#ಶಿವಮೊಗ್ಗ_ಜಿಲ್ಲೆಯ_ಉದಯೋನ್ಮುಖ_ಇತಿಹಾಸ_ಸಂಶೋದಕ
#ಕಲ್ಯಾಣಕುಮಾರ್_ಬಾಂಡ್ಯ_ಕೆಳದಿ_ವಂಶಸ್ಥರೂ_ಹೌದು
#ಶಿವಮೊಗ್ಗ_ಜಿಲ್ಲೆಯವರಾದ_ನಾವುಗಳು_ನಮಗೆ_ನಾವೆ_ಪ್ರಶ್ನೆ_ಮಾಡಿಕೊಳ್ಳ_ಬೇಕು
#ಕೆಳದಿ_ಸಮಗ್ರ_ಇತಿಹಾಸ_ಸಂಶೋಧನೆ_ಮಾಡಿದ್ದೇವಾ?
#ಈವರೆಗಿನ_ಸರ್ಕಾರದ_ಕೆಲಸ_ತೃಪ್ತಿಕರವೇ?
#ಶಿವಮೊಗ್ಗ_ಜಿಲ್ಲೆಯಲ್ಲಿ_ಕೆಳದಿ_ವಂಶಸ್ಥರು_ಇಲ್ಲವೇ_ಇಲ್ಲ_ಎನ್ನುತ್ತಿದ್ದದ್ದು_ಯಾಕೆ?
#ತೀರ್ಥಹಳ್ಳಿ_ತಾಲ್ಲೂಕಿನ_ಬಾಂಡ್ಯ_ಎಂಬ_ಹಳ್ಳಿಯ
#ಯುವಕ_ಕಲ್ಯಾಣಕುಮಾರ್_ಬಾಂಡ್ಯ_ಕೆಳದಿ_ವಂಶಸ್ಥ_ತಾನು
#ವಾಸ_ಇರುವ_ಅರಮನೆಯಲ್ಲಿಯೇ_ಡಿಜಿಟಲ್_ಮಾಧ್ಯಮದ
#ಮೂಲಕ_ವಿವರಿಸುತ್ತಿದ್ದಾರೆ_ಅವರು_ಕೆಳದಿ_ಇತಿಹಾಸ_ಸಂಶೋದಕರು_ಆಗಿದ್ದಾರೆ.
ರಾಜ್ಯದ ಖ್ಯಾತ ಡಿಜಿಟಲ್ ಮಾಧ್ಯಮದ ನಂದಿನಿ ಮತ್ತು ಆಕರ್ಷ ದಂಪತಿಗಳು ಶಿವಮೊಗ್ಗ ಜಿಲ್ಲೆಯ ಸಮಸ್ತ ಇತಿಹಾಸ ಕನ್ನಡಿಗರಿಗೆ ದೃಶ್ಯ ಮಾಧ್ಯಮದ ಮೂಲಕ ತೋರಿಸುತ್ತಿದ್ದಾರೆ.
ಈಗಾಗಲೇ ಗೇರುಸೊಪ್ಪ ಕಾಳುಮೆಣಸಿನ ರಾಣಿ ಇತಿಹಾಸ, ಕದಂಬರ ಇತಿಹಾಸ, ಅಕ್ಕಮಹಾದೇವಿ, ಅಲ್ಲಮಪ್ರಭು,ಈಸೂರು ಹೋರಾಟ, ಶಿವಮೊಗ್ಗದ ಖಂಡೋಬ ರಾವ್ ಖಾಸಾಗಿ ಮ್ಯೂಸಿಯಂ, ಸಿಂಹದಾಮ, ಸಕ್ರೆಬೈಲು ಆನೆ ಬಿಡಾರ, ನೀನಾಸಂ, ಕಡಿದಾಳು ಮಂಜಪ್ಪ ಮತ್ತು ಕುವೆಂಪು ಕವಿಶೈಲದ ಕಂತುಗಳು ನೋಡಿದ್ದೇವೆ.
ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ನಡೆದ ಕಾಗೋಡು ರೈತ ಹೋರಾಟ, ಶಿವಮೊಗ್ಗ ಜಿಲ್ಲೆಯಲ್ಲಿ ಹುಟ್ಟಿದ ಸಮಾಜವಾದಿ ಹೋರಾಟ, ರೈತ ಸಂಘಟನೆ ಮತ್ತು ದಲಿತ ಸಂಘಟನೆಗಳ ಬಗ್ಗೆ ಕೂಡ ಪ್ರಕಟಿಸಲಿದ್ದಾರೆ.
ಕೆಳದಿ ಅರಸರ ಇತಿಹಾಸ ಅನೇಕ ಕಂತುಗಳಾಗಿ ನಿತ್ಯ ವೀಕ್ಷಣೆ ಮಾಡುತ್ತಿದ್ದೇವೆ.
ತೀರ್ಥಹಳ್ಳಿ ತಾಲೂಕಿನ ಬಾಂಡ್ಯದ ಕೆಳದಿ ವಂಶಸ್ಥರ ಮನೆ ಅನ್ನಲು ಸಾಧ್ಯವಿಲ್ಲ ಇದು ಅರಮನೆ ಇದನ್ನು ತೋರಿಸುತ್ತಿದಾರೆ.
ಈ ಮನೆಯವರು ಇತಿಹಾಸಕ್ಕೆ ಸಂಬಂದ ಪಟ್ಟ ಎಲ್ಲವನ್ನು ಕಾಪಾಡಿಕೊಂಡು ಬಂದಿರುವುದು ವಿಶೇಷ.
ಬಾಂಡ್ಯಾ ಅರಮನೆ ವಿವರಿಸುತ್ತಿರುವವರು ಕಲ್ಯಾಣ ಕುಮಾರ್ ಬಾಂಡ್ಯಾ ಇವರು ನಮ್ಮ ಶಿವಮೊಗ್ಗ ಜಿಲ್ಲೆಯ ಉದಯೋನ್ಮುಖ ಇತಿಹಾಸ ಸಂಶೋದಕರು ಅಷ್ಟೇ ಅಲ್ಲ ಈ ಅರಮನೆ ಇವರದ್ದೇ ಇವರು ಕೆಳದಿ ರಾಜವಂಸ್ಥರು ಆಗಿದ್ದಾರೆ ಎಂಬುದು ಇನ್ನೊಂದು ವಿಶೇಷ.
ಇವರ ವಿವರಣೆಯಲ್ಲಿ ಬರುವ ದಿವಾನ್ ಪೂರ್ಣಯ್ಯರ ದ್ವೇಷದ ರಾಜಕಾರಣ ಮತ್ತು ಬೂದಿ ಬಸಪ್ಪರು ಮೈಸೂರು ಮುಮ್ಮಡಿ ಕೃಷ್ಣರಾಜ ಒಡೆಯರ್ ವಿರುದ್ಧದ ಹೋರಾಟಕ್ಕೆ ಲಿಂಕ್ ಇದೆ ಇಲ್ಲಿ ಕ್ಲಿಕ್ ಮಾಡಿ ಈವರೆಗಿನ ಬಾಂಡ್ಯಾ ಅರಮನೆ ನೋಡಿ.
I).https://youtu.be/LrOkmE3S95k?si=PSKr7uPSjNvQJwXO
2).https://youtu.be/tlyCXHF055A?si=TvCADQjQVMBW_nt
3).https://youtu.be/J3o1FyoxTJo?si=ghSevVhV8UOKpXPd
4)https://youtu.be/tFJZC3HGgvk?si=emxQ52y3YFp8vDZ6
Comments
Post a Comment