https://youtu.be/-SkM6_TwD0Q?feature=shared
#ನನ್ನ_ಚೆಸ್_ಮಾಸ್ಟರ್_ಪೆಲಿಸಣ್ಣ
#ಈಗಿನ_ತಲೆಮಾರಿನವರಿಗೆ_ಅಷ್ಟಾಗಿ_ಗೊತ್ತಿಲ್ಲ.
#ಆಕಾಲದಲ್ಲಿ_ಬುದ್ಧಿವಂತ_ಮತ್ತು_ಜನಾನುರಾಗಿ_ಯುವಕ.
ದೀಪಾವಳಿ ಹಬ್ಬದ ಶುಭ ಹಾರೈಸಲು ನನ್ನ ಚೆಸ್ ಮಾಸ್ಟರ್ ಪೆಲಿಸಣ್ಣ ಬಂದಿದ್ದರು , ಇವರ ಪೂರ್ಣ ಹೆಸರು ಪೆಲಿಕ್ಸ್ ಡಿಸೋಜ, ಬಂದಾಗ ಇವರಿಗೆ ನೂರು ಐವತ್ತು ಗುರು ದಕ್ಷಿಣೆ ನೀಡುತ್ತೇನೆ ಇವರು ಈ ಹಣ ಬೇರಾವುದಕ್ಕೂ ಹಾಳು ಮಾಡದೇ ಕ್ವಾಟರ್ ಏರಿಸಲು ಬಳಸುತ್ತಾರೆ😄.
ಹಾಗಂತ ಪೆಲಿಸಣ್ಣನವರು 1994 ರಲ್ಲಿ ಸೀರಿಯಸ್ ಆಗಿ ಆಸ್ಪತ್ರೆಗೆ ಸೇರಿಸಿದ್ದಾಗ ಡಾಕ್ಟರ್ ಹೇಳಿದ್ದು ಇವರು ಕುಡಿತ ಬಿಡದಿದ್ದರೆ ಬದುಕುವುದಿಲ್ಲ ಅಂತ .... ಆದರೆ ಪೆಲಿಸಣ್ಣ ಅವತ್ತಿಂದ ಇವತ್ತಿನವರೆವಿಗೂ ಕುಡಿಯುವುದು ನಿಲ್ಲಿಸದೇ ಭರಪೂರ ಸೇವಿಸುತ್ತಾ 30 ವರ್ಷ ಜಾಸ್ತಿ ಆರೋಗ್ಯವಾಗಿ ಬದುಕಿದ್ದಾರೆ ವೈದ್ಯರಿಗೆ ಸವಾಲು ಹಾಕಿದ್ದಾರೆ.
ಮೊನ್ನೆ ಬಂದವರು ನಾನು ಬರೆದ ಪುಸ್ತಕ ಅವರಿಗೆ ಕೊಟ್ಟಿಲ್ಲ ಎಂದು ನೆನಪು ಮಾಡಿ ಒಯ್ದಿದ್ದಾರೆ, ಮುಂದಿನ ತಿಂಗಳು 25 ಕ್ಕೆ ಕ್ರಿಸ್ಮಸ್ ಹಬ್ಬ ಅವತ್ತು ನನ್ನ ಕ್ರೈಸ್ತ ಅನುಯಾಯಿ ಹಿರಿಯ ಮಿತ್ರರಿಗೆ ವೈನ್ - ಕೇಕ್ ಮತ್ತು ವಿಸ್ಕಿ ಬಾಟಲ್ ಪ್ರತಿ ವರ್ಷದಂತೆ ಉಡುಗೊರೆ ನೀಡುವುದನ್ನು ಮರೆಯದಂತೆ ಪೆಲಿಸಣ್ಣ ನೆನಪು ಮಾಡಿ ಹೋದರು.
ಅವರ ನನ್ನ ಬೇಟಿಯ ವಿಡಿಯೋ ಇಲ್ಲಿದೆ.
Comments
Post a Comment