#ಕನ್ನಡ_ಮಾಧ್ಯಮದಲ್ಲಿ_ವಿದ್ಯಾಬ್ಯಾಸ_ಮಾಡಿದವರಿಗೆ...
#NEET_ಪರೀಕ್ಷೆ_ಪಾಸು_ಮಾಡಲು_ಸಾಧ್ಯವಿಲ್ಲ
#ಡಾಕ್ಟರ್_ಆಗಲು_ಸಾಧ್ಯವಿಲ್ಲ
#ಎಂಬುದು_ತಪ್ಪು_ಗ್ರಹಿಕೆ
#NEET #medical #enginearing #kannadamediam
ಕನ್ನಡ ಮೀಡಿಯಂ ಮಕ್ಕಳು NEET ಪರೀಕ್ಷೆ ಉತ್ತೀರ್ಣರಾಗುತ್ತಿಲ್ಲ ಅವರಿಗೆ ಮೆಡಿಕಲ್ ಕಾಲೇಜಿನಲ್ಲಿ ಸೀಟ್ ಸಿಗುವುದಿಲ್ಲ ಅವರ ವೈದ್ಯರಾಗುವ ಕನಸು ನನಸಾಗುತ್ತಿಲ್ಲ ಎಂಬ ಲೇಖನ ಓದಿದವರಿಗೆ ತಕ್ಷಣ ಹೌದು ಅನ್ನಿಸಿ ಬಿಡುತ್ತದೆ ತಮ್ಮ ಮಕ್ಕಳನ್ನು ಇಂಗ್ಲೀಷ್ ಮೀಡಿಯಂನಲ್ಲೇ ಓದಿಸಬೇಕು ಅನ್ನಿಸುತ್ತದೆ.
ಆದರೆ ಇದು ತಪ್ಪು ಗ್ರಹಿಕೆ ಎನ್ನುವುದನ್ನು ಈ ಕೆಳಗಿನ ಲೇಖನ ಓದಿ...
ಕರ್ನಾಟಕ ರಾಜ್ಯದಲ್ಲಿ 2025 ರಲ್ಲಿ ಸುಮಾರು 12,395 ಎಂಬಿಬಿಎಸ್ ಸೀಟುಗಳು ಲಭ್ಯವಿವೆ ಇವುಗಳಲ್ಲಿ, 3,800 ಸೀಟುಗಳು ಸರ್ಕಾರಿ ಕಾಲೇಜುಗಳಲ್ಲಿ ಮತ್ತು 6,000 ಕ್ಕಿಂತ ಹೆಚ್ಚು ಸೀಟುಗಳು ಖಾಸಗಿ ಕಾಲೇಜುಗಳಲ್ಲಿ ಲಭ್ಯವಿವೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಎಂಬಿಬಿಎಸ್/ಬಿಡಿಎಸ್ ಸೀಟುಗಳ ಕೌನ್ಸೆಲಿಂಗ್ ಪ್ರಕ್ರಿಯೆಯನ್ನು ನೋಡಿಕೊಳ್ಳುತ್ತದೆ.
ಕರ್ನಾಟಕದ ಒಟ್ಟು 1,47,782 ಅಭ್ಯರ್ಥಿಗಳು ರೆ ಈ ವರ್ಷ (2025) NEET ಪರೀಕ್ಷೆಗೆ ನೊಂದಾಯಿಸಿದ್ದರು ಆದರೆ 1,42,369 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಇದರಲ್ಲಿ 83,582 ಅರ್ಹತೆ ಪಡೆದುಕೊಂಡರು.
ಅಂದರೆ 83 ಸಾವಿರದ 582 ಕರ್ನಾಟಕದ NEET ಪರೀಕ್ಷೆ ಪಾಸು ಮಾಡಿದವರಲ್ಲಿ ಅವಕಾಶ ಇರುವ MBBS ಸೀಟುಗಳು 12,395 ಮಾತ್ರ ಎಂಬುದು ನೆನಪಿರಲಿ.
ಟಾಪ್ 100ರಲ್ಲಿ ಸ್ಥಾನ ಪಡೆದ ಕರ್ನಾಟಕದ ವಿದ್ಯಾರ್ಥಿಗಳ ಪಟ್ಟಿ
ನೀಖಿಲ್ ಸೋನದ್ ದೇಶದಕ್ಕೆ 17ನೇ ರ್ಯಾಂಕ್,
ರುಚಿರ್ ಗುಪ್ತಾ ದೇಶದಕ್ಕೆ 22ನೇ ರ್ಯಾಂಕ್
ತೇಜಸ್ ಸೈಲೇಶ್ 38ನೇ ರ್ಯಾಂಕ್.
ಪಿ ಜಾಗಿರ್ದಾರ್ 42 ನೇ ನೀಟ್ ರ್ಯಾಂಕ್
ಹರಿಣಿ ಶರ್ಮಾ 72 ನೇ ನೀಟ್ ರ್ಯಾಂಕ್
ದಿಗಂತ್ 80 ನೇ ನೀಟ್ ರ್ಯಾಂಕ್
ನಿಧಿ ಕೆ ಜಿ 84 ನೇ ನೀಟ್ ರ್ಯಾಂಕ್.
ನೀಟ್ (NEET) ಪರೀಕ್ಷೆ ಎಂದರೆ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ ಇದು ವೈದ್ಯಕೀಯ ಮತ್ತು ದಂತವೈದ್ಯಕೀಯ ಪದವಿ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಭಾರತದಲ್ಲಿ ನಡೆಸಲಾಗುವ ಪ್ರಮುಖ ಪರೀಕ್ಷೆಯಾಗಿದೆ ಈ ಪರೀಕ್ಷೆಯನ್ನು #ಕನ್ನಡ_ಸೇರಿದಂತೆ_ವಿವಿಧ_ಭಾಷೆಗಳಲ್ಲಿ_ಬರೆಯಬಹುದುದು.
ನೀಟ್ ಪರೀಕ್ಷೆಯ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ
ನೀಟ್ ಪರೀಕ್ಷೆಯು ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರ ವಿಷಯಗಳನ್ನು ಒಳಗೊಂಡಿರುತ್ತದೆ.
ಪರೀಕ್ಷೆಯ ಅವಧಿ ಸಾಮಾನ್ಯವಾಗಿ ಅಭ್ಯರ್ಥಿಗಳಿಗೆ 3 ಗಂಟೆಗಳ ಕಾಲಾವಕಾಶ ನೀಡಲಾಗುತ್ತದೆ.
ನೀಟ್ ಪರೀಕ್ಷೆಯನ್ನು ಕನ್ನಡ, ಇಂಗ್ಲಿಷ್, ಹಿಂದಿ ಮತ್ತು ಇತರ ಪ್ರಾದೇಶಿಕ ಭಾಷೆಗಳಲ್ಲಿ ಬರೆಯಬಹುದು
ನೀಟ್ ಪರೀಕ್ಷೆಯನ್ನು ದೇಶದಾದ್ಯಂತ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗುತ್ತದೆ.
ಪ್ರತಿ ಸರ್ಕಾರಿ ಕಾಲೇಜಿನಲ್ಲಿ ಶೇ. 85 ರಷ್ಟು ಸೀಟುಗಳು ರಾಜ್ಯ ಕೋಟಾ ಸೀಟುಗಳಿಗೆ ಮೀಸಲಾಗಿವೆ ಈ MBBS ಸೀಟುಗಳನ್ನು ರಾಜ್ಯದಲ್ಲಿ ನೆಲೆಸಿರುವ ಮತ್ತು ಮಾನದಂಡಗಳನ್ನು ಪೂರೈಸುವ ಅಭ್ಯರ್ಥಿಗಳಿಗೆ ಹಂಚಲಾಗುತ್ತದೆ.
ಪ್ರತ್ಯೇಕ ರಾಜ್ಯ ಸಮಾಲೋಚನಾ ಸಮಿತಿಗಳು ರಾಜ್ಯ ಕೋಟಾ ರ‍್ಯಾಂಕ್ ಪಟ್ಟಿಯನ್ನು ನಿರ್ವಹಿಸುತ್ತವೆ.
ಇಡೀ ದೇಶದಲ್ಲಿ ಅನೇಕ ವಿದ್ಯಾರ್ಥಿಗಳು NEET (UG) ಗೆ ಅರ್ಹತೆ ಪಡೆದಿದ್ದರೂ ಲಭ್ಯವಿರುವ MBBS ಸೀಟುಗಳ ಸಂಖ್ಯೆ ಗಮನಾರ್ಹವಾಗಿ ಕಡಿಮೆಯಾಗಿದೆ.
ಇಡೀ ದೇಶದಲ್ಲಿ 2025 ರಲ್ಲಿ 12 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು NEET ಅನ್ನು ತೇರ್ಗಡೆ ಹೊಂದಿದರು, ಆದರೆ ಕೇವಲ1.18 ಲಕ್ಷ ಎಂಬಿಬಿಎಸ್ ಸೀಟುಗಳು ಲಭ್ಯವಿದೆ ಇದರರ್ಥ ಹೆಚ್ಚಿನ ಸಂಖ್ಯೆಯ ಅರ್ಹ ವಿದ್ಯಾರ್ಥಿಗಳು ಭಾರತೀಯ ವೈದ್ಯಕೀಯ ಕಾಲೇಜಿನಲ್ಲಿ ಸೀಟು ಪಡೆಯಲು ಸಾಧ್ಯವಾಗುವುದಿಲ್ಲ.
ದೇಶದಾದ್ಯಂತ NEET UG 2025 ಪರೀಕ್ಷೆಗೆ ಒಟ್ಟು22,76,069ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದು ಇದರಲ್ಲಿ 22,09,318 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು ಪರೀಕ್ಷೆಗೆ ಹಾಜರಾದವರಲ್ಲಿ 12,36,531 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ.
ಈ ಅಂಕಿ ಅಂಶಗಳನ್ನು ಗಮನಿಸಿದರೆ ಅರ್ಥವಾದೀತು ಕನ್ನಡ ಮೀಡಿಯಂನಲ್ಲಿ ಓದಿದವರಿಗೆ ಡಾಕ್ಟರ್ ಆಗಲು ಸಾಧ್ಯವಿಲ್ಲ ಎಂಬುದು ತಪ್ಪು ಮಾಹಿತಿ ಆಗಿದೆ ಅನ್ನುವುದು.
ಅಷ್ಟೇ ಅಲ್ಲ ಇಂಗ್ಲೀಷ್ ಮೀಡಿಯಂನಲ್ಲಿ ಓದಿದ ಎಲ್ಲರಿಗೂ ಡಾಕ್ಟರ್ ಆಗಲು ಸಾಧ್ಯವಿಲ್ಲ ಎಂಬುದು.
Comments
Post a Comment