Blog number 2231.ನಿಷೇದಿತ ಆಫ್ರಿಕನ್ ಕ್ಯಾಟ್ ಪಿಶ್ ಮಲೆನಾಡಿನ ಮೀನು ಮಾರುಕಟ್ಟೆಯಲ್ಲಿ ರಾಜೋರೋಶವಾಗಿ ಬಿಕರಿ ಆಗುತ್ತಿದೆ ಜಿಲ್ಲೆಯ ತುಂಗ-ಭದ್ರ-ಶರಾವತಿ ನದಿಗಳಲ್ಲಿ ಆಫ್ರಿಕನ್ ಕ್ಯಾಟ್ ಪಿಶ್ ಸ೦ತಾನ ದ್ವಿಗುಣಗೊಳ್ಳುತ್ತಿದೆ
#ಭಾರತದ_ಜಲಮೂಲಗಳಿಗೆ_ವಿದೇಶಿ_ಮೀನಿನ_ತಳಿ
#ಆಫ್ರಿಕನ್_ಕ್ಯಾಟ್_ವಿಶ್_ನಿಂದ_ಅಪಾಯವಿದೆ
#ಆದ್ದರಿಂದ_ಕೇಂದ್ರ_ಸರ್ಕಾರ_ಈ_ಮೀನು_ಸಾಕಾಣಿಕೆ_ಮತ್ತು_ಮಾರಾಟ_ನಿಷೇದ_ಮಾಡಿದೆ
#ಆದರೆ_ಎಲ್ಲಾ_ಮೀನು_ಮಾರುಕಟ್ಟೆಯಲ್ಲಿ_ಸಂತೆಯಲ್ಲಿ_ಮಾರಾಟ_ಆಗುತ್ತಿದೆ
#ಮಲೆನಾಡಿನ_ಶರಾವತಿ_ತುಂಗಾ_ಭದ್ರಾ_ನದಿಗಳಲ್ಲಿ_ಆಫ್ರಿಕನ್_ಕ್ಯಾಶ್_ಪಿಶ್_ಹೆಚ್ಚಾಗುತ್ತಿದೆ.
ಭಾರತೀಯ ದೇಶಿ ಮೀನಿನ ತಳಿ ಮುರುಗೋಡು ಮತ್ತು ಆಪ್ರಿಕನ್ ಕ್ಯಾಟ್ ಪಿಶ್ ಒಂದೇ ರೀತಿ ಕಾಣುತ್ತದೆ ಆದರೆ ದೇಶಿ ತಳಿ ಮುರುಗೋಡು ಗರಿಷ್ಟ 2 ರಿಂದ 3 ಕೇಜಿ ಬೆಳೆಯುತ್ತದೆ ಮತ್ತು ಅದರ ಚರ್ಮ ತೆಳು ಆದರೆ ಆಫ್ರಿಕನ್ ಕ್ಯಾಟ್ ಫಿಶ್ 60 ಕೇಜಿ ಗರಿಷ್ಟ ತೂಕ ತೂಗುತ್ತದೆ ಮತ್ತು 8 ವರ್ಷ ಪೂರ್ತಿ ಜೀವಿತಾವಧಿ ಇದೆ.
ತನ್ನ ಸುತ್ತಲಿನ ಸ್ಥಳಿಯ ಮೀನು, ಏಡಿ, ಹಕ್ಕಿ ಇತ್ಯಾದಿ ಕಬಳಿಸುತ್ತದೆ ಅಷ್ಟೆ ಅಲ್ಲ ಸತ್ತ ನಾಯಿ ಕೋಳಿ ಮತ್ತು ಅವರ ತ್ಯಾಜ್ಯದಿಂದಲೂ ಸಾಕುತ್ತಾರೆ.
ಕಡಿಮೆ ನೀರಿನಲ್ಲಿ ಕೊಳಕು ನೀರಿನಲ್ಲೂ ಕಡಿಮೆ ಆಮ್ಲಜನಕ ದಲ್ಲೂ ಆಫ್ರಿಕನ್ ಕ್ಯಾಟ್ ಫಿಶ್ ಬದುಕುತ್ತದೆ.
ಕೇಂದ್ರ ಸರ್ಕಾರ ಆಪ್ರಿಕನ್ ಕ್ಯಾಟ್ ಫಿಶ್ ನಿಷೇದ ಮಾಡಿದೆ ಆದರೆ ಶಿವಮೊಗ್ಗ ಜಿಲ್ಲೆಯಲ್ಲಿ ಶರಾವತಿ - ವರದಾ - ತು೦ಗಾ - ಭದ್ರ ನದಿಗಳಲ್ಲಿ ಈ ಮೀನಿನ ಸಂಖ್ಯೆ ಈಗಾಗಲೇ ಹೆಚ್ಚಾಗಿದೆ ಇದನ್ನು ತಿನ್ನುವರು ಮಾರುವವರೂ ಹೆಚ್ಚಾಗಿದ್ದಾರೆ.
ಭಾರತದಲ್ಲಿ ನಿಷೇಧಿಸಲಾಗಿರುವ ಆಫ್ರಿಕನ್ ಕ್ಯಾಟ್ ಫಿಶ್ (ಕ್ಲಾರಿಯಾಸ್ ಗ್ಯಾರಿಪಿನಸ್) ಸಾಕಣೆದಾರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವುದಾಗಿ ಮೀನುಗಾರಿಕಾ ಇಲಾಖೆ ಎಚ್ಚರಿಕೆ ನೀಡಿದೆ.
ಇಲಾಖೆಯ ಪ್ರಕಾರ ಆಪ್ರಿಕನ್ ಕ್ಯಾಟ್ ಪಿಶ್ ಸಿಹಿನೀರಿನ ಮೀನುಗಳನ್ನ,ಸ್ಥಳೀಯ ಮೀನು ಪ್ರಭೇದಗಳನ್ನು ತಿನ್ನುತ್ತವೆ, ವೇಗವಾಗಿ ಸಂತಾನೋತ್ಪತ್ತಿ ಮಾಡುತ್ತವೆ ಮತ್ತು ಹೆಚ್ಚು ಆಕ್ರಮಣಕಾರಿಯಾಗಿದ್ದು, ಕಡಿಮೆ ಅವಧಿಯಲ್ಲಿ ಸ್ಥಳೀಯ ಪ್ರಭೇದಗಳನ್ನು ನಾಶಮಾಡುತ್ತವೆ.
ಮಳೆ ಮತ್ತು ಪ್ರವಾಹದ ಸಂದರ್ಭದಲ್ಲಿ ತಪ್ಪಿಸಿಕೊಳ್ಳುವ ಕ್ಯಾಟ್ ಪಿಶ್ ಗಳು ವೇಗವಾಗಿ ಬೆಳೆಯುತ್ತವೆ, ಎಂಟು ವರ್ಷಗಳ ದೀರ್ಘಾಯುಷ್ಯವನ್ನು ಹೊಂದಿವೆ ಮತ್ತು ಜಲಮೂಲಗಳನ್ನು ಆಕ್ರಮಿಸುತ್ತದೆ ಒಮ್ಮೆ ಅದು ಜಲಮೂಲಗಳನ್ನು ಆಕ್ರಮಿಸಿದರೆ ಅವುಗಳ ನಿರ್ಮೂಲನೆ ಕಷ್ಟವಾಗುತ್ತದೆ.
Comments
Post a Comment