Skip to main content

BN 3429. ಭಾಗ-4 ನನ್ನ ಪಾದಯಾತ್ರೆಗೆ 21 ವರ್ಷ

#ಭಾಗ_4

#ನನ್ನ_ಪಾದಯಾತ್ರೆಗೆ_21_ವರ್ಷ

#ಹೊಳೆಬಾಗಿಲು_ಸೇತುವೆ

#ಶಿವಮೊಗ್ಗ_ತಾಳಗುಪ್ಪ_ಬ್ರಾಡ್_ಗೇಜ್_ಹಣ_ಬಿಡುಗಡೆ

#ಸಾಗರ_ಜಂಬಗಾರು_ರೈಲುನಿಲ್ದಾಣ_ಡಾಕ್ಟರ್_ರಾಮಮನೋಹರ್_ಲೋಹಿಯಾ_ರೈಲು_ನಿಲ್ದಾಣವಾಗಿ_ಪುನರ್_ನಾಮಕರಣ

#ಜೋಗ್_ಜಲಪಾತ_ಪ್ರವಾಸಿತಾಣದ_ಅಭಿವೃದ್ಧಿ

#ಹಂದಿಗೋಡು_ಕಾಯಿಲೆ_ಪೀಡಿತರಿಗೆ_ಪುನರ್ವಸತಿಗಾಗಿ


  21 ಜನವರಿ 2004 ರಿಂದ 31 ಜನವರಿ 2004ರವರೆಗೆ ಹನ್ನೊಂದು ದಿನಗಳ ಕಾಲ ಸಾಗರ ತಾಲೂಕಿನಾದ್ಯಂತ ಮೇಲಿನ ಬೇಡಿಕೆಗಳ ಈಡೇರಿಕೆಗಾಗಿ ಪಾದಯಾತ್ರೆ ಮೂಲಕ ಜನ ಜಾಗೃತಿ ಮೂಡಿಸಿದ್ದು ಈವರೆಗೆ ಯಾರೂ ಮುರಿಯದ ದಾಖಲೆ ಆಗಿ ಉಳಿದಿದೆ.

    ತಾಲ್ಲೂಕಿನ ಜನತೆ ರಾಜಕೀಯ ಮುಖಂಡರಿಗೆ, ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ಒತ್ತಾಯಿಸ ಬೇಕು, ಮಗು ಅಳದಿದ್ದರೆ ತಾಯಿ ಹಾಲು ನೀಡುವುದಿಲ್ಲ ಅಂತ ಜನರಿಗೆ ತಿಳಿಸುತ್ತಿದ್ದೆ.

   ಅನೇಕ ಕಡೆ #ನೀವು_ಹೇಳುವುದೆಲ್ಲ_ಸರಿ_ಆದರೆ_ತುಮರಿ_ಸೇತುವೆ_ಸಾಧ್ಯವೇ_ಇಲ್ಲ ಅಂತ ಗೇಲಿ ಮಾಡುತ್ತಿದ್ದ ಮುಖ೦ಡರುಗಳು ಸಿಗುತ್ತಿದ್ದರು ಅಲ್ಲಿವರೆಗೆ ಸಾಗರದ ಜನ ಮನದಲ್ಲಿ ತುಮರಿ ಸೇತುವೆ ಅಸಾಧ್ಯ ಎಂಬ ಬಾವನೆ ಮನೆ ಮಾಡಿತ್ತು.

    ತುಮರಿ ಸೇತುವೆಗೆ 19 - ಪೆಬ್ರವರಿ -2018 ಶoಕು ಸ್ಥಾಪನೆ ಆಯಿತು ಈಗ ದಿನಾಂಕ 14- ಜುಲೈ-2025 ಸೋಮವಾರ ಉದ್ಘಾಟನೆ ಆಗಲಿದೆ.

  ಈಗಾಗಲೆ ಶಿವಮೊಗ್ಗ ತಾಳಗುಪ್ಪ ಬ್ರಾಡ್ ಗೇಜ್ ಆಗಿ ರೈಲು ಬರುತ್ತಿದೆ, ಜೋಗ ಅಭಿವೃದ್ಧಿ ಪ್ರಾಧಿಕಾರ ರಚನೆ ಆಗಿ ಯೋಜನೆಯ ನೀಲನಕ್ಷೆ ಪ್ರಕಾರ ಕಾಮಗಾರಿ ನಡೆದಿದೆ, ಹಂದಿಗೋಡು ಕಾಯಿಲೆ ಸಕಾ೯ರದ ಗಮನ ಸೆಳೆದು ಹಿಂದೆ ಮುಖ್ಯಮ೦ತ್ರಿ ಆಗಿದ್ದ ಕುಮಾರಸ್ವಾಮಿ ಹಂದಿಗೋಡು ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಮಾಡಿದ್ದರು ಇನ್ನು ಈ ಕಾಯಿಲೆಗೆ ಕಾರಣ ಸಂಶೋದನೆ ಆಗಬೇಕು, ಔಷದಿ ಕಂಡು ಹಿಡಿಯುವ ಕೆಲಸ ಆಗಬೇಕು.

  ಸಾಗರ ರೈಲು ನಿಲ್ದಾಣದ ನಾಮಕರಣದ ಕೆಲಸ ಮಾತ್ರ ಕಾಣದ ಕೈಗಳಿಂದ ತಡೆ ಹಿಡಿದಿದೆ ಅದಕ್ಕೆ ಮುಕ್ತಿ ಸಿಗಬೇಕಾಗಿದೆ.

   ಈ ಪಾದಯಾತ್ರೆಗೆ ಪ್ರೇರಣೆ ಮಾಜಿ ಶಾಸಕರಾಗಿದ್ದ ಎಲ್.ಟಿ.ಹೆಗ್ಗಡೆಯವರು ಒಮ್ಮೆ ಅವರ ಮನೆಯಲ್ಲಿ ಅವರನ್ನ ಬೇಟಿ ಆದಾಗ ಅವರು ಅವರ ಹದಿಹರಯದ ವಯಸ್ಸಿನಲ್ಲಿ ಸಾಗರ ತಾಲ್ಲೂಕಿನಾಧ್ಯOತ ಪಾದ ಯಾತ್ರೆ ಮಾಡುವ ಆಸೆ ಪಟ್ಟಿದ್ದರಂತೆ ಆದರೆ ಅದು ಈಡೇರಲಿಲ್ಲ ಈಗ ನನಗೆ ವಯಸ್ಸು ಆಯಿತು ಸಾಧ್ಯವಿಲ್ಲ ನಿಮಗೆ ಪ್ರಾಯ ಇದೆ ಒಂದು ಪಾದಯಾತ್ರೆ ಮಾಡಿ ಬಿಡಿ ಎಂದದ್ದು ನನ್ನ ಈ ಪಾದಯಾತ್ರೆಗೆ ಕಾರಣವಾಯಿತು.

  ಸಾಗರ ತಾಲ್ಲೂಕ್ ಅಭಿವೃದ್ಧಿಗಾಗಿ 2004 ರಲ್ಲಿ ಜನ ಜಾಗೃತಿಗಾಗಿ ನನ್ನ 360 ಕಿ.ಮಿ. ಪಾದಯಾತ್ರೆಯ ವಿವರಗಳು
ಶಿವಮೊಗ್ಗ ಜಿಲ್ಲಾ ಅಭಿವೃದ್ಧಿ ರಾಜಕಾರಣದಲ್ಲಿ ಆಸಕ್ತಿ ಇರುವವರಿಗೆ ಉಪಯೋಗ ಆದೀತು.

   ತುಮರಿ ಸೇತುವೆ, ಶಿವಮೊಗ ತಾಳಗುಪ್ಪ ರೈಲು ಮಾಗ೯ ಬ್ರಾಡ್ ಗೇಜ್ ಗೆ ಹಣ ಬಿಡುಗಡೆ, ಸಾಗರ ರೈಲು ನಿಲ್ದಾಣಕ್ಕೆ ಪುನರ್ ನಾಮಕರಣ, ಹಂದಿಗೋಡು ಕಾಯಿಲೆ ಪೀಡಿತರಿಗೆ ಪುನರ್ ವಸತಿ ಮತ್ತು ಜೋಗ ಜಲಪಾತ ಪ್ರವಾಸಿ ತಾಣದ ಅಭಿವೃದ್ದಿಗಾಗಿ 2004ರಲ್ಲಿ ನಾನು ನಡೆಸಿದ ಪಾದಯಾತ್ರ ದಿನಾಂಕ 21- ಜನವರಿ -2004ರಿಂದ 31- ಜನವರಿ -2004 ರ ವರೆಗೆ 11 ದಿನಗಳ ಕಾಲ ಸಾಗರ ತಾಲ್ಲೂಕಿನಾದ್ಯ೦ತ ನಡೆಯಿತು.

  ಸುಮಾರು 360 ಕಿ.ಮಿ. ಆನಂದಪುರಂನ ಮುರುಘಾಮಠದಿOದ (ಆಚಾಪುರ ಗ್ರಾಮ ಪಂಚಾಯತ) ಪ್ರಾರ೦ಬಿಸಿ ಯಡೇಹಳ್ಳಿ, ಆನಂದಪುರಂ, ಹೊಸೂರು ಗ್ರಾಮ ಪಂಚಾಯತ ನಿಂದ ಗೌತಮಪುರ ಗ್ರಾಮ ಪಂಚಾಯತ, ಅಲ್ಲಿ೦ದ ಹಿರೇಬಿಲ ಗುಂಜಿ,ತ್ಯಾಗತಿ೯, ಪಡಗೋಡು, ಕೆಳದಿ, ಮಾಸೂರು, ಹಿರೇನೆಲ್ಲೂರು, ಕಾಗೋಡು, ಸೈದೂರು,ಕಾನ್ಲೆ, ಶಿರವಂತೆ, ಯಡಜಿಗಳೆಮನೆ, ಖಂಡಕಾ, ತಾಳಗುಪ್ಪ, ತಲವಾಟ, ಕಾಗ೯ಲ್, ಜೋಗ, ಅರಲ ಗೋಡು, ಕೋಗಾರ್, ಸಂಕಣ್ಣ ಶಾನು ಬೋಗ, ಹೊಸ ಕೊಪ್ಪ, ತುಮರಿ, ಹುಲಿದೇವರಬನ, ಬೇಸೂರು, ಆವಿನಳ್ಳಿ, ಹಳೆಇಕ್ಕೇರಿ, ಬೀಮನಕೋಣೆ, ಹೆಗ್ಗೋಡು, ಉಳ್ಳುರು ಮಾಗ೯ವಾಗಿ ಸಾಗರ ತಹಸೀಲ್ದಾರ್ ಕಚೇರಿ ತಲುಪಿ ಮನವಿ ನೀಡಿದ ಕಾಯ೯ಕ್ರಮ ಇದಾಗಿತ್ತು.

   ಕಾಗೋಡು ಹೋರಾಟದ ನೇತಾರರಾದ ಗಣಪತಿಯಪ್ಪರ ಮಾಗ೯ದಶ೯ನದಲ್ಲಿ ರೈತ ಸಂಘದ ವಸಂತ ಕುಮಾರರ ಸಹಕಾರದೊಂದಿಗೆ ಸುಮಾರು ನೂರು ಜನ ಗೆಳೆಯರ ತಂಡದೊಂದಿಗೆ ನಮ್ಮ ಪಾದಯಾತ್ರೆ ಯಶಸ್ವಿಯಾಗಿ ನಡೆಯಿತು.

  ಹೀಗೆ ಮಾಜಿ ಶಾಸಕರಾದ ಎಲ್.ಟಿ. ಹೆಗ್ಗಡೆಯವರ ಮಾತಿನ ಪ್ರಭಾವದಿ೦ದ ಅವತ್ತು ನಾನು ಮತ್ತು ನನ್ನ ಸಹಪಾಟಿಗಳು ಅನೇಕ ಪ್ರಗತಿ ಪರರ ಸಹಕಾರದಿಂದ ನಡೆಸಿದ ಪಾದಯಾತ್ರೆಯ ಜನ ಜಾಗೃತೆಯ ಪ್ರಮುಖ ಬೇಡಿಕೆಗಳು ಅನೂಷ್ಟಾನಗೊಳ್ಳುತ್ತಿರುವುದು ಸಂತೋಷ ತಂದಿದೆ.

 ನನ್ನ ಮತ್ತು ನನ್ನ ಗೆಳೆಯರ ಈ ಪಾದಯಾತ್ರೆಯಿಂದ ಇದೆಲ್ಲ ಆಯಿತಾ? ಎಂದರೆ ನನ್ನ ಉತ್ತರ ಖಂಡಿತಾ ಇಲ್ಲ ಅಂತಲೇ ಆದರೆ ಜನರಲ್ಲಿ ತಮ್ಮ ಜನಪ್ರತಿನಿದಿಗಳಲ್ಲಿ ಈ ಬೇಡಿಕೆ ಇಡುವ ಜನಜಾಗೃತಿಯ ಕೆಲಸ ನಮ್ಮ ತಂಡದಿಂದ ಆಯಿತು, ಜನಪ್ರತಿನಿದಿಗಳು ಇದನ್ನು ಈಡೇರಿಸುವ ಭರವಸೆ ನೀಡಿ ಪ್ರಯುತ್ನ ಮಾಡುವ ದಿಶೆಯಲ್ಲಿ ಸಾಗಿದರು.

    ತಾಲ್ಲೂಕಿನ ಅಭಿವೃದ್ದಿಯ ಬೇಡಿಕೆಯ ಒಂದು ಸಣ್ಣ ಕಿಡಿಯನ್ನು ನಾವು ಹಾರಿಸಲು ಯಶಸ್ವಿ ಆದೆವು ಅದು ದೊಡ್ಡ ಜ್ವಾಲೆ ಆಯಿತು ಜನರ ಬೇಡಿಕೆ ಈಡೇರಿತು.

    ಜನಪರ ಹೋರಾಟಗಳೇ ಹಾಗೆ ಆದರೆ ಇದೆಲ್ಲ ಜನಮಾನಸದಲ್ಲಿ ಖಾಯಂ ಆಗಿ ನೆನಪಿನಲ್ಲಿ ಉಳಿಯುವುದಿಲ್ಲ ಉಳಿಯಲೂ ಬಾರದು "ಕೋಟೆ ಕಟ್ಟಿ ಮೆರೆದೊರೆಲ್ಲ ಏನಾದರೂ " ರಾಜಕುಮಾರ್ ಅವರ ಸಿನಿಮಾ ಹಾಡಿನಂತೆ.

Comments

Popular posts from this blog

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂ...