Blog number 2276.ರಾಷ್ಟ್ರೀಯ ಹೆದ್ದಾರಿ ಅಂಕೋಲ ಸಮೀಪದ ಶಿರೂರಿನಲ್ಲಿ ಪಶ್ಚಿಮ ಘಟ್ಟದ ಪರ್ವತ ಕುಸಿದ ದುರಂತಕ್ಕೆ ನಿಜ ಕಾರಣ.
#ಪಶ್ಚಿಮ_ಘಟ್ಟದಲ್ಲಿ_ಕುಸಿಯುತ್ತಿರುವ_ಪರ್ವತ_ಶ್ರೇಣಿಗಳು
#ಅಂಕೋಲಾ_ಸಮೀಪದ_ಶಿರೂರಿನಲ್ಲಿ_ರಾಷ್ಟ್ರೀಯ_ಹೆದ್ದಾರಿ_ಕುಸಿದು_ಆಗಿದ_ದುರಂತಕ್ಕೆ_ಕಾರಣವೇನು?
#ಇಲ್ಲಿ_ಸಣ್ಣ_ಒಂದು_ತನಿಖೆ_ಸ್ಥಳೀಯ_ಪತ್ರಕರ್ತರು_ಸಾಮಾಜಿಕ_ಕಾಳಜಿಯ_ಕಾರ್ಯಕರ್ತರು_ಮಾಡಬಹುದು...
1 ) ಚತುಷ್ಪಾದ ರಸ್ತೆ ನಿರ್ಮಾಣದಲ್ಲಿ ಅವಶ್ಯವಿರುದಕ್ಕಿಂತ
ಹೆಚ್ಚು ಅಗಲ ಅಗಲೀಕರಣ ಯಾಕೆ ಗುತ್ತಿಗೆದಾರರು ಮಾಡಿದರು?
2 ) ಇಲ್ಲಿನ ಗುತ್ತಿಗೆದಾರರಿಗೆ ಜಲ್ಲಿ ಕಲ್ಲು ತೆಗೆಯಲು ಈ ಕಲ್ಲಿನ ಗುಡ್ಡ ಬಗೆಯಲು ಜಿಲ್ಲಾಧಿಕಾರಿಗಳು ಪ್ರತ್ಯೇಕ ಅನುಮತಿ ನೀಡಿದ್ದರ ?.
3) ನೀಡಿದ್ದರೆ ಆ ಪ್ರದೇಶದ ಅಳತೆ ಮತ್ತು ನಕ್ಷೆ ಎಷ್ಟು?
ನಿಜ ಕಾರಣವನ್ನು ಯಾರು ಬಹಿರಂಗಪಡಿಸದೆ ವಿಷಯಾ0ತರ ಮಾಡುತ್ತಿರುವುದು ಸರಿಯಲ್ಲ,ಕಳೆದ 15 ವರ್ಷದಿಂದ ನಾನು ಈ ಮಾರ್ಗದಲ್ಲಿ ಸತತ ಪ್ರಯಾಣವನ್ನು ಮಾಡುತ್ತಿದ್ದೇನೆ.
2018ರಲ್ಲಿ ಇರಬಹುದು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪ್ರಾರಂಭವಾಯಿತು ಚತುಷ್ಪಾದ ರಸ್ತೆಯ ಅಗಲೀಕರಣಕ್ಕಾಗಿ ಕುಮುಟಾ ಕಾರವಾರದ ರಸ್ತೆ ಕಾಮಗಾರಿ ವೇಗವಾಗಿ ನಡೆಯಲು ಪ್ರಾರಂಭವಾಯಿತು.
ಆಗ ಕುಮುಟಾದಿಂದ ಅಂಕೋಲ ಮಾರ್ಗದಲ್ಲಿ ಗಂಗಾವಳಿ ನದಿ ಸೇತುವೆ ಹಳೆಯದಿತ್ತು ಆ ಸೇತುವೆ ದಾಟಿದ ನಂತರ ಎಡಕ್ಕೆ ನೇರವಾಗಿ ಹೆದ್ದಾರಿ ದ್ವಿಮುಖ ಹೆದ್ದಾರಿಯಾಗಿತ್ತು.
ಎಡಭಾಗದಲ್ಲಿ ವರ್ಷಪೂರ್ತಿ ಹರಿಯುತ್ತಿರುವ ಸಮುದ್ರ ಸೇರುವ ಗಂಗಾವಳಿ ನದಿ,ಬಲಕ್ಕೆ ಎತ್ತರದ ಪಶ್ಚಿಮ ಘಟ್ಟದ ಪರ್ವತ ಶ್ರೇಣಿ ಸದಾ ಹಸಿರಾಗಿರುತ್ತಿತ್ತು ಈ ಪ್ರಕೃತಿ ಸೌಂದಯ೯ದ ಮಧ್ಯದ ಈ ರಸ್ತೆಯಲ್ಲಿ ಪ್ರಯಾಣ ಮಾಡುವುದು ಚೇತೋಹಾರಿಯಾಗಿತ್ತು.
ಈ ಕಾಲದಲ್ಲಿ ನೆರಳಿನ ಮರಗಳು ಹೆದ್ದಾರಿಯ ಎರೆಡೂ ಬಾಗದಲ್ಲಿ ಪ್ರಯಾಣದಲ್ಲಿ ತಂಪು ನೀಡುತ್ತಿತ್ತು, ಈಗ ಅಪಘಾತವಾದ ಸ್ಥಳದ ಹತ್ತಿರ ಬಂದಾಗ ರಸ್ತೆ ಕಡಿದಾಗಿತ್ತು ಕಾರಣ ಬಲಭಾಗದಲ್ಲಿನ ಕಲ್ಲಿನ ಎತ್ತರದ ಗುಡ್ಡ ಮತ್ತು ಎಡಭಾಗದಲ್ಲಿ ಅಲ್ಲಿ ಹರಿಯುವ ಗಂಗಾವಳಿ ನದಿ ಆದ್ದರಿಂದ ಅಲ್ಲಿ ಯಾವುದೇ ವಾಹನ ಪಾರ್ಕಿಂಗ್ ಮಾಡಲು ಸಾಧ್ಯವಿರಲಿಲ್ಲ ಆದ್ದರಿಂದ ಅಲ್ಲಿ ಕ್ಯಾಂಟೀನ್ ಹೋಟೆಲ್ ಕೂಡ ಇರಲಿಲ್ಲ.
ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪ್ರಾರಂಭವಾದಾಗ ಈ ಕಲ್ಲಿನ ಗುಡ್ಡವನ್ನು ಬೃಹತ್ ಯಂತ್ರಗಳಿಂದ ಮತ್ತು ಎಲೆಕ್ಟ್ರಿಕ್ ಡೈನಾಮೆಂಟಗಳಿಂದ ಅಗಲೀಕರಣ ಪ್ರಾರಂಭ ಮಾಡಿದ್ದರು.
ಆ ಅಗಲೀಕರಣ ರಸ್ತೆಗೆ ಬೇಕಾದ ಅವಶ್ಯದ ಅಗಲಕ್ಕಿಂತ ಅದರ ಎರಡರಷ್ಟು ಅಗಲ ಮಾಡಲಾಯಿತು ಕಾರಣ ಅಲ್ಲಿ ದೊರೆಯುತ್ತಿದ್ದ ಕಲ್ಲು ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಗುತ್ತಿಗೆದಾರರಿಗೆ ಲಾಭವಾಗಿ ಸಮೀಪದಲ್ಲಿ ಸಿಗುವುದು ಒಂದು ಕಾರಣ.
ಈ ಭಾಗದ ಕಲ್ಲಿನ ಗುಡ್ಡ ತೆಗೆದು ಹೆಚ್ಚು ಅಗಲವಾದ್ದರಿಂದ ರಸ್ತೆಗೆ ಮಿಕ್ಕಿದ ಜಾಗ ಬೃಹತ್ ವಾಹನಗಳ ಚಾಲಕರಿಗೆ ತಮ್ಮ ವಾಹನ ನಿಲ್ಲಿಸಿ ವಿಶ್ರಾಂತಿ ಪಡೆಯಲು ಅನುಕೂಲ ಆಯಿತು.
ಶಿಲಾ ಕಲ್ಲಿನ ನೆಲವು ಮಳೆಗಾಲದಲ್ಲೂ ಕಾಂಕ್ರೀಟ್ ನಿಂದ ಮಾಡಿದಂತ ಪಾರ್ಕಿಂಗ್ ಲಾಟ್ ರೀತಿ ಆಯಿತು, ಅಲ್ಲೇ ಗುಡ್ಡದಿಂದ ಸದಾ ಹರಿಯುತ್ತಿದ್ದ ಅಭ್ಟೀ ನೀರು ಅಡಿಗೆಗೆ, ಕುಡಿಯಲು ಮತ್ತು ಸ್ನಾನಕ್ಕೆ ಅನುಕೂಲವಾಯಿತು.
ಕೆಲ ಸಂದರ್ಭದಲ್ಲಿ ದೊಡ್ಡ ಪ್ರಮಾಣದಲ್ಲಿ ವಾಹನಗಳು ಗಂಗಾವಳಿ ನದಿ ದಂಡೆಯಲ್ಲಿ ಬಲಭಾಗದಲ್ಲಿ ನಿಲ್ಲುತ್ತಿತ್ತು ಈ ಸಂದರ್ಭದಲ್ಲಿ ಇಲ್ಲಿ ನಿಲ್ಲುವ ವಾಹನಗಳ ಚಾಲಕರುಗಳಿಗಾಗಿ ಸಣ್ಣ ಕ್ಯಾಂಟೀನ್ ಕೂಡ ಪ್ರಾರಂಭವಾಯಿತು.
ಈ ಚತುಷ್ಪಾದ ರಸ್ತೆಗೆ ಬೇಕಾದಷ್ಟೇ ಅಗಲೀಕರಣ ಮಾತ್ರ ಮಾಡಿದ್ದರೆ ಈ ಅನಾಹುತ ಖಂಡಿತಾ ಆಗುತ್ತಿರಲಿಲ್ಲ ಆದರೆ ಗುತ್ತಿಗೆದಾರರ ದುರಾಸೆ ಮತ್ತು ಅಧಿಕಾರಿಗಳ ಲಾಲಸೆಯಿಂದ ಪಶ್ಚಿಮ ಘಟ್ಟದ ಪರ್ವತ ಶ್ರೇಣಿಯ ಬುಡದ ಕಾಲನ್ನೆ ಕತ್ತರಿಸಲು ಪ್ರಾರಂಬಿಸಿದರು.
ಇದಕ್ಕೆ ಬೇಕಾದ ಅನುಮತಿ ಪತ್ರಗಳು ಗುತ್ತಿಗೆದಾರ ಪಡದಿರಬಹುದು, ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ಮಾಡುವ ಗುತ್ತಿಗೆದಾರರಿಗೆ ಅವರಿಗೆ ಬೇಕಾದ ಕಡೆ ಜಲ್ಲಿ ಮತ್ತು ಮರಳುಗಳಿಗೆ ಪ್ರಾತ್ಕಾಲಿಕವಾಗಿ ಗಣಿ ಗುತ್ತಿಗೆಯನ್ನು ಕೊಡುವ ಅಧಿಕಾರ ಜಿಲ್ಲಾಧಿಕಾರಿಗಳಿಗೆ ಇದೆ ಆದರೆ ಆ ಪ್ರದೇಶದ ಸೂಕ್ಷ್ಮತೆ ಅಂದಾಜಿಸಿ ಬೇರೆ ಸ್ಥಳದಲ್ಲಿ ನೀಡ ಬಹುದಾಗಿತ್ತು.
ಇಲ್ಲಿ ಅನುಮತಿ ಕೊಡುವ ಮೊದಲು ಈ ಪರ್ವತ ಶ್ರೇಣಿಯ ಕಾಲು ಬಡ ಆಗಿರುವ ತಡೆಗೋಡೆಯಂತ ಅಡಿಪಾಯ ಆಗಿರುವ ಈ ಕಲ್ಲಿನ ಗುಡ್ಡ ತೆರೆದರೆ ಮುಂದೇನು ಅನಾಹುತ ಆದೀತೆಂಬ ಅಂದಾಜು ಸಂಬಂಧಪಟ್ಟ ಇಲಾಖೆಗೆ ಗೊತ್ತಿದ್ದಿದ್ದ ವಿಚಾರವೇ ಆಗಿತ್ತು ಇಲ್ಲಿ ಗೊತ್ತಿಗೆದಾರರ ಪ್ರಭಾವ ಮತ್ತು ಹಣ ಕೆಲಸ ಮಾಡಿರ ಬಹುದು.
ಗುತ್ತಿಗೆದಾರರು ತಮ್ಮ ಅಳತೆಗೂ ಮಿಕ್ಕಿ ಪರ್ವತದ ಕಾಲಿನ ಭಾಗವನ್ನು ಕಲ್ಲುಗಳು ದೊರೆಯುವ ತನಕ ಬಗೆದಿದ್ದಾರೆ, ಯಾವಾಗ ಕಲ್ಲು ಮುಗಿಯಿತೋ ಆಗ ಅವರ ಕೆಲಸ ನಿಲ್ಲಿಸಿದರು.
ನಂತರ ಬುಡದ ಅಡಿಪಾಯ ಇಲ್ಲದ ಪರ್ವತ ಕ್ರಮೇಣ ಸಡಿಲವಾಗಲು ಪ್ರಾರಂಭವಾಯಿತು, ಅಲ್ಲಿಯವರೆಗೆ ರಕ್ಷಣಾ ಗೋಡೆಯಾಗಿದ್ದ ಶಿಲಾಮಯ ಪರ್ವತ ತೆಗೆದಿದ್ದರಿಂದ ಅಂಕೋಲದ ಶಿರೂರಿನ ಗುಡ್ಡ ಜರಿದು ರಾಷ್ಟ್ರೀಯ ಹೆದ್ದಾರಿಯನ್ನು ಮುರಿದು ಅಲ್ಲಿ ನಿಂತಿದ್ದ ಮತ್ತು ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ವಾಹನಗಳ ಜೊತೆ ಕ್ಯಾಂಟೀನ್ ಸೇರಿ ಮಣ್ಣಿನ ಗುಡ್ಡ ಗಂಗಾವಳಿ ನದಿಗೆ ತೆಗೆದುಕೊಂಡು ಅಪ್ಪ ಳಿಸಿತು.
ಇಲ್ಲಿ ಸಣ್ಣ ಒಂದು ತನಿಖೆ ಸ್ಥಳೀಯ ಪತ್ರಕರ್ತರು, ಸಾಮಾಜಿಕ ಕಾಳಜಿಯ ಕಾರ್ಯಕರ್ತರು ಮಾಡಬಹುದು...
1 ) ಚತುಷ್ಪಾದ ರಸ್ತೆ ನಿರ್ಮಾಣದಲ್ಲಿ ಅವಶ್ಯವಿರುದಕ್ಕಿಂತ
ಹೆಚ್ಚು ಅಗಲ ಅಗಲೀಕರಣ ಯಾಕೆ ಗುತ್ತಿಗೆದಾರರು ಮಾಡಿದರು?
2 ) ಇಲ್ಲಿನ ಗುತ್ತಿಗೆದಾರರಿಗೆ ಜಲ್ಲಿ ಕಲ್ಲು ತೆಗೆಯಲು ಈ ಕಲ್ಲಿನ ಗುಡ್ಡ ಬಗೆಯಲು ಜಿಲ್ಲಾಧಿಕಾರಿಗಳು ಪ್ರತ್ಯೇಕ ಅನುಮತಿ ನೀಡಿದ್ದರ ?.
3) ನೀಡಿದ್ದರೆ ಆ ಪ್ರದೇಶದ ಅಳತೆ ಮತ್ತು ನಕ್ಷೆ ಎಷ್ಟು?
#ಇದಿಷ್ಟು_ತನಿಖೆ_ಮಾಡಿದರೆ_ಶಿರೂರು_ದುರಂತದ_ಮುಖ್ಯ_ಕಾರಣ_ತಿಳಿಯುತ್ತದೆ_ಆದರೆ_ಬೆಕ್ಕಿಗೆ_ಗಂಟೆ_ಕಟ್ಟುವವರು_ಯಾರು?
Comments
Post a Comment