ಇಲ್ಲಿನ ವಿಡಿಯೋ ನೋಡಿ ಸಮವಸ್ತ್ರ ಧರಿಸಿ ಬೆಲ್ಟ್ ಬಕಲ್ ಹಾಕುವಾಗ ಪೋಲಿಸರ ಕಂದಮ್ಮ ರೊಳ್ಳೆ ತೆಗೆದು ಅಳುತ್ತಿದೆ ಆದರೆ ಕತ೯ವ್ಯದ ಕರೆ ತಪ್ಪಿಸಿಕೊಳ್ಳಲಾಗದು ಕರುಳಿನ ಕುಡಿಯ ಪ್ರೀತಿಯ ಆಕ್ಷೇಪಣೆ ನಿರಾಕರಿಸುವುದು ಎಂತು?
ನಾವಾಗಿದ್ದರೆ ಮಗುವಿಗಾಗಿ ಕೆಲಸಕ್ಕೆ ಹೋಗದೇ ಇರಬಹುದು ಆದರೆ ಸಮಾಜ ಸುರಕ್ಷ ಪೋಲಿಸರು?
ಲಾಕ್ ಡೌನ್ ಆದ ಮೇಲೆ ಯಾರು ಸಂಚಾರಿಸದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಪೋಲಿಸರದ್ದೇ ಹಾಗಾಗಿ ಕಾನೂನು ಭಂಗ ಮಾಡುವ ಜನರನ್ನ ನಿಯ೦ತ್ರಿಸಲು ಶ್ರಮ ಪಡುತ್ತಿದ್ದಾರೆ ಆದರೂ ಕೆಲವರು ಪೋಲಿಸರ ಮೇಲೆ ಏರಿ ಹೋಗುತ್ತಿದ್ದಾರೆ!?
ಒoದೆರೆಡು ದಿನದಲ್ಲಿ ಹೊಸ ವ್ಯವಸ್ಥೆಗೆ ಎಲ್ಲರೂ ಸರಿ ಆಗುತ್ತಾರೆ ಆದರೆ ಕೆಲವರಿಗೆ ಎಲ್ಲಿಲ್ಲದ ಅವಸರ.
ಟ್ರಾಪಿಕ್ ಪೋಲಿಸರಿಗೆ ಸಂಚಾರ ನಿಯ೦ತ್ರಣದಲ್ಲಿರುವ ಅನುಭವ ಬೇರೆ ಪೋಲಿಸರಿಗೆ ಕಡಿಮೆ ಈ ಮದ್ಯ ಅವರಿಗೆ ಅಟಕಾಯಿಸುವ ದೂಡಾಡುವ ಕೆಟ್ಟ ಪದ ಪ್ರಯೋಗದ ಬೈಯ್ಗುಳಗಳು ಅವರ ಸಹನೆ ಪರೀಕ್ಷೆ ಆಗಿ ಅತಿರೇಖಕ್ಕೆ ಹೋಗಿರಬಹುದು.
ಕೆಲಸಂದಭ೯ದಲ್ಲಿ ಗೌರವಾನ್ವಿತ ನಾಗರೀಕರು ಸಕಾ೯ರದ ಆದೇಶದ ಅನುಮತಿ ಮೇರೆಗೆ ಅವಶ್ಯ ವಸ್ತು ಖರೀದಿಗೆ ಹೋದಾಗ ಪೋಲಿಸರು ಅವಕಾಶ ನೀಡದೇ ಇರುವುದು ಕೆಲ ಕಡೆ ಅನಾವಶ್ಯಕ ಲಾಟಿ ಬೀಸಿರುವ ಘಟನೆಗಳು ನಡೆದಿದೆ.
ಎನೇ ಇರಲಿ ನಮ್ಮ ನಿಮ್ಮ ಆರೋಗ್ಯಕ್ಕಾಗಿ ನಮಗೆಲ್ಲ ಮನೇಲೆ ಇರುವ೦ತೆ ಮಾಡಿ ತಾವು ಮಾತ್ರ ಹೈ ರಿಸ್ಕ್ ಸೇವೆ ಮಾಡುತ್ತಿರುವ ಪೋಲಿಸರ ಸೇವೆಯನ್ನ ಪ್ರಶಂಸಿಸೋಣ ಅವರ ಸೂಚನೆ ಪಾಲಿಸೋಣ ಎಲ್ಲೋ ಕೆಲವು ಕಡೆ ತಪ್ಪುಗ್ರಹಿಕೆಯಿಂದ ನಡೆದ ಅತಿರೇಖದ ಘಟನೆಗೆ ಕ್ಷಮೆಯೂ ಇರಲಿ.
Comments
Post a Comment