#ಭಾಗ_ಎರಡು
#ಸಂಸದರಾದ_ಮಾಜಿ_ಮುಖ್ಯಮಂತ್ರಿ_ಬಂಗಾರಪ್ಪನವರನ್ನೇ_ಬಿಟ್ಟು_ಹೋದ
#ಹೊಳೆಬಾಗಿಲು_ಲಾಂಚ್_ಸಿಬ್ಬಂದಿಗಳು.
#sharavathirivet #sagar #govtofkarnataka #govtofindia #ambargodlu #kalasavalli #siganduru #cablebridge #SBangarappa #shivamogga #parlimentmember
1996ರಲ್ಲಿ ಬಂಗಾರಪ್ಪನವರು ಮಾಜಿ ಮುಖ್ಯಮಂತ್ರಿಗಳು ಅವರು ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧೆ ಮಾಡಿದರು.
ಆಗ ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಶಾಸಕರಾದ ಕಾಗೋಡು ತಿಮ್ಮಪ್ಪನವರ ಲಕ್ಷ್ಮಣ ರೇಖೆ ದಾಟಲು ಸಾಧ್ಯವಿರಲಿಲ್ಲ.
ಅವರೆಲ್ಲ ಚುನಾವಣೆಯಲ್ಲಿ ಬಂಗಾರಪ್ಪನವರಿಗೆ ವಿರುದ್ಧವಾಗಿ ಕಾಂಗ್ರೇಸ್ ಅಭ್ಯರ್ಥಿ ಕೆ.ಜಿ. ಶಿವಪ್ಪನವರ ಪರವಾಗಿ ಕೆಲಸ ಮಾಡಿದ್ದರು.
ಸಾಗರ ತಾಲೂಕಿನಲ್ಲಿ ಹರುನಾಥರಾವ್, ಮೊಹಮ್ಮದ್ ಕೊಯಾ, ಮೊಹಮದ್ ಖಾಸಿಂ,ಕಾಗೋಡು ಹೋರಾಟದ ನೇತಾರಗಣಪತಿಯಪ್ಪ ಮತ್ತು ಅನೇಕರ ಜೊತೆ ನಾನು ಸೇರಿ ಬಂಗಾರಪ್ಪನವರ ಗೆಲುವಿಗೆ ಕಟಿಬದ್ಧರಾಗಿ ಚುನಾವಣೆ ಮಾಡಿದೆವು ಚುನಾವಣೆಯಲ್ಲಿ ಬಂಗಾರಪ್ಪನವರು ಗೆಲ್ಲುತ್ತಾರೆ ಸಾಗರ ತಾಲೂಕಿನಲ್ಲಿ ಅವರಿಗೆ ಲೀಡ್ ಬರುತ್ತದೆ.
ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಬಂಗಾರಪ್ಪನವರಿಗೆ ವಿರುದ್ಧ ಆಗಿದ್ದರೂ ಮತದಾರರು ಬಂಗಾರಪ್ಪನವರ ಕೈ ಬಿಡಲಿಲ್ಲ.
ಸಂಸದರಾಗಿ ಆಯ್ಕೆ ಆದ ಬಂಗಾರಪ್ಪನವರನ್ನ ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ವಿಜಯೋತ್ಸವ ಹಮ್ಮಿಕೊಂಡು ಪ್ರವಾಸ ಕಾರ್ಯಕ್ರಮ ನಿಗದಿ ಮಾಡಿದೆವು.
ಅಂತಹ ಸಂದರ್ಭದಲ್ಲಿ ತುಮರಿ ಬ್ಯಾಕೋಡು ಭೇಟಿ ಕಾರ್ಯಕ್ರಮ ನಿಗದಿಯಾಯಿತು ಆ ಭಾಗದ ಜಿಲ್ಲಾ ಪಂಚಾಯತ್ ಸದಸ್ಯರಾದ ಎಂ ಜಿ ಕೃಷ್ಣಮೂರ್ತಿ ಅವರು ಕೂಡ ಕಟ್ಟಾ ಕಾಂಗ್ರೆಸ್ಸಿಗರು ಆದರು ತಮ್ಮ ಜಿಲ್ಲಾ ಪಂಚಾಯತ್ ಕ್ಷೇತ್ರಕ್ಕೆ ಲೋಕಸಭಾ ಸದಸ್ಯರು ಬರುತ್ತಾರೆಂದು ಅವರು ನನ್ನ ಜೊತೆಯಾದರು.
ಕೆಲವು ಜೈನ ಮುಖಂಡರ ಮನೆಗಳಲ್ಲಿ ಒಳಾಂಗಣದಲ್ಲಿ ಸಣ್ಣ ಸಣ್ಣ ಅಭಿನಂದನಾ ಸಭೆ ನಡೆಯಿತು ಆಗ ಸ್ಥಳೀಯ ಕಾಂಗ್ರೇಸ್ ಮುಖಂಡರು ಬಂಗಾರಪ್ಪರನ್ನ ಬಾರೀ ವಿರೋದ ವ್ಯಕ್ತಪಡಿಸುತ್ತಿದ್ದರು.
ಸ್ಥಳೀಯ ಜೈನ ಮುಖಂಡರ ಮನೆಯಲ್ಲಿ ಊಟದ ನಂತರ ಹಿಂದಿರುಗುವಾಗ ಸಿಗಂದೂರು ದೇವಾಲಯಕ್ಕೆ ಬರಲೇಬೇಕೆಂಬ ಒತ್ತಾಯದ ಅಹ್ವಾನ ದರ್ಮದರ್ಶಿ ರಾಮಪ್ಪನವರಿಂದ ಬಂದಿದ್ದರಿಂದ ಬಂಗಾರಪ್ಪನವರ ಜೊತೆ ನಾವೆಲ್ಲರೂ ಸಿಗಂದೂರಿಗೆ ಹೋಗಿದ್ದೆವು.
ಅಲ್ಲಿ ದೇವರ ದರ್ಶನ ಪೂಜೆ ನಂತರ ರಾಮಪ್ಪನವರು ಗಂದದ ಹಾರ ಬಂಗಾರಪ್ಪನವರಿಗೆ ಅರ್ಪಿಸಿದರು ಅವರ ಮಹಡಿ ಮೇಲಿದ್ದ ಕಛೇರಿಯಲ್ಲಿ ಉಪ್ಪಿಟ್ಟು ಕೇಸರಿಬಾತಿನ ಉಪಹಾರವು ಅಯಿತು.
ಅಲ್ಲಿಂದ ಹೊರಡುವಾಗಲೇ ಲಾಂಚ್ ಸಿಬ್ಬಂದಿಗಳಿಗೆ ಮಾಜಿ ಮುಖ್ಯಮಂತ್ರಿ ಮತ್ತು ಹಾಲಿ ಸಂಸದ ಬಂಗಾರಪ್ಪನವರು ಲಾಂಚ್ ನಲ್ಲಿ ಹೊಳೆ ದಾಟಿ ಸಾಗರಕ್ಕೆ ವಾಪಾಸಾಗಲಿದ್ದಾರೆ ಎಂಬ ಸುದ್ದಿ ಕಳಿಸಲಾಗಿತ್ತು.
ಬಂಗಾರಪ್ಪರ ಕ್ಯಾರ್ ವಾನ್ ಹೊಳೆಬಾಗಿಲಿನ ಕಳಸವಳ್ಳಿ ದಂಡೆಯ ಮೇಲಿನ ಭಟ್ಟರ ಹೋಟೆಲ್ ಸಮೀಪಕ್ಕೆ ಬರುವಾಗಲೇ ಲಾಂಚ್ ಬಂಗಾರಪ್ಪನವರಿಗಾಗಿ ನಿಲ್ಲದೆ ಪ್ರಯಾಣ ಪ್ರಾರಂಭಿಸಿತು.
ಬಂಗಾರಪ್ಪನವರ ಜೊತೆ ಇದ್ದ ಸ್ಥಳೀಯ ಮುಖಂಡರುಗಳು ಲಾಂಚ್ ಸಿಬ್ಬಂದಿಗಳಿಗೆ ಕೂಗಿ ಕೂಗಿ ವಾಪಸ್ ಬರಲು ವಿನಂತಿಸಿದರು ಆದರೆ ಲಾಂಚ್ ಸಿಬ್ಬಂದಿಗಳು ವಿನಂತಿಗೆ ಸೊಪ್ಪು ಹಾಕದೆ ಆ ಕಡೆಯ ಅಂಬಾರಗೋಡ್ಲು ದಂಡೆ ಕಡೆಗೆ ಪ್ರಯಾಣ ಪ್ರಾರಂಭಿಸಿ ಬಿಟ್ಟರು.
ಇದರಿಂದ ನಮಗೆಲ್ಲ ಬೇಸರವಾಯಿತು ಆದರೆ ಬಂಗಾರಪ್ಪನವರು ಇದನ್ನು ವಿಶೇಷವಾಗಿ ಪರಿಗಣಿಸದೆ "ಹೋಗಲಿ ಬಿಡಿ ಜನರಿಗೆ ತೊಂದರೆ ಯಾಕೆ" ಎಂದರು ಆಗ ನಾನು ಭಟ್ಟರ ಹೋಟೆಲಿನಿಂದ ಕುರ್ಚಿ ಒಂದನ್ನು ತಂದು ಬಂಗಾರಪ್ಪನವರಿಗೆ ಕುಳ್ಳಿರಿಸಿದೆ.
ಬಂಗಾರಪ್ಪನವರು ಇನ್ನೆರಡು ಕುರ್ಚಿ ಹೋಟೆಲ್ ನಿಂದ ತರಲು ತಮ್ಮ ಸಹಾಯಕರಿಗೆ ಹೇಳಿ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದ ನಾನು ಮತ್ತು ಎಂ. ಜಿ. ಕೃಷ್ಣಮೂರ್ತಿಗೆ ಜೊತೆಯಲ್ಲಿ ಕುಳಿತುಕೊಳ್ಳಲು ತಿಳಿಸಿ ತಮ್ಮ ಸಂಗಡಿಗರಿಗೆಲ್ಲ ದೂರ ಹೋಗಲು ತಿಳಿಸಿದರು.
ಆಗ ಬಂಗಾರಪ್ಪನವರು ಇದು ಉದ್ದೇಶಪೂರ್ವಕದ ದ್ವೇಷದ ರಾಜಕಾರಣ ಬೋಟಿನ ಸಿಬ್ಬಂದಿಗಳು ಅನಿವಾರ್ಯವಾಗಿ ಅವರ ಮಾತು ಕೇಳಲೇಬೇಕಲ್ವಾ... ಎಂದು ನಮ್ಮಿಬ್ಬರಿಗೆ ಸಮಾಧಾನದ ಮಾತಾಡಿದರು.
ಆಗಲೇ ನಾವು ಇಲ್ಲಿನ ಸೇತುವೆ ಅನಿವಾರ್ಯತೆ ಬಗ್ಗೆ ಬಂಗಾರಪ್ಪನವರಿಗೆ ವಿವರಿಸಿದೆವು ಕರೂರು -ಬಾರಂಗಿ ಹೋಬಳಿಯ ಜಿಲ್ಲಾ ಪಂಚಾಯತ್ ಸದಸ್ಯರಾದ ಎಂ. ಜಿ. ಕೃಷ್ಣಮೂರ್ತಿ ಯೋಜನೆಗೆ ಹಣ ಜಾಸ್ತಿ ಬೇಕು ಆದರೆ ಇದು ಅತ್ಯವಶ್ಯಕ ಎಂಬುದನ್ನು ಒತ್ತಿ ಹೇಳಿದರು.
ಆಗ ಬಂಗಾರಪ್ಪನವರು ನಾನು ಮುಖ್ಯಮಂತ್ರಿ ಆಗಿದ್ದಾಗ ಯಾರು ನನ್ನ ಗಮನಕ್ಕೆ ಈ ವಿಷಯ ತರಲಿಲ್ಲ ತಂದಿದ್ದರೆ ಪ್ರಯತ್ನಿಸಬಹುದಾಗಿತ್ತು ಎಂಬ ಮಾತಾಡಿದರು.
ಅದೇ ಸಂದರ್ಭದಲ್ಲಿ ಸಿಗಂದೂರು ರಾಮಪ್ಪನವರು ಸೊರಬದಲ್ಲಿ ಮಂಡಲ ಪಂಚಾಯಿತಿ ಚುನಾವಣೆಯಲ್ಲಿ ಬಂಗಾರಪ್ಪನವರ ಗುಂಪಿನ ವಿರುದ್ಧ ಸೆಡ್ಡು ಹೊಡೆದದ್ದು ಆ ಚುನಾವಣೆಯಲ್ಲಿ ಸಿಗಂದೂರು ರಾಮಪ್ಪನವರು ಬಂಗಾರಪ್ಪರ ಬಳಗದ ವಿರುದ್ದ ಹೋರಾಟ ಮಾಡಲಿಕ್ಕಾಗದ ಬಗ್ಗೆ ಬಂಗಾರಪ್ಪನವರು ವಿವರಿಸಿದ್ದರು.
ಅದೇ ಸಂದರ್ಭದಲ್ಲಿ ಎಂ.ಜಿ. ಕೃಷ್ಣಮೂರ್ತಿ ಅವರು ಬಂಗಾರಪ್ಪನವರು ಒಮ್ಮೆ ಕೃಷಿ ಮಂತ್ರಿಗಳಾಗಿದ್ದಾಗ ತುಮರಿ ಭಾಗದ ಪ್ರವಾಸಕ್ಕೆ ಬಂದಾಗ ನಡೆದ ಘಟನೆ ಒಂದನ್ನು ನೆನಪಿಸಿದ್ದರು ಅದು ಕೃಷಿ ಮಂತ್ರಿ ಬಂಗಾರಪ್ಪರ ಕಾರ್ಯಕ್ರಮ ಮುಗಿದ ನಂತರ ಬಂಗಾರಪ್ಪನವರ ಜೊತೆ ಫೋಟೋ ತೆಗೆಸಿಕೊಳ್ಳಲು ಮಹಿಳೆಯರ ಗುಂಪೊಂದು ಅಪೇಕ್ಷೆ ಪಟ್ಟಿತ್ತು ಆಗ ದೂರದಲ್ಲಿದ್ದ ಇನ್ನೊಂದು ಮಹಿಳಾ ಗುಂಪು ನೋಡಿ ಬಂಗಾರಪ್ಪನವರು ಮೊದಲಿಗೆ ಆ ಮಹಿಳೆಯರ ಗುಂಪಿನಲ್ಲಿ ಹೋಗಿ ನಿಂತು ಫೋಟೋ ತೆಗೆಸಿಕೊಂಡು ಆಗ ಅವರು ಹೇಳಿದ್ದು "ನೋಡಿ ನಮ್ಮ ದೀವರ ಜಾತಿಯ ಆರ್ಥಿಕ ಮಟ್ಟ ಯಾವ ರೀತಿ ಇದೆ" ಅಂತ ಆ ಗುಂಪಿನ ಮಹಿಳೆಯರು ಹರಿದ ಜಾಕಿಟು ಸೀರೆ ಉಟ್ಟು ಬಂದಿದ್ದರಿಂದ ಬಂಗಾರಪ್ಪನವರು ಈ ರೀತಿ ಹೇಳಿದ್ದರಂತೆ.
ಆಗ ಕಾಂಗ್ರೇಸ್ ಪಕ್ಷದ ತಾಲ್ಲೂಕು ಪದಾಧಿಕಾರಿ ಆಗಿದ್ದ ಎಂ.ಜಿ. ಕೃಷ್ಣಮೂರ್ತಿ ಅವರು "ಸರ್ ಇವರಲ್ಲ ಜೈನ ಸಮುದಾಯದವರು" ಎಂದಾಗ ಬಂಗಾರಪ್ಪ ಅಚ್ಚರಿ ಪಟ್ಟು ಅಲ್ಲಿನ ದೀವರಿಗಿಂತ ಕಷ್ಟದ ಪರಿಸ್ಥಿತಿಯಲ್ಲಿ ಜೈನರು ಇದ್ದಾರೆಂಬುದು ನಂಬಲಿಕ್ಕೆ ಸಾಧ್ಯವಿಲ್ಲ ಎಂದಿದ್ದನ್ನ ನೆನಪು ಮಾಡಿದರು ಬಂಗಾರಪ್ಪನವರು ಅವತ್ತಿನ ಘಟನೆ ನೆನಪಿಸಿಕೊಂಡರು.
ಸುಮಾರು ಒಂದು ಗಂಟೆ ಕಾಲ ನಾನು ಮತ್ತು ಎಂ. ಜಿ. ಕೃಷ್ಣಮೂರ್ತಿ ಬಂಗಾರಪ್ಪರ ಜೊತೆ ಕಳಸವಳ್ಳಿಯ ಶರಾವತಿ ನದಿ ದಂಡೆಯ ಮೇಲೆ ಕುಳಿತು ಲಾಂಚ್ ಅಂಬಾರಗೋಡ್ಲು ದಂಡೆಗೆ ತಲುಪಿ ವಾಪಾಸು ಬರುವುದನ್ನ ವೀಕ್ಷಿಸುತ್ತಾ ರಾಜಕಾರಣದ ಮಾತುಗಳು ನಡೆಸಿದ್ದು ಒಂದು ಅವಿಸ್ಮರಣೀಯ ನೆನಪುಗಳು.
ಅಷ್ಟರಲ್ಲಿ ಲಾಂಚ್ ವಾಪಾಸು ಕಳಸವಳ್ಳಿ ದಂಡೆಗೆ ಬಂದು ನಿಂತಿತು ನಾವೆಲ್ಲರೂ ಬಂಗಾರಪ್ಪರ ಜೊತೆ ನಡೆದು ಹೋಗಿ ಲಾಂಚ್ ಹತ್ತಿಕೊಂಡೆವು ಬಂಗಾರಪ್ಪರ ವಾಹನಗಳೂ ಲಾಂಚ್ ಗೆ ಏರಿಸಲಾಯಿತು.
ತಪ್ಪು ಮಾಡಿದ ಲಾಂಚ್ ಸಿಬ್ಬಂದಿಗಳು ಭಯದಿಂದ ಬಂಗಾರಪ್ಪನವರ ಎದುರು ಸುಳಿದಾಡಲೇ ಇಲ್ಲ.
ಈ ರೀತಿ ದ್ವೇಷದ ರಾಜಕಾರಣಕ್ಕೆ ಲಾಂಚ್ ಸಿಬ್ಬಂದಿಗಳು ಆಯುಧವಾಗುತ್ತಿದ್ದ ಪ್ರಕರಣಗಳು ಈ ಭಾಗದಲ್ಲಿ ರಾಜಕಾರಣಕ್ಕೆ ಮಾತ್ರ ಅಲ್ಲ ಸ್ಥಳೀಯ ವೈಯಕ್ತಿಕ ಜಗಳ ದ್ವೇಷಗಳಿಗೂ ಭಾಗಿ ಆಗಬೇಕಾಗಿದ್ದ ಸಂದರ್ಭಗಳೂ ಇತ್ತು ಇನ್ನು ಮುಂದೆ ಸೇತುವೆ ಇಂತದ್ದೆಲ್ಲದಕ್ಕೆ ಅಂತ್ಯ ಹಾಡಲಿದೆ.
(ಅಂಬಾರಗೋಡ್ಲು ಕಳಸವಳ್ಳಿ ಸೇತುವೆ ದಿನಾಂಕ 14- ಜುಲೈ-2025ರ ಉದ್ಘಾಟನೆ ಸಂದರ್ಭದ ಲೇಖನ)
Comments
Post a Comment