲೆಯ ತುಪ್ಪದ ಬಿಡ್ ಬೇರೆ ಸಂಸ್ಥೆ ಮಾಡಿದ್ದರಿಂದ ನಂದಿನಿ ತುಪ್ಪ ಸರಭರಾಜು ನಿಂತಿತು.
ಹೊಸ ಟೆಂಡರ್ ಪಡೆದವರ ಬೆಲೆಯಲ್ಲಿ ಅಸಲಿ ತುಪ್ಪ ಸರಬರಾಜು ಮಾಡಲು ಸಾಧ್ಯವೇ ಇಲ್ಲ ಆದರೆ ಈ ವಿಚಾರವನ್ನು ತಿರುಪತಿ ತಿರುಮಲ ಟ್ರಸ್ಟ್ ಯೋಚಿಸಬೇಕಾಗಿತ್ತು.
ಲಡ್ಡು ಮಾಡಲು ಬಳಸುವ ಇಂಗ್ರಿಡಿಯನ್ ವಸ್ತುಗಳ ಉತ್ತಮ ಗುಣಮಟ್ಟ ಕಾಪಾಡಿಕೊಳ್ಳಬೇಕಿತ್ತು, ಆದರೆ ಗುಣಮಟ್ಟಕ್ಕಿಂತ ಬೆಲೆಗೆ ಕಾಳಜಿವಹಿಸಿದ ಟ್ರಸ್ಟ್ ಕಳಪೆ ಕಲಬೆರಕೆ ತುಪ್ಪ ಕಳೆದ ಅನೇಕ ವರ್ಷಗಳಿಂದ ಬಳಸುತ್ತಿದೆ.
ಕೇವಲ ತಿರುಪತಿ ತಿರುಮಲ ಟ್ರಸ್ಟಿನ ಲಡ್ಡು ಮಾತ್ರ ಕಳಪೆ ತುಪ್ಪದಲ್ಲಿ ತಯಾರಾಗಿದೆ ಅಂತ ಬಾವಿಸಬೇಡಿ ನಮ್ಮ ನಿಮ್ಮ ಪರಿಸರದಲ್ಲಿ ತಯಾರಾಗುವ ಸಿಹಿ ತಿಂಡಿಗಳಲ್ಲಿ ಬಳಸುವ ತುಪ್ಪಗಳು ಕೂಡ ಇದೆ ಕಲಬೆರಕೆ ತುಪ್ಪದ್ದೇ ಆಗಿದೆ.
ಲಾಭಕ್ಕಾಗಿ ಮಾರಾಟಗಾರರು ಇಂತಹ ಕಳಪೆ ತುಪ್ಪಗಳನ್ನು ಮಾರಾಟಕ್ಕಿಟ್ಟಿದ್ದಾರೆ.
ಸುಮಾರು ಹದಿನೈದು ವರ್ಷದ ಹಿಂದೆ ಇಂತಹ ಕಲಬೆರಕೆ ತುಪ್ಪ ನಂದಿನಿ ಬ್ರಾಂಡ್ ಫ್ಯಾಕ್ ನಲ್ಲೇ ಮಾರಾಟ ಮಾಡುತ್ತಿದ್ದುದನ್ನು ಶಿವಮೊಗ್ಗದಲ್ಲಿ ಪತ್ತೆ ಹಚ್ಚಲಾಗಿತ್ತು ಈ ಬಗ್ಗೆ ದೊಡ್ಡ ತನಿಖೆಯ ನಾಟಕ ನಡೆದಿತ್ತು ಆಮೇಲೆ ಅದು ಏನಾಯ್ತು ಗೊತ್ತಾಗಲಿಲ್ಲ.
2006ರಲ್ಲಿ ಹೊರನಾಡಿನಲ್ಲಿ ಪಿಜಿಆರ್ ಸಿಂದ್ಯಾ ಒಂದು ಚಂಡಿಕಾ ಹೋಮ ಮಾಡಿಸಿದ್ದರು ಅದಕ್ಕೆ ಬೇಕಾಗುವ ತುಪ್ಪವನ್ನು ಅವರೇ ಆಯ್ಕೆ ಮಾಡಿ ಬೆಂಗಳೂರಿಂದ ತಂದಿದ್ದರು ಅಂದರೆ ಮಾರುಕಟ್ಟೆಯಲ್ಲಿ ಕಳಪೆ ಕಲಬೆರಕೆ ತುಪ್ಪ ಯಾವ ಕಾಲದಿಂದಲೂ ಇದೆ.
ನಂದಿನಿ ಬ್ರಾಂಡ್ ನಮ್ಮ ರಾಜ್ಯದ ಪ್ರತಿಷ್ಟಿತ ಶುದ್ಧ ತುಪ್ಪ ಆದರೆ ನಂದಿನಿ ಪ್ಯಾಕೆಟ್ ಒಳಗೆ ಕಳಪೆ ಕಲಬೆರಕೆ ತುಪ್ಪ ತುಂಬಿಸಿ ಮಾರಾಟ ಮಾಡುವ ಕಲಬೆರಕೆದಾರರು ಇದ್ದಾರೆ ಹಾಗಾದರೆ ಶುದ್ಧ ತುಪ್ಪ ಯಾವುದು ಅದನ್ನು ಪರಿಶೀಲಿಸುವುದು ಹೇಗೆ ಇಂತಹ ಪ್ರಶ್ನೆಗಳಿಗೆ ಉತ್ತರ ಕಷ್ಟ.
ನೀವೇ ಶುದ್ಧ ಬೆಣ್ಣೆ ಖರೀದಿಸಿ ತುಪ್ಪ ಮಾಡುವುದು ಒಳಿತು ಅದರಲ್ಲೂ ಶುದ್ಧ ಬೆಣ್ಣೆಯ ಆಯ್ಕೆ ನಿಮ್ಮದು,
ದೇವಾಲಯಗಳಲ್ಲಿ ಹೋಮ ಹವನಗಳಲ್ಲಿ ಬಳಸುವ ತುಪ್ಪ ಮಾರುಕಟ್ಟೆಯ ತುಪ್ಪವಾಗಿದ್ದು ಅದು ಶುದ್ಧ ತುಪ್ಪವೇನಲ್ಲ.
ಇನ್ನು ಸಿಹಿ ತಿಂಡಿಗಳ ತಯಾರಿಕರು ಕೂಡ ಹೆಚ್ಚು ಬೆಲೆಯ ಶುದ್ಧ ತುಪ್ಪ ಬಳಸುತ್ತಿಲ್ಲ ಅವರು ಕೂಡ ಕಡಿಮೆ ಬೆಲೆಯಲ್ಲಿ ಸಿಗುವ ತುಪ್ಪದ ಮೇಲೆ ಅವಲಂಬಿತರಾಗಿದ್ದಾರೆ.
ನೀವೇ ಎಮ್ಮೆ ಸಾಕಿ ಹಾಲು ಕರೆದು ಮೊಸರು ಕಡೆದು ಬೆಣ್ಣೆ ಮಾಡಿ ತುಪ್ಪ ಕಾಯಿಸಿ ತಿಂದರೆ ಮಾತ್ರ ಶುದ್ಧ ತುಪ್ಪ ಎನ್ನುವಂತಾಗಿದೆ ಕಲ ಬೆರಕೆ ತುಪ್ಪದ ಪ್ರಭಾವ.
ನಾನು 2007 ರಲ್ಲಿ ಖ್ಯಾತ ಜ್ಯೋತಿಷಿ ಬೆಂಗಳೂರಿನ ಡಾಕ್ಟರ್ ಎನ್ ಎಸ್ ವಿಶ್ವಪತಿ ಶಾಸ್ತ್ರಿಗಳ ಜೊತೆಗೆ ತಿರುಪತಿಗೆ ಹೋಗಿದ್ದೆ ಅಲ್ಲಿ ಅವರು ದೇವಸ್ಥಾನದ ಅಗ್ನಿ ಮೂಲೆಯಲ್ಲಿ ತಯಾರಾಗುವ ಲಡ್ಡು ಕಾರ್ಯಾಗಾರದ ಅಡುಗೆ ಮನೆ ತೋರಿಸಿದ್ದರು, ಆಗ 12 ಅಡಿ ಎತ್ತರದ ಕಾಂಪೌಂಡ್ ಹೊರಬಾಗದಿಂದ ಅಗ್ನಿ ಮೂಲೆಯ ಅಡಿಗೆ ಮನೆಗೆ ಕಡಲೆ ಹಿಟ್ಟು, ಸಕ್ಕರೆ, ತುಪ್ಪಗಳು ಕನ್ವೆಯರ್ ಬೆಲ್ಟ್ ಮೂಲಕ ನಿರಂತರ ಸರಬರಾಜು ಆಗುತ್ತಿತ್ತು.
ಆಗ ಆ ಬೆಲ್ಟ್ ಮೇಲೆ ಹೋಗುತ್ತಿದ್ದ ತುಪ್ಪ ನಮ್ಮ ರಾಜ್ಯದ ನಂದಿನಿ ತುಪ್ಪವಾಗಿತ್ತು.
ತಿರುಪತಿ ದೇವಾಲಯದ ಪ್ರಾಂಗಣದಲ್ಲೇ ತಯಾರಾಗುವ ಲಾಡು ಅತ್ಯಂತ ರುಚಿಕರ ಎಂಬ ಪ್ರಸಿದ್ಧಿ ಪಡೆದಿದೆ.
ಅನೇಕರು ಅಲ್ಲಿನ ಕಳಪೆ ತುಪ್ಪದಲ್ಲಿ ಪ್ರಾಣಿಜನ್ಯ ಕೊಬ್ಬು ಬಳಸಿದ ವರದಿಗಳು ನೋಡಿದ ನಂತರ ತಿರುಪತಿ ತಿಮ್ಮಪ್ಪನ ಲಡ್ಡು ತಿನ್ನುವುದಿಲ್ಲ... ಈವರೆಗೆ ನಾನು ತಿಂದಿಲ್ಲ... ಎಂಬ ಹೇಳಿಕೆ ಕೊಡುತ್ತಿದ್ದಾರೆ.
ಆದರೆ ವೈಯಕ್ತಿಕವಾಗಿ ನಾನು ತಿರುಪತಿ ತಿಮ್ಮಪ್ಪನ ಲಡ್ಡು ಯಾವಾಗಲೂ ಇಷ್ಟಪಡುತ್ತೇನೆ ಅಲ್ಲಿಂದ ತಂದುಕೊಟ್ಟ ಲಡ್ಡು ಸದಾ ತಿನ್ನುತ್ತಲೇ ಇದ್ದೇನೆ ಅಲ್ಲಿನ ಲಡ್ಡು ಪರಿಶುದ್ಧ ಮತ್ತು ದೇವರ ಪ್ರಸಾದ ಎಂಬ ನಂಬಿಕೆಯಿಂದ ಆದರೆ ಈಗಿನ ವರದಿಗಳು ಮುಂದಿನ ದಿನಗಳಲ್ಲಿ ತಿರುಪತಿ ಲಡ್ಡು ತಿನ್ನಲು ಹೇವರಿಕೆ ಉಂಟು ಮಾಡಿದೆ
ಇಲ್ಲಿ ನಾವು ತಿರುಪತಿ ತಿಮ್ಮಪ್ಪನ ಲಡ್ಡು ಮಾತ್ರ ಕಲಬೆರಕೆ ತುಪ್ಪದಲ್ಲಿ ಆದುದ್ದಲ್ಲ ಎಂಬುದನ್ನು ನೆನಪಿಸಿಕೊಳ್ಳಬೇಕು ನಾವು ಸ್ಥಳೀಯವಾಗಿ ಖರೀದಿಸುವ ಎಲ್ಲಾ ಸಿಹಿ ಪದಾರ್ಥಗಳಲ್ಲಿರುವ ತುಪ್ಪ ಈ ಕಳಪೆ ಕಲಬೆರಕೆ ತುಪ್ಪವೇ ಆಗಿದೆ ಎಂಬುದನ್ನು ಮರೆಯಬಾರದು.
ಶುದ್ಧ ತುಪ್ಪದ ಬೆಲೆ ಅಸಲಿ ಬೆಲೆ 1200 ಕ್ಕಿಂತ ಹೆಚ್ಚು ಬೀಳುತ್ತದೆ ಆದರೆ ಮಾರುಕಟ್ಟೆಯಲ್ಲಿ 400 ರೂಪಾಯಿಯಲ್ಲಿ ಕೂಡ ತುಪ್ಪ ಸಿಗುತ್ತದೆ ಹೇಗೆ?.
ಇವತ್ತು ನಾನು ಸಾಗರದ ಮಲೆನಾಡು ಗಿಡ್ಡ ರೈತ ಉತ್ಪಾದಕ ಕಂಪನಿಯಿಂದ ಖರೀದಿಸಿದ ಮಲೆನಾಡು ಗಿಡ್ಡ ಹಸುವಿನ ತುಪ್ಪ ಕಿಲೊಗೆ ರೂ 1700.
ಇತ್ತೀಚೆಗೆ ನಾನು ಶಿಕಾರಿಪುರದ ಸಮೀಪದ ಹಾವೇರಿ ಜಿಲ್ಲೆಯ ಮಾಸೂರಿನ ಪ್ರಖ್ಯಾತ ಬೆಣ್ಣೆ ಖರೀದಿಸಿ ಮಾಡಿದ ತುಪ್ಪದ ಬೆಲೆ ಕೆಜಿಗೆ 1200 ಬಿದ್ದಿದೆ ಈ ಬೆಲೆಯ ಶುದ್ಧ ತುಪ್ಪದಲ್ಲಿ ಮಾಡುವ ಸಿಹಿ ತಿಂಡಿಗಳು ಕೆಜಿಗೆ ಒಂದುವರೆ ಸಾವಿರ ರೂಪಾಯಿಗಿಂತ ಕಡಿಮೆ ಮಾರಾಟ ಮಾಡಲು ಸಾಧ್ಯವೇ ಇಲ್ಲ.
ಇದು ತುಪ್ಪದ ಒಂದೇ ಕಥೆ ಅಲ್ಲ ಖಾಧ್ಯ ತೈಲದ ಕಥೆಯು ಇದೇ ಆಗಿದೆ, ಚಹಾ ಪುಡಿಯೂ ಕಲಬೆರಿಕೆ ಅಷ್ಟೇ ಏಕೆ ಪೂಜೆಗೆ ಬಳಸುವ ಅರಿಶಿನ ಕುಂಕುಮ ಕೂಡ ಕಲಬೆರಕೆ ಆಗಿದೆ.
ಪ್ರಾಣಿ ಜನ್ಯ ಕೊಬ್ಬು ಎಂದರೆ ದೊಡ್ಡ ದೊಡ್ಡ ಮಾಂಸದ ಕಸಾಯಿಖಾನೆಯಲ್ಲಿ ಹರಿದು ಬರುವ ರಕ್ತದಲ್ಲಿರುವ ಕೊಬ್ಬು ಇದನ್ನು ತುಪ್ಪದಲ್ಲಿ ಕಲಬೆರಕೆ ಮಾಡುವುದು ಅದನ್ನ ತಿರುಪತಿ ತಿರುಮಲ ದೇವಸ್ಥಾನದಲ್ಲಿ ಪ್ರಸಾದದ ಲಡ್ಡು ತಯಾರಲ್ಲಿ ಬಳಸುವುದು ಅಕ್ಷಮ್ಯ ಅಪರಾದವೇ ಆಗಿದೆ.
ಪುಸ್ತಕದಲ್ಲಿರುವ ಕಲಬೆರಕೆ ಕಾಯಿದೆ ಮಾತ್ರ ಇನ್ನು ಜಾರಿಯಾಗಿಲ್ಲ ಅಷ್ಟೇ.
Comments
Post a Comment