Blog number 2258. ಪುನರ್ವಸು ಮಳೆಯಲ್ಲಿ ಜಿಲ್ಲೆಯ ಕೊಲ್ಲೂರು ಘಾಟಿ ಇಳಿದು ಹುಲಕಲ್ ಘಾಟಿ ಹತ್ತಿ ಊರಿಗೆ ವಾಪಾಸು ಬಂದ ಕಥೆ
#ಇವತ್ತೊಂದು_ತಿರುಗಾಟ_ನಮ್ಮ_ಊರಿಂದ
#ಬಿದನೂರು_ನಗರಕ್ಕೆ_ಹೋಗಿ_ಅಲ್ಲಿಂದ_ಕೊಲ್ಲೂರು_ಮಾರ್ಗವಾಗಿ
#ಕುಂದಾಪುರದಲ್ಲಿ_ವಿವಾಹದಲ್ಲಿ_ಭಾಗವಹಿಸಿ_ಹುಲಿಕಲ್_ಮಾಸ್ತಿಕಟ್ಟೆ_ಮೂಲಕ
#ಬಿದನೂರು_ನಗರ_ಸೇರಿ_ಅಲ್ಲಿಂದ_ಊರು_ತಲುಪಿದ್ದು
ಆತ್ಮೀಯ ಗೆಳೆಯರಾದ ರಾಮಕ್ಷತ್ರಿಯ ಸಮೂದಾಯದ ಮುಖಂಡರಾದ ರವೀಂದ್ರ ರಾವ್ ಪುತ್ರಿ ಬೆಂಗಳೂರು ಲೋಕಾಯುಕ್ತದಲ್ಲಿ ವಕೀಲೆಯಾಗಿದ್ದಾರೆ ಅವರ ಮದುವೆಯಲ್ಲಿ ಭಾಗವಹಿಸಲು ಬೆಳಿಗ್ಗೆ 8.30 ಕ್ಕೆ ನಮ್ಮ ಊರಿಂದ ಪ್ರಯಾಣ ಪ್ರಾರಂಬಿಸಿ ಬಿದನೂರು ನಗರದಿಂದ ಬಲಕ್ಕೆ ಹೊರಳಿ ನಿಟ್ಟೂರಿನ ಹೋಟೆಲ್ ಒಂದರಲ್ಲಿ ಉಪಹಾರ ಸೇವಿಸಿ ಕೊಲ್ಲೂರು ತಲುಪಿ ತಾಯಿ ಮುಕಾಂಬಿಕ ದರ್ಶನ ಮಾಡಿ ಕುಂದಾಪುರದಲ್ಲಿ ವಿವಾಹ ಕಾಯ೯ಕ್ರಮದಲ್ಲಿ ಭಾಗವಹಿಸಿದ್ದೆ.
ಅಲ್ಲಿಂದ ಹೊರಟು ಹುಲಿಕಲ್ ಘಾಟಿ ಹತ್ತಿ ಚಂಡಿಕಾಂಬಾ ದೇವಸ್ಥಾನಕ್ಕೆ ಕೈಮುಗಿದು ಮಾಸ್ತಿಕಟ್ಟೆ ಮೂಲಕ ಬಿದನೂರು ನಗರಕ್ಕೆ ತಲುಪಿ ಅಲ್ಲಿಂದ ಹೊಸನಗರ ಬಟ್ಟೆ ಮಲ್ಲಪ್ಪ ಮೂಲಕ ಮನೆ ಸೇರಿದೆ ಸತತ 7 ಗಂಟೆ ಪ್ರಯಾಣದಲ್ಲಿ ಒಂದು ಕ್ಷಣವೂ ಮಳೆ ಮಾತ್ರ ನಿಲ್ಲದೇ ಸುರಿಯುತ್ತಲೇ ಇತ್ತು.
ರಸ್ತೆಯಲ್ಲಿಯೇ ಹರಿಯುತ್ತಿರುವ ನೀರು, ಮಂದ ಬೆಳಕು, ವಾಹನಗಳು ದೀಪ ಹಾಕಿಕೊಂಡೇ ನಿರಂತರ ವೈಪರ್ ಚಾಲನೆಯಲ್ಲೇ ಪ್ರಯಾಣ ಮಾಡಿದೆವು.
ಈ ವಿಪರೀತ ಮಳೆಗೆ ಹವಾಮಾನ ವರದಿ ಯೆಲ್ಲೋ ಅಲರ್ಟ್ ತಿಳಿಸಿತ್ತು,ನಾಳೆ ಸಾಗರ ಮತ್ತು ಹೊಸನಗರ ತಾಲೂಕಿನ ಶಾಲಾ ಕಾಲೇಜಿಗೆ ರಜಾ ಘೋಷಿಸಲಾಗಿದೆ.
ವಿಪರೀತ ಮಳೆಯಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ಮಳೆ ಬೀಳುವ ಮಾಸ್ತಿಕಟ್ಟೆ ಮೂಲಕ ಪ್ರಯಾಣಿಸಿದ್ದು ಒಂದು ವಿಶಿಷ್ಟ ಅನುಭವ ಆಗಿತ್ತು.
Comments
Post a Comment