Blog number 1828. ಶೃಂಗೇರಿಯಲ್ಲಿಗುರುಮೂರ್ತಿ ಜೋಗಿಬೈಲು ಅವರ BEAS ಸಂಸ್ಥೆ ಪ್ರಾರಂಭವಾಗಿದೆ, ಇವರ ಪುತ್ರ ಚಿತ್ರಿಕರಣ ಮಾಡಿದ ದೊಂದಿಯಲ್ಲಿ ಅರಳಿದ ದೀಪಾವಳಿ.
#ಶೃಂಗೇರಿಯ_ಜೋಗಿಬೈಲಿನ_ಗುರುಮೂರ್ತಿ_ಅವರ_ಪೋಸ್ಟ್
#ಇವರ_ಮಗ_ಸೊಸೆ_ದೊಂದಿಯಲ್ಲಿ_ಅರಳಿಸಿದ_ದೀಪಾವಳಿ
#ದೊಂದಿಯ_ದೀಪಾವಳಿ_ಚಿತ್ರ_ಅದ್ಬುತವಾಗಿದೆ.
#ಜೋಗಿಬೈಲಿನಲ್ಲಿ_ಬಯೋಡೈವರ್ಸಿಟಿ_ಎನ್ವಿರಾನ್ಮೆಂಟ್_ಅಂಡ್_ಅಗ್ರಿಕಲ್ಚರ್_ಸ್ಟಡಿ_ಸೆಂಟರ್_BEAS_ಪ್ರಾರಂಬಿಸಿದ್ದಾರೆ
ದೀಪಾವಳಿ ಶುಭಾಷಯದ ನೂರಾರು ದೀಪದ ಚಿತ್ರಗಳ ಸಾಲು ಸಾಲು ದೀಪಾವಳಿ ಹಬ್ಬದಲ್ಲಿ ನೋಡುತ್ತೇವೆ ಅದರಲ್ಲಿ ಗುರುಮೂರ್ತಿ ಜೋಗಿಬೈಲು ಅವರು ಪೋಸ್ಟ್ ಮಾಡಿದ #ದೀಪಾವಳಿ ಚಿತ್ರ ವಿಶೇಷದ್ದು.
ದೊಂದಿಯನ್ನು ಇವರ ಸೊಸೆ "ದೀಪಾವಳಿ' ಅಕ್ಷರ ಆಕೃತಿಯಲ್ಲಿ ತಿರುಗಿಸಿದ್ದಾರೆ ಇವರ ಮಗ 20 ಸೆಕೆಂಡ್ ಎಕ್ಸ್ ಪ್ಲೋಷರ್ ನಲ್ಲಿ ಕ್ಯಾಮೆರಾದಲ್ಲಿ ಸೆರೆಹಿಡಿದದ್ದೆಂದು ಅವರು ಬರೆದಿದ್ದಾರೆ.
ಮಲೆನಾಡಿನ ಶೃಂಗೇರಿಯ ಕಾಡಿನಲ್ಲಿರುವ ಇವರ ಕೃಷಿ ಭೂಮಿಯಲ್ಲಿ ದೀಪಾವಳಿ ಹಬ್ಬದಲ್ಲಿ ದೊಂದಿಯಲ್ಲಿ ದೀಪಾವಳಿ ಅರಳಿಸಿದ ಚಿತ್ರ ಮಾತ್ರ ವಿಶೇಷವಾಗಿದೆ.
ಗುರುಮೂರ್ತಿ ಜೋಗಿಬೈಲು ಅವರನ್ನು ಎರೆಡು ವರ್ಷದ ಹಿಂದೆ ನನ್ನ ಕಛೇರಿಯಲ್ಲಿ ಅವರ ಪ್ರಾಣ ಮಿತ್ರ ಶೃಂಗೇಶ್ ಪರಿಚಯ ಮಾಡಿ ಕೊಟ್ಟಿದ್ದರು, ಇವರಿಬ್ಬರೂ ಕೆಲವು ತತ್ವ ಸಿದ್ಧಾಂತಗಳನ್ನು ವಿದ್ಯಾರ್ಥಿ ದೆಸೆಯಿಂದ ಅನುಸರಿಸಿದ್ದು, ಪ್ರಕೃತಿ - ಪರಿಸರದ ಕಾಳಜಿ, ಸಮಾಜದ ಆಸಮಾನತೆ ವಿರುದ್ಧ ಧ್ವನಿಯಾಗಿದ್ದವರು, ಬಹುಶಃ ಜನಪರ ಹೋರಾಟದ ಅಗ್ನಿ ಪರ್ವತದ ಬಾವಿಯಲ್ಲಿಳಿದು ಸುರಕ್ಷಿತವಾಗಿ ಬಂದವರು.
ಈಗ ಗುರುಮೂರ್ತಿ ತಮ್ಮ ಜೋಗಿಬೈಲು ನಲ್ಲಿ BEAS ಎಂಬ ಬಯೋಡೈವರ್ಸಿಟಿ - ಎನ್ವಿರಾನ್ಮೆಂಟ್ ಅಂಡ್ ಅಗ್ರಿಕಲ್ಚರ್ ಸ್ಟಡಿ ಸೆಂಟರ್ ಪ್ರಾರಂಬಿಸಿದ್ದಾರೆ, ಈ ಸಂಸ್ಥೆ ಪಶ್ಚಿಮ ಘಟ್ಟ ಪ್ರದೇಶದಲ್ಲಿನ ಶಾಲಾ ಮಕ್ಕಳಿಗೆ ಪರಿಸರದ ಬಗ್ಗೆ ವಿಶೇಷವಾಗಿ ಜನ ಜಾಗೃತಿ ಅಭಿಯಾನ ಮಾಡುತ್ತಿದ್ದಾರೆ, ಮುಂದಿನ ದಿನಗಳಲ್ಲಿ ಈ ಸಂಸ್ಥೆ ಈ ಪ್ರದೇಶದ ರೈತ ಸಮೂದಾಯದ ಜೊತೆ ಪರಿಸರ ಕೃಷಿ ಬಗ್ಗೆ ಸಮಾಲೋಚನೆ ನಡೆಸಲಿದೆ.
ಮಲೆನಾಡ ಪರಿಸರದಲ್ಲಿ ದೀಪಾವಳಿ ಹಬ್ಬದ ದೊಂದಿಯಿಂದ ಅರಳಿಸಿದ ದೀಪಾವಳಿ ಸುಂದರವಾಗಿ ಕ್ಯಾಮೆರಾದಲ್ಲಿ ಸೆರೆ ಹಿಡಿದ ಚಿತ್ರ ನೋಡಿ.
Comments
Post a Comment