‘ಸಮಾಚಾರ ಪತ್ರಿಕೆಯ ಕೃಪೆಯಿಂದ.
ಇದು ದಶಕದ ಹೋರಾಟ’: ರಾಘವೇಶ್ವರ ಸ್ವಾಮಿಯಿಂದ ಗೋಕರ್ಣ ಕೈತಪ್ಪಿದ್ದು ಹೇಗೆ?
COVER STORY
‘ಇದು ದಶಕದ ಹೋರಾಟ’: ರಾಘವೇಶ್ವರ ಸ್ವಾಮಿಯಿಂದ ಗೋಕರ್ಣ ಕೈತಪ್ಪಿದ್ದು ಹೇಗೆ?
ದಶಕದ ಹೋರಾಟ ಫಲ ನೀಡಿದ್ದು ಜಿಲ್ಲಾಧಿಕಾರಿ ಒಳಗೊಂಡ ಸಮಿತಿಯ ಕೈಗೆ ಗೋಕರ್ಣ ದೇವಸ್ಥಾನದ ಚುಕ್ಕಾಣಿಯನ್ನು ನೀಡಬೇಕು ಎಂದು ಕರ್ನಾಟಕ ಹೈಕೋರ್ಟ್ ಆದೇಶ ನೀಡಿದೆ. ಇಷ್ಟಕ್ಕೂ ಹೋರಾಟ ಹಾದಿ ಹೇಗಿತ್ತು?
..
ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಇತಿಹಾಸ ಪ್ರಸಿದ್ಧ 'ಶ್ರೀ ಕ್ಷೇತ್ರ ಗೋಕರ್ಣ ಮಹಾಬಲೇಶ್ವರ ದೇವಸ್ಥಾನದ ಆಡಳಿತ ರಾಘವೇಶ್ವರ ಸ್ವಾಮಿ ಪೀಠಾಧಿಪತಿಯಾಗಿರುವ ಶಿವಮೊಗ್ಗ ಜಿಲ್ಲೆಯ ಹೊಸನಗರದ ರಾಮಚಂದ್ರಾಪುರ ಮಠದ ಕೈಗೆ ಬಂದಿತ್ತು. ಇದೀಗ 10 ವರ್ಷ ತುಂಬಲು ಎರಡು ದಿನಗಳಿರುವಾಗ ಮತ್ತೆ ದೇವಸ್ಥಾನದ ಆಡಳಿತ ಸಾರ್ವಜನಿಕರ ಕೈಗೆ ವಾಪಸ್ ಬಂದಿದೆ.
ಹಸ್ತಾಂತರ ವಿವಾದ
ಸದರಿ ಗೋಕರ್ಣದ ಮಹಾಬಲೇಶ್ವರ ದೇವಾಲಯದ ಆಡಳಿತವನ್ನು, 'ಶ್ರೀ ಕ್ಷೇತ್ರ ಗೋಕರ್ಣ ಮಹಾಬಲೇಶ್ವರ ಉಪಾಧಿವಂತ ಮಂಡಳಿ' ನಡೆಸಿಕೊಂಡು ಬರುತ್ತಿತ್ತು. ಈ ಮಂಡಳಿ ‘ಬಾಂಬೆ ಪಬ್ಲಿಕ್ ಟ್ರಸ್ಟ್ ಆಕ್ಟ್’ ಅಡಿಯಲ್ಲಿ ನೋಂದಾವಣೆಯಾಗಿತ್ತು. ಆದರೆ ಈ ಟ್ರಸ್ಟಿನಲ್ಲಿದ್ದ ಐವರಲ್ಲಿ ನಾಲ್ವರು ಕಾಲಾನಂತರ ತೀರಿಕೊಂಡರು. ಕೊನೆಗೆ ಪರಂಪರಾಗತವಾಗಿ ದೇವಾಲಯದ ಆಡಳಿತ ನೋಡಿಕೊಂಡು ಬಂದ ಶ್ರೀ ವಿ.ಡಿ ದೀಕ್ಷಿತರು ಮಾತ್ರ ಉಳಿದುಕೊಂಡಿದ್ದರು. ಮುಂದೆ 2004ರಲ್ಲಿ ದೀಕ್ಷಿತರು ತೀರಿಕೊಂಡಾಗ ದೇವಾಲಯ ಅನಾಥವಾಯಿತು.
ಇದರ ಮಧ್ಯೆ 2003ರಲ್ಲಿ ದೇವಸ್ಥಾನವನ್ನು ಧಾರ್ಮಿಕ ಮತ್ತು ದತ್ತಿ ಇಲಾಖೆಗೆ ನೋಟಿಫೈ ಮಾಡಲಾಗಿತ್ತು. ಹೀಗಿರುವಾಗ ಮುಂದೆ ಬಾಲಚಂದ್ರ ವಿಘ್ನೇಶ್ವರ ದೀಕ್ಷಿತರ ಮುಂದಾಳತ್ವದಲ್ಲಿ ಅಲ್ಲಿನ ಜನರ ಒಟ್ಟುಗೂಡುವಿಕೆಯಿಂದ ಮೂರು ನಾಲ್ಕು ವರ್ಷಗಳ ಕಾಲ ದೇವಾಲಯ ಆಡಳಿತ ಸಾಂಗವಾಗಿಯೇ ನಡೆಯಿತು.
'ಯಥಾಸ್ಥಿತಿ'ಯ ಆದೇಶ
ಈ ಅವಧಿಯಲ್ಲಿ ಮಹಾಬಲೇಶ್ವರ ದೇವಸ್ಥಾನವನ್ನು ಮಠಕ್ಕೆ ಹಸ್ತಾಂತರಿಸುವ ಸುದ್ದಿಗಳು ಓಡಾಡುತ್ತಿತ್ತು. ಈ ಸಂದರ್ಭ ಮಠವನ್ನು ದೇವಸ್ಥಾನಕ್ಕೆ ನೀಡಬಾರದು ಎಂದು 2006ರಲ್ಲಿ ಹೈಕೋರ್ಟ್ ಮೊರೆ ಹೋಗುತ್ತಾರೆ ಬಾಲಚಂದ್ರ ವಿಘ್ನೇಶ್ವರ ದೀಕ್ಷಿತರು. ಆಗ ಕೋರ್ಟ್ 12/12/2006 ಮತ್ತು 19/12/2006ರಂದು 'ದೇವಸ್ಥಾನದ ಆಡಳಿತದಲ್ಲಿ ಯಥಾಸ್ಥಿತಿ ಕಾಪಾಡುವ' ಆದೇಶ ನೀಡಿತ್ತು.
ಹೀಗಿದ್ದೂ ಹಸ್ತಾಂತರ ಪ್ರಕ್ರಿಯೆಗಳು ಚುರುಕು ಪಡೆದುಕೊಂಡವು.
ಮೊದಲಿಗೆ 29/03/2008 ರಂದು ಮಠದ ಕಡೆಯಿಂದ ಧಾರ್ಮಿಕ ದತ್ತಿ ಇಲಾಖೆಗೆ ಪತ್ರ ಬರೆದು ಒಟ್ಟು 8 ಸಂಸ್ಥೆಗಳನ್ನು ಮಠಕ್ಕೆ ನೀಡುವಂತೆ ಕೇಳಿಕೊಂಡಿದ್ದರು. ಇದರಲ್ಲಿ 4 ಮಠ ಹಾಗೂ 4 ದೇವಾಲಯಗಳಿದ್ದವು. ಇವೆಲ್ಲಾ ಒಂದು ಕಾಲದಲ್ಲಿ ಅಧೀನ ಮತ್ತು ಶಾಖಾ ಮಠಗಳು. ಇವೆಲ್ಲಾ ಮಠಕ್ಕೇ ಸೇರಿದ್ದು ಎಂದು ರಾಘವೇಶ್ವರರು ಪತ್ರದಲ್ಲಿ ವಾದಿಸಿದ್ದರು. ವಿಚಿತ್ರವೆಂದರೆ ಇದರಲ್ಲಿ ಗೋಕರ್ಣದ ಮಹಾಬಲೇಶ್ವರ ದೇವಸ್ಥಾನದ ಹೆಸರೇ ಇರಲಿಲ್ಲ.
ಆದರೆ ಮುಂದೆ 12/04/2008 ಮತ್ತು 08/05/2008ರಲ್ಲಿ ಎರಡು ಪ್ರತ್ಯೇಕ ಪತ್ರಗಳನ್ನು ರಾಮಚಂದ್ರಾಪುರ ಮಠದ ಪರವಾಗಿ ಧಾರ್ಮಿಕ ದತ್ತಿ ಇಲಾಖೆಗೆ ಬರೆಯಲಾಗಿತ್ತು. ಇದರಲ್ಲಿ “ದೇವಸ್ಥಾನದ ಆಡಳಿತ ನಿರ್ವಹಣೆ, ಹತೋಟಿಗಳನ್ನು ಶ್ರೀ ಮಠಕ್ಕೆ ಸಂಪೂರ್ಣ ವಹಿಸಿಕೊಟ್ಟು ತನ್ಮೂಲಕ ಶ್ರೀ ಕ್ಷೇತ್ರ ಗೋಕರ್ಣದ ಸರ್ವತೋಮುಖ ಅಭಿವೃದ್ಧಿಗೆ ಶ್ರೀಮಠವು ಶ್ರಮಿಸಲು ಅನುವು ಮಾಡಿಕೊಡಬೇಕೆಂದು ಘನ ಸರಕಾರವನ್ನು ಕೋರಿದೆ,” ಎನ್ನಲಾಗಿತ್ತು.
ಮಠದ ಕಡೆಯಿಂದ ಸರಕಾರಕ್ಕೆ ದೇವಸ್ಥಾನ ನೀಡುವಂತೆ ಬರೆದ ಪತ್ರ
ಮಠದ ಕಡೆಯಿಂದ ಸರಕಾರಕ್ಕೆ ದೇವಸ್ಥಾನ ನೀಡುವಂತೆ ಬರೆದ ಪತ್ರ
ಜಿಲ್ಲಾಧಿಕಾರಿಯಿಂದ ಮನವಿ ತಿರಸ್ಕಾರ
ಇದೇ ಸಮಯಕ್ಕೆ 01/02/2008ರಂದು ‘ಶ್ರೀ ಕ್ಷೇತ್ರ ಗೋಕರ್ಣ ಮಹಾಬಲೇಶ್ವರ ಉಪಾಧಿವಂತ ಮಂಡಳಿಯ ಅಧ್ಯಕ್ಷರು’ ಎಂದು ಹೇಳಿ ಗಣೇಶ್ ಹಿರೆಗಂಗೆ ಎಂಬವರು ದೇವಸ್ಥಾನವನ್ನು ಮಠ (ರಾಮಚಂದ್ರಾಪುರ) ಕ್ಕೆ ವಹಿಸಿಕೊಡುವಂತೆ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರಿಗೆ ಪತ್ರ ಬರೆದಿದ್ದರು. ಸದರಿ ಪತ್ರವನ್ನು ಆಯುಕ್ತರು ಅಭಿಪ್ರಾಯ ಕೋರಿ 20/02/2008ರಲ್ಲಿ ಉತ್ತರ ಕನ್ನಡ ಜಿಲ್ಲಾಧಿಕಾರಿಗೆ ಕಳುಹಿಸಿಕೊಟ್ಟಿದ್ದರು.
ಈ ಕುರಿತು ತಮ್ಮ ಅಭಿಪ್ರಾಯವನ್ನು 1/04/2008ರಲ್ಲಿ ಆಯುಕ್ತರಿಗೆ ತಿಳಿಸಿದ್ದ ಜಿಲ್ಲಾಧಿಕಾರಿಗಳು, “ಶ್ರೀ ರಾಮಚಂದ್ರಾಪುರ ಮಠ ಒಂದು ಸಮಾಜಕ್ಕೆ ಸೇರಿದ ಖಾಸಗಿ ಸಂಸ್ಥೆಯಾಗಿರುತ್ತದೆ. ಹಾಗೂ ಗೋಕರ್ಣ ಶ್ರೀ ಮಹಾಬಲೇಶ್ವರ ದೇವಸ್ಥಾನವು ಸಾರ್ವಜನಿಕ ದೇವಸ್ಥಾನವಾಗಿರುವುದರಿಂದ ಸದರಿ ದೇವಸ್ಥಾನದ ಆಡಳಿತವನ್ನು ಮಠಕ್ಕೆ ವಹಿಸುವುದು ಸೂಕ್ತವಲ್ಲವೆಂದು,” ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಅರ್ಜಿ ತಳ್ಳಿ ಹಾಕಿದ್ದ ಕಂದಾಯ ಇಲಾಖೆ
ಇದಾದ ಬಳಿಕ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರಾಗಿದ್ದ ಶ್ಯಾಮ್ ಭಟ್, 14/05/2008ರಂದು ಅಭಿಪ್ರಾಯ ಕೋರಿ ಕಂದಾಯ ಇಲಾಖೆಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದರು. ಆದರೆ ಈ ಪತ್ರದಲ್ಲಿ ಶ್ಯಾಮ್ ಭಟ್ ಜಿಲ್ಲಾಧಿಕಾರಿಯವರ ಪತ್ರವನ್ನು ಉಪೇಕ್ಷಿಸಿ, ಅವರ ಕೆಳಗಿನ ಸಹಾಯಕ ಆಯುಕ್ತರು ಮತ್ತು ತಹಶೀಲ್ದಾರ್ ವರದಿಯನ್ನು ಪ್ರಸ್ತಾಪಿಸಿದ್ದರು. ರಾಮಚಂದ್ರಾಪುರ ಮಠ ಯಾವುದೋ ಒಂದು ಸಮುದಾಯಕ್ಕೆ ಸೇರಿದ್ದಲ್ಲ ಎಂದು ತಮ್ಮ ವಾದ ಹೂಡಿದ್ದರು (ರಾಮಚಂದ್ರಾಪುರ ಮಠ - ಹಿಂದೂ ಹವ್ಯಕ ಸಂಪ್ರದಾಯದ ಮಠ ಎಂದು ಸ್ವತಃ ರಾಘವೇಶ್ವರರೇ ಮುಜುರಾಯಿ ಇಲಾಖೆಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಹೀಗಿದ್ದೂ ಶ್ಯಾಮ್ ಭಟ್ ಉಲ್ಲೇಖಗಳು ಪ್ರಶ್ನಾರ್ಹವಾಗಿದ್ದವು). ಸಾರ್ವಜನಿಕ ದೇವಸ್ಥಾನಗಳು ಮಠಗಳ ಆಡಳಿತಕ್ಕೆ ಒಳಪಟ್ಟಿರಬಾರದು ಎಂಬುದು ಸರಿಯಲ್ಲ ಎಂಬ ಸಾಲುಗಳನ್ನು ಸೇರಿಸಿ, ಕೊನೆಗೆ ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಅಡ್ವೊಕೇಟ್ ಜನರಲ್ ಅಭಿಪ್ರಾಯ ಪಡೆದು ಈ ಬಗ್ಗೆ ಸರಕಾರದ ಹಂತದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವಂತೆ ಕೋರಿ ಪತ್ರ ಬರೆದಿದ್ದರು.
ಆದರೆ ಕಾನೂನು ಕೋಶ ಹಾಗೂ ರಾಜ್ಯಪಾಲರೂ ದೇವಸ್ಥಾನವನ್ನು ಮಠಕ್ಕೆ ವಹಿಸುವುದಕ್ಕೆ ವಿರೋಧ ವ್ಯಕ್ತಪಡಿಸಿ ಸ್ಪಷ್ಟ ಅಭಿಪ್ರಾಯ ಕಳುಹಿಸಿಕೊಟ್ಟಿದ್ದರು. ಈ ಹಿನ್ನಲೆಯಲ್ಲಿ ಕಂದಾಯ ಇಲಾಖೆ ಕಾರ್ಯದರ್ಶಿ ಸಿ. ಎನ್. ಸೀತಾರಾಮ್ 19/05/2008 ರಂದು ಶ್ಯಾಮ್ ಭಟ್ ಗೆ ಉತ್ತರಿಸಿದ್ದರು. ಸದರಿ ಪತ್ರದಲ್ಲಿ “ಇನ್ನು ಮುಂದೆ ಯಾವುದೇ ದೇವಸ್ಥಾನವನ್ನು ಡಿನೋಟಿಫಿಕೇಷನ್ ಮಾಡುವಂತೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಬಾರದು ಎಂದು ತಮಗೆ ತಿಳಿಯಬಯಸುತ್ತೇನೆ,” ಎಂದು ಖಾರವಾಗಿಯೇ ಹೇಳಿದ್ದರು.
ಸಮುದಾಯ ಇಲಾಖೆ ಪೀಠಾಧಿಕಾರಿ ಎಲ್.ಎಸ್. ಶ್ರೀಕಂಠಯ್ಯ ಅವರೂ ಕಾನೂನು ಕೋಶದ ಮುಖ್ಯಸ್ಥರ ಅಭಿಪ್ರಾಯದಂತೆ ನೀವು ಕಳುಹಿಸಿರುವ ಪ್ರಸ್ತಾವನೆಯನ್ನು ತಿರಸ್ಕರಿಸಲಾಗಿದೆ ಎಂದು 29/05/2008ರಂದು ಪತ್ರ ಬರೆದಿದ್ದರು.
ಕೊನೆಗೆ, ಇದೇ ಅಭಿಪ್ರಾಯದ ಹಿನ್ನಲೆಯಲ್ಲಿ ಶ್ಯಾಮ್ ಭಟ್ ಉತ್ತರ ಕನ್ನಡ ಜಿಲ್ಲಾಧಿಕಾರಿಗೆ 30/06/2008ರಲ್ಲಿ ಪತ್ರ ಬರೆದಿದ್ದರು. ಕಂದಾಯ ಇಲಾಖೆ ಕಾರ್ಯದರ್ಶಿ ಪತ್ರದ ಪ್ರತಿಯನ್ನು ಲಗತ್ತಿಸಿ, “ಸರಕಾರದ ನಿರ್ದೇಶನ ಮತ್ತು ಅಭಿಪ್ರಾಯದ ಹಿನ್ನಲೆಯಲ್ಲಿ ಇನ್ನು ಮುಂದೆ ದೇವಾಲಯಗಳನ್ನು ಅಧಿಸೂಚಿಸುವ ಸಂಸ್ಥೆಗಳ ಪಟ್ಟಿಯಿಂದ ಹೊರತುಪಡಿಸುವ ಬಗ್ಗೆ ಯಾವುದೇ ಪ್ರಸ್ತಾವನೆ ಕಳುಹಿಸಬಾರದೆಂದು ಈ ಮೂಲಕ ತಿಳಿಯಪಡಿಸಿದೆ,” ಎಂದು ಹೇಳಿದ್ದರು.
43 ದಿನಕ್ಕೆ ಉಲ್ಟಾ ಹೊಡೆದ ಸರಕಾರ!:
ಈ ಸಂದರ್ಭ ಇನ್ನೇನು ಸರಕಾರದ ಕೈಯಲ್ಲೇ ಗೋಕರ್ಣ ಉಳಿಯುತ್ತದೆ ಎಂಬ ವಾತಾವರಣ ನಿರ್ಮಾಣವಾಗಿತ್ತು. ಆದರೆ ಸರಕಾರ ಏಕಾಏಕಿ ಉಲ್ಟಾ ಹೊಡೆದು ಬಿಟ್ಟಿತು. ಯಾವ ಕಂದಾಯ ಇಲಾಖೆ ಪೀಠಾಧಿಪತಿ ದೇವಸ್ಥಾನವನ್ನು ಮಠಕ್ಕೆ ಕೊಡಬೇಡಿ ಎಂದು ಹೇಳಿದ್ದರೋ ಅದೇ ಎಲ್.ಎಸ್. ಶ್ರೀಕಂಠಯ್ಯ ಈ ಬಾರಿ ದೇವಸ್ಥಾನವನ್ನು ಪೂರ್ತಿ ಮಠಕ್ಕೆ ಹಸ್ತಾಂತರಿಸುವಂತೆ ಜಿಲ್ಲಾಧಿಕಾರಿಗೆ ಆದೇಶ ನೀಡಿದ್ದರು.
ದೇವಸ್ಥಾನವನ್ನು ಮಠಕ್ಕೆ ಹಸ್ತಾಂತರಿಸುವಂತೆ ಕಂದಾಯ ಇಲಾಖೆ ಪೀಠಾಧಿಕಾರಿ ಜಿಲ್ಲಾಧಿಕಾರಿಗೆ ಬರೆದ ಪತ್ರ
ದೇವಸ್ಥಾನವನ್ನು ಮಠಕ್ಕೆ ಹಸ್ತಾಂತರಿಸುವಂತೆ ಕಂದಾಯ ಇಲಾಖೆ ಪೀಠಾಧಿಕಾರಿ ಜಿಲ್ಲಾಧಿಕಾರಿಗೆ ಬರೆದ ಪತ್ರ
ಕರ್ನಾಟಕ ರಾಜ್ಯಪಾಲರ ಆಜ್ಞೆಯನುಸಾರ ದಿನಾಂಕ 12/08/2008ರಂದು ಶ್ರೀಕಂಠಯ್ಯ ಹೊರಡಿಸಿದ ಕರ್ನಾಟಕ ಸರಕಾರದ ನಡಾವಳಿಯಲ್ಲಿ, “ಗೋಕರ್ಣ ಶ್ರೀ ಮಹಾಬಲೇಶ್ವರ ದೇವಸ್ಥಾನವು ಹಿಂದೆ ಶ್ರೀ ರಾಮಚಂದ್ರಾಪುರ ಮಠದ ಆಡಳಿತ ವ್ಯಾಪ್ತಿಗೆ ಒಳಪಟ್ಟ ಸಂಸ್ಥೆ ಎಂಬ ಮನವಿಯ ಹಿನ್ನಲೆಯಲ್ಲಿ ದೇವಸ್ಥಾನವನ್ನು ಅಧಿಸೂಚಿತ ಸಂಸ್ಥೆಗಳ ಪಟ್ಟಿಯಿಂದ ಕೈಬಿಡಬಹುದೆ ಎಂಬ ಬಗ್ಗೆ ರಾಜ್ಯದ ಅಡ್ವೊಕೇಟ್ ಜನರಲ್ ಅವರ ಅಭಿಪ್ರಾಯ ಪಡೆಯಲಾಗಿ, ಈ ದೇವಸ್ಥಾನವನ್ನು ಅಧಿಸೂಚಿತ ಸಂಸ್ಥೆಗಳ ಪಟ್ಟಿಯಿಂದ ಹೊರತುಪಡಿಸಬಹುದೆಂದು ಅಭಿಪ್ರಾಯ ನೀಡಿರುತ್ತಾರೆ,” ಎಂದು ಉಲ್ಲೇಖಿಸಿರುತ್ತಾರೆ. ಮತ್ತು “ಸದರಿ ದೇವಸ್ಥಾನದ ಸಂಪೂರ್ಣ ಆಡಳಿತವನ್ನು ಶಿವಮೊಗ್ಗ ಜಿಲ್ಲೆ ಹೊಸನಗರ ಶ್ರೀ ರಾಮಚಂದ್ರಾಪುರ ಮಠಕ್ಕೆ ಹಸ್ತಾಂತರಿಸಲು ಉತ್ತರ ಕನ್ನಡ ಜಿಲ್ಲಾಧಿಕಾರಿಕಾರಿಗಳಿಗೆ ಸೂಚಿಸಲಾಗಿದೆ,” ಎಂದು ನಡಾವಳಿಯಲ್ಲಿ ಬರೆಯುತ್ತಾರೆ.
ಹೀಗೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ 12 ಆಗಸ್ಟ್ 2008ರಲ್ಲಿ ರಾಮಚಂದ್ರಾಪುರದ ಕೈಗೆ ಗೋಕರ್ಣದ ಚುಕ್ಕಾಣಿ ಸಿಕ್ಕಿತ್ತು.
ಇದರ ವಿರುದ್ಧ ಸ್ಥಳೀಯ ಜನರು ಮತ್ತು ಗೋಕರ್ಣ ದೇವಸ್ಥಾನದ ಭಕ್ತರು ‘ಬಾಲಚಂದ್ರ ವಿಘ್ನೇಶ್ವರ ದೀಕ್ಷಿತ್, ನರಹರಿ ಕೃಷ್ಣ ಹೆಗಡೆ, ವಿಶ್ವನಾಥ್ ಗೋಪಿ ಮತ್ತು ಇತರರು’ ಹೆಸರಿನಲ್ಲಿ ಕರ್ನಾಟಕ ಹೈಕೋರ್ಟ್‌ಗೆ ಪಿಐಎಲ್ ಸಲ್ಲಿಸಿ ಮತ್ತೆ ದೇವಸ್ಥಾನವನ್ನು ನಮ್ಮ ಸುಪರ್ದಿಗೆ ನೀಡಬೇಕು ಎಂದು ಕೋರಿ ಕೊಂಡಿದ್ದರು.
ಇದೀಗ ದಶಕದ ಹೋರಾಟ ಫಲ ನೀಡಿದ್ದು ಸಾರ್ವಜನಿಕರನ್ನು ಒಳಗೊಂಡ ಸಮಿತಿಯ ಕೈಗೆ ದೇವಸ್ಥಾನದ ಚುಕ್ಕಾಣಿಯನ್ನು ನೀಡಬೇಕು ಎಂದು ಕರ್ನಾಟಕ ಹೈಕೋರ್ಟ್ ಆದೇಶ ನೀಡಿದೆ.
ಅಂತೂ ಇಂತೂ 10 ವಷ೯ದ ನಂತರ ಇವತ್ತು 19 ಸೆಪ್ಟOಬರ್ 2018 ಬುಧವಾರ ಪ್ರಸಿದ್ದ ಗೋಕಣ೯ ದೇವಾಲಯ ಮುಜರಾಯಿ ಇಲಾಖೆ ಸುಪದಿ೯ಗೆ ಬಂದಿದೆ.
ರಾತ್ರೊ ರಾತ್ರಿ ಯಡೂರಪ್ಪನವರು ಹೊಸ ನಗರದ ರಾಮಚಂದ್ರಪುರ ಮಠಕ್ಕೆ ಹಸ್ತಾ೦ತರ ಮಾಡಿದ ಈ ದೇವಾಲಯ ಅನೇಕ ವಿವಾದಕ್ಕೆ ಒಳಗಾಗಿತ್ತು, ಅನೇಕರು ವಿರೋದಿಸಿದ್ದರು.
ದೇವೇಗೌಡರಿಗೆ ಪ್ರದಾನಿಯೋಗ ಇದೆ ಎಂದು ಭವಿಷ್ಯ ನುಡಿದಿದ್ದ ಜೋತಿಷಿ ಡಾ|| ಎನ್.ಎಸ್.ವಿಶ್ವಪತಿ ಶಾಸ್ತ್ರಿಗಳು ಗೋಕಣ೯ ಹಸ್ತಾ೦ತರದಿಂದ ಯಡೂರಪ್ಪರಿಗೆ ಅನೇಕ ಸಮಸ್ಯೆ ಬರಲಿದೆ ಎಂದಿದ್ದರು ಮತ್ತು ರಾಮಚಂದ್ರ ಪುರದ ಸ್ವಾಮಿಗಳಿಗೆ ಗೋಕಣ೯ ತಕ್ಷಣ ವಾಪಾಸ್ ಮಾಡಿ ಇಲ್ಲದಿದ್ದರೆ ನಿಮಗೂ ಕಷ್ಟ ಬರುತ್ತೆ ಅಂದಿದ್ದರು.
ನಂತರ ಯಡೂರಪ್ಪ ಜೈಲಿಗೆ ಮತ್ತು ಸ್ವಾಮಿಗಳು ಎರೆಡೆರಡು ಅತ್ಯಾಚಾರದ ಕೇಸ್ ಲ್ಲಿ ಆರೋಪಿಗಳಾದರು.
ಇವತ್ತು ಕಾರವಾರ ಜಿಲ್ಲಾಧಿಕಾರಿ ರಾಮಚಂದ್ರ ಮಠದ ಉಸ್ತುವಾರಿ ರದ್ದು ಮಾಡಿ ಗೋಕಣ೯ದ ಆಡಳಿತ ವಹಿಸಿಕೊಳ್ಳುವ ಉಚ್ಚ ನ್ಯಾಯಾಲಯ ಮತ್ತು ಸವೊ೯ಚ್ಚ ನ್ಯಾಯಾಲಯದ ತೀಪು೯ ಜಾರಿ ಗೊಳಿಸಿದರು.
ರಾಮಚಂದ್ರಾಪುರ ಮಠಹೊಸನಗರಗೋಕರ್ಣರಾಘವೇಶ್ವರ ಭಾರತೀ ಸ್ವಾಮಿGokarna temple issueraghaveshwara bharathi swamiಗೋಕರ್ಣ ದೇವಸ್ಥಾನ ವಿವಾದ
Comments
Post a Comment