Blog number 2241. ಬಾಂಡ್ಯಾ ಮನೆತನದವರು ಬೂದಿ ಬಸಪ್ಪ ನಾಯಕರ ಹೋರಾಟಕ್ಕೆ ಆರ್ಥಿಕ ನೆರವು ನೀಡಿದ್ದರಿಂದ ಮೈಸೂರಿನ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ದ್ವೇಷಕ್ಕೆ ಗುರಿಯಾದ ಕುಟುಂಬ
#ಕೆಳದಿ_ಸಂಸ್ಥಾನದ_ಅಳಿದುಳಿದ_ಅರಮನೆ
#ತೀರ್ಥಹಳ್ಳಿಯ_ಬಾಂಡ್ಯಾ_ಮನೆತನ
#ಬೂದಿಬಸಪ್ಪರ_ಹೋರಾಟಕ್ಕೆ_ಆರ್ಥಿಕ_ಬಲ_ನೀಡಿದವರು
#ಇದರಿಂದ_ಮೈಸೂರಿನ_ಮುಮ್ಮಡಿ_ಕೃಷ್ಣರಾಜ_ಒಡೆಯರ್_ಕೆಂಗಣ್ಣಿಗೆ_ಗುರಿ
#ಇಡೀ_ಸಂತತಿ_ಸಂಹರಿಸುವ_ಸತತ_ಪ್ರಯತ್ನ_ವಿಪಲಗೊಳಿಸಿ
#ಬದುಕುಳಿದ_ಬಾಂಡ್ಯಾ_ಮನೆತನ
#ಬಾಂಡ್ಯಾ_ಅರಮನೆಯ_ಒಂದು_ಲಾರಿಯಷ್ಟು_ಪುರಾತನವಾದ
#ಬೆಲೆಕಟ್ಟಲಾಗದ_ಅಮೂಲ್ಯ_ವಸ್ತು_ಧರ್ಮಸ್ಥಳ_ವಸ್ತು_ಸಂಗ್ರಹಾಲಯಕ್ಕೆ_ನೀಡಿದ್ದಾರೆ.
#ಕೆಳದಿ_ಅರಸರಿಂದ_ಅಪಾರ_ಸಹಾಯ_ರಕ್ಷಣೆ_ಪಡೆದ_ಶೃಂಗೇರಿ_ಮಠಕ್ಕೆ_ಕೆಳದಿ_ಇತಿಹಾಸ_ಸ್ಮಾರಕದ_ಬಗ್ಗೆ_ನಿರಾಸಕ್ತಿ
#ವಿವಾನ್_ಪೂರ್ಣಯ್ಯರ_ಮೈಸೂರು_ಸಂಸ್ಥಾನದ_ಸ್ವಾಮಿ_ಭಕ್ತಿಯಿಂದ
#ಬೂದಿ_ಬಸಪ್ಪರ_ಹೋರಾಟದ_ದಂಗೆಗಾಗಿ_ಪ್ರತಿಕಾರ
https://youtu.be/T_e0TcsdRgw?si=TdHX6_GC_DuATTt4
ಇದೆಲ್ಲ ನಡೆದು ಹೋದ ಘಟನೆಗಳು ಬೂತಕಾಲದ ಸತ್ಯವನ್ನ ವರ್ತಮಾನದಲ್ಲಿರುವ ಜನಗಳು ಸರಿಯಾಗಿ ಅರ್ಥ್ಯೆಯಿಸಿದರೆ ಅದು ಭವಿಷ್ಯ ಕಾಲದಲ್ಲೂ ನಿಜ ಚರಿತ್ರೆಯಾಗಿ ಉಳಿದೀತು.
ಚರಿತ್ರೆ ಚರಿತ್ರೆ ಆಗಿ ನೋಡುವ ಸಂಶೋಧನ ಕಣ್ಣುಗಳು ನಮ್ಮದಾಗಬೇಕು ಕೆಳದಿ ಸಂಸ್ಥಾನ ಇಡೀ ರಾಜ್ಯವನ್ನ ದಕ್ಷತೆಯಿಂದ ಆಳಿದ ಸಾಗರದ ಹಳ್ಳಿಬೈಲು ಚೌಡಪ್ಪ ನಾಯಕರ ಸಂತತಿ.
ತನ್ನ ಅಜ್ಜ ಕೆಳದಿ ರಾಜ ಸದಾಶಿವನಾಯಕರ ಹೆಸರಿನಲ್ಲಿ ರಾಜ ವೆಂಕಟಪ್ಪ ನಾಯಕರು ನಿರ್ಮಿಸಿದ ಸದಾಶಿವ ಸಾಗರ ಈಗ ಕೇವಲ ಸಾಗರ ಆಗಿದೆ, 43 ವರ್ಷ ದೀರ್ಘ ಆಡಳಿತ ನಡೆಸಿದ ಗೇರುಸೊಪ್ಪೆಯಂತ ಸಂಪತ್ಭರಿತ ರಾಜ್ಯ ಅಕ್ರಮಿಸಿ ಜೈನ ರಾಣಿ ಚೆನ್ನಬೈರಾದೇವಿ ಬಂದನದಲ್ಲಿಟ್ಟ ರಾಜ ವೆಂಕಟಪ್ಪ ನಾಯಕರ ಒಂದೇ ಒಂದು ಹೆಸರಿನ ರಸ್ತೆ ಕೂಡ ಸಾಗರದಲ್ಲಿಲ್ಲ.
ಜಾತಿ ಕಾರಣದಿಂದ ರಾಜಕಾರಣದ ಬಲಗಳಿಂದ ಕೆಳದಿ ಅರಸರ ಇತಿಹಾಸ ತಿರುಚುವ, ಪುರಾತನ ವಿಗ್ರಹ ತೆರವು ಮಾಡುವ, ತಮ್ಮಿಷ್ಟದ ವಿಗ್ರಹ ಪ್ರತಿಷ್ಟಾಪಿಸುವ, ಬರುವ ಪ್ರವಾಸಿಗರಿಗೆ ಪ್ರವೇಶ ಶುಲ್ಕ ವಿಧಿಸುವ ಕೆಲಸಗಳು ಕೆಳದಿ ಇತಿಹಾಸದ ಸಂರಕ್ಷಣೆಯ ಕೆಲಸವಲ್ಲ ಅಂತ ಅವರಿಗೆಲ್ಲ ತಿಳಿಸುವವರು ಯಾರು?
ಇತಿಹಾಸ ಆಸಕ್ತಿಯ ಉದಯೋನ್ಮುಖ ಸಂಶೋದಕರಿಗೆ "ನೀನು ಕೆಳದಿ ಇತಿಹಾಸ ಬರೆಯ ಬೇಡ ಹೇಳಬೇಡ ನೀನು ಬೇರೆ ಜಾತಿಯವನು" ಎಂದು ಅವಮಾನ ಮಾಡುವವರು ಕೂಡ ಆಧುನಿಕ ದಿವಾನ್ ಪೂರ್ಣಯ್ಯರೇ ಆಗಿದ್ದಾರೆ.
23- ಆಗಸ್ಟ್ - 1830ರಂದು ಬೂದಿ ಬಸಪ್ಪ ನಾಯಕರು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರO ಹೋಬಳಿಯ ತ್ಯಾಗರ್ತಿ, ನೀಚಡಿ ಮತ್ತು ಕೋಟೆಕೊಪ್ಪದ ಮಧ್ಯದಲ್ಲಿರುವ ಹೊಸಂತೆಯಲ್ಲಿ ಮೈಸೂರಿನ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ಅವೈಜ್ಞಾನಿಕ ತೆರಿಗೆ ಹೊರೆ ಮತ್ತು ಅದನ್ನು ವಸೂಲಿ ಮಾಡಲು ಮಧ್ಯವರ್ತಿ (ಸೀಸರ್ ) ನೇಮಕ ವಿರೋಧಿಸಿ ನಡೆಸಿದ ಬೃಹತ್ ಸಮಾವೇಶಕ್ಕೆ ಬರುವ ಆಗಸ್ಟ್ ತಿಂಗಳಿಗೆ 194 ವರ್ಷಾಚಾರಣೆ.
ಈ ಬೂದಿ ಬಸಪ್ಪರ ಹೋರಾಟಕ್ಕೆ ಆರ್ಥಿಕ ಬಲ ನೀಡಿದ ಕೆಳದಿ ವoಶಸ್ಥರ ನಿರ್ವಂಶ ಮಾಡುವ ಪ್ರಯತ್ನದಲ್ಲಿ ಉಳಿದು ಬಂದು ತೀಥ೯ಹಳ್ಳಿಯ ಬಾಂಡ್ಯಾದ ಅರಮನೆಯಲ್ಲಿ ಡಿಜಿಟಲ್ ಮಾಧ್ಯಮದ ಮೂಲಕ ವಿವರಿಸುತ್ತಿರುವ ಕಲ್ಯಾಣ ಕುಮಾರ್ ಬಾಂಡ್ಯಾರಿಗೆ ಮತ್ತು ಆ ಕುಟುಂಬದವರಿಗೆ ದೇವರು ಎಲ್ಲಾ ಶ್ರೇಯಸ್ಸು ದಯಪಾಲಿಸಲಿ ಎಂದು ನಾವು ಕನ್ನಡಿಗರು ಪ್ರಾರ್ಥಿಸೋಣ.
Comments
Post a Comment