Blog number 1809. ಭಾಗ - 1 . ಸಂದಿಗ್ದತೆಯಲ್ಲಿ ಅರಣ್ಯ ಅಧಿಕಾರಿಗಳು... ವನ್ಯಜೀವಿ ಕಾಯ್ದೆ ಬಗ್ಗೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜನ ಜಾಗೃತಿ ಮೂಡಿಸುವ ಕೆಲಸ ಆಗಬೇಕಾಗಿದೆ, ಅರಿವಿಲ್ಲದ ಮಲೆ ನಾಡಿಗರನ್ನು ಜೈಲಿಗೆ ಕಳಿಸುವುದು ವಿರೋದಿಸ ಬೇಕು, ಸರ್ಕಾರ ಮಧ್ಯ ಪ್ರವೇಶಿಸಲಿ, ಮಲೆನಾಡ ಶಾಸಕರು ಈ ಬಗ್ಗೆ ಜವಾಬ್ದಾರಿ ವಹಿಸಲಿ.
#ಭಾಗ_1
#ನಕಲಿ_ಬಂಗಾರ_ಧರಿಸಿ_ಅಸಲಿ_ಬಂಗಾರ_ಅನ್ನುತ್ತಿದ್ದ_ಕಾಲ_ಇತ್ತು.
#ಈಗ_ಆಸಲಿ_ಹುಲಿಯುಗುರನ್ನು_ನಕಲಿ_ಹುಲಿಯುಗುರು_ಎನ್ನುವ_ಕಾಲ
#ಮಲೆನಾಡಿನ_ಮನೆಗಳಲ್ಲಿರುವ_ಕಾಡು_ಪ್ರಾಣಿಯ_ಕೊಡು_ಚರ್ಮ_ಉಗುರು_ಜೈಲಿಗೆ_ಕಳಿಸುತ್ತದೆ.
#ಹಳ್ಳಿ_ಮನೆಯವರ_ಹಿತಶತ್ರುಗಳೇ_ಮೂಕರ್ಜಿ_ವೀರರು.
#ಸಂದಿಗ್ದತೆಯಲ್ಲಿ_ಅರಣ್ಯ_ಅಧಿಕಾರಿಗಳು.
#ಮಲೆನಾಡಿಗರು_ಎಚ್ಚರವಾಗಿರಿ
#ಮಲೆನಾಡ_ಜನಪ್ರತಿನಿಧಿಗಳು_ಮುಖ್ಯಮಂತ್ರಿಗಳಿಂದ_ಸರ್ಕಾರದ_ಮಟ್ಟದಲ್ಲಿ_ಪರಿಹಾರ_ತರಬಾರದೇಕೆ ?
ಮಲೆನಾಡಿನ ಹಳ್ಳಿಗಳಲ್ಲಿ ಬೀಟೆ ಮರ, ಸಾಗುವಾನಿ ಮರಗಳಿಂದ ಬಾಗಿಲು - ಕಿಟಕಿ- ಮುಚ್ಚಿಗೆ ಮತ್ತು ಪೀಠೋಪಕರಣ ಮಾಡಿಸುವುದು ಆ ಕಾಲದ ಶ್ರೀಮಂತಿಕೆಯ ಪ್ರದರ್ಶನಕ್ಕೆ ಅನಿವಾಯ೯ ಆಗಿತ್ತು.
ಅದರಂತೆ ಆನೆ ದಂತ, ಕಾಡು ಎಮ್ಮೆ ಕೋಡು, ಜಿಂಕೆ - ಕಡದ ಕೋಡುಗಳಿಂದ ಮಾಡಿದ ಟ್ರೋಪಿ ಮನೆ ಪ್ರವೇಶ ದ್ವಾರದಲ್ಲಿ ಅಲಂಕರಿಸಿದರೆ ತಮ್ಮ ಕುಟುಂಬದ ಪ್ರತಿಷ್ಟೆ ಹೆಚ್ಚಾಗುತ್ತದೆ ಎಂಬ ನಂಬಿಕೆ ಇತ್ತು.
ಹುಲಿ ಉಗುರ ಲಾಕೇಟಿನ ಬಂಗಾರದ ಸರ ಕೊರಳಲ್ಲಿ, ಆನೆ ಬಾಲದ ಕೂದಲ ಉಂಗುರ - ಬ್ರೇಸ್ ಲೆಟ್ ಕೈಯಲ್ಲಿ ಧರಿಸುವ ಶೋಕಿ ಈಗಲೂ ಇದೆ.
ದೇವರ ಕೋಣೆಯಲ್ಲಿ ಮತ್ತು ದೇವಾಲಯದ ಗರ್ಭಗುಡಿಯಲ್ಲಿ ವಿಶೇಷವಾಗಿ ಈಶ್ವರ ಲಿಂಗಗಳಿಗೆ ಕಾಡೆಮ್ಮೆ ಕೋಡಿನಿಂದ ರುದ್ರಾಭಿಶೇಕ ಮಾಡುವ ಪುರಾತನ ಕಾಲದಿಂದಲೂ ನಡೆದು ಬಂದ ಪೂಜಾ ಪದ್ಧತಿ ಇದೆ.
ನಮ್ಮ ಜಿಲ್ಲೆಯ ರಾಮಚಂದ್ರಾಪುರ ಮಠದಲ್ಲಿ ಪುರಾತನವಾದ ಆನೆ ದಂತದ ಸಿಂಹಾಸನದಲ್ಲಿ ಅಲ್ಲಿನ ಸ್ವಾಮಿಗಳು ವಿರಾಜಮಾನರಾಗಿ ದರ್ಶನ ನೀಡುತ್ತಾರೆ.
ಆದರೆ ಇವರಾರಿಗೂ ವನ್ಯಜೀವಿ ಕಾಯ್ದೆ ಇವತ್ತಿಗೂ ಗೊತ್ತಿಲ್ಲ ಮತ್ತು ತಮ್ಮ ತಮ್ಮ ಮನೆಗಳಲ್ಲಿ ಇಂತವು ಇದ್ದರೆ ತಮ್ಮ ವ್ಯಾಪ್ತಿಯ ಅರಣ್ಯ ಅಧಿಕಾರಿಗಳಲ್ಲಿ ಘೋಷಣೆ ಮಾಡಿಕೊಳ್ಳಬೇಕೆಂಬ ಆದೇಶ ಕೂಡ ಅವರಿಗೆ ಅರಿವಿಲ್ಲ.
ಕೆಲ ದಿನಗಳ ಹಿಂದೆ ಬಿಗ್ ಬಾಸ್ ಸ್ಪರ್ದಿಯಾಗಿದ್ದ ಹಳ್ಳಿಕಾರ್ ಸಂತೋಷ್ ರನ್ನು ಅರಣ್ಯ ಅಧಿಕಾರಿಗಳು ಹುಲಿ ಉಗುರು ದರಿಸಿದ ಕಾರಣದಿಂದ ರಾಜ್ಯದಾದ್ಯಂತ ವನ್ಯಜೀವಿ ಕಾಯ್ದೆ ಬಗ್ಗೆ ಸಂಚಲನ ಮೂಡಿತು.
ಈ ಸಂದರ್ಭದಲ್ಲಿಯೇ ಹಳ್ಳಿ ಹಳ್ಳಿಗಳಲ್ಲಿ ವೈಯಕ್ತಿಕ ದ್ವೇಷ ಸಾಧನೆಗಾಗಿ ತಮ್ಮ ಅಂದು - ಬಂದುಗಳು ಮತ್ತು ಗೆಳೆಯರ ನಡು ಮನೆಯಲ್ಲಿ ತಲೆ -ತಲಾಂತರದಿಂದ ತಮ್ಮ ಪ್ರತಿಷ್ಟತೆ ಹಾಗೂ ಶ್ರೀಮಂತಿಕೆ ಪ್ರದರ್ಶನಕ್ಕಾಗಿ ಇರಿಸಿದ್ದ ವನ್ಯ ಪ್ರಾಣಿಗಳ ಟ್ರೋಪಿಯ ವಿಡಿಯೋ ಮಾಡಿ ಮೇಲ್ಮಟ್ಟದ ಅರಣ್ಯ ಅಧಿಕಾರಿಗಳಿಗೆ ದೂರು ನೀಡಿ ಅಲ್ಲಿಂದ ಸ್ಥಳಿಯ ಅರಣ್ಯ ಅಧಿಕಾರ ಮೇಲೆ ಒತ್ತಡ ತಂದು ಅವರನ್ನು ಜೈಲಿಗೆ ತಳ್ಳುವ ಕೆಲಸ ನಡೆಯುತ್ತಿದೆ.
ಸ್ಥಳಿಯ ಅರಣ್ಯ ಅಧಿಕಾರಿಗಳಿಗೆ ಇದು ಬಿಸಿ ತುಪ್ಪ ಆಗಿದೆ ಕ್ರಮ ತೆಗೆದುಕೊಂಡರೆ ಜನರ ವಿರೋದ ಸುಮ್ಮನಿದ್ದರೆ ಕಾಯ್ದೆಯ ಜಾರಿಯಲ್ಲಿ ಕರ್ತವ್ಯ ಲೋಪ.
ಇದಕ್ಕೆ ಉದಾಹರಣೆ ತೀರ್ಥಹಳ್ಳಿ ತಾಲ್ಲೂಕಿನ ಹೆಣೆಗೆರೆ ಕಟ್ಟೆಯ ಪ್ರಮುಖರಾದ ಪ್ರಸನ್ನರ ಮನೆಯಲ್ಲಿ ದೊರೆತ ವನ್ಯ ಜೀವಿಗಳ ಕೊಂಬುಗಳು ಮತ್ತು ಶ್ರೀಗಂದದ ಬಗ್ಗೆ ಮಾಹಿತಿ ನೀಡಿದ ದೂರುದಾರನ ದೂರು ಆದರಿಸಿ ಪರಿಶೀಲನೆ ನಡೆಸಿ ಅವುಗಳನ್ನು ವಶಪಡಿಸಿಕೊಂಡು ಅಕ್ರಮ ಎಸಗಿದ ಮನೆಯೊಡಯನನ್ನು ಬಂದಿಸಲು ಮುಂದಾದ ACF ಸುರೇಶ್ ರನ್ನು ತಡೆದ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರರ ವಿಡಿಯೋಗಳು ವೈರಲ್ ಆಗಿದೆ.
ಇಲ್ಲಿ ಅರಣ್ಯ ಅಧಿಕಾರಿ ಸುರೇಶರದ್ದು ಇಲಾಖಾ ಕಾನೂನು ಪ್ರಕಾರ ಸರಿ ಹಾಗೆಯೇ ಜನಪ್ರತಿನಿಧಿ ಆರಗ ಜ್ಞಾನೇಂದ್ರರ ವಿರೋದವೂ ಸರಿ ಇಲ್ಲಿ ಮೂಕರ್ಜಿ ಬರೆದು ವೈಯಕ್ತಿಕ ಹಗೆ ಸಾಧಿಸಲು ಹೊರಟ ವಿಕೃತ ಮನಸ್ಸಿನ ಹಿತ ಶತ್ರುವಿನ ಉದ್ದೇಶ ಪರಿಸರ ಸಂರಕ್ಷಣೆ ಆಗಿರುವುದಿಲ್ಲ ಕೇವಲ ದ್ವೇಷ ಎಂಬುದು ಗಮನಿಸ ಬೇಕು.
ಜನ ಸಾಮಾನ್ಯರಿಗೆ ವನ್ಯಜೀವಿ ಕಾಯ್ದೆ ಬಗ್ಗೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜನ ಜಾಗೃತಿ ಮೂಡಿಸುವ ಕೆಲಸ ಆಗಬೇಕು, ಅರಿವಿಲ್ಲದೆ ಅನುಮತಿ ಇಲ್ಲದೆ ವನ್ಯಪ್ರಾಣಿಗಳ ಅವಶೇಷ ಹೊಂದಿದ್ದರೆ ಅದನ್ನು ವಶಪಡಿಸಿಕೊಳ್ಳಲಿ ಆದರೆ ಜೈಲಿಗೆ ಕಳಿಸುವ ಕ್ರಮ ಬದಲಾಗಿ ನೋಟೀಸು ನೀಡಿ ವಿಚಾರಣೆಗೆ ಹಾಜರಾಗುವಂತೆ ತಿಳುವಳಿಕೆ ನೀಡುವ ಕ್ರಮ ಜಾರಿ ಮಾಡುವ ಕೆಲಸ ಸರ್ಕಾರ ತುರ್ತಾಗಿ ಮಾಡಬೇಕಾಗಿದೆ ಈ ಕೆಲಸ ಮಲೆನಾಡಿನ ಶಾಸಕರಿಗೆ ಮಾತ್ರ ಸಾಧ್ಯವಿದೆ.
ಇದೆಲ್ಲ ನೋಡಿ ಆದರೂ ತಕ್ಷಣ ಮಲೆನಾಡಿಗರು ನಿಮ್ಮ ನಿಮ್ಮ ಮನೆಯಲ್ಲಿ ಇನ್ನೊಮ್ಮೆ ಪರಿಶೀಲಿಸಿ, ಮನೆ- ಕೊಟ್ಟಿಗೆ ಆಟ್ಟಗಳಲ್ಲಿ ನಿಮ್ಮ ಪೂರ್ವಿಕರು ಇಟ್ಟಿರಬಹುದಾದ ಇಂತಹ ವನ್ಯಪ್ರಾಣಿ ಅವಶೇಷಗಳನ್ನು ತೆಗೆದು ಹಾಕಿ ಬಿಡಿ ಅಂತವುಗಳು ಇದ್ದರೆ ನಿಮ್ಮ ಹಿತಶತ್ರುಗಳಿಂದ ನೀವು ಜೈಲು ವಾಸ ಮಾಡಬೇಕಾದೀತು ಎಚ್ಚರ!!
#ಮಲೆ_ನಾಡಿನ_ಜನಪ್ರತಿನಿಧಿಗಳಾದ_ಶಾಸಕರು_ಸಂಸದರು_ಮುಖ್ಯಮಂತ್ರಿಗಳನ್ನು_ತಕ್ಷಣ_ಬೇಟಿಮಾಡಿ
#ಇದಕ್ಕೊಂದು_ಪರಿಹಾರ_ಕಂಡು_ಹಿಡಿಯಲು_ವಿನಂತಿ.
ನಾಳೆ ಬಾಗ - 2 .
Comments
Post a Comment