#ಕಾಕತಾಳೀಯ_ಘಟನೆಗಳು
#ಇವತ್ತು_ಶಿಕಾರಿಪುರದ_ಶ್ರೀಹುಚ್ಚುರಾಯ_ಸ್ವಾಮಿಗೆ
#ಬೆಣ್ಣೆ_ಅಲಂಕಾರ_ಮತ್ತು_ವೀಳ್ಯದೆಲೆ_ಅಲಂಕಾರ_ಸೇವೆ
#ನಮ್ಮ_ಕುಟುಂಬದಿಂದ_ಅರ್ಪಿಸಿದೆವು
#ಇವತ್ತೇ_ನಾನು_ಬರೆದ_ವೀರಯೋದ_ದೊಂಡಿಯಾ_ವಾಘ್_ಲೇಖನವೂ
#ಶೆಡ್ಯೂಲ್_ಪ್ರಕಾರ_ಪ್ರಕಟವಾಗಿದೆ_ಅದರಲ್ಲಿ_ದೊಂಡಿಯಾ
#ಈ_ದೇವರಿಗೆ_ತನ್ನ_ವೀರ_ಖಡ್ಗ_ಅರ್ಪಿಸಿದ_ವಿವರಣೆ_ಇದೆ.
https://youtube.com/shorts/AN4q3n1x7V0?si=glUNDYWxjEA5F_tR
1799ರಲ್ಲಿ ವೀರ ಸೇನಾನಿ ದೊಂಡಿಯಾ ವಾಘ್ ಶಿಕಾರಿಪುರದಲ್ಲಿ ಇದ್ದಾಗ ದಿಡೀರ್ ಆಗಿ ಬ್ರಿಟೀಶರು ಮತ್ತು ಮರಾಠರ ಸೈನ್ಯ ಅವರ ಮೇಲೆ ಅಕ್ರಮಣ ಮಾಡುತ್ತದೆ ದೊಂಡಿಯಾ ವಾಘ್ ಕುಮುದ್ವತಿ ನದಿ ಈಜಿ ದಾಟಿ ಅರಣ್ಯ ಸೇರುತ್ತಾರೆ ಅಲ್ಲಿ ಅವರನ್ನ ಸ್ಥಳೀಯ ಬಂಜಾರ ಸಮಾಜದ ಜನ ಆರೈಕೆ ಮಾಡುತ್ತಾರೆ.
ನಂತರ ದೊಂಡಿಯಾ ವಾಘ್ ಶಿಕಾರಿಪುರದ ಹುಚ್ರಾಯಸ್ವಾಮಿ ದರ್ಶನ ಮಾಡಿ ದೇವರಿಗೆ ತನ್ನ ವೀರ ಖಡ್ಗ ಅರ್ಪಿಸುತ್ತಾರೆ ಅವರಿಗೆ ಬಂದ ಕಂಟಕದಿಂದ ಹುಚ್ಚುರಾಯ ಸ್ವಾಮಿಯೇ ಕಾಪಾಡಿದರೆಂದು ಪ್ರಾರ್ಥಿಸುತ್ತಾರೆ.
ಈ ಲೇಖನ ಕೆಲವು ಕಂತುಗಳಾಗಿ ಪೇಸ್ ಬುಕ್ ನಲ್ಲಿ ಶೆಡ್ಯೂಲ್ಡ್ ದಿನಾಂಕ ನಿಗದಿ ಮಾಡಿ ಅಪ್ ಲೋಡ್ ಮಾಡಿರುತ್ತೇನೆ ಮತ್ತು ಅದನ್ನು ಮರೆತಿರುತ್ತೇನೆ.
ಇವತ್ತು ಶಿಕಾರಿಪುರಕ್ಕೆ ಹೋಗುವ ಮಾರ್ಗದಲ್ಲಿ ದೊಂಡಿಯಾ ವಾಘ್ ಭಾಗ-3 ಪೇಸ್ ಬುಕ್ ನಲ್ಲಿ ಪ್ರಕಟವಾಗಿದೆ ಅದು ದೊಂಡಿಯಾ ವಾಘ್ ಶಿಕಾರಿಪುರದ ಹುಚ್ಚುರಾಯಸ್ವಾಮಿಗೆ ತನ್ನ ವೀರ ಖಡ್ಗಾ ಅರ್ಪಿಸಿದ ಇತಿಹಾಸದ ಕಥೆ.
ನಾನು ಇವತ್ತೇ ಶಿಕಾರಿಪುರದ ಹುಚ್ಚುರಾಯ ಸ್ವಾಮಿಗೆ ಬೆಣ್ಣೆ ಅಲಂಕಾರ ಸೇವೆ ಮತ್ತು ವೀಳ್ಯದ ಎಲೆ ಅಲಂಕಾರ ಸೇವೆ ನಮ್ಮ ಕುಟುಂಬದಿಂದ ನೇರವೇರಿಸಿದೆವು.
ಇದು ಕಾಕತಾಳಿಯ ಘಟನೆ ಆಗಿದೆ.
ಇದೇ ಸೇವೆ 2019ರ ನವೆಂಬರ್ ತಿಂಗಳ 3 ರಂದು ಮಗಳ ವಿವಾಹ ಮಹೋತ್ಸವದ ಮೊದಲು ಅರ್ಪಿಸಿದ್ದೆವು.
Comments
Post a Comment