#ಸುಕುಮಾರನ್
#ಹೊಸನಗರ_ತಾಲ್ಲೂಕಿನ_ಶೇಂದಿ_ಗುತ್ತಿಗೆದಾರರು
#ಶಾಂತವೇರಿ_ಗೋಪಾಲಗೌಡರ_ಪರಮಾಪ್ತ_ಶಿಷ್ಯರು
#ಬಟ್ಟೆಮಲ್ಲಪ್ಪದಲ್ಲಿ_ಅವರ_ಕುಟುಂಬ_ಇದೆ.
#shantaverigopalgowda #swamiraohosanagara
#sagar #hosanagara #battemallappa #ripponpet #SocialistParty
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಮಾಜಿ ಶಾಸಕರಾದ ಬಿ ಸ್ವಾಮಿ ರಾವ್ ಸಾತ್ವಿಕ ರಾಜಕಾರಣಿ, ಅವರ #ಜೀವನ_ವೃತ್ತಾಂತ #ನಾನು_ಹೇಳುವುದೆಲ್ಲ_ಸತ್ಯ ಎಂಬ ಪುಸ್ತಕ ಎಲ್ಲಾ ಜನಪ್ರತಿನಿಧಿಗಳು ಓದಬೇಕು ಅದರಲ್ಲಿ ಶಿವಮೊಗ್ಗ ಜಿಲ್ಲೆಯ ರಾಜಕಾರಣದ ಒಳಗುಟ್ಟುಗಳು ಇದೆ.
ಈ ಪುಸ್ತಕದ ಪುಟ ನಂಬರ್ 33ರಲ್ಲಿ ಒಂದು ಘಟನೆ ಅವರು ದಾಖಲಿಸಿದ್ದಾರೆ ಅದನ್ನು ಓದುತ್ತೇನೆ ಕೇಳಿ....
ಶಾಂತವೇರಿ ಗೋಪಾಲಗೌಡರ ಪ್ರಚಾರ ಭಾಷಣಕ್ಕಾಗಿ ರಿಪನಪೇಟೆಯ ಶಾಲಾ ಮೈದಾನದಲ್ಲಿ ವೇದಿಕೆ ನಿರ್ಮಾಣವಾಗಿತ್ತು, ಸಾವಿರಾರು ಮಂದಿ ಗೌಡರ ಆಗಮನದ ನಿರೀಕ್ಷೆಯಲ್ಲಿದ್ದರು... ಜನ ಸೇರಿ ನಾಲ್ಕು ಐದು ಗಂಟೆಗಳೆ ಕಳೆದಿತ್ತು, ಆದರೆ ಗೋಪಾಲ ಗೌಡರು ಆಗಮಿಸಲೇ ಇಲ್ಲ... ಸಮಯ ಸರಿಯುತ್ತಿದ್ದಂತೆ ಆಯೋಜಕರಿಗೆ ದಿಕ್ಕು ತೋಚದಂತಾಗಿತ್ತು... ಆ ವೇಳೆ ಗೋಪಾಲಗೌಡರ ಅಭಿಮಾನಿಯಾಗಿದ್ದ ಕೇರಳ ಮೂಲದ #ಸುಕುಮಾರನ್ ಅಲ್ಲಿ ಸೇರಿದ್ದ ಬಾರಿ ಜನಸ್ಥೋಪ ಜನಸ್ತೋಮವನ್ನು ಕಂಡು ಗೋಪಾಲ ಗೌಡರನ್ನು ದೂರದ ಕಮ್ಮರಡಿಯಿಂದ ಕರೆ ತರುವುದಾಗಿ ಹೊರಟು ನಿಂತರು.... ಅಲ್ಲಿನ ಚುನಾವಣಾ ಪ್ರಚಾರ ಭಾಷಣದಲ್ಲಿ ನಿರತರಾಗಿದ್ದ ಶಾಂತವೇರಿ ಗೋಪಾಲಗೌಡರಿಗೆ ಇಲ್ಲಿನ ವಾಸ್ತವ ಸ್ಥಿತಿ ಮನದಟ್ಟು ಮಾಡಿಕೊಟ್ಟು ಜೊತೆಯಲ್ಲೇ ಕರೆತಂದು ಪ್ರಚಾರ ಸಭೆಯಲ್ಲಿ ಗೌಡರು ಭಾಷಣ ಮುಗಿಸಿದಾಗ ಸಮಯ ರಾತ್ರಿ ಎರಡು ಗಂಟೆಯಾಗಿತ್ತು.
ಇದು 1967 ರಲ್ಲಿ ಮೈಸೂರು ರಾಜ್ಯದ ವಿಧಾನಸಭೆಗೆ ಸಾರ್ವತ್ರಿಕ ಚುನಾವಣೆ ಘೋಷಣೆ ಆದಾಗ ಸೋಶಿಯಲಿಸ್ಟ್ ಪಾರ್ಟಿಯಿಂದ ಹೊಸನಗರ ತಾಲೂಕಿನಿಂದ ಸ್ಪರ್ಧಿಸಿದ್ದ ಬಿ ಸ್ವಾಮಿರಾವ್ ತಮ್ಮ ಎದುರಾಳಿ ಮುಖ್ಯಮಂತ್ರಿಗಳಾಗಿದ್ದ ವೀರೇಂದ್ರ ಪಾಟೀಲರ ಅಳಿಯ ಕಾಂಗ್ರೇಸಿನ ಸೋಮಶೇಖರ್ ವಿರುದ್ಧ ಕೇವಲ 750 ಮತಗಳಿಂದ ಸೋತ ಚುನಾವಣೆ ಆಗಿತ್ತು.
2002ರಲ್ಲಿ ಕಾಗೋಡು ಸತ್ಯಾಗ್ರಹದ ಸುವರ್ಣ ಮಹೋತ್ಸವದ ಅಂಗವಾಗಿ ಕಾಗೋಡಿನಿಂದ ಕಡಿದಾಳಿನ ಮಾಜಿ ಮುಖ್ಯಮಂತ್ರಿ ಕಡಿದಾಳು ಮಂಜಪ್ಪನವರ ಸಮಾಧಿ ತನಕ ತೆಗೆದೊಯ್ದ ಕಾಗೋಡು ಸತ್ಯಾಗ್ರಹದ ಜ್ಯೋತಿಯ ಕಾರ್ಯಕ್ರಮದಲ್ಲಿ ರಿಪ್ಪನಪೇಟೆ ವಿನಾಯಕ ವೃತದಲ್ಲಿ ಸಮಾಜವಾದಿ ಲೇಖಕರು ಕೋಣಂದೂರು ವೆಂಕಪ್ಪಗೌಡರು
ಆ ದಿನ ಮಾಡಿದ ಭಾಷಣದಲ್ಲಿ ಈ ಸಮಾಜವಾದಿ ಹೋರಾಟದ ರಿಪ್ಪನ್ ಪೇಟೆಯ ಕ್ರಾಂತಿಕಾರಿಯ ಯುವಕ ಸುಕುಮಾರ್ ಬಗ್ಗೆ ಮಾತುಗಳನ್ನು ಆಡಿದ್ದರು.
ಸಾಹಿತಿ ಕೊಣಂದೂರು ವೆಂಕಪ್ಪ ಗೌಡರು ಶಾಂತವೇರಿ ಗೋಪಾಲಗೌಡರ ಆತ್ಮ ಚರಿತ್ರೆ "ಜೀವಂತ ಜ್ವಾಲೆ ", ಕೆಂಗಲ್ ಹನುಮಂತಯ್ಯನವರ ಆತ್ಮ , ದೇವರಾಜ್ ಅರಸರ ಆತ್ಮ , ಹುಚ್ಚ ಮಾಸ್ತಿ ಗೌಡರ ಆತ್ಮ,ಚರಿತ್ರೆ ,ಕಾಗೋಡು ಹೋರಾಟದ ರೂವಾರಿ ಗಣಪತಿಯಪ್ಪನವರ ಆತ್ಮ,ಚರಿತ್ರೆ ,ಜೆ.ಹೆಚ್. ಪಟಲರ ಆತ್ಮ ಚರಿತ್ರೆ ಮತ್ತು ಭಾರತದ ಪ್ರಧಾನಿ ದೇವೇಗೌಡರ ಆತ್ಮ ಚರಿತ್ರೆಗಳನ್ನು ಬರೆದವರು.
ಇದರಿಂದ ನನಗೆ ಈ ಸುಕುಮಾರ್ ಯಾರು? ಎಂಬ ಕುತೂಹಲ ಉಂಟಾಗಿತ್ತು, ನಂತರದ ದಿನಗಳಲ್ಲಿ ಹೊಸನಗರ ತಾಲೂಕಿನ #ಬಟ್ಟೆಮಲ್ಲಪ್ಪದಲ್ಲಿ ನೆಲೆಸಿದ್ದರು ಎಂಬ ಸುದ್ದಿ ಸಿಕ್ಕಿತ್ತು ಈಗ ಅವರಿಲ್ಲ ಅವರ ಪತ್ನಿ #ಶ್ರೀಮತಿ_ಭಾಗಿರಥಿ ಮತ್ತು ಪುತ್ರ #ಸುನೀಲ ಇದ್ದಾರೆ ಸುನೀಲ ಯುವಜನ ಮೇಳಗಳಲ್ಲಿ ಮಿಂಚಿದ್ದ ಕಲಾವಿದ.
ಸುಕುಮಾರನ್ ಸಹೋದರಿ ಮೊಮ್ಮಗ #ಸುದೀರ್ (ಸುದಿ) ಬಿಜೆಪಿ ಪಕ್ಷದ ಮುಖಂಡರು ಆಗಿದ್ದಾರೆ, ರಿಪ್ಪನ್ ಪೇಟೆಯಲ್ಲಿದ್ದಾರೆ ಅವರ ಪತ್ನಿ ರಿಪನ್ ಪೇಟೆ ಗ್ರಾಮ ಪಂಚಾಯಿತಿ ಸದಸ್ಯೆ ಆಗಿದ್ದಾರೆ.
ಆ ಕಾಲದಲ್ಲಿ ಹೊಸನಗರ ತಾಲೂಕಿನ ಶೇಂದಿ ಗುತ್ತಿಗೆದಾರರಾಗಿದ್ದ ಸುಕುಮಾರ್ ಸುಮಾಜವಾದಿ ಪಾರ್ಟಿಯ ಶಾಂತವೇರಿ ಗೋಪಾಲಗೌಡರ ಪರವಾಗಿದ್ದವರು ಮತ್ತು ಗೌಡರ ಆತ್ಮೀಯ ವಲಯದಲ್ಲಿದ್ದರು.
ಸಮಾಜವಾದಿ ಕ್ರಾಂತಿಕಾರಿಯ ಯುವಕ #ಸುಕುಮಾರನ್ ಉಲ್ಲೇಖ ಹೊಸನಗರದ ಮಾಜಿ ಶಾಸಕರಾದ ಬಿ ಸ್ವಾಮಿರಾವ್ ಜೀವನ ವೃತ್ತಾಂತ ನಾನು ಹೇಳುವುದೆಲ್ಲಾ ಸತ್ಯ ಪುಸ್ತಕದಲ್ಲಿ ಉಲ್ಲೇಖವಾದದ್ದು ನೋಡಿ ಮತ್ತೆ ಸುಕುಮಾರ್ ಬಗ್ಗೆ ಬರೆಯಲು ಕಾರಣವಾಯಿತು.
Comments
Post a Comment