Blog number 2284. ಎಲ್ ಪಿ ಜಿ ಗ್ಯಾಸ್ ದುರಂತಗಳು ಇದನ್ನು ತಡೆಯಲು ನಮ್ಮ ಮನೆಗಳಿಂದಲೇ ಇವತ್ತಿನಿಂದಲೇ ನಾವು ಮುಂದಾಗಬೇಕು.
#ಶಿವಮೊಗ್ಗ_ಸಮೀಪದ_ಆಯನೂರಿನ_ಬೇಕರಿ_ದುರಂತ
#ಕೇವಲ_ಲಿಪ್_ಸಿಂಪತಿ_ವ್ಯಕ್ತಪಡಿಸ_ಬೇಡಿ
#ಇದರಿಂದ_ಎಲ್ಲರೂ_ಪಾಠ_ಕಲಿಯಬೇಕು
#ನಿಮ್ಮ_ಮನೆ_ವ್ಯವಹಾರದ_ಸ್ಥಳದ_ಅಡುಗೆ_ಮನೆಯ_ಒಳಗೆ_ಅಳವಡಿಸಿದ
#ಎಲ್_ಪಿ_ಜಿ_ಸಿಲೆಂಡರ್_ತಕ್ಷಣ_ಹೊರಗೆ_ಸ್ಥಳಾಂತರಿಸಿ
#ಸ್ನಾನದ_ಮನೆಯ_ಗ್ಯಾಸ್_ಗೀಜರ್_ಸಂಪರ್ಕ_ಕೂಡ
#ಯಾಕೆ_LPG_ಅವಘಡ_ತಡೆಯ_ಬೇಕು.
#LPG #lpggas #LPGGasCylinder #lpgfire #lpggeezer #FireAccident #kitchensafety #restaurantfiresafety #DomesticLPG #foodindustries
ಕೆಲವೇ ದಿನದ ಹಿಂದೆ ಶಿವಮೊಗ್ಗ ಸಮೀಪದ ರಾಷ್ಟ್ರೀಯ ಹೆದ್ದಾರಿಯ ಅಯನೂರು ಊರಿನ ಮುಖ್ಯಪೇಟೆ ಸ್ಥಳದಲ್ಲಿ ಬೇಕರಿ ಒಂದು ಎಲ್ಪಿಜಿ ಸಿಲಿಂಡರ್ ಅವಘಡದಲ್ಲಿ ಬೆಂಕಿಗೆ ಆಹುತಿ ಆಯಿತು.
ಅಷ್ಟರಲ್ಲಿ ಬೆಂಕಿಯ ಕೆನ್ನಾಲಿಗಳು ಚಾಚಿ ಇಡಿ ಅಂಗಡಿಯನ್ನು ಭಸ್ಮ ಮಾಡುತ್ತಿದ್ದು ಇದರ ಮಧ್ಯೆ ಬೇಕರಿ ಒಳಗಿನ ಎಲ್ ಪಿ ಜಿ ಸಿಲಿಂಡರ್ ಸಿಡಿದು ಆಕಾಶದೆತ್ತರಕ್ಕೆ ಹಾರಿ ಬೇಕರಿಯ ಮುಂದಿನ ಮೇಲ್ಚಾವಣಿ ಮೇಲೆ ಬಿದ್ದು ಕೆಳಗೆ ಬಿದ್ದಿತ್ತು.
ಲಕ್ಷಾಂತರ ರೂಪಾಯಿ ವಿನಿಯೋಗಿಸಿ ರೆಸ್ಟೋರೆಂಟ್ ಕ್ಯಾಂಟೀನ್ ಬೇಕರಿಗಳನ್ನು ಸ್ಥಾಪಿಸುತ್ತೇವೆ ಆದರೆ ನಾವುಗಳು ಅಲ್ಲಿ ಅಗ್ನಿ ಅನಾಹುತ ತಡೆಯುವ ಯಾವುದೇ ಸೇಫ್ಟಿ ಮೆಶರ್ಸ್ ಅಳವಡಿಸಿಕೊಂಡಿರುವುದಿಲ್ಲ.
ಇದಕ್ಕೆ ಕಾನೂನು ಇದ್ದರೂ ಪಾಲಿಸುವುದಿಲ್ಲ ವಿಶೇಷವಾಗಿ ಉದ್ಯಮಿಗಳು ಯಾವ ಕಾರಣಕ್ಕೂ ಎಲ್ಪಿಜಿ ಸಿಲಿಂಡರ್ ಗಳನ್ನು ತಮ್ಮ ಕಿಚನ್ ಒಳಗೆ ಸ್ಥಾಪಿಸಲೇ ಬಾರದು ಇದು ಪ್ರತಿ ಮನೆಯ ಕಿಚನ್ ಗಳಿಗೂ ಅನ್ವಯಿಸುತ್ತದೆ.
ಆದರೆ ನಾವು ನೀಡುವ ಕುಂಟು ನೆಪ ಸಿಲಿಂಡರ್ ಹೊರಗಡೆ ಇದ್ದರೆ ಕಳ್ಳತನವಾಗುತ್ತದೆ.... ಅದಕ್ಕೂ ಒಂದು ಪರಿಹಾರ ಇದೆ ನೀವು ಕಬ್ಬಿಣದ ಜಾಲರಿಯ ಗಟ್ಟಿ ಬೀಗ ಹಾಕುವ ಜಾಲರಿ ಒಂದನ್ನು ಹೊರಗೆ ಅಳವಡಿಸಿ ಅಲ್ಲಿನಿಂದ ಪೈಪು ಮುಖಾಂತರ ಗ್ಯಾಸ್ ಅಡುಗೆ ಮನೆಗೆ ತಲುಪಿಸಬಹುದು ಇದರ ಮಧ್ಯದಲ್ಲಿ ಒಂದೆರಡು ಸೇಫ್ಟಿ ವಾಲ್ವ್ ಗಳನ್ನು ಅಳವಡಿಸಬಹುದು.
ಇದರಿಂದ ಯಾವುದೇ ಸಂದರ್ಭದಲ್ಲಿ ಅಗ್ನಿ ಅವಘಡ ಆದರೆ ತಕ್ಷಣ ವಾಲ್ವುಗಳನ್ನು ಬಂದು ಮಾಡಿ ದುರಂತ ತಡೆಯಲು ಸಾಧ್ಯವಿದೆ ಇದರಿಂದ ಅಗ್ನಿ ಅವರ್ಷಡ ಆದ ಇಂತಹ ಪ್ರದೇಶಗಳಲ್ಲಿ ಎಲ್ಪಿಜಿ ಸಿಲೆಂಡರ್ ಬಾಂಬಿನಂತೆ ಸಿಡಿಯುವುದನ್ನು ತಪ್ಪಿಸಬಹುದು.
ಕೋಟ್ಯಾಂತರ ರೂಪಾಯಿ ಕಟ್ಟಿ ಮನೆ ಕಟ್ಟುವ ಮಾಲೀಕರು ಈ ರೀತಿ ಎಲ್ಪಿಜಿ ಸಿಲಿಂಡರ್ ಗಳನ್ನು ಮನೆಯ ಹೊರಗೆ ಅಳವಡಿಸಿ ಅಲ್ಲಿಂದ ಪೈಪುಗಳ ಮುಖಾಂತರ ಗ್ಯಾಸ್ ಅಡುಗೆ ಮನೆಗಳಿಗೆತರಬೇಕು,ಸ್ನಾನದ ಮನೆಯ ಗ್ಯಾಸ್ ಗೀಜರ್ ಸಂಪರ್ಕ ಕೂಡ ಈ ರೀತಿ ಮಾಡ ಬೇಕು.
ಆದರೆ ಸಾಮಾನ್ಯವಾಗಿ ಯಾರು ಈ ರೀತಿಯ ಮುಂಜಾಗ್ರತೆ ವಹಿಸುವುದಿಲ್ಲ.
ನಾನು ನನ್ನ ಮನೆಯ, ನಮ್ಮ ಮಲ್ಲಿಕಾ ವಿಜ್ ರೆಸ್ಟೋರೆಂಟ್ ಮತ್ತು ಚಂಪಕ ಪ್ಯಾರಡೈಸ್ ಮತ್ತು ನಮ್ಮ ಕಲ್ಯಾಣ ಮಂಟಗಳಿಗೆ ಎಲ್‌ಪಿಜಿ ಗ್ಯಾಸ್ ಅನ್ನು ಹೊರಗಡೆ ಅಳವಡಿಸಿದ್ದೇನೆ ಇದರಿಂದ ಗ್ಯಾಸ್ ಲೀಕ್ ಆದರೂ ಅದು ಬಯಲಿನಲ್ಲೇ ಪರಿಸರಕ್ಕೆ ಸೇರಿ ಹೋಗುತ್ತದೆ ಮತ್ತು ಹೊರಗಡೆ ಮತ್ತು ಒಳಗಡೆ ಅಳವಡಿಸಿರುವ ವಾಲ್ವಗಳು ಯಾವುದೇ ಅವಘಡ ಸಂಭವಿಸಿದರೆ ತಕ್ಷಣ ಗ್ಯಾಸ್ ಹರಿವು ನಿಲ್ಲಿಸಲು ಸಾಧ್ಯವಿದೆ.
ಅಯನೂರಿನಲ್ಲಿ ನಡೆದ ಈ ಒಂದು ಅವಘಡ ಬೇಕರಿ ಮಾಲೀಕರಿಗೆ ಲಕ್ಷಾಂತರ ರೂಪಾಯಿ ನಷ್ಟ ಮಾಡಿಕೊಟ್ಟಿದೆ ಇದು ನಮಗೆಲ್ಲ ಒಂದು ಪಾಠವಾಗಬೇಕು.
ನಿಮ್ಮ ಮನೆ ಕ್ಯಾಂಟೀನ್ ಹೋಟೆಲ್ ಕಲ್ಯಾಣ ಮಂಟಪಗಳಿಗೆ ಎಲ್‌ಪಿಜಿ ಸಿಲಿಂಡರನ್ನು ಕಟ್ಟಡದ ಹೊರಗಡೆ ಅಳವಡಿಸಿ ಸುರಕ್ಷತೆಯನ್ನು ಮಾಡಿಕೊಡುವ ಶಿವಮೊಗ್ಗದ ಸಂಸ್ಥೆಯ ಫೋನ್ ನಂಬರ್ ಇಲ್ಲೇ ನೀಡಿದ್ದೇನೆ ಇದನ್ನು ಸಂಪರ್ಕಿಸಿ ನಿಮ್ಮ ಪ್ರಾಪರ್ಟಿ ಸುರಕ್ಷತೆ ಕಾಪಾಡಬಹುದಾಗಿದೆ 90082 13138.
#ಶಿವಮೊಗ್ಗ_ಸಮೀಪದ_ಆಯನೂರಿನ_ಬೇಕರಿ_ದುರಂತ
#ಕೇವಲ_ಲಿಪ್_ಸಿಂಪತಿ_ವ್ಯಕ್ತಪಡಿಸ_ಬೇಡಿ
#ಇದರಿಂದ_ಎಲ್ಲರೂ_ಪಾಠ_ಕಲಿಯಬೇಕು
#ನಿಮ್ಮ_ಮನೆ_ವ್ಯವಹಾರದ_ಸ್ಥಳದ_ಅಡುಗೆ_ಮನೆಯ_ಒಳಗೆ_ಅಳವಡಿಸಿದ
#ಎಲ್_ಪಿ_ಜಿ_ಸಿಲೆಂಡರ್_ತಕ್ಷಣ_ಹೊರಗೆ_ಸ್ಥಳಾಂತರಿಸಿ
#ಸ್ನಾನದ_ಮನೆಯ_ಗ್ಯಾಸ್_ಗೀಜರ್_ಸಂಪರ್ಕ_ಕೂಡ
Comments
Post a Comment