#ಲಿಂಗನಮಕ್ಕಿ_ಜಲಾಶಯದ_ಮಾಹಿತಿ_ಆಸಕ್ತರಿಗಾಗಿ
#ಲಿಂಗನಮಕ್ಕಿ_ಜಲಾಶಯದ_ಕ್ರೆಸ್ಟ್_ಗೇಟ್_ಓಪನ್_ಯಾವಾಗ
#ಜನರಿಗೆ_ಮುಂಜಾಗೃತ_ನೋಟೀಸು_ಯಾವಾಗ_ನೀಡುತ್ತಾರೆ
#ಡ್ಯಾಂ_ಗರಿಷ್ಟ_ಯಾವ_ಮಟ್ಟ_ತಲುಪಿದ_ಮೇಲೆ_ಕ್ರೆಸ್ಟ್_ಗೇಟ್_ತೆರೆಯುತ್ತಾರೆ
#ಶರಾವತಿ_ಜಲ_ವಿದ್ಯುತ್_ಉತ್ಪಾದನಾ_ಕೇಂದ್ರದಿಂದ_ಕೇವಲ_ಒಂದು_ರೂಪಾಯಿಗೆ_ಒಂದು_ಯುನಿಟ್
#ಖರೀದಿಸುವ_ಸರ್ಕಾರ_ಖಾಸಾಗಿಯಿಂದ_ಎಂಟು_ರೂಪಾಯಿಗೆ_ಒಂದು_ಯುನಿಟ್_ಖರೀದಿಸುತ್ತದೆ
#ಈ_ಜಲ_ವಿದ್ಯುತ್_ಸ್ಥಾವರ_1400_ಮೆಗಾವಾಟ್_ವಿದ್ಯುತ್_ಉತ್ಪಾದಿಸುತ್ತದೆ.
#ಉಪಯುಕ್ತ_ಮಾಹಿತಿ_ನೀಡಿದ_ಅಶೋಕ_ಹೆಗಡೆ_ಮಾವಿನಗುಂಡಿ
https://youtu.be/MywkMsx5oHQ?si=Ukr5NFUpSyzwrxd4
ಸಾಮಾಜಿಕ ಜಾಲತಾಣದಲ್ಲಿ ನಿನ್ನೆ ಲಿಂಗನಮಕ್ಕಿ ಡ್ಯಾಂನ ನೀರು ಸಂಗ್ರಹಣೆ 1800 ಅಡಿ ದಾಟಿದ್ದಕ್ಕಾಗಿ ಪೂಜೆ ಮಾಡಿ ಒಂದು ಕ್ರೆಸ್ಟ್ ಗೇಟ್ ತೆರೆದರೆಂಬ ಸುದ್ದಿ ವೈರಲ್ ಆಗಿ ಲಿಂಗನಮಕ್ಕಿ ತುಂಬಿ ತುಳುಕುತ್ತಿದೆ ಎಂಬಂತೆ ಅನೇಕರು ಬಾವಿಸಿದ್ದರು.
ಈ ಬಗ್ಗೆ ನಾನು ಜೋಗ ಜಲಪಾತದ ಪಕ್ಕದ ಮಾವಿನಗುಂಡಿಯ ಅಶೋಕ ಹೆಗಡೆ ಅವರನ್ನ ಪೋನಾಯಿಸಿದೆ ಇವರು ಜೋಗ ಜಲಪಾತ ಸೇರಿ ಈ ಭಾಗದ ಎಲ್ಲಾ ಜಲಪಾತಗಳ ಬಗ್ಗೆ, ವಿದ್ಯುತ್ ಉತ್ಪಾದನ ಕೇಂದ್ರಗಳ ಬಗ್ಗೆ ಹೆಚ್ಚಿನ ಮಾಹಿತಿ ಹೊಂದಿರುವ ಚಿನ್ನದ ಗಣಿ ಇವರು.
ಇವರ ಜೊತೆ ಮಾತುಕತೆಯಲ್ಲಿ ತಿಳಿದ ಕುತೂಹಲಕಾರಿ ಅಂಶಗಳನ್ನ ಲಿಂಗನಮಕ್ಕಿ ಆಣೆಕಟ್ಟಿನ ಬಗ್ಗೆ ಆಸಕ್ತಿ ಇರುವವರಿಗಾಗಿ ಇಲ್ಲಿ ಹಂಚಿದ್ದೇನೆ.
* ಲಿಂಗನಮಕ್ಕಿ ಡ್ಯಾಂ ಕೆಳಗಡೆಗೆ 80 ಮೆಗಾವಾಟ್ ವಿದ್ಯುತ್ ಉತ್ಪಾದನ ಸ್ಥಾವರ ಇದೆ.
* ಮಹಾತ್ಮಾ ಗಾಂಧಿ ವಿದ್ಯುತ್ ಉತ್ಪಾದನ ಕೇಂದ್ರ 120 ಮೆಗಾವಾಟ್ ವಿದ್ಯುತ್ ಉತ್ಪಾದನೆ ಮಾಡುತ್ತದೆ.
* ಎಬಿ ಸೈಟ್ 1100 ಮೆಗಾವಾಟ್ ಉತ್ಪಾದಿಸುತ್ತದೆ.
* ಎಬಿ ಸೈಟ್ ಮತ್ತು ಮಹಾತ್ಮಾ ಗಾಂಧಿ ಮಧ್ಯದಲ್ಲಿ ಖಾಸಾಗಿ ಸ್ಥಾವರ ಅಂಬೂ ತೀರ್ಥ ಮಿನಿ ಹೈಡ್ರಾಲ್ 20 ಮೆಗಾವಾಟ್ ಉತ್ಪಾದನೆ ಮಾಡುತ್ತದೆ.
*ಗೇರುಸೊಪ್ಪೆಯ ಶರಾವತಿ ಟೇಲರೇಸ್ ಪ್ರಾಜೆಕ್ಟ್ 240 ಮೆಗಾವಾಟ್ ಉತ್ಪಾದನೆ ಮಾಡುತ್ತಿದೆ.
*1400 ಮೆಗಾವಾಟ್ ಒಟ್ಟು ಉತ್ಪಾದನೆ ಶರಾವತಿ ಜಲವಿದ್ಯುತ್ ಕೇಂದ್ರಗಳಿಂದ ಲಭಿಸುತ್ತಿದೆ.
* ಇಲ್ಲಿ ಉತ್ಪಾದನೆ ಆಗುವ ವಿದ್ಯುತ್ ಯುನಿಟ್ ಒಂದಕ್ಕೆ ಒಂದು ರೂಪಾಯಿಯಂತೆ ಖರೀದಿಸುವ ಸರಕಾರ ಖಾಸಾಗಿ ಯಿಂದ 8 ರೂಪಾಯಿಗೆ ಖರೀದಿಸುತ್ತದೆ.
* ಲಿಂಗನಮಕ್ಕಿ ಜಲಾಶಯಕ್ಕೆ ಚಕ್ರಾ ಮತ್ತು ಸಾವೆ ಹಕ್ಕಲು ಡ್ಯಾಂ ತುಂಬಿದರೆ ಹೆಚ್ಚು ಮಳೆ ಆದರೆ 10 ಸಾವಿರ ಕ್ಯೂಸೆಕ್ಸ್ ನೀರು ಹರಿದು ಬರುತ್ತದೆ.
* ಈಗ ಬೀಳುತ್ತಿರುವ ಮಳೆ ನಿಂತರೂ ಲಿಂಗನಮಕ್ಕಿ 1810 ಅಡಿ ತಲುಪುತ್ತದೆ.
* ಮುಂದಿನ ಒಂದು ವಾರ ಇದೇ ರೀತಿ ಮಳೆ ಆದರೆ ಆಗಸ್ಟ್ ಮೊದಲ ವಾರದಲ್ಲಿ ಲಿಂಗನಮಕ್ಕಿ ಡ್ಯಾಂನ ಎಲ್ಲಾ ಕ್ರೆಸ್ಟ್ ಗೇಟ್ ತೆರೆಯುವ ಸಂಭವ ಇದೆ.
* 1805 ಅಡಿ ತುಂಬಿದೆ ಅಂದರೆ ಡ್ಯಾಂ ಶೇಕಡಾ 75% ಭಾಗ ತುಂಬಿದೆ
*ಶೇಕಡಾ 25 % ಭಾಗ ತುಂಬಲು ವಿಶಾಲ ಪ್ರದೇಶದ ನೀರಿನ ಸಂಗ್ರಹಣೆ ಆಗ ಬೇಕು ಇದಕ್ಕೆ ಹೆಚ್ಚು ಮಳೆ ಮತ್ತು ಸಮಯ ಬೇಕು.
* ಡ್ಯಾಂ ಮಟ್ಟ 1915 ಅಡಿ ದಾಟದೆ ಯಾವತ್ತೂ ಡ್ಯಾಂನ ಕ್ರೆಸ್ಟ್ ಗೇಟ್ ತೆರೆದಿಲ್ಲ.
Comments
Post a Comment