#ನಾನು_ಕುಂ_ವೀರಭದ್ರಪ್ಪರ_ಅಭಿಮಾನಿ
#ಇವರ_ಬೇಲಿ_ಮತ್ತು_ಹೊಲ_1978ರಲ್ಲಿ
#ಮಯೂರ_ಮಾಸ_ಪತ್ರಿಕೆಯಲ್ಲಿ_ದಾರಾವಾಹಿ_ಆಗಿ_ಪ್ರಕಟವಾಗಿತ್ತು
#ಈ_ಕಾದಂಬರಿ_ರಕ್ತ_ಬಿಸಿ_ಆಗುವ_ಆಗಿನ_ನನ್ನ_ವಯಸ್ಸಲ್ಲಿ_ಓದಿದ್ದು
#ಅಚ್ಚಳಿಯದೆ_ಉಳಿದಿದೆ_46_ವರ್ಷದ_ನಂತರ_ಮುಖಃತ_ಭೇಟಿ
ಬಳ್ಳಾರಿಯ ಕೊಟ್ಟೂರಿನಿಂದ ಆನಂದಪುರಂಗೆ ಬಂದವರನ್ನ ಪತ್ರಕರ್ತ ಗೆಳೆಯರಾದ ಬಿ.ಡಿ.ರವಿ, ಇತಿ ಹಾಸ ಪರಂಪರೆ ಉಳಿಸಿ ಟ್ರಸ್ಟ್ ಜಿಯಾ, ವೆಂಕಟೇಶ್ ನನ್ನ ಕಛೇರಿಗೆ ಕರೆತಂದರು.
ನಮ್ಮ ಊರಿನಲ್ಲಿರುವ ಕೆಳದಿ ರಾಜ ವೆಂಕಟಪ್ಪ ನಾಯಕರು ತನ್ನ ರಾಣಿ ಚಂಪಕಾಳ ಸಾವಿನ ನಂತರ ನಿರ್ಮಿಸಿದ ಅಮರ ಪ್ರೇಮ ಸ್ಮಾರಕ #ಚಂಪಕ_ಸರಸ್ಸು ವೀಕ್ಷಿಸಲು ಬಂದಿದ್ದರು.
ಅವರು ಕಾರಿಂದ ಇಳಿಯುವಾಗಲೇ ಹೇಳಿದೆ... "ನಾನು ನಿಮ್ಮ ಅಭಿಮಾನಿ #ಬೇಲಿ_ಮತ್ತು_ಹೊಲ ನನ್ನನ್ನು ಕಾಡಿದಷ್ಟು ಬೇರಾವ ಕಾದಂಬರಿಯೂ ವ್ಯವಸ್ಥೆ ವಿರುದ್ದ ರೊಚ್ಚಿಗೆ ಎಬ್ಬಿಸಿರಲಿಲ್ಲ" ಎಂದೆ.
ಕೊಟ್ಟೂರಿನ ವಕೀಲರಾದ ರೇಣುಕಾರಾಧ್ಯರು ಮತ್ತು ಕುಂ.ವಿ. ಆಪ್ತ ಗೆಳೆಯರು, ವಕೀಲರಾದ ರೇಣುಕಾರಾಧ್ಯರು ಮತ್ತು ನಾನು ದೇಶದ ರಕ್ಷಣಾ ಮಂತ್ರಿ ಜಾರ್ಜ್ ಪರ್ನಾಂಡೀಸರ ಸಮತಾ ಪಾರ್ಟಿಯ ರಾಜ್ಯ ಪ್ರದಾನ ಕಾರ್ಯದರ್ಶಿಗಳಾಗಿ ಪಕ್ಷ ಸಂಘಟನೆ ಮಾಡಿದವರು.
ಕುಂ.ವಿ. ಅವರು ರೇಣುಕಾರಾಧ್ಯರಿಗೆ ಪೋನಾಯಿಸಿ ಕೊಟ್ಟರು 22 ವರ್ಷದ ನಂತರ ಮಾತಾಡಿದಂತಾಯಿತು.
Comments
Post a Comment