#ಅಬಕಾರಿ ಗುತ್ತಿಗೆದಾರ ಮತ್ತು ಅಬಕಾರಿ ಡಿಸಿ ವಿರುದ್ದ ಲೋಕಾಯುಕ್ತದಲ್ಲಿ ನನ್ನ ಗೆಲುವು ರಾಜ್ಯ ಸಕಾ೯ರಕ್ಕೆ ಕೊಟ್ಯಾ೦ತರ ಹಣ ಮರು ಪಾವತಿ#
#ಅಬಕಾರಿ ಗುತ್ತಿಗೆದಾರರಾಗಿದ್ದ ರಮೇಶ್ ಕುಮಾರ್ ಜಿಲ್ಲೆಯಾದ್ಯಂತ ಜನಪರ ಹೋರಾಟಗಳನ್ನ ಸೋಲಿಸುವ ದಾಖಲೆ ಹೊಂದಿದ್ದಾರೆ#
ಇವರು ಸರಾಯಿ ಗುತ್ತಿಗೆದಾರರಾಗಿದ್ದಾಗ ರೋಹಿದಾಸ್ ನಾಯಕ್ ಎಂಬುವವರು ಅಬಕಾರಿ DC ಆಗಿದ್ದರು ಅವರು ಇವರಿಂದ ಸುಮಾರು 3 ಕೋಟಿ ಬಾಕಿ ಇದ್ದರೂ ಇವರ ಬ್ಯಾಂಕ್ ಠೇವಣಿ ವಾಪಾಸ್ ಮಾಡಿದ್ದರು ಇದರ ವಿರುದ್ಧ ಹೋರಾಟ ಮಾಡಿದವರು ಹತಾಶರಾಗಿದ್ದರು ನಾನು ಇದನ್ನ ಲೋಕಾಯುಕ್ತಕ್ಕೆ ದಾಖಲೆ ಸಮೇತಾ ದೂರು ದಾಖಲಿಸಿದ್ದೆ ಆಗ ವೆಂಕಟಾಚಲಯ್ಯ ಲೋಕಾಯುಕ್ತರು ಈ ವಿಚಾರ ಕಾಗೋಡು ಬಂಗಾರಪ್ಪರಿಗೂ ತಿಳಿದಿದ್ದರೂ ಅವರಿಬ್ಬರು ಅಬಕಾರಿ ಡಿಸಿ ರೋಹಿದಾಸ್ ನಾಯಕರನ್ನ ಸನ್ಮಾನ ಮಾಡಿದರು ಅಂತೂ ಅಂತಿಮವಾಗಿ ನಮ್ಮದೂರು ತನಿಖೆಯಿಂದ ಸಾಬೀತಾಗಿ ಈ ರಮೇಶ್ ರಾವ್ ಹಣ ಪಾವತಿ ಮಾಡಬೇಕಾಯಿತು, ರೋಹಿದಾಸ್ ನಾಯಕ್ ಅದಾಗಲೆ ನಿವೃತ್ತರಾದ್ದರಿಂದ ಪಿಂಚಣಿ ತಡೆಹಿಡಿದಿತ್ತು ಸಕಾ೯ರ.
Comments
Post a Comment