#ಕೆಳದಿ_ರಾಜರ_ರಾಜದಾನಿ
#ಬಿದನೂರು_ನಗರದ_ರವಿ_ಬಿದನೂರು
#ಇವರಿಗೆ_ಹುಟ್ಟು_ಹಬ್ಬದ_ಶುಭಾಷಯಗಳು
ಉತ್ಸಾಹಿ ಪತ್ರಕರ್ತ ಹೊಸನಗರ ತಾಲೂಕಿನ ಹಳೇನಗರದ ರವಿ ತಮ್ಮ ಹೆಸರಿನ ಮುಂದೆ #ಬಿದನೂರು ಸೇರಿಸಿ ರವಿ ಬಿದನೂರು ಎಂದೇ ಖ್ಯಾತರಾಗಿ ಕೆಳದಿ ಅರಸರ ಮೂರನೆ ರಾಜದಾನಿ ಆಗಿದ್ದ ಬಿದನೂರು ಜನಮಾನಸದಿಂದ ಮರೆಯದಂತೆ ಜನಜಾಗೃತಿಗೆ ಮುಂದಾದವರು.
ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನಲ್ಲಿ ಹೊಸನಗರದಿಂದ ೧೫ ಕಿಮೀ ದಕ್ಷಿಣಕ್ಕಿರುವ ಒಂದು ಗ್ರಾಮ.
ಕೆಳದಿ ಇಕ್ಕೇರಿಗಳಲ್ಲಿ ಆಳಿದ ಅರಸರು ೧೬೪೦ರ ಹೊತ್ತಿಗೆ ಇದನ್ನು ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡು ಬಿದನೂರ ಅರಸರಾದರು.
ಘಟ್ಟದ ಕೆಳಗೆ ಇಳಿಯುವ ಹೊಸಂಗಡಿ ಘಾಟಿಯ ದಾರಿಯಲ್ಲಿದ್ದು ವ್ಯಾಪಾರ ಕೇಂದ್ರವೂ ಆದುದರಿಂದ ಬಹುಬೇಗನೆ ಬೆಳೆದು ದೊಡ್ಡ ನಗರವಾಯಿತು,ಕೋಟೆಕೊತ್ತಲಗಳು ಅರಮನೆಗಳು ರಚಿತವಾದುವು.
ಶ್ರೀಮಂತ ರಾಜದಾನಿ ಬಿದನೂರು ಅಲ್ಲಿನ ಜನಸಂಖ್ಯೆಯಿಂದ ಬಿದನೂರು ನಗರವೇ ಎಂದು ಹೆಸರಾಗಿದ್ದು ನಂತರ ಅದರ ಅವನತಿಯಿಂದ ಪಾಳು ಬಿದ್ದ #ನಗರ ಅಂತಾಯಿತು,ಶರಾವತಿ ನದಿಯ ಹಿರೇ ಬಾಸ್ಕರ ಮತ್ತು ಲಿಂಗನಮಕ್ಕಿ ಆಣೆ ಕಟ್ಟು ನಿರ್ಮಾಣದಿಂದ ಮುಳುಗಡೆಯಾಗಿ ಹಾಳು ಕೊಂಪೆಯೇ ಆಯಿತು.
ಮೈಸೂರು ಅರಸರ, ಬ್ರಿಟೀಷರ ಆಡಳಿತ ಕಾಲದಲ್ಲಿ ತಾಲ್ಲೂಕು ಕೇಂದ್ರವಾಗಿದ್ದ ಕೊಲ್ಲೂರ ಶೆಟ್ಟಿ ಕೊಪ್ಪ ನಂತರ #ಹೊಸನಗರ ಎಂದು ಬದಲಾದಾಗ ಜನ ನಗರವನ್ನ #ಹಳೇನಗರ ಎಂದೇ ಕರೆಯುವ ಅಭ್ಯಾಸ ಆಗಿ ಮುಂದುವರಿಯಿತು.
ಈಗಲೂ #ನಗರ ಎಂಬ ಹೆಸರೇ ಉಳಿದಿದೆ ಇದನ್ನ #ಬಿದನೂರು_ನಗರ ಎಂದು ಪುನರ್ ನಾಮಕರಣ ಮಾಡಲಿ ಎಂಬ ಬಯಕೆ ನಗರದ ಪ್ರಗತಿಪರ ನಾಗರೀಕರದ್ದು ಆದರೆ ಯಾವುದೇ ಊರಿನ ಹೆಸರು ಬದಲಿಸುವ ಕೆಲಸ ಸರ್ಕಾರದಿಂದ ಆಗ ಬೇಕು ಆದರೆ ಅದನ್ನು ಸರ್ಕಾರದ ಗಮನಕ್ಕೆ ತಂದು ಕಾರ್ಯರೂಪಕ್ಕೆ ತರುವ ಜವಾಬ್ದಾರಿ ಜಿಲ್ಲೆಯ ಪ್ರತಿನಿದಿಗಳದ್ದು ಈ ಊರು ತೀರ್ಥಹಳ್ಳಿ ವಿಧಾನ ಸಭಾ ಕ್ಷೇತ್ರದ ಮಾಜಿ ಗೃಹ ಸಚಿವ ಹಾಲಿ ಶಾಸಕರಾದ ಆರಗ ಜ್ಞಾನೇಂದ್ರರ ತೀರ್ಥಹಳ್ಳಿ ಕ್ಷೇತ್ರಕ್ಕೆ ಸೇರಿದೆ.
ಈಗಿನ ಶಿವಮೊಗ್ಗ ಲೋಕ ಸಭಾ ಕ್ಷೇತ್ರದ ಸಂಸದರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸುಪುತ್ರ ಬಿ.ವೈ.ರಾಘವೇಂದ್ರ.
ಶಿವಮೊಗ್ಗ ಜಿಲ್ಲಾ ಮಂತ್ರಿ ಮಾಜಿ ಮುಖ್ಯಮಂತ್ರಿ ಬಂಗಾರಪ್ಪರ ಪುತ್ರ ಮದು ಬಂಗಾರಪ್ಪ ಇವರೆಲ್ಲ ಮನಸು ಮಾಡಿದರೆ ನಗರ #ಬಿದನೂರು_ನಗರ ಆಗಿ ರಾರಾಜಿಸುವ ಕಾಲ ದೂರವಿಲ್ಲ.
ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಕ್ಷೇತ್ರದ ಹೆಸರು ಆ ಭಾಗದ ಪ್ರಸಿದ್ಧವಾಗಿರುವ ಊರಿನ ಹೆಸರು ಇಡಬೇಕಂಬ ಪದ್ದತಿ ಅಧ್ಯಾಕೋ ತಪ್ಪಿ ಹೋಗಿದೆ ಯಾರಿಗೂ ಗೊತ್ತಿಲ್ಲದ ಹಳ್ಳಿ ಹೆಸರು ಹುಡುಕಿ ಹೆಸರಿಡುವ ಅಧಿಕಾರಿಗಳನ್ನ ಎಚ್ಚರಿಸುವು ಕೆಲಸ ಆಗಬೇಕಾಗಿದೆ.
ಇಂತಹ ಮಹದಾಸೆ ಇಟ್ಟುಕೊಂಡಿರುವ ಪತ್ರಕರ್ತ ರವಿಬಿದನೂರು #Good_morning_karnataka ಎಂಬ ನ್ಯೂಸ್ ಪೋರ್ಟಲ್ ಕೂಡ ನಡೆಸುತ್ತಾರೆ.
ಮಾಸ್ತಿಕಟ್ಟೆಯ ಮಳೆ ಆಗುಂಬೆಗಿದ್ದ ಚಿರಾಪುಂಜಿ ಹೆಸರು ಮೀರಿಸಿದ್ದು, ವರಾಹಿ - ಚಕ್ರ-ಸಾವೆ ಹಕ್ಕಲು ಆಣೆಕಟ್ಟಿನ ನೀರಿನ ಮಟ್ಟ, ಕೊಡಚಾದ್ರಿ ಬೆಟ್ಟ - ಕುಂಚಿಕಲ್ ಜಲಪಾತ, ಬಾಳೆಬರೆ ಘಾಟಿ-ಕೊಲ್ಲೂರು ಘಾಟಿ ಬಗ್ಗೆ ತಿಳಿದಿರದ ಅನೇಕ ಸುದ್ದಿ ನಿರಂತರ ಮಾಡುತ್ತಿದ್ದಾರೆ.
ತನ್ನ ಹುಟ್ಟಿದ ಊರಿನ ಬಗ್ಗೆ ಈ ರೀತಿ ಅಭಿಮಾನ ಇರುವ ವಿರಳಾತಿ ವಿರಳರ ಮಧ್ಯೆ ರವಿಬಿದನೂರು ನನಗೆ ಹೆಚ್ಚು ಇಷ್ಟ ಆಗುತ್ತಾರೆ ಅವರ ಈ ಕಾರ್ಯ ಅಭಿನಂದನೀಯ ಇವತ್ತು ಅವರ ಹುಟ್ಟು ಹಬ್ಬದ ಸಂದರ್ಭದಲ್ಲಿ ಇದನ್ನೆಲ್ಲ ನೆನಪು ಮಾಡಿಕೊಂಡು ಶುಭ ಹಾರೈಸುತ್ತೇನೆ.
Comments
Post a Comment