#M_H_ಕಾಫಿಶಾಪ್_ಶಿವಮೊಗ್ಗದ_ನೆಹರು_ರಸ್ತೆಯ_ಎರಡನೆ_ಕ್ರಾಸಲ್ಲಿ_ಪ್ರಸಿದ್ದಿ_ಪಡೆದಿತ್ತು
#ಇದರ_ಮಾಲಿಕ_ಬಾಷಾರಿಗೆ_ರೆಸ್ಟೋರಾಂಟ್_ಮಾಡಬೇಕೆನ್ನುವುದು_ಜೀವಮಾನದ_ಕನಸು
#ಈಗ_ಅವರ_ಕನಸು_ನನಸಾಗಿದೆ
#ಇದೇ_ಜಾಗದಲ್ಲಿ_ಶುಚಿ_ರುಚಿಯ_ಬಿಸಿ_ಬಿಸಿ_ಊಟ_ಉಪಹಾರದ
#ಕೆಫೆ_ಮಲ್ನಾಡ್_ಭವನ_ಪ್ರಾರಂಬಿಸಿದ್ದಾರೆ
#ಒಮ್ಮೆ_ಬೇಟಿ_ನೀಡಿ.
#Cafemalnadbhavana #shivamogga #neharuroad #shivamoggarestoraunt #hotel
#besthotel
https://youtu.be/WxAp4S6hIUw?si=HWHwFnLwPoRTABsA
ಶಿವಮೊಗ್ಗದ ನೆಹರೂ ರಸ್ತೆಯ ಎರಡನೇ ಕ್ರಾಸಿನಲ್ಲಿ ಶೋಭಾ ಸ್ಟೋರ್ ಪಕ್ಕದ ಕಿರಿದಾದ ಓಣಿಯಲ್ಲಿದೆ MH ಕಾಫೀ ಶಾಪ್ ಇಲ್ಲಿನ ಉತ್ಕೃಷ್ಟ ಪಿಲ್ಟ್ ರ್ ಕಾಫೀ ಮತ್ತು ಟೀಗಾಗಿ ಜನ ಹುಡುಕಿಕೊಂಡು ಬರುತ್ತಿದ್ದರು.
ಹಿಂದೆ ಇವರ ಬಗ್ಗೆ ಬರೆದ ಬ್ಲಾಗ್ ಲೇಖನ ಇಲ್ಲಿ ಕ್ಲಿಕ್ ಮಾಡಿ ಓದಿ...
https://arunprasadhombuja.blogspot.com/2022/04/mh.html
ಈಗ ಈ ಕಾಫಿ ಶಾಪ್ #ಕೆಫೆ_ಮಲ್ನಾಡ್_ಭವನ ಆಗಿದೆ ಇಲ್ಲಿ ಈಗ ಬೆಳಿಗ್ಗೆ ಉಪಹಾರ ಮತ್ತು ಮಧ್ಯಾಹ್ನದ ಊಟ ಕೂಡ ಲಭ್ಯವಿದೆ.
ಎಂ ಹೆಚ್ ಕಾಫಿ ಶಾಪ್ ಪಕ್ಕದಲ್ಲಿದ್ದ ಜನ ಹೋರಾಟ ಪ್ರಿಂಟಿಂಗ್ ಪ್ರೆಸ್ ಮತ್ತು ಜನ ಹೋರಾಟ ಪತ್ರಿಕೆಯ ಕಚೇರಿ ಸ್ವಂತ ಕಟ್ಟಡಕ್ಕೆ ಸ್ಥಳಾಂತರವಾಗಿದ್ದರಿಂದ ಕಾಲಿ ಇದ್ದ ಆ ರೂಮಗಳನ್ನು ಕೆಫೆ ಮಲ್ನಾಡ್ ಭವನ ಆಗಿ ಬದಲಾಯಿಸಿದ್ದಾರೆ.
ಇತ್ತೀಚೆಗೆ ನಾನು ಶಿವಮೊಗ್ಗ ಹೋಗದೆ ತುಂಬಾ ದಿನಗಳಾಯ್ತು ಮೊನ್ನೆ ಶಿವಮೊಗ್ಗದಿಂದ ಬಂದಿದ್ದ ಪತ್ರಕರ್ತ ಮಿತ್ರ ಶೃಂಗೇಶ್ ಹೇಳುತ್ತಿದ್ದರು ಭಾಷಾ ತುಂಬಾ ಅದ್ಭುತವಾದಂತಹ ಹೋಟೆಲ್ ಮಾಡಿದ್ದಾರೆ ಅಲ್ಲಿ ಟಿಫನ್ ಊಟ ಎಲ್ಲಾ ನಂಬರ್ ಒನ್ ಇದೆ ರುಚಿ ಶುಚಿ ಇದೆ ಅನ್ನುತ್ತಿದ್ದರು
ಒಂದು ಇಂತಹ ರೆಸ್ಟೋರೆಂಟ್ ಮಾಡಬೇಕೆನ್ನುವುದು ಭಾಷಾರವರ ಕನಸ್ಸು ಆಗಿತ್ತಂತೆ, ಆ ಕನಸು ಈಡೇರಿತು ಅಂತ ಸಿಂಗೆಶತ್ರ ಹೇಳಿದ್ದರಂತೆ.
ಮೊನ್ನೆ ನನ್ನ ಮಗ ಶಿವಮೊಗ್ಗ ಹೋದಾಗ ಭಾಷಾರವರ ಹೋಟೆಲ್ ಗೆ ಹೋಗಿ ಫೋಟೋ ವಿಡಿಯೋ ತರಲು ಹೇಳಿದ್ದೆ.
Comments
Post a Comment