Blog number 2243.ಶಿವಮೊಗ್ಗ ಜಿಲ್ಲಾ ರಾಜಕಾರಣದಲ್ಲಿನ ಜೋಡೆತ್ತುಗಳಾದ ಬಂಡಿರಾಮಚಂದ್ರ ಮತ್ತು ಅಮೀರ್ ಹಂಜಾ ಅವರ ಗೆಳೆತನಕ್ಕೆ 50 ನೇ ವರ್ಷದ ಸುವರ್ಣ ಮಹೋತ್ಸವ
#ಇವತ್ತಿನ_ನನ್ನ_ಅತಿಥಿಗಳು
#ಶಿವಮೊಗ್ಗ_ಜಿಲ್ಲಾ_ರಾಜಕಾರಣದ_ಜೋಡೆತ್ತುಗಳು
#ಮಾಜಿ_ಮುಖ್ಯಮಂತ್ರಿಗಳಾದ_ಬಂಗಾರಪ್ಪರ_ಅತ್ಯಾಪ್ತರು
#ಇವರಿಬ್ಬರ_ಗೆಳೆತನಕ್ಕೆ_50ನೇ_ವರ್ಷದ_ಸುವರ್ಣ_ಮಹೋತ್ಸವ
#ರಿಪ್ಪನಪೇಟೆ_ಅಮೀರ್_ಹಂಜಾ_ಮತ್ತು_ಬಿದರಳ್ಳಿಯ_ಬಂಡಿ_ರಾಮಚಂದ್ರ
#ಇವರಿಬ್ಬರ_ಗೆಳೆತನ_ಕುಂಸಿಯ_ರಾಮಪ್ಪ_ಮತ್ತು_ಸಂಜೀವಪ್ಪರ_ಗೆಳೆತನ_ನೆನಪಿಸುತ್ತದೆ.
https://youtu.be/RgsL_QhCveI?si=Zw3M7LHgJ2A5xjMG
ನನ್ನ ಮತ್ತು ಇವರಿಬ್ಬರ ನಡುವಿನ ಗೆಳೆತನಕ್ಕೆ 30 ವರ್ಷ, ಇವರಿಬ್ಬರ ಗೆಳೆತನಕ್ಕೆ 50 ವಷ೯ ಬಂಡಿ ರಾಮಚಂದ್ರ ಶಿವಮೊಗ್ಗ ಜಿಲ್ಲಾ ಕಾಂಗ್ರೇಸಿನ ಉಪಾಧ್ಯಕ್ಷರು ಮತ್ತು ಹೊಸನಗರ ತಾಲೂಕಿನ ಈಡಿಗ ಸಮಾಜದ ಅದ್ಯಕ್ಷರು, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದವರು, ಇವರ ಪ್ರತ್ರಿ ಕೂಡ ಒಂದು ಅವದಿ ಜಿಲ್ಲಾ ಪಂಚಾಯತ್ ಸದಸ್ಯೆ ಆಗಿದ್ದರು, ಇವರ ಇನ್ನೊಬ್ಬ ಪುತ್ರಿಯ ಪತಿ ಖ್ಯಾತರಾದ ಪೋಲಿಸ್ ಇನ್ಸ್ಪೆಕ್ಟರ್ ಗುರುರಾಜ್ (ಸೈಬರ್ ಕ್ರೈಂ ನಲ್ಲಿದ್ದರು)
ಅಮೀರ್ ಹಂಜಾ ಅಜ್ಜ ರಿಪ್ಪನ್ ಪೇಟೆಯ ಒಂದು ಕಾಲದ ಪ್ರಮುಖ ರಾಜಕಾರಣಿ ಜನಪ್ರತಿನಿದಿ ಆಗಿದ್ದವರು, ರಿಪ್ಪನ್ ಪೇಟೆ ವೃತ್ತದ ಬಹುಪಾಲು ಜಾಗ ಇವರ ಕುಟುಂಬದ ಆಸ್ತಿ ಆಗಿದೆ, ಇವರು ಆನಂದಪುರಂನಲ್ಲಿ ಪಿಯುಸಿ ಪ್ರಾರಂಭವಾದಾಗ ಇವರು ವಿದ್ಯಾರ್ಥಿ ಮುಖಂಡರು ನಂತರ ರಾಜಕಾರಣದಲ್ಲಿ ಮಾಜಿ ಮುಖ್ಯಮಂತ್ರಿ ಬಂಗಾರಪ್ಪರ ಕಟ್ಟಾ ಅನುಯಾಯಿಗಳು.
1996ರಲ್ಲಿ ಬಂಗಾರಪ್ಪನವರು ಶಿವಮೊಗ್ಗ ಲೋಕ ಸಭಾ ಚುನಾವಣೆ ತಯಾರಿ ನಡೆಸುವಾಗ ನಾನು ಬಂಗಾರಪ್ಪರ ಜೊತೆ ಸೇರಿದ್ದೆ ಆಗ ನನಗೆ ಆಶ್ಚರ್ಯ ಅನ್ನಿಸಿದ್ದು ಬಂಗಾರಪ್ಪನವರು ಇವರಿಬ್ಬರ ಜೊತೆ ಅನೇಕ ಆಪ್ತ ಸಮಾಲೋಚನೆ ನಡೆಸುತ್ತಿದ್ದಿದ್ದು.
ಈಗಲೂ ಕಾಂಗ್ರೇಸಿನಲ್ಲಿ ಬಂಗಾರಪ್ಪರ ಪುತ್ರ ಜಿಲ್ಲಾ ಮಂತ್ರಿ ಮದು ಬಂಗಾರಪ್ಪರಿಗೆ ಆಪ್ತರಾಗೇ ರಾಜಕಾರಣ ಮಾಡುತ್ತಾರೆ ಇವತ್ತು ನನ್ನ ಕಛೇರಿಗೆ ಬಂದಿದ್ದರು ಸುಮಾರು ಹೊತ್ತು ಜಿಲ್ಲೆಯ ರಾಜಕಾರಣದ ವಿಚಾರ ಮಾತಾಡಿದೆವು.
ಇವರಿಬ್ಬರ ಗೆಳೆತನ ಕುಂಸಿಯ ರಾಮಪ್ಪ ಮತ್ತು ಸಂಜೀವಪ್ಪ ರ ಗೆಳೆತನ ನೆನಪಿಸುತ್ತದೆ.
Comments
Post a Comment