https://youtu.be/GNpyBOkOkYk?feature=shared
#ತ್ಯಾಗರ್ತಿ_ಹನುಮಂತಪ್ಪ
#ನೂತನ_ಗೃಹ_ರೈತಬಂಧು_ಆಹ್ವಾನ_ಪತ್ರಿಕೆ_ನೀಡಲು_ಬಂದಿದ್ದರು.
#ತ್ಯಾಗರ್ತಿಯ_ಮೂಲ_ನಿವಾಸಿಗಳು_ಇವರ_ವಂಶಸ್ಥರು.
#ಅರವತ್ತೊಂಬತ್ತರ_ವಯೋಮಾನದ_ಚಿರ_ಯುವಕ
#ಬಿಕಾಂ_ಪದವೀದರ_ಎರೆಡು_ಅವಧಿ_ತಾಲೂಕ್_ಪಂಚಾಯತ್_ಸದಸ್ಯರು.
#ಪ್ರೋಪೆಸರ್_ನಂಜುಂಡಸ್ವಾಮಿ_ರೈತಸಂಘದ_ಜೈಲ್_ಭರೋ_ಹೋರಾಟದಲ್ಲಿ_ಜೈಲಿಗೆ_ಹೋದವರು.
ತ್ಯಾಗರ್ತಿ ಹನುಮಂತಪ್ಪ ಸಾಗರ ತಾಲೂಕಿನ ವಿಶಿಷ್ಟ ಸಮಾಜ ಸೇವಕರು ಇವರು ರಾಜಕಾರಣದಲ್ಲಿ ಎರೆಡು ಅವಧಿ ತಾಲೂಕು ಪಂಚಾಯತ್ ಸದಸ್ಯರು ಆಗಿದ್ದವರು ಇವರ ಪತ್ನಿ ಎಪಿಎಂಸಿ ಸದಸ್ಯರಾಗಿದ್ದರು.
ಈ ಕ್ಷೇತ್ರದಲ್ಲಿ ಇವರ ಜಾತಿಯವರದ್ದು ಇವರದ್ದೊಂದೇ ಅಣ್ಣ ತಮ್ಮಂದಿರ ಕುಟುಂಬ ಮಾತ್ರ ಆದರೆ ಇವರು ಚುನಾವಣೆಯಲ್ಲಿ ಗೆಲ್ಲುವುದು ಇವರ ಸಮಾಜ ಸೇವೆಯಿಂದ ಆದ್ದರಿಂದ ಇವರನ್ನು ಸಾಗರ ತಾಲೂಕಿನ ವಿಶಿಷ್ಟ ಸಮಾಜ ಸೇವಕರೆಂದೇ ಕರೆಯುವುದು ಸೂಕ್ತ.
1978ರಲ್ಲಿ ಶಿವಮೊಗ್ಗದ ನ್ಯಾಷನಲ್ ಕಾಲೇಜ್ ನಲ್ಲಿ ಬಿಕಾಂ ಪದವಿ ಪಡೆದರು ಆಗ ವಿದ್ಯಾರ್ಥಿ ನಾಯಕರಾಗಿದ್ದ ಅಯನೂರು ಮಂಜುನಾಥರ ಸಹಯೋಗಿಗಳು ಇವರು.
ಆ ಕಾಲದಲ್ಲಿ ನಾಲ್ಕು ರೂಪಾಯಿ ಅಂಚೆ ಚೀಟಿ ಅಂಟಿಸಲು ಸಾಧ್ಯವಾಗದ ಬಡತನ ಇವರಿಗೆ ಸಿಗಲಿದ್ದ ಸರಕಾರಿ ಉದ್ಯೋಗ ಕೈ ತಪ್ಪುತ್ತದೆ.
1980 ರಲ್ಲಿ ಓರ್ವ ರೈತ ಮಹಿಳೆ 10 ಚೀಲ ಬತ್ತ ಸಾಲವಾಗಿ ನೀಡಿದ್ದೇ ಇವರಿಗೆ 800 ರೂಪಾಯಿ ಬಂಡವಾಳ ಆಗಿ ಸಣ್ಣ ಅಂಗಡಿಯಿಂದ ಪ್ರಾರಂಭವಾದ ಇವರ ಜೀವನದ ಹಾದಿ ಈಗ ಅಡಿಕೆ ತೋಟ, ತ್ಯಾಗರ್ತಿಗೆ ದೊಡ್ಡ ದಿನಸಿ ಅಂಗಡಿ, ಬಾರ್ & ರೆಸ್ಟೊರಂಟ್, ಟ್ರ್ಯಾಕ್ಟರ್ ಇತ್ಯಾದಿ ಹೊಂದಿರುವ ಈ ಭಾಗದ ಉದ್ಯಮಿ ಆಗಿದ್ದಾರೆ.
1995 - 2000 ಇಸವಿಯಲ್ಲಿ ನಾನು ಆನಂದಪುರ೦ ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದಾಗ ತ್ಯಾಗರ್ತಿ ಗ್ರಾಮ ಪಂಚಾಯತಿ ನನ್ನ ಕ್ಷೇತ್ರವಾಗಿತ್ತು, ನನ್ನ ಯಾವುದೇ ಚುನಾವಣೆಯಲ್ಲಿ ಹನುಮಂತಪ್ಪ ನನ್ನ ಪರವಾಗಿರಲಿಲ್ಲ ಆದರೆ ನನ್ನ ನ್ಯಾಯದ ಪರವಾದ ಎಲ್ಲಾ ಹೋರಾಟಗಳಿಗೆ ಮಾತ್ರ ಹನುಮಂತಪ್ಪ ಬೆಂಬಲಿಸಿದ್ದರು.
ಆಗ ಈಗಿನಂತೆ ಪ್ರತಿ ಊರಲ್ಲಿ ಶ್ಯಾಮಿಯಾನ ಮೈಕ್ ಇರುತ್ತಿರಲಿಲ್ಲ ಆಗಿನ ಹೋರಾಟಗಳಿಗೆ ಅದು ಅವಶ್ಯವೂ ಆಗಿರಲಿಲ್ಲ ಆದರೆ ಆ ದಿನಗಳಲ್ಲಿ ನಮ್ಮ ಪಾದಯಾತ್ರೆ - ಎತ್ತಿನಗಾಡಿ ಯಾತ್ರೆ - ಯಾವುದೋ ಜನಪರ ಹೋರಾಟದ ಸಭೆ ತ್ಯಾಗರ್ತಿ ವೃತ್ತದಲ್ಲಿ ಇದ್ದಾಗ ಅಲ್ಲಿ ಭಾಷಣ ಮಾಡಲು ಒಂದು ಟೇಬಲ್ ಖುರ್ಚಿ-60 ಕ್ಯಾಂಡಲ್ ಲೈಟ್ ಮತ್ತು ವೈರ್ ಸ್ವತಃ ತಮ್ಮ ಮನೆಯಿಂದ ತಂದು ಹಾಕಿ ಹೋಗುತ್ತಿದ್ದವರು ಈ ತ್ಯಾಗರ್ತಿ ಹನುಮಂತಪ್ಪ ಇದನ್ನ ಮರೆಯುವಂತಿಲ್ಲ.
ಈ ಭಾಗದ ಬಡವರ ಬಂದು ಈ ಹನುಮಂತಪ್ಪ, ಇಲ್ಲಿನ ಜನ ಸಾಮನ್ಯರ ಕಷ್ಟದಲ್ಲಿ ಬಾಗಿ ಆಗಿ ಅದರ ಪರಿಹಾರಕ್ಕೆ ಕಾರಣರಾಗುತ್ತಿದ್ದವರು ಈಗಲೂ ಇದನ್ನು ಮುಂದುವರಿಸಿಕೊಂಡು ಬಂದಿದ್ದಾರೆ.
ಮಾತಾಡಲು ಪ್ರಾರಂಬಿಸಿದರೆ ತಡೆ ಇಲ್ಲದ ಮಾತುಗಳು ಹೊಸಬರಿಗೆ ಅರ್ಥ ಆಗುವುದಿಲ್ಲ ಆದರೆ ಇವರನ್ನು ಬಲ್ಲವರಿಗೆ ಇವರು ಅರ್ಥವಾಗುತ್ತಾರೆ.
ಸಣ್ಣ ಸಮುದಾಯವಾದ ಕ್ಷೌರಿಕ ಸಮಾಜದಿಂದ ಬಂದು ಇಡೀ ಹೋಬಳಿಯಲ್ಲಿ ತನ್ನ ಜನಪರವಾದ ಶಕ್ತಿ ಇಟ್ಟು ಕೊಂಡಿರುವ ತ್ಯಾಗರ್ತಿ ಹನುಮಂತಪ್ಪ #ಬಡವರ_ಬಂಧು ಇವರ ಹೊಸ ಮನೆಯ ಹೆಸರೂ #ರೈತಬಂಧು ಇದೇ ದಿನಾಂಕ 24- ನವೆಂಬರ್ -2023ರ ಶುಕ್ರವಾರ ಹೊಸ ಮನೆಯ ಗ್ರಹ ಪ್ರವೇಶದ ಬೋಜನದ ಆಹ್ವಾನ ನೀಡಲು ಇವತ್ತು ಬಂದಿದ್ದರು.
Comments
Post a Comment