Skip to main content

Blog number 2285. ಭಂಗಿ ನೈವೇಧ್ಯ ಅರ್ಪಿಸುತ್ತಿದ್ದ ಭಂಗಿ ಭೂತಪ್ಪ ದೇವಾಲಯ ಬಸವನ ಹೊಂಡ

#ಆನಂದಪುರಂನಿಂದ_ಹೊಸನಗರ_ಮಾರ್ಗದಲ್ಲಿರುವ_ವಿಶೇಷ_ದೇವಸ್ಥಾನ

#ನೂತನ_ಕೃಷಿ_ವಿಶ್ವವಿದ್ಯಾಲಯ_ಇಲ್ಲಿಂದಲೇ_ಪ್ರಾರಂಭವಾಗುತ್ತದೆ

#ಬಂಗಿ_ಭೂತಪ್ಪ_ದೇವಸ್ಥಾನ

#ಬಂಗಿ_ಸಿಗರೇಟು_ಬೀಡಿಯೇ_ನೈವೇದ್ಯ.

#ಪಕ್ಕದಲ್ಲಿರುವ_ಕಲ್ಯಾಣಿ_ಶಿಥಿಲಾವಸ್ಥೆಯಲ್ಲಿದೆ

#ಸ್ಥಳಿಯರು_ಬಸವನಹೊಂಡ_ಎನ್ನುತ್ತಾರೆ.

#ನಾಥ_ಸಂಪ್ರದಾಯದ_ಮಹಂತರ_ಸದಾ_ಉರಿಯುತ್ತಿದ್ದ_ಜೂಲ_ಇಲ್ಲಿತ್ತು.

#ಹೊಸನಗರಕ್ಕೆ_ಹಿಂದಿನ_ಹೆಸರು_ಕಲ್ಲೂರಶೆಟ್ಟಿಕೊಪ್ಪ 



18ನೆ ಶತಮಾನದವರೆಗೆ ಈ ರಸ್ತೆಗೆ ಆನಂದಪುರಂ ಕಲ್ಲೂರ ಶೆಟ್ಟಿ ಕೊಪ್ಪ ರಸ್ತೆ ಎಂಬ ಹೆಸರಿತ್ತು ಕಾರಣ ಹೊಸನಗರದ ಮೂಲ ಹೆಸರು ಕಲ್ಲೂರ ಶೆಟ್ಟಿ ಕೊಪ್ಪ ಅಂತ ಇತ್ತು ನಂತರ ಹೊಸನಗರ ಎಂದು ನಾಮಕರಣವಾಗಿರಬೇಕು, ಇದು ಕೆಳದಿ ಅರಸರ ಕಾಲದಲ್ಲಿ ಆನಂದಪುರಂ ಕೋಟೆಯಿಂದ ಅವರ ರಾಜದಾನಿ ಬಿದನೂರಿಗೆ ಹೋಗುವ ರಾಜ ಮಾರ್ಗವೂ ಆಗಿತ್ತು.
  ಆನಂದಪುರಂ ನಿಂದ ಈಗಿನ ಹೊಸನಗರ ರಸ್ತೆಯಲ್ಲಿ ಈಗ ನೂತನವಾಗಿ ನಿರ್ಮಿಸಿರುವ ಕೃಷಿ ವಿಶ್ವವಿದ್ಯಾಲಯದ ಪ್ರಾರಂಭದಲ್ಲೇ ರಸ್ತೆಯ ಎಡಬದಿಗೆ ದೊಡ್ಡ ಆಲದ ಮರ ಇತ್ತು ಅದರ ಕೆಳಗೆ ಸಣ್ಣದಾದ 3X3 ಅಡಿಯ ಕಲ್ಲಿನ ಚಪ್ಪಡಿಯ ಗುಡಿ ಇತ್ತು ಇಲ್ಲಿ ಅಸ೦ಖ್ಯ ವಿವಿದ ಗಾತ್ರದ ತ್ರಿಶೂಲಗಳು ಇತ್ತು.
   ಸದಾ ಅಲ್ಲಿ ಬಂಗಿಯ ದೂಮದ ಘಮ ಇರುತ್ತಿತ್ತು, ನಂತರ ಅದು ಸಿಗರೇಟು ಹಚ್ಚಿ ಸಮರ್ಪಿಸುವಲ್ಲಿಗೆ ಬದಲಾಗಿದೆ.
  ಸಾಗರ ತಾಲೂಕಿನ ಆನಂದಪುರಂ ಹೋಬಳಿಯ ಯಡೇಹಳ್ಳಿ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನದಿಂದ ಕೇವಲ 1 ಕಿ.ಮೀ. ದೂರದಲ್ಲಿದೆ.
   ಈ ದೇವಾಲಯ 25 ವರ್ಷದ ಹಿಂದೆ ಗ್ರಾಮಸ್ಥರ ಸಹಾಯದಿಂದ ನಿರ್ಮಾಣಗೊಳಿಸಲಾಗಿತ್ತು,ಮೂರ್ನಾಲ್ಕು ವರ್ಷದ ಹಿಂದೆ ಇಲ್ಲಿದ್ದ ದೊಡ್ಡ ಆಲದ ಮರ ಬಿದ್ದಿದ್ದರಿಂದ ಗ್ರಾಮಸ್ಥರು ಮತ್ತು ಆಡಳಿತ ಮಂಡಳಿ  ದೇವಾಲಯ ಸ್ಥಳಾಂತರಿಸಿ ಈಗ ಶಿಲಾಮಯ ದೇವಸ್ಥಾನ  ನಿರ್ಮಿಸಿದ್ದಾರೆ.
    ಈ ಭಂಗಿ ಭೂತಪ್ಪ ದೇವಸ್ಥಾನದ ಅಧ್ಯಕ್ಷರಾಗಿ ಯಡೆಹಳ್ಳಿ ಶೇಖರ್ ಶೆಟ್ರು ಈ ದೇವಾಲಯದ ಅಭಿವೃದ್ಧಿಯ ನೇತೃತ್ವವಹಿಸಿದ್ದಾರೆ ಪ್ರತಿ ವರ್ಷ ಜಾತ್ರಾ ಮಹೋತ್ಸವ ಮತ್ತು ರಥೋತ್ಸವ ಕೂಡ ನಡೆಯುತ್ತದೆ.
   ಈ ಮಾರ್ಗದಲ್ಲಿ  ಪ್ರಯಾಣಿಸುತ್ತಿದ್ದ ಆ ಕಾಲದ ಪಾದಚಾರಿಗಳು ಮತ್ತು ಎತ್ತಿನಗಾಡಿಗಳು ರಸ್ತೆಯ ಇನ್ನೊಂದು ಬಾಗದಲ್ಲಿರುವ ಬಸವನ ಹೊಂಡ ಎಂಬ ಸ್ಥಳಿಯ ಜಂಬಿಟ್ಟಿಗೆಯ ಕಲ್ಲಿನಲ್ಲಿ ಚೌಕಾಕಾರವಾಗಿ ಕಟ್ಟಿರುವ ಕಲ್ಯಾಣಿಯಲ್ಲಿ ಅವರ ಮತ್ತು ಅವರ ಗಾಡಿಯ ಎತ್ತುಗಳ ಬಾಯಾರಿಕೆ ನೀಗಿಸಿ ಕೈ ಕಾಲು ತೊಳೆದುಕೊಂಡು ಬಂಗಿ ಬೂತಪ್ಪನಿಗೆ ಬಂಗಿಯ ಬತ್ತಿ ಮಾಡಿ ಅದನ್ನು ಹಚ್ಚುವ ನೈವೇಧ್ಯದ ಪದ್ಧತಿ ಆಗಿತ್ತು.
    ಬಸವನ ಹೊಂಡದ ಬಂಗಿ ಬೂತಪ್ಪನ ಸ್ಥಳದಲ್ಲಿ 10 ನೇ ಶತಮಾನದಲ್ಲಿ ಉತ್ತರ ಪ್ರದೇಶದ ಗೋರಕ ಪುರದ ಗೋರಕನಾಥ ಮಠಕ್ಕೆ ಸೇರಿದ್ದ ನಾಥ ಸಂಪ್ರದಾಯದ ಮಹಂತರುಗಳು ಇದ್ದರೆಂದು, ಈ ಭಾಗದಲ್ಲಿ ದೊಡ್ಡ ಜನ ವಸತಿಯಿರುವ ಕುರುಹಾಗಿ ಸಣ್ಣ ಸಣ್ಣ ತೆರೆದ ಬಾವಿ ಮತ್ತು ಮನೆಗಳ ಅಡಿಪಾಯವಿದೆ.
  ಜನವಸತಿ ಕೇಂದ್ರಕ್ಕಾಗಿ ಈ ಕಲ್ಯಾಣಿಯೂ ನಿರ್ಮಾಣವಾಗಿತ್ತು, ಅಲ್ಲಿ ಸದಾ ಉರಿಯುತ್ತಿದ್ದ ಜೂಲ (ಅಗ್ನಿಕುಂಡ ) ಇರುತ್ತಿತ್ತು ಆಗ ಈ ಮಾರ್ಗದಲ್ಲಿ ಸಂಚರಿಸುವ ಜನ ಸಂತರಿಗೆ ಬಂಗಿ ಸಮರ್ಪಿಸುತ್ತಿದ್ದರಂತೆ.
 ಕಾಲಾಂತರದಲ್ಲಿ 16ನೇ ಶತಮಾನದ ಅರ್ಧದಲ್ಲೇ ನಾಥ ಸಂಪ್ರದಾಯದ ಈ ಮಹಂತರುಗಳು ಬೇರೆ ಸ್ಥಳಕ್ಕೆ ಸ್ಥಳಾಂತರವಾಗಿರಬೇಕು ಆದರೆ ಇಲ್ಲಿಗೆ ಭಕ್ತಿಯಿಂದ ಬಂಗಿ ಸಮರ್ಪಣೆ ಮಾಡುವ ಕಾಯ೯ ಮುಂದುವರಿದು ಈಗಿನ ಕಾಲಕ್ಕೆ ಸಿಗರೇಟು ಸಮರ್ಪಣೆಗೆ ಬದಲಾಗಿದೆ.
  ಈ ರೀತಿ ಬಂಗಿಗೆ ಪೂಜ್ಯ ಸ್ಥಾನ ಸಿಗಲು ಕಾರಣ ಪುರಾಣದಲ್ಲಿ ಶಿವ ಕಾಡಿನಲ್ಲಿ ಅಲೆದು ಬಳಲಿದಾಗ ಮರದ ನೆರಳಲ್ಲಿ ವಿಶ್ರಮಿಸಿ ಎದ್ದಾಗ ಹಸಿವಿನಿಂದ ಪಕ್ಕದಲ್ಲಿ ಬೆಳೆದಿದ್ದ ಕಾಡಿನ ಗಾಂಜಾ ಗಿಡದ ಎಲೆ ತಿನ್ನುತ್ತಾನೆ ಅದು ಶಿವನಿಗೆ ತಾಜಾತನ ಉತ್ಸಾಹ ನೀಡಿತ್ತು ಎಂದು.
   ಇನ್ನೊಂದು ಕಥೆ ಸಮುದ್ರ ಮಥನದಲ್ಲಿ ವಿಷ ಸೇವಿಸಿ ವಿಷಕಂಠನಾದಾಗ ಶಿವನನ್ನು ಶಾಂತಗೊಳಿಸಲು ದೇವತೆಗಳು ಅವನಿಗೆ ಬಂಗಿ ನೀಡುತ್ತಾರೆ ಇದರಿಂದ ಶಿವ ಶಾಂತನಾಗುತ್ತಾನೆ ಅಂದಿನಿಂದ ಬಂಗಿ ಶಿವನಿಗೆ ಇಷ್ಟವಾದ ಪಾನಿಯ ಆಯಿತು ಈಗಲೂ ನೇಪಾಳದ ಪಶುಪತಿ ದೇವಾಲಯದಲ್ಲಿ ಮಹಾಲಯದಲ್ಲಿ ಗಾಂಜಾ ಸೇವಿಸುವ ಪದ್ದತಿ ಇದೆ.
  ಸಂತರ ಜೂಲವೇ (ಅಗ್ನಿಕುಂಡ) ಬಂಗಿ ಬೂತಪ್ಪನಾದ ಎಂಬ ಸ್ಥಳ ಚರಿತ್ರೆ ಇಲ್ಲಿ ಶರಾವತಿ ನದಿ ಮುಳುಗಡೆಯಿಂದ ಸ್ಥಳಾಂತರವಾದ ಅನೇಕ ಕುಟುಂಬಗಳಲ್ಲಿ ಒಂದಾದ ವರದಾಮೂಲದ ಕನ್ನ ನಾಯಕರು ಹೇಳುತ್ತಿದ್ದರು.
  ಈ ರೀತಿ ಬಂಗಿಗೆ ಪೂಜ್ಯ ಸ್ಥಾನ ಸಿಗಲು ಕಾರಣ ಪುರಾಣದಲ್ಲಿ ಶಿವ ಕಾಡಿನಲ್ಲಿ ಅಲೆದು ಬಳಲಿದಾಗ ಮರದ ನೆರಳಲ್ಲಿ ವಿಶ್ರಮಿಸಿ ಎದ್ದಾಗ ಹಸಿವಿನಿಂದ ಪಕ್ಕದಲ್ಲಿ ಬೆಳೆದಿದ್ದ ಕಾಡಿನ ಗಾಂಜಾ ಗಿಡದ ಎಲೆ ತಿನ್ನುತ್ತಾನೆ ಅದು ಶಿವನಿಗೆ ತಾಜಾತನ ಉತ್ಸಾಹ ನೀಡಿತ್ತು ಎಂದು.
   ಇನ್ನೊಂದು ಕಥೆ ಸಮುದ್ರ ಮಥನದಲ್ಲಿ ವಿಷ ಸೇವಿಸಿ ವಿಷಕಂಠನಾದಾಗ ಶಿವನನ್ನು ಶಾಂತಗೊಳಿಸಲು ದೇವತೆಗಳು ಅವನಿಗೆ ಬಂಗಿ ನೀಡುತ್ತಾರೆ ಇದರಿಂದ ಶಿವ ಶಾಂತನಾಗುತ್ತಾನೆ ಅಂದಿನಿಂದ ಬಂಗಿ ಶಿವನಿಗೆ ಇಷ್ಟವಾದ ಪಾನಿಯ ಆಯಿತು ಈಗಲೂ ನೇಪಾಳದ ಪಶುಪತಿ ದೇವಾಲಯದಲ್ಲಿ ಮಹಾಲಯದಲ್ಲಿ ಗಾಂಜಾ ಸೇವಿಸುವ ಪದ್ದತಿ ಇದೆ.
   ಹೋಳಿ ಹಬ್ಬದಲ್ಲಿ ಬಂಗಿ ಹೊಗೆ ರೂಪದಲ್ಲಿ ಪಾನಿಯ ರೂಪದಲ್ಲೂ ಭಕ್ತರು ಸೇವಿಸುತ್ತಾರೆ ಈ ರೀತಿ ಶಿವನಿಗೂ ಬಂಗಿಗೂ ಇರುವ ಸಂಬಂದವೇ ಸಾದು ಸಂತರುಗಳಿಗೆ ಬಂಗಿ ಸೇವನೆ ಮತ್ತು ಅದು ಪವಿತ್ರ ಎಂಬ ಭಾವನೆಗೆ ಕಾರಣವಾಗಿದೆ.
   ಬಂಗಿಯಿಂದ ತೀವ್ರ, ಮದ್ಯಮ ಮತ್ತು ಸಾಮಾನ್ಯ ಎ೦ಬ ಅಮಲಿನ ಮೂರು ವಿದವಿದೆ.
   ಈ ಬಂಗಿ ಎಂಬ ಸಸ್ಯದಿಂದ ಬಲತಿರುವ ಹೆಣ್ಣು ಗಿಡಗಳ ಗೊಂದಿನಿಂದ ತೀವ್ರವಾದ ಅಮಲು ನೀಡುವ ಚರಸ್ ಅಥವ ಹಶೀಶ್ ತಯಾರಿಸುತ್ತಾರೆ ಇದು ಮೊದಲ ವಿದ.
  ಬೆಳೆಸಿದ ಈ ಗಿಡಗಳ ಹೂವು ಎಲೆಯ ಕುಡಿಗಳನ್ನು ಗಾಂಜಾ ಎನ್ನುತ್ತಾರೆ ಇದು ಚರಸ್ ಗಿಂತ ಕಡಿಮೆ ಅಮಲು ಇದು ಮಧ್ಯಮ ವಿದ.
  ಕಾಡಿನಲ್ಲಿ ಬೆಳೆಯುವ ಬಂಗಿ ಗಿಡಗಳ ಒಣ ಎಲೆ, ಹೂವಿರುವ ಕೊಂಬೆಗಳಿಂದ ಮೂರನೆ ವಿದದ ಸೌಮ್ಯ ಅಮಲಿನ ಬಾಂಗ್ ತಯಾರಾಗುತ್ತದೆ.
  ಅಮೆರಿಕಾದಲ್ಲಿ ಮ್ಯಾರವಾನ ಎಂದು ಕರೆಯುವ ಇದನ್ನು ವಿಶ್ವದಾದ್ಯಂತ ವೀಡ್, ಪಾಟ್,ಸ್ಟಪ್, ಗ್ರಾಸ್, ಇಂಡಿಯನ್ ಹೇ, ಟೀ, ಮೇರಿ ಜಾನ್ ಎಂದು ಮತ್ತು ಚುಟ್ಟಾದಲ್ಲಿ ಸೇದುವುದಕ್ಕೆ ರಿಪೆಕ್ಸ್ ಅಥವ ಜಾಯಿಂಟ್ ಎಂದು ಕರೆಯುತ್ತಾರೆ.
  ಕ್ರಿ.ಪೂ.2800 ರಲ್ಲಿ ಈ ಗಿಡದ ನಾರಿನ ಬಳಕೆಯಲ್ಲಿ ಚೀನಿಯರು ಮುಂದಿದ್ದರು ನಾರಿಗಾಗಿಯೇ ಕೃಷಿ ಮಾಡುತ್ತಿದ್ದರು ಎಂಬ ದಾಖಲೆ ಇದೆ.
  ಭಾರತೀಯ ಹಿಂದೂ ದಮಿ೯ಯರಲ್ಲಿ ಬಾಂಗ್ ಬಳಸುವುದು ನಿಶಿದ್ದವಲ್ಲ ಮತ್ತು ಬಾಂಗ್ ಮಿಶ್ರಿತ ಪಾನಿಯಕ್ಕೆ ರಾಮ ರಸ ಎಂಬ ಹೆಸರೇ ಇದೆ.
  ಬೇರಾವ ಮಾದಕ ವಸ್ತು ಚಟವಾದರೆ ಅದನ್ನು ಬಿಡಲು ಸಾಧ್ಯವಾಗುವುದಿಲ್ಲ ಆದರೆ ಬಂಗಿ ಸೇವಿಸುವ ಅಭ್ಯಾಸ ಮಾಡಿದವರು ಸುಲಭವಾಗಿ ಈ ಚಟ ಬಿಡಬಹುದು.
  ಇತ್ತೀಚೆಗೆ ಆನಂದಪುರಂ ಭಾಗದಲ್ಲಿ ಬಂಗಿ ಬೆಳೆಯುವ ಮಾರಾಟ ಮಾಡುವ ಮತ್ತು ಬಂಗಿ ಸೇವಿಸುವವರ ಸಂಖ್ಯೆ ಹೆಚ್ಚಾಗಿದ್ದು ಕಾನೂನು ಸುವ್ಯವಸ್ಥೆಗೆ ಸಮಸ್ಯೆ ತಂದಿದೆ.
 ನಮ್ಮ ಊರಿನ ಬಂಗಿ ಬೂತಪ್ಪ ದೇವಸ್ಥಾನ ಕೂಡ ಪ್ರಸಿದ್ಧಿ ಪಡೆದಿರುವುದು ವಿಶೇಷ ಬಂಗಿ ನೈವೇದ್ಯದ ಬಸವನಹೊಂಡ ವಿಶೇಷ ದೇವಸ್ಥಾನ,ಇಂತಹದ್ದೇ ದೇವಸ್ಥಾನ ಗುಜರಾತನ ಸೂರತ್ ನಲ್ಲಿದೆ ಅಲ್ಲಿ ದೇವರ ಹುಂಡಿಗೆ ಸಿಗರೇಟು ಸಮರ್ಪಿಸುವ ಕ್ರಮವಿದೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂ...

ಶ್ರೀಧರ ಸ್ವಾಮಿ ವರದಳ್ಳಿ ಪವಾಡ ಪುರುಷರು.

   ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ವರದಳ್ಳಿಯ ತಪಸ್ವಿ ಶ್ರೀಧರ ಸ್ವಾಮಿಗಳು.   ವರದಳ್ಳಿ ಶ್ರೀಧರ ಸ್ವಾಮಿಗಳ ಬಗ್ಗೆ ಕೇಳಿದ್ದು, ಓದಿದ್ದು ಮತ್ತು ಅವರ ಒಡನಾಡಿಗಳನ್ನ ಭೇಟಿ ಮಾಡಿದ್ದು ಬಿಟ್ಟರೆ ಅವರನ್ನ ಪ್ರತ್ಯಕ್ಷವಾಗಿ ನೋಡಿಲ್ಲ.     ನಾವು ಚಿಕ್ಕವರಿದ್ದಾಗ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುವಾಗ ಆಗಿನ ಕಾಲದ ಖ್ಯಾತ ಚಲನಚಿತ್ರ ನಟ ಉದಯ ಕುಮಾರ್ ಅರಳಿ ಮರದ ಗ್ಯಾರೇಜ್ ಹತ್ತಿರ ಬಂದಿದ್ದಾರೆ ಅಂತ ಊರಿನ ಜನರೆಲ್ಲ ಗುಂಪು ಗುಂಪಾಗಿ ಓಡುತ್ತಿದ್ದರು, ನಾವು ಚಿಕ್ಕ ಮಕ್ಕಳೆಲ್ಲ ಅವರನ್ನ ಹಿಂಬಾಲಿಸಿದೆವು.       ಅಲ್ಲಿ ಒಂದು ಬಿಳಿ ಅಂಬಾಸಡರ್ ಕಾರು ನಿಂತಿದ್ದು ಅದರ ಅಡಿಯಲ್ಲಿ ಮಲಗಿ ಮೆಕ್ಯಾನಿಕ್ ದುರಸ್ತಿ ಮಾಡುತ್ತಿದ್ದರೆ ಎತ್ತರದ ಮಣ್ಣು ದಿಬ್ಬದ ಮೇಲೆ ನಮ್ಮ ನಟ ಉದಯ ಕುಮಾರ್ ಸಿಗರೇಟು ಸೇದಿ ಹೊಗೆ ಬಿಡುತ್ತಿದ್ದರು. ಯಾರೂ ಅವರ ಹತ್ತಿರ ಮಾತಾಡುವ ದೈಯ೯ ವಹಿಸಲಿಲ್ಲ ಆದರೆ ನೆರೆದ ಜನ ಮಾತಾಡಿಕೊಳ್ಳುತ್ತಿದ್ದ ಮಾತಿನ ಸಾರಾಂಶವೆಂದರೆ ವರದಳ್ಳಿಯಲ್ಲಿ ತಪಸ್ಸು ಮಾಡುತ್ತಿದ್ದ ಶ್ರೀಧರ ಸ್ವಾಮಿಗಳು ದೇಹತ್ಯಾಗ ಮಾಡಿದ್ದಾರೆ ಅದನ್ನ ಕೇಳಿ ಅವರ ಭಕ್ತ ಮತ್ತು ಶಿಷ್ಯರಾದ ಖ್ಯಾತ ಚಿತ್ರ ನಟ ಉದಯ ಕುಮಾರ್ ಬರುವಾಗ ಕಾರು ಹಾಳಾಗಿ ದುರಸ್ತಿಗಾಗಿ ನಿಂತಿದ್ದಾರೆ, ದುಃಖದಲ್ಲಿ ಇರೋದರಿಂದ ಆ ರೀತಿ ಸಿಗರೇಟು ಸೇದಿ ಬೂದಿ ಮಾಡುತ್ತಿದ್ದಾರೆ ಅವರ ಹತ್ತಿರ ಯಾರೂ ಮಾತಾಡ ಬೇಡಿ ಅಂತ ...