#ದೊಂಡಿಯಾ_ವಾಘ್_ಭಾಗ_3
#ಶಿವಮೊಗ್ಗ_ಜಿಲ್ಲೆಯ_ವೀರಸೇನಾನಿ_ಬೆಂಕಿಚೆಂಡು
#ಮರಾಠರ_ಬ್ರಿಟೀಷರ_ವಿರುದ್ದ_ಹೋರಾಡಲು_ಟಿಪ್ಪು_ಸಹಾಯ_ಕೇಳಿ_ಹೋದ_ದೊಂಡಿಯ
#ಇವರಿಬ್ಬರ_ವೈಮನಸ್ಸಿನಿಂದ_ಮತ್ತು_ಮೀರ್_ಸಾದಿಕ್_ಕುತಂತ್ರದಿಂದ_ದೊಂಡಿಯಾ_ಸೆರೆಮನೆಗೆ
#ಟಿಪ್ಪೂಸುಲ್ತಾನ್_ನಾಲ್ಕನೇ_ಆಂಗ್ಲೋ_ಮ್ಮೆಸೂರು_ಕದನದಲ್ಲಿ_ಹತರಾದಾಗ
#ಶ್ರೀರಂಗಪಟ್ಟಣದ_ಸೆರೆವಾಸದಿಂದ_ತಪ್ಪಿಸಿಕೊಂಡು_ಬಂದು_ಪುನಃ_ಸೈನ್ಯ_ಕಟ್ಟುತ್ತಾರೆ.
https://youtu.be/244mWNyxjr4?si=J_CmKdy1uEPM4DZg
ಮೂರನೇ ಮೈಸೂರು ಯುದ್ಧದಲ್ಲಿ (1792) ಟಿಪ್ಪು ತಲ್ಲೀನನಾಗಿದ್ಡ ಈ ಸಮಯವನ್ನು ಉಪಯೋಗಿಸಿ ಧೊಂಡಿಯ ಟಿಪ್ಪುವಿನ ಸೈನ್ಯ ತೊರೆದು ಹೋಗಲು ನಿಶ್ಚಯಿಸಿ, ಯೋಜನೆ ಮಾಡಿ ಸಫಲನಾದ.
ತನ್ನೊಂದಿಗೆ ಇನ್ನು ಕೆಲವು ಸಹಚರರನ್ನು ಸೇರಿಸಿಕೊಂಡು ಈಗಿನ ಗದಗದಲ್ಲಿರುವ ಲಕ್ಷ್ಮೇಶ್ವರದ ದೇಸಾಯಿಯನ್ನು (ಕಂದಾಯ ವಸೂಲಿ ಮಾಡುವ ಹಕ್ಕಿರುವ ಸ್ಥಾನ) ಸೇರಿದ.
ದೇಸಾಯಿಯು ಟಿಪ್ಪುವಿಗೆ ಕಪ್ಪ ಕಾಣಿಕೆ ಕೊಡುವ ಬದಲು ತನಗೆ ಕೊಡಬೇಕು ತಾನು ಅವನ ಸಹಾಯಕ್ಕೆ ಇರುವುದಾಗಿ ಒಪ್ಪಿಸಿದ.
ಬ್ರಿಟೀಶರೊಂದಿಗೆ ಯುದ್ಧದಲ್ಲಿ ಟಿಪ್ಪುವಿನ ಸೋಲಾಯಿತು ಆಂಗ‍್ಲರ ಬಳಿ ತನ್ನ ಇಬ್ಬರು ಮಕ್ಕಳನ್ನು ಒತ್ತೆಯಾಗಿ ಇಡುವ ಪರಿಸ್ಥಿತಿ ಬಂದಿತು, ಧೊಂಡಿಯ ಟಿಪ್ಪುವಿನ ಸಧ್ಯದ ದೌರ್ಬಲ್ಯದ ಲಾಭ ಪಡೆದು ಮೈಸೂರು ಮತ್ತು ಮರಾಠರ ಗಡಿ ಭಾಗದಲ್ಲಿ ಒಂದೊಂದಾಗಿ ಪ್ರದೇಶಗಳನ್ನು ಗೆಲ್ಲುತ್ತಾ ಹೋದ.
ಧಾರವಾಡ ಸೀಮೆಯ ಪ್ರದೇಶದಲ್ಲಿ ಕಪ್ಪ ಕಾಣಿಕೆ ಪಡೆಯುತ್ತಾ ಹೋದ 1793 ಜನವರಿಯಲ್ಲಿ ಹಾವೇರಿ ಮತ್ತು ಸವಣೂರನ್ನು ಗೆದ್ದು ತನ್ನ ರಾಜ್ಯವನ್ನು ವಿಸ್ತರಿಸಿದ.
ಶ್ರೀರಂಗಪಟ್ಟಣದ ಒಪ್ಪಂದದ ಪ್ರಕಾರ ಟಿಪ್ಪು ಮರಾಠರಿಗೆ ಬಿಟ್ಟುಕೊಟ್ಟ ಊರುಗಳನ್ನು ಗೆಲ್ಲುತ್ತಾ ಹೋದ ಇದರ ಪ್ರಭಾವ ಶಿವಮೊಗ್ಗ, ಬಿದನೂರು, ಶಿಕಾರಿಪುರ ಮುಂತಾದ ಪ್ರದೇಶಗಳ ಮೇಲೂ ಆಯಿತು.
ಧೊಂಡಿಯನ ಬೆಳೆಯುತ್ತಿರುವ ಪ್ರಭಾವದಿಂದ ಮರಾಠರು ಚಿಂತಾಕ್ರಾಂತರಾದರು ಅವನ ಪ್ರಭಾವವನ್ನು ಮೊಳಕೆಯಲ್ಲಿ ಚಿವುಟಿ ಮತ್ತು ಅವನನ್ನು ಮರಾಠರ ಸೀಮೆಯಿಂದ ಹೊರದೂಡಲು ಮರಾಠರ ದಂಡನಾಯಕ ಪರಶುರಾಮ ಭಾವು 1794ರಲ್ಲಿ ಮರಾಠಾ ಸೈನ್ಯವನ್ನು ದೊಂಡೋಪಂತ್ ಗೋಖಲೆ ನೇತೃತ್ವದಲ್ಲಿ ಕಳಿಸಿದ.
ದೊಂಡೋಪಂತ್ ಗೋಖಲೆ ತನ್ನ ಸೈನ್ಯದೊಂದಿಗೆ ಸವಣೂರಿನ ಕೋಟೆಗೆ ಮುತ್ತಿಗೆ ಹಾಕಿದ ಧೊಂಡಿಯ ಅವನೊಡನೆ ಸ್ನೇಹ ಬಯಸಿದ ಆದರೆ ದೊಂಡೋಪಂತ್ ಒಪ್ಪಲಿಲ್ಲ ಹಲವು ದಿನಗಳ ಕದನದ ನಂತರ ಧೊಂಡಿಯ ಅಲ್ಲಿಂದ ಕದಲಬೇಕಾಯಿತು.
ಧೊಂಡಿಯ ಆಗ ಎಂದಾದರೊಂದು ದಿನ ದೊಂಡೋಪಂತ್ ಗೋಖಲೆಯನ್ನು ಕೊಂದು ಅವನ ರಕ್ತದಲ್ಲಿ ತನ್ನಿ ಮೀಸೆಯನ್ನು ತೋಯ್ದುಕೊಳ್ಳುವೆನೆಂದು ಶಪಥ ಮಾಡಿದ.
ಧೊಂಡಿಯ ಅಲ್ಲಿಂದ ಸೀದಾ ಟಿಪ್ಪುವಿನ ಸಹಾಯ ಕೇಳಲು ಶ್ರೀರಂಗಪಟ್ಟಣಕ್ಕೆ ತೆರಳಿದ,ಟಿಪ್ಪುವಿನ ಸಹಾಯ ಪಡೆಯಲು ಪ್ರಯತ್ನಿಸಿದ ಆದರೆ ಇದು ಕೈಗೂಡದೆ ಟಿಪ್ಪುವಿನ ಸೈನ್ಯವನ್ನು ಮತ್ತೆ ಸೇರುವ ಪ್ರಸ್ತಾಪ ಬಂದಿತು,ಟಿಪ್ಪು ಅವನಿಗೆ ಇಸ್ಲಾಮಿಗೆ ಮತಾಂತರ ಹೊಂದಲು ಆಮಿಷ ಒಡ್ಡಿದ ಆದರೆ ಸ್ವಲ್ಪ ಸಮಯದಲ್ಲಿ ಟಿಪ್ಪುವಿನೊಡನೆ ವೈಮನಸ್ಯದ ಕಾರಣ ಅವನನ್ನು ಬಂದೀಖಾನೆಗೆ ಹಾಕಲಾಯಿತು (ಇದಕ್ಕೆ ಮೀರ್ ಸಾದಿಕನೇ ಕಾರಣ ಎಂದು ನಂಬಲಾಗಿದೆ ಅವನು ಸೆರೆಮನೆಯಲ್ಲಿಯೇ ಸುಮಾರು ೫ ವರ್ಷಗಳ ಕಾಲ ಕಳೆಯುತ್ತಾನೆ.
ಬ್ರಿಟೀಶರ ವಿರುದ್ಧ 1799 ರಲ್ಲಿ ನಾಲ್ಕನೆಯ ಮೈಸೂರು ಯುದ್ಧ ಟಿಪ್ಪು ಸೋಲುವವರೆಗೂ ದೊಂಡಿಯ ಸೆರೆಮನೆಶಿಕ್ಷೆ ಅನುಭವಿಸುತ್ತಿರುತ್ತಾನೆ.
ನಾಲ್ಕನೆಯ ಮೈಸೂರು ಯುದ್ಧದ ಕಡೆಯ ದಿನ
ನಾಲ್ಕನೆಯ ಮೈಸೂರು ಯುದ್ಧದಲ್ಲಿ (1799) ಟಿಪ್ಪು ಬ್ರಿಟೀಶರ ವಿರುದ್ಧ ಸೋಲುವುದರ ಜೊತೆಗೆ ಟಿಪ್ಪುವಿನ ಸಾವಾಯಿತು ಜೊತೆಗೆ ಅವನ ಸೈನ್ಯ ಛಿದ್ರಛಿದ್ರವಾಯಿತು.
ಧೊಂಡಿಯ ಅಲ್ಲಿಯವರೆಗೂ ಶ್ರೀರಂಗಪಠ್ಠಣದಲ್ಲಿ ಐದು ವರ್ಷಗಳಿಂದ ಬಂಧನದಲ್ಲಿದ್ದರೂ ತಪ್ಪಿಸಿಕೊಳ್ಳಲು ಸಮಯ ಕಾಯುತ್ತಿದ್ದ ತನ್ನ ಮತ್ತು ತನ್ನ ಸಹಚರರ ಮನ:ಶಕ್ತಿಯನ್ನು ಯಾವಾಗಲೂ ಮೇಲ್ಮಟ್ಟದಲ್ಲಿರುವ ಹಾಗೆ ನೋಡಿಕೊಳ್ಳುತ್ತಿದ್ದ.
ಟಿಪ್ಪುವಿನ ಸಾವಿನಿಂದ ಸಿಕ್ಕ ಅವಕಾಶ ಉಪಯೋಗಿಸಿ ಹಲವು ಸಹಚರರೊಡನೆ ತಪ್ಪಿಸಿಕೊಂಡು ಹೋದನು ಆ ಸಮಯದಲ್ಲಿ ಟಿಪ್ಪುವಿನ ಹಲವು ಸೈನಿಕರು ತಪ್ಪಿಸಿಕೊಳ್ಳುತ್ತಿದ್ದದ್ದು ಇವರಿಗೆಲ್ಲಾ ಒಳ್ಳೆಯದಾಯಿತು.
Comments
Post a Comment