#ಕೊರಾನಾ ಲಾಕ್ ಡೌನ್ - ಲೆಟರ್ ನಂ 1.
(25-ಮಾಚ್೯ - 2020 ರಿಂದ 29 - ಮಾಚ್೯ - 2020)
ಮೊನ್ನೆಯಿ೦ದ ಲಾಕ್ ಡೌನ್ ಆದಾ೦ಗಿ೦ದ ಶಬ್ದಮಾಲಿನ್ಯ ಕಡಿಮೆ ಆಯಿತು ಮನೆಯ ಗಡಿಯಾರದ ಮುಳ್ಳಿನ ಟಿಕ್.. ಟಿಕ್..ಶಬ್ದದ ಚಲನೆ ದಶಕದ ಮೇಲೆ ಕೇಳಿತು! ದೂರದ ಚಚಿ೯ನ ಗOಟೆ ಕೇಳುತ್ತಲೇ ಇರಲಿಲ್ಲ.
ಪರಿಸರದ ಹಕ್ಕಿಗಳ ಕಲರವ ಊರಿ೦ದ ದೂರದ ಜಮೀನಿನಲ್ಲಿ ಮಾತ್ರ ಕೇಳುವುದು ಈಗ ಮನೇಯಲ್ಲೇ ಕೇಳುವಂತಾಯಿತು.
ರಾತ್ರಿ 12 ಆದರೂ ಊರ ರಸ್ತೆ ಗಿಜಿಗಿಜಿ ಆಗಿರುತ್ತಿತ್ತು, ನಮ್ಮ ಮನೆ ನಾಲ್ಕು ರಸ್ತೆ ಸೇರುವ ಯಡೇಹಳ್ಳಿವೃತ್ತದಲ್ಲಿ ಇದೆ, NH 206 ಮತ್ತು ರಾಣಿ ಬೆನ್ನೂರು To ಬೈoದೂರು ರಾ.ಹೆದ್ದಾರಿ ಹಾಗೂ ತೀಥ೯ಹಳ್ಳಿ ಸಂಪಕ೯ ರಸ್ತೆ ರಾತ್ರಿ ಹಗಲು ಸಂಚರಿಸುವ ವಾಹನಗಳಿ೦ದ.
ಈಗ ಸೂಯ೯ ಅಸ್ತ ನಿದಾನ ಸಂಜೆ 7 ರ ನಂತರ ಊರು ರಸ್ತೆ ಬಿಕೋ ಅನ್ನುತ್ತದೆ, ರಾತ್ರಿ ಎಲ್ಲಾ ಸಂಚರಿಸುವವರನ್ನ ಅನುಮಾನದಿಂದ ಎಚ್ಚರಿಸುತ್ತಿದ್ದ ಸಾಕು ನಾಯಿ ಮತ್ತು ಬೀದಿ ನಾಯಿಗಳು ಯಾರದ್ದು ಸಂಚಾರ ಇಲ್ಲದ್ದು ನೋಡಿ ಊಳಿಡುವುದಕ್ಕೆ ವಿರಾಮ ಕೊಟ್ಟಿದೆ.
ಇದರ ಮಧ್ಯೆ ನನ್ನ ಗಮನಕ್ಕೆ ಬಂದದ್ದು ಇದ್ದಕ್ಕಿದ್ದ೦ತೆ ನಮ್ಮ ಊರಲ್ಲಿ ಸೂಯ೯ ಉದಯಿಸಲು ಕಾ ಕಾ ಅನ್ನುತ್ತಿದ್ದ ಕಾಗೆಗಳು ಈಗ ಕಾಣುತ್ತಿಲ್ಲ ಏಕೆ? ಮೊದಲೆಲ್ಲ ತಂಡ ಕಟ್ಟು ಕೊಂಡು ಹಾರಾಟ ಕೂಗಾಟ ಈಗ ಕೇಳಿ ಬರುತ್ತಿಲ್ಲ ಇವತ್ತು ಬಾನುವಾರ ಎಲ್ಲೊ ಒಂದು ಕಾಗೆ ಕೂಗು ಕೇಳಿತು.
ಜನರ ಸಂಚಾರ ಇದ್ದಕ್ಕಿದ್ದ೦ತೆ ಕಡಿಮೆ ಆಗಿ ಶಬ್ದ ಮಾಲಿನ್ಯ ಇಲ್ಲವಾಗಿದ್ದು ಅವುಗಳಿಗೆ ಎಚ್ಚರಿಕೆ ಆಗಿರ ಬೇಕು ಅನ್ನಿಸಿತಾ? ಭಯ ಆಯಿತಾ? ನಿಮ್ಮ ಊರಲ್ಲಿ ಕಾಗೆಗಳ ವತ೯ನೆ ಗಮನಿಸಿ ಬದಲಾಗಿದ್ದರೆ ಪ್ರತಿಕ್ರಿಯಿಸಿ.
Comments
Post a Comment