Skip to main content

Blog number 2296 ಕೊರಗಜ್ಜ ತನಿಯರ ಮೂಲ ದೈವದ 7 ಆದಿ ಸ್ಥಳಗಳ

#ಕೊರಗಜ್ಜರ_ಮಹಿಮೆ

#ಕೊರಗ_ತನಿಯ_ದೈವದ_7_ಆದಿ_ಸ್ಥಳಗಳು

#ಮಂಗಳೂರಿನ_ಉಳ್ಳಾಲ_ತಾಲ್ಲೂಕಿನ_ತೊಕೊಟ್ಟು_ಸುತ್ತಮುತ್ತ

#ಪುರೋಹಿತರು_ಇಲ್ಲ_ಮಧ್ಯವರ್ತಿಗಳು_ಇಲ್ಲ

#ಗುಡಿ_ಗೋಪುರ_ದೀಪ_ದೂಪ_ಕಾಣಿಕೆ_ಇಲ್ಲಿಲ್ಲ

#ಚಕ್ಕುಲಿ_ಬೀಡಾ_ಸರಾಯಿ_ಸಮರ್ಪಿಸಿ_ಪ್ರಾರ್ಥನೆ

#koragajja #koragataniya #mangalore #ULLALA #tokkattu #kuttaru #adisthala 


    ನಾನು ಕಳೆದ ಶುಕ್ರವಾರ ದಿನಾಂಕ 20 ಸೆಪ್ಟೆಂಬರ್ 2024ರಂದು ಮಂಗಳೂರಿಗೆ ಹೋದಾಗ ಅಲ್ಲಿ ಕೊರಗ ತನಿಯ ದೈವದ ಮೂಲ ಆದಿ ಸ್ಥಳ ದೆಕ್ಕಾಡು ಕುತ್ತಾರು ಆದಿ ಸ್ಥಳಕ್ಕೆ ಹೋಗಿದ್ದೆ.
  ಮಂಗಳೂರಿನ ಉಳ್ಳಾಲ ತಾಲೂಕಿನ ಮುನ್ನೂರು ಗ್ರಾಮದ ಈ ಪ್ರದೇಶದ ಎರಡುವರೆ ಕಿಲೋಮೀಟರ್ ಸುತ್ತಳತೆಯಲ್ಲಿ ಕೊರಗತನಿಯರ ಏಳು ಆದಿ ಸ್ಥಳಗಳಿವೆ.
   ಅಲ್ಲಿ ನಡೆಯುವ ಪೂಜಾ ವಿಧಾನ ವಿಶೇಷ,ಕೊರಗತನಿಯನಿಗೆ ಎರಡೆರಡು ವೀಳ್ಯದೆಲೆ - ಅಡಿಕೆ- ತಂಬಾಕು -ಸುಣ್ಣ- ಚಕ್ಕುಲಿಗಳನ್ನ ಮೂರು ಎಡೆ ಇಟ್ಟು ಪ್ರಾರ್ಥನೆ ಮಾಡಿ ದೈವಸ್ಥಾನಕ್ಕೆ ಮೂರು ಸಾರಿ ಸುತ್ತು ಬಂದು ನಮಸ್ಕರಿಸಿ ಅವರು ನೀಡುವ ಪ್ರಸಾದವಾದ ಎಲೆ ಅಡಿಕೆ ಚಕ್ಕುಲಿ ಸ್ವೀಕರಿಸಿ ಬರುವುದೇ ಅಲ್ಲಿನ ಪೂಜೆ
  ಪ್ರತಿನಿತ್ಯ ಸಂಜೆ 6:30 ರಿಂದ ರಾತ್ರಿ ಎಂಟರವರೆಗೆ ಕೋಲ ನಡೆಯುತ್ತದೆ ಇದು ಇಲ್ಲಿ ಪ್ರಾರ್ಥನೆ ಸಲ್ಲಿಸಿದವರು ತಮ್ಮ ಪ್ರಾರ್ಥನೆ ಈಡೇರಿದ ನಂತರ ನೀಡುವ ಹರಕೆಯ ಕೋಲಾ ಸೇವೆ ಇದಕ್ಕೆ ಮೂರು ಸಾವಿರ ರೂಪಾಯಿ ಪಾವತಿಸಬೇಕು ಈ ರೀತಿ ಪಾವತಿ ಮಾಡಿದ ಏಳು ಜನರಿಗೆ ಕೋಲಾ ಸೇವೆ ಕೊರಗ ತನಿಯರಿಗೆ ಸಮಪ೯ಣೆ ಮಾಡುವ ಅವಕಾಶ ಇದೆ.     
    ಈಗಾಗಲೇ ಮುಂದಿನ ಮೂರ್ನಾಲ್ಕು ವರ್ಷಗಳಿಗೆ ಕೋಲ ಸೇವೆ ಮುಂಗಡ ನಿಗದಿಯಾಗಿದೆ.
 ಕೊರಗತನಿಯರ ಏಳು ಆದಿ ಮೂಲ ಸ್ಥಾನಗಳಲ್ಲಿ 6 ಮೂಲ ಸ್ಥಾನಗಳಲ್ಲಿ ಮಾತ್ರ ಕೋಲ ಸೇವೆ ನಡೆಯುತ್ತದೆ.
  ಇಲ್ಲಿ ದೀಪ ಉರಿಸುವಂತಿಲ್ಲ ಈ ಬೀದಿಗೆ ಬೀದಿ ದೀಪ ಕೂಡ ಇಲ್ಲ. 
   ದೈವಸ್ಥಾನದ ಎದುರಿನ ಮನೆಗಳಲ್ಲೂ ಕೂಡ ದೀಪ ಉರಿಸುವುದಿಲ್ಲ, ಈಗ ಹೊಸ ಮೋಟಾರ್ ಬೈಕುಗಳು ಹಗಲು ರಾತ್ರಿ ದೀಪ ಉರಿಸುವುದರಿಂದ ವಿನಾಯಿತಿ ನೀಡಲಾಗಿದೆ.
  ಎಲೆ, ಅಡಿಕೆ, ತಂಬಾಕು, ಸುಣ್ಣ ಮತ್ತು ಚಕ್ಕುಲಿಯ ಪೂಜಾ ಸಾಮಗ್ರಿಗೆ 50 ರೂಪಾಯಿ ಇದನ್ನ ದೇವಾಲಯದ ಹೊರಬಾಗದಲ್ಲಿ ಮಾರುತ್ತಾರೆ. 
  ನೀವು ಇಷ್ಟ ಪಟ್ಟರೆ ಕೊರಗ ತನಿಯರಿಗೆ ಮಧ್ಯ ಸೇವೆ ಕೂಡ ನೀಡಬಹುದು, ಮಧ್ಯದ ಬಾಟಲಿಗೆ 90 ರೂಪಾಯಿ, ಅಲ್ಲಿ ಕೊರಗತನಿಯರಿಗೆ ಪ್ರಾರ್ಥನೆ ಮಾಡಿ ಈ ಮಧ್ಯವನ್ನು ಮೂರು ಬಾರಿ ನೈವೇದ್ಯ ನಾವೇ ಮಾಡಬೇಕು.
 ಅಲ್ಲಿ ಯಾವುದೇ ಶುಲ್ಕವಿಲ್ಲ, ಯಾರಿಗೂ ಕಾಣಿಕೆ ಕೊಡುವ ಹಾಗಿಲ್ಲ, ಯಾರಿಗೂ ಕಾಲಿಗೆ ಬೀಳುವ ಹಾಗಿಲ್ಲ, ನಿಮ್ಮ ಮನಸ್ಸಿನ ಪ್ರಾರ್ಥನೆ,    ನೀವು ನೇರವಾಗಿ ಮಧ್ಯವರ್ತಿಗಳಿಲ್ಲದೆ ಕೊರಗತನಿಯರಿಗೆ ಅರ್ಪಿಸುವ ಪೂಜೆ ಆಗಿರುತ್ತದೆ.
  ನಿಮ್ಮ ಬೇಡಿಕೆ ಪ್ರಾರ್ಥನೆ ಈಡೇರಿದ ಮೇಲೆ ನೀವು ಅದನ್ನು ಬಂದು ತೀರಿಸಿದರಾಯಿತು ಈ ದೈವಸ್ಥಾನ ದಿನದ 24 ಗಂಟೆಯೂ ತೆರೆದಿರುತ್ತಾರೆ. 
   ಸಂಜೆ ಆರೂವರೆಯಿಂದ ಬೆಳಗ್ಗೆ 6:30 ರವರೆಗೆ ಸ್ತ್ರೀಯರಿಗೆ ಮಾತ್ರ ಪ್ರವೇಶ ಇಲ್ಲ.
  ಆದರೆ ರಾತ್ರಿ ಕೂಡ ಅನೇಕ ಪುರುಷರು ಅಲ್ಲಿ ಕುಳಿತು ಧ್ಯಾನ ಮಾಡುತ್ತಾರೆ.
  ಅಲ್ಲಿ ಈಗಿನ ಕಚೇರಿ ಮತ್ತು ಪಾರ್ಕಿಂಗ್ ಜಾಗ ಇತ್ತೀಚಿಗೆ ದೇವಸ್ಥಾನ ಸಮಿತಿ ಖರೀದಿಸಿದೆ.
 ಇಲ್ಲಿಂದ ಒಂದುವರೆ ಕಿಲೋಮೀಟರ್ ದೂರದ ಪಂಜಂದಾಯ ಬಂಟ ವೈದ್ಯನಾಥ ದೇವಾಲಯವಿದೆ ಅಲ್ಲಿ ಗಂಧ ಪ್ರಸಾದ ನೀಡುತ್ತಾರೆ.
 ಪಂಜಂದಾಯ ದೇವಾಲಯಕ್ಕಿಂತ ಮುಂಚೆ ಎಡಕ್ಕೆ ತಿರುಗಿ ಹೋದರೆ ಗುಳಿಗ ಕೊರಗಜ್ಜ ಉದ್ಭವ ಶಿಲೆಯ ಪ್ರಧಾನ ಆದಿ ಸ್ಥಳ ಬುರ್ದುಗೋಳಿ ಕಲ್ಲಾಪು - ಪೆರ್ಮನ್ನೂರಿನಲ್ಲಿದೆ.
 ಕೊರಗ ತನಿಯ ದೈವ ದರ್ಶನ ಮಾಡಿ ಪ್ರಾರ್ಥನೆ ಸಲ್ಲಿಸಲು ಕೊರಗ ತನಿಯ ದೈವದ ಏಳು ಆದಿ ಸ್ಥಳಗಳಲ್ಲಿ ಮೂಲ ಆದಿ ಸ್ಥಳವಾದ ದೆಕ್ಕಾಡು ಕುತ್ತಾರು ಅಧಿಸ್ಥಳಕ್ಕೆ ಹೋದವರು ಈ ಮೂರು ಸ್ಥಳಗಳನ್ನು ಸಂದರ್ಶಿಸಬೇಕು.
 #ಕೊರಗಜ್ಜ... ಕೊರಗ ತನಿಯ
ಈ ಹೆಸರೇ ಒಂದು ವಿಸ್ಮಯ ಕೊರಗ ತನಿಯರ ಹುಟ್ಟು ಬಾಲ್ಯ ನಂತರ  ಕಾಯ ಬಿಟ್ಟು ಮಾಯ ಸೇರಿ ವಿಶೇಷ ಶಕ್ತಿಗಳನ್ನು ಪಡೆದು ಆರಾದನೆಗೆ ಒಳಗಾದರು ಈ ಬಗ್ಗೆ ಇಲ್ಲಿನ ಸ್ಥಳ ಪುರಾಣ ಆಸಕ್ತರಿಗಾಗಿ...
  ಕೊರಗ ತನಿಯನ ತಂದೆ #ವರವನಓಡಿ ತಾಯಿ #ಕೊರಪಲುಮೈರ ತನಿಯನು 30 ದಿನದ ಮಗುವಾಗಿದ್ದಾಗಲೇ ತೀರಿಕೊಳ್ಳುತ್ತಾರೆ.
  ಮೈರಕ್ಕ ಬೈದೆತಿ ಎಂಬ ಮಹಿಳೆ ಈ ಅನಾಥ ಬಾಲಕನ ಪರಿಸ್ಥಿತಿಗೆ ಮರುಗಿ ತನ್ನ ಮನೆಗೆ ಕರೆದೊಯ್ದು ಮಗನ ಹಾಗೆ ಪ್ರೀತಿಯಿಂದ ಸಾಕುತ್ತಾಳೆ.
  ಮೈರಕ್ಕ ಬೈದೆತಿ ಆಶ್ರಯದಲ್ಲಿ ಬೆಳೆದು ದೊಡ್ಡವನಾದ ಕೊರಗ ತನಿಯ ತನ್ನ ತಂದೆಯ ಹರಕೆ ಆದ ಒಂದು ಸಾವಿರ ಕೈ ಬುಟ್ಟಿ ಮಾಡಿ ದೇವಸ್ಥಾನಕ್ಕೆ ಅರ್ಪಿಸುತ್ತಾರೆ.
   ಸಾಕು ತಾಯಿ ಮೈರಕ್ಕ ಬೈದೆತಿಯು ಮಾಡ ಮೈಸಂದಾಯ ದೈವ ಸ್ಥಾನಕ್ಕೆ ಏಳು ಹೊರೆಗಳ ( ತಿರಿ-ಬಾರೆ -ಬೊಂಡ) ಹರಕೆ ತೀರಿಸುವ ಬಯಕೆಯನ್ನು ತನಿಯನಲ್ಲಿ ಹೇಳುತ್ತಾಳೆ.
   ಕೊರಗ ತನಿಯ ಏಳು ಜನರ ಹೊರೆಯನ್ನು ತಾನು ಒಬ್ಬನೇ ಹೊತ್ತುಕೊಂಡು ಹೋಗುತ್ತೇನೆ ಎಂದು ಹೇಳಿ, ಹೊರೆಗಳನ್ನು ಹೊತ್ತುಕೊಂಡು ದೇವಸ್ಧಾನ ತಲುಪುತ್ತಾರೆ.
   ಅಲ್ಲಿ ಕೊರಗ ತನಿಯರಿಗೆ ಪ್ರವೇಶ ನಿರಾಕರಿಸುತ್ತಾರೆ ಆಗ ಕೋಪಗೊಂಡ ಕೊರಗತನಿಯ ಹೊರೆಯನ್ನು ದೈವ ಸ್ಥಾನದ ಹೊರಗೆ ಇಳಿಸಿ ತಾನು ದೇವಸ್ಥಾನದ ಹತ್ತಿರ ಹೋಗುತ್ತಾರೆ.
   ಅಲ್ಲಿ ದೇವಸ್ಥಾನದ ಗೋಪುರದ ಮಾಡಿಗೆ ಮರದಿಂದ ಬಾಗಿಕೊಂಡಿದ್ದ ಮಾದಳದ ಹಣ್ಣನ್ನು ತಾಯಿಯ ಪ್ರೀತ್ಯಾರ್ಥವಾಗಿ ಕೊಯ್ಯಲು ಕೈ ಹಾಕಿದಾಗ ಏಳು ವರ್ಷ ಪ್ರಾಯದ ಕೊರಗ ತನಿಯರು ಅಲ್ಲಿಯೇ ಮಾಯವಾಗುತ್ತಾರೆ.
 ನಂತರ ಕೊರಗಜ್ಜ ಮೊದಲಾಗಿ ಉಳ್ಳಾಲದ ಸೋಮೇಶ್ವರ ಸೋಮನಾಥ ದೇವರ ಅಪ್ಪಣೆ ಪಡೆದು ಕಲ್ಲಾಪು ಗಡಿ ದಾಟಿ ಓಟ್ಲದ ಬದಿಯಿಂದ ಬರುವಾಗ ಬುರ್ದುಗೋಳಿ ಉದ್ಬವ ಶಿಲೆಯಲ್ಲಿ ಪಂಜಂದಾಯ (ಪಂಜOತ್ತಾಯ) ಬಂಟ ದೈವಗಳು ಚಿಂತಾಕ್ರಾಂತರಾಗಿ ಕುಳಿತಿರುವುದು ಕಂಡು ಬರುತ್ತದೆ (ಈಗಿನ ಗುಳಿಗ ಕೊರಗಜ್ಜ ಉದ್ಭವ ಶಿಲೆ ಆದಿ ಸ್ಥಳ ಬುರ್ದುಗೋಳಿ ಕಲ್ಲಾಪು ಪೆರ್ಮನ್ನೂರು,ಉಳ್ಳಾಲ ಮಂಗಳೂರು).
  ಇವರಲ್ಲಿ ಕೊರಗಜ್ಜನು ವಿಚಾರಿಸಿದಾಗ "ಮಾಡದ ಅರಸು ದೈವಗಳಿಂದ ನಾವು ಯುದ್ದದಲ್ಲಿ ಸೋತು ನಮ್ಮ ಪ್ರದೇಶವನ್ನು ಕಳೆದು ಕೊಂಡು ಇಲ್ಲಿ ಬಂದು ಕುಳಿತಿದ್ದೇವೆ" ಎನ್ನುತ್ತಾರೆ, ಇವರ ಕಷ್ಟವನ್ನು ಆಲಿಸಿದ ಕೊರಗಜ್ಜನು ಅವರ ಪ್ರದೇಶ ಮರಳಿ ಕೊಡುವ ವಾಗ್ದಾನ ದೈವಗಳಿಗೆ ನೀಡುತ್ತಾರೆ.
   ದೈವಗಳು ಕೊರಗಜ್ಜನಿಂದ ಈ ಕಾರ್ಯ ಸಾಧ್ಯವೇ? ಎಂದು ಸಂಶಯಭರಿತವಾಗಿ ಕಂಡಾಗ ತಾನು ಯಾರು ಎಂಬುದನ್ನ ಕೊರಗಜ್ಜ ತನ್ನ ವಿರಾಟ ರೂಪದಿಂದ ತೋರಿಸುತ್ತಾರೆ.
   ಕೊರಗಜ್ಜರ ಭಯಂಕರ ರೂಪವನ್ನ ಕಂಡಂತಹ ದೈವಗಳು ಇವರಿಂದ ಸಾಧ್ಯವೆಂದು ಅರಿತು ಒಪ್ಪಿಗೆ ನೀಡುತ್ತಾರೆ.
  ಅಲ್ಲಿಂದ ಹೊರಟ ಕೊರಗಜ್ಜರು ಕುತ್ತಾರು ಪ್ರದೇಶಕ್ಕೆ ತೆರಳಿ (ಈಗಿನ ದೆಕ್ಕಾಡು ಕುತ್ತಾರು ಆದಿ ಸ್ಥಳ ಮುನ್ನೂರು ಗ್ರಾಮ ಉಳ್ಳಾಲ ತಾಲ್ಲೂಕು) ಎದುರಾಳಿಗಳನ್ನ ಯುದ್ದದಲ್ಲಿ ಸೋಲಿಸುವುದು ಕಷ್ಟ ಎಂದರಿತು ಯುಕ್ತಿಯಿಂದ ಮಾಯಾ ರೂಪದ ಕಬುಳ್ತಿ ಹಸುವನ್ನು ಸೃಷ್ಟಿಸಿ ಅದರ ಪಾರೆಯನ್ನು ಕೈಯಲ್ಲಿ ಹಿಡಿದು ಎದುರಾಳಿ ದೈವಗಳನ್ನು ಅಲ್ಲಿಂದ ಓಡಿಸುತ್ತಾರೆ.
  ತಮ್ಮ ಕ್ಷೇತ್ರ ಅಪವಿತ್ರವಾಯಿತು ಎಂದು ಭಾವಿಸಿ ಮಾಡ ಕ್ಷೇತ್ರದ ದೈವಗಳು ಜಾಗವನ್ನು ಬಿಟ್ಟು ತೆರಳುತ್ತಾರೆ.
   ಕೊರಗಜ್ಜ ಅಲ್ಲಿಂದ ಮರಳಿ ಬುರ್ದುಗೋಳಿಗೆ ಬಂದು ನಾನು ನನ್ನ ಕಾರ್ಯವನ್ನು ಮಾಡಿದ್ದೇನೆ ನನಗೇನು ಕೊಡುತ್ತೀರಿ ಎಂದು ಪಂಜOದಾಯ ದೈವದಲ್ಲಿ ಕೊರಗಜ್ಜನು ಕೇಳಿದಾಗ ದೈವಗಳು ಉದ್ಭವ ಶಿಲೆಯಲ್ಲಿ ನೀನು ನೆಲೆಯಾಗಿ ಇಲ್ಲಿಗೆ ಬರುವಂತಹ ಭಕ್ತಾದಿಗಳ ಕೋರಿಕೆಯನ್ನು ಈಡೇರಿಸಿ ಅಗೆಲುಸೇವೆ ಮತ್ತು ಕೋಲಾ ಸೇವೆಯನ್ನು ಸ್ವೀಕರಿಸುವಂತಾಗು ಹಾಗೆಯೇ ಕುತ್ತಾರು ಪ್ರದೇಶದ ಏಳು ಕಡೆಗಳಲ್ಲಿ ನಿನ್ನನ್ನು ಸಂಕಲ್ಪ ಮಾಡಿ ಊರವರು ಆರಾಧಿಸುತ್ತಾರೆ ಅಲ್ಲಿಗೆ ಬರುವಂತಹ ಭಕ್ತಾದಿಗಳ ಕೋರಿಕೆಯನ್ನು ಈಡೇರಿಸಿ ಅಗೇಲು ಸೇವೆ ಹಾಗೂ ಕೋಲಾ ಸೇವೆಯನ್ನು ಪಡೆಯುವಂತಾಗು ಎಂದು ಬುರ್ದುಗೋಳಿ ಸಾನಿಧ್ಯದಲ್ಲಿ ವಾಗ್ದಾನವಾಗುತ್ತದೆ.
   ಹಿಂದೆ ಕೊರಗತನಿಯ ದೈವ ನೆಲೆಯಾದ ಕಾರ್ಣಿಕ ಕಲ್ಲು ಈಗಲೂ ಇಲ್ಲಿದೆ ಸಾವಿರಾರು ವರ್ಷಗಳ ಇತಿಹಾಸ ಇರುವ ಕಲ್ಲಾಪು ಬುರ್ದುಗೋಳಿ ಉದ್ಭವ ಶಿಲೆಯು 850 ವರ್ಷಗಳಿಂದ ಗುಳಿಗ ಕೊರಗ ತನಿಯ ಆದಿ ಸ್ಥಳ ಮೂಲ ಸಾನಿಧ್ಯ ಎಂದು ಪ್ರಸಿದ್ಧಿಯನ್ನು ಹೊಂದಿರುತ್ತದೆ.
 ಪಂಜOದಾಯ ದೈವವು ಕೊರಗತಯನಿಗೆ ವಾಗ್ದಾನ ನೀಡಿದಂತೆ ಅರಸು ದೈವಗಳನ್ನು ನನ್ನ ವ್ಯಾಪ್ತಿಯಿಂದ ಬಿಡಿಸಿದರೆ ನಿನಗೆ ಊರಿನಲ್ಲಿ ಅಡುಗೆ ಮಾಡಿಸಿ ಕಾಡಿನಲ್ಲಿ ಬಡಿಸಿ ನರ್ತನ ಸೇವೆ ಮಾಡಿಸಿ ಇನ್ನು ಏಳು ವರ್ಗಗಳವನ್ನ (ಏಳು ಆದಿಸ್ಥಳಗಳು)ನಿನಗೆ ಕೊಟ್ಟು ಅಲ್ಲಿ ನಿನ್ನ ಸೇವೆ ಮಾಡಲು, ಕತ್ತಲಿನಲ್ಲಿ ಬೆಂಕಿ ಬೆಳಕು ಇಲ್ಲದ, ಭಕ್ತರ ಬೇಡಿಕೆಗಳನ್ನು ಈಡೇರಿಸುವ ಜವಾಬ್ದಾರಿಯನ್ನು ನಿನಗೆ ನೀಡುತ್ತೇವೆ ಎಂದಂತೆ ಆ ಪ್ರಕಾರ ತನ್ನ ಮಾತು ಉಳಿಸಿದ ಕೊರಗತನಿಯ ದೈವಕ್ಕೆ ಪಂಜಂತಾಯ  ದೈವಗಳು ವಾಗ್ದಾನ ನೀಡಿದಂತೆ ಏಳು ಕಲ್ಲು ವರ್ಗ ತುಂಡು ಗ್ರಾಮಗಳನ್ನು ನೀಡುತ್ತಾರೆ.
   ಈ 7 ಆದಿ ಸ್ಥಳಗಳ ಮೂಲ ದೈವಗಳಾದ ಸಿರಿಗಳಿಗೆ ಬೇರೆ ಜಾಗವನ್ನು ಕೊಟ್ಟು ಈ ಜಾಗವನ್ನು ಕೊರಗತನಿಯನಿಗೆ ಪಂಜಂತಾಯ ನೀಡಿತು.
   ಆದ್ದರಿಂದ ಈ ದೈವಗಳಿಗೆ ಮೊದಲ ಪ್ರಾಧಾನ್ಯತೆ ನೀಡಲಾಗುತ್ತದೆ.
  ಕೊರಗ ತನಿಯನ ಆದಿ ಸ್ಥಳಗಳಲ್ಲಿ ಯಾವುದೇ ರೀತಿಯ ಗುಡಿ ಗೋಪುರಗಳು, ಮೂರ್ತಿ ಆರಾಧನೆಗಳು, ದೀಪ ದೂಪ ಇಂತಹ ಆರಾಧನೆಗಳಿಗೆ ಆಸ್ಪದವಿಲ್ಲ.
  ಇದು ಅನಾದಿಕಾಲದಿಂದಲೂ ನಡೆದು ಬಂದಿದೆ
#ಕೊರಗ_ತನಿಯ_ದೈವದ_ಏಳು_ಆದಿ_ಸ್ಥಳಗಳು 
1, ದೆಕ್ಕಾಡು ಆದಿ ಸ್ಥಳ ಕುತ್ತಾರ
2,ಸೋಮೇಶ್ವರ ಆದಿ ಸ್ಥಳ
3, ಬೋಲ್ಯ ಆದಿ ಸ್ಥಳ
4, ಮಿತ್ತ ಅಗಲ ಆದಿ ಸ್ಥಳ
5,  ಉಜಿಲ ಆದಿ ಸ್ಥಳ
6, ತಲಾ ಆದಿ ಸ್ಥಳ
7, ದೇರಳ ಕಟ್ಟೆ ಆದಿ ಸ್ಥಳ
  ಶ್ರೀ ಪಂಜಂತಾಯ ದೈವದ ವರಪ್ರಸಾದದಿಂದ ಶ್ರೀ ಕೊರಗತನಿಯ ದೈವವು ಪಡೆದ ಏಳು ಆದಿ ಸ್ಥಳಗಳ ಪೈಕಿ ಆರು ಸ್ಥಳಗಳಲ್ಲಿ ತನ್ನ ಭಕ್ತರ ಹರಕೆಯ ಕೋಲಗಳನ್ನು ಅನಾದಿಕಾಲದಿಂದಲೂ ದೀಪ ಬೆಳಕುಗಳಿಲ್ಲದೆ ಕತ್ತಲಲ್ಲಿ ಸ್ವೀಕರಿಸಿ ಹರಸುತ್ತಾ ಬಂದಿರುತ್ತಾರೆ.
ಈ ಆದಿ ಸ್ಥಳಗಳನ್ನು ಹೊರತುಪಡಿಸಿ ಬೇರೆ ಯಾವುದೇ ಆದಿ ಸ್ಥಳಗಳು ಕೊರಗತನಿಯ ದೈವಕ್ಕೆ ಇರುವುದಿಲ್ಲ.
ಇಲ್ಲಿ ಸಂಜೆ 6:30 ರಿಂದ  ಬೆಳಿಗ್ಗೆ 6:30ವರೆಗೆ ಮಹಿಳೆಯರಿಗೆ ಪ್ರವೇಶವಿರುವುದಿಲ್ಲ.
 ಇಲ್ಲಿ ಯಾವುದೇ ಕಾರಣಕ್ಕೂ ಫೋಟೋ ಚಿತ್ರೀಕರಣ ಕಡ್ಡಾಯವಾಗಿ ನಿಷೇಧಿಸಲಾಗಿದೆ.
 (ಕೊರಗ ತನಿಯ ದೈವದ ಆದಿ ಸ್ಥಳದ ಕೇಂದ್ರ ಕಛೇರಿಯ ಕೈ ಪಿಡಿ ಮತ್ತು ಕೊರಗಜ್ಜ ಉದ್ಭವ ಶಿಲೆ ಆದಿ ಸ್ಥಳದ ಪೌರಾಣಿಕ ಹಿನ್ನೆಲೆ ಕರಪತ್ರದ ಮಾಹಿತಿ)

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂ...

ಶ್ರೀಧರ ಸ್ವಾಮಿ ವರದಳ್ಳಿ ಪವಾಡ ಪುರುಷರು.

   ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ವರದಳ್ಳಿಯ ತಪಸ್ವಿ ಶ್ರೀಧರ ಸ್ವಾಮಿಗಳು.   ವರದಳ್ಳಿ ಶ್ರೀಧರ ಸ್ವಾಮಿಗಳ ಬಗ್ಗೆ ಕೇಳಿದ್ದು, ಓದಿದ್ದು ಮತ್ತು ಅವರ ಒಡನಾಡಿಗಳನ್ನ ಭೇಟಿ ಮಾಡಿದ್ದು ಬಿಟ್ಟರೆ ಅವರನ್ನ ಪ್ರತ್ಯಕ್ಷವಾಗಿ ನೋಡಿಲ್ಲ.     ನಾವು ಚಿಕ್ಕವರಿದ್ದಾಗ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುವಾಗ ಆಗಿನ ಕಾಲದ ಖ್ಯಾತ ಚಲನಚಿತ್ರ ನಟ ಉದಯ ಕುಮಾರ್ ಅರಳಿ ಮರದ ಗ್ಯಾರೇಜ್ ಹತ್ತಿರ ಬಂದಿದ್ದಾರೆ ಅಂತ ಊರಿನ ಜನರೆಲ್ಲ ಗುಂಪು ಗುಂಪಾಗಿ ಓಡುತ್ತಿದ್ದರು, ನಾವು ಚಿಕ್ಕ ಮಕ್ಕಳೆಲ್ಲ ಅವರನ್ನ ಹಿಂಬಾಲಿಸಿದೆವು.       ಅಲ್ಲಿ ಒಂದು ಬಿಳಿ ಅಂಬಾಸಡರ್ ಕಾರು ನಿಂತಿದ್ದು ಅದರ ಅಡಿಯಲ್ಲಿ ಮಲಗಿ ಮೆಕ್ಯಾನಿಕ್ ದುರಸ್ತಿ ಮಾಡುತ್ತಿದ್ದರೆ ಎತ್ತರದ ಮಣ್ಣು ದಿಬ್ಬದ ಮೇಲೆ ನಮ್ಮ ನಟ ಉದಯ ಕುಮಾರ್ ಸಿಗರೇಟು ಸೇದಿ ಹೊಗೆ ಬಿಡುತ್ತಿದ್ದರು. ಯಾರೂ ಅವರ ಹತ್ತಿರ ಮಾತಾಡುವ ದೈಯ೯ ವಹಿಸಲಿಲ್ಲ ಆದರೆ ನೆರೆದ ಜನ ಮಾತಾಡಿಕೊಳ್ಳುತ್ತಿದ್ದ ಮಾತಿನ ಸಾರಾಂಶವೆಂದರೆ ವರದಳ್ಳಿಯಲ್ಲಿ ತಪಸ್ಸು ಮಾಡುತ್ತಿದ್ದ ಶ್ರೀಧರ ಸ್ವಾಮಿಗಳು ದೇಹತ್ಯಾಗ ಮಾಡಿದ್ದಾರೆ ಅದನ್ನ ಕೇಳಿ ಅವರ ಭಕ್ತ ಮತ್ತು ಶಿಷ್ಯರಾದ ಖ್ಯಾತ ಚಿತ್ರ ನಟ ಉದಯ ಕುಮಾರ್ ಬರುವಾಗ ಕಾರು ಹಾಳಾಗಿ ದುರಸ್ತಿಗಾಗಿ ನಿಂತಿದ್ದಾರೆ, ದುಃಖದಲ್ಲಿ ಇರೋದರಿಂದ ಆ ರೀತಿ ಸಿಗರೇಟು ಸೇದಿ ಬೂದಿ ಮಾಡುತ್ತಿದ್ದಾರೆ ಅವರ ಹತ್ತಿರ ಯಾರೂ ಮಾತಾಡ ಬೇಡಿ ಅಂತ ...