Skip to main content

Blog number 1819. ಮಗಳು ಅಳಿಯರ ನಾಲ್ಕನೆ ವಿವಾಹ ವಾರ್ಷಿಕೋತ್ಸವದ ದಿನ ಈ ನೆನಪಿನ ಬರಹ.

#ಇವತ್ತಿಗೆ_ನಾಲ್ಕು_ವರ್ಷದ_ಹಿಂದೆ_ನನ್ನ_ಮಗಳ_ವಿವಾಹ_ಮಹೋತ್ಸವ_ನಡೆದಿತ್ತು.

#ಮಗಳು_ಅಳಿಯರಿಗೆ_ನಾಲ್ಕನೆ_ವಿವಾಹ_ವಾರ್ಷಿಕೋತ್ಸವ_ಇವತ್ತು

#ಅವತ್ತು_ನನ್ನ_ದೇಹದ_ತೂಕ_140_ಕಿಲೊ

#ಮುಖ_ತಾಮ್ರದ_ತಪ್ಪಲೆ_ಕುತ್ತಿಗೆ_ಕಾಣುತ್ತಿರಲಿಲ್ಲ

#ಅವತ್ತಿನ_ಆಯಾಸ_ಮರೆಸಿದ್ದು_ನನ್ನ_ಆಮಂತ್ರಣಕ್ಕೆ_ಆಗಮಿಸಿದ್ದ_ಹಿತೈಷಿಗಳು.

#ಗೆಳೆಯ_ನಾಗೇಂದ್ರಸಾಗರ್_ನನ್ನ_ಮಗಳ_ಮದುವೆ_ಅಕ್ಷರ_ರೂಪದಲ್ಲಿ_ದಾಖಲಿಸಿದ್ದಾರೆ.
  ಇವತ್ತಿಗೆ ಸರಿಯಾಗಿ ನಾಲ್ಕು ವರ್ಷಗಳ ಹಿಂದೆ ಇದೇ ದಿನ 10- ನವೆಂಬರ್ - 2019 ಭಾನುವಾರ ನನ್ನ ಮಗಳ ವಿವಾಹ ನನ್ನ ತಂದೆ-ತಾಯಿ ಸ್ಮರಣಾರ್ಥ ನಮ್ಮ ಊರಲ್ಲಿ ನಾವು ನಿರ್ಮಿಸಿದ ಶ್ರೀಕೃಷ್ಣ ಸರಸ ಕನ್ವೆನ್ಷನ್ ಹಾಲ್ ನಲ್ಲಿ ಸಾಂಗವಾಗಿ ನೆರವೇರಿತು.
  ಅದರ ಹಿಂದಿನ ದಿನ ಹುಬ್ಬಳ್ಳಿಯಿಂದ ದಿಬ್ಬಣ ಹೊರಡುವಾಗಲೇ ಸರ್ವೋಚ್ಚ ನ್ಯಾಯಾಲಯ ಆಯೋಧ್ಯೆಯ ತೀರ್ಪು ಪ್ರಕಟಿಸಿದ್ದರಿಂದ ದಿಬ್ಬಣದ ಸವಾರಿ ನಮ್ಮ ಊರಿಗೆ ಸರಾಗವಾಗಿ ತಲುಪುವ ಬಗ್ಗೆ ಆತಂಕ ಇತ್ತು.
  ನನ್ನ ಬೀಗರು "ಏನೂ ತೊಂದರೆ ಇಲ್ಲ ಯಾವುದೇ ತೊಂದರೆ ಇಲ್ಲದೆ ತಲುಪುವ ವ್ಯವಸ್ತೆ ತಮ್ಮ ಸಹೋದರ ಮಾಡಿದ್ದಾರೆ " ಎಂದಿದ್ದರೂ ಕೊಂಚ ಭಯ ಪಟ್ಟಿದ್ದೆ ಆದರೆ ಯಾವುದೇ ಅಡೆ ತಡೆ ಇಲ್ಲದೆ ದಿಬ್ಬಣ ನಮ್ಮಲ್ಲಿಗೆ ಸಂಜೆ ಬಂದು ಸೇರಿತ್ತು.
  ಮಗಳು ಹುಬ್ಬಳ್ಳಿಯಲ್ಲಿ ಎಲ್.ಎಲ್.ಎಮ್ ಮಾಡುವಾಗ ಇಬ್ಬರೂ ಇಷ್ಟ ಪಟ್ಟಿದ್ದಾರೆ, ಹುಡುಗನ ತಂದೆ ತಾಯಿ ಒಪ್ಪಿದ್ದಾರೆ ಆದರೆ ಇದಾವುದು ನನಗೆ ತಿಳಿದಿರಲಿಲ್ಲ.
   ಹುಡುಗ ಒಂದು ದಿನ ಪೋನ್ ಮಾಡಿದ್ದು ತಾನು ನಿಮ್ಮ ಮಗಳ LLM ಸಹಪಾಠಿ ಸಾಗರದ ವರದಳ್ಳಿಗೆ ತನ್ನ ತಂದೆ ತಾಯಿ ಜೊತೆ ಹೋಗುತ್ತಿದ್ದು ಅಲ್ಲಿಂದ ನಿಮ್ಮ ಮನೆಗೆ ಬರಬೇಕಂತ ಇದೀವಿ ಬರಬಹುದಾ? ಅಂದಾಗ ನಾನು ಖಂಡಿತಾ ಬನ್ನಿ ಅಂತ ಆಹ್ವಾನಿಸಿದೆ.
   ಅದರ ನಂತರವೇ ಮಗಳು ತನ್ನ ನಿರ್ದಾರ ಮತ್ತು ಈ ಬಗ್ಗೆ ಮಾತಾಡಲು ಅವರೆಲ್ಲ ಬರುತ್ತಿದ್ದಾರೆ ನೀನು ಅಮ್ಮ ಒಪ್ಪಿದರೆ ಮಾತ್ರ ತಾನು ಮದುವೆ ಆಗುವೆ ಅಂತೆಲ್ಲ ಹೇಳಿದಳು.
  ಮರು ದಿನ ಮಧ್ಯಾಹ್ನ ವರದಳ್ಳಿಯಲ್ಲಿ ಪೂಜೆ ಪ್ರಸಾದ ಸ್ವೀಕರಿಸಿದ ಭಾವಿ ಬೀಗರ ಕುಟುಂಬ ನನ್ನ ಮನೆಗೆ ಬಂತು.
  ನನ್ನ ಅಣ್ಣ ಮತ್ತು ಅವನ ವಯೋವೃದ್ಧ ಮಾವ ಮತ್ತು ನಾನು ಭಾವಿ ಬೀಗರ ಕುಟುಂಬ ಸ್ವಾಗತಿಸಿ ಚಹಾ ಪಾನಿ ಸತ್ಕಾರ ಮಾಡಿದ ನಂತರ ಭಾವಿ ಭೀಗರು ಪ್ರಸ್ತಾವನೆ ಮಾಡಿದರು.
   ನಾನು ನನ್ನ ತಂದೆ ತಾಯಿ ಅಜ್ಜಿ ಇವರ ಕಥೆ ನನ್ನ ಹಾಲಿ ಶೂದ್ರ ಜಾತಿ ನನ್ನ ಪತ್ನಿ ಜಾತಿ, ಪತ್ನಿ ಪುತ್ರಿ ಸಸ್ಯಹಾರಿಗಳು ನಾನು ಮಗ ಮಿಶ್ರ ಹಾರಿಗಳು ಮತ್ತು ಈ ಮದುವೆ ಅಂತರಜಾತಿ ವಿವಾಹ ಅನ್ನುವುದು ಬಹಿರಂಗ ಪಡಿಸಿ ಮದುವೆ ನಡೆದರೆ ನಿಮ್ಮ ಕುಟುಂಬದಲ್ಲಿ ಯಾವುದೂ ಮುಚ್ಚಿಡದಿದ್ದರೆ ನನ್ನ ಒಪ್ಪಿಗೆ ಇದೆ ಅಂದಿದ್ದೆ.
   ಭಾವೀ ಬೀಗರು ಅವರು ಸಿಂಡಿಕೇಟ್ ಬ್ಯಾಂಕ್ ಉದ್ಯೋಗಿ ಆಗಿ ಗುಜರಾತಿನಲ್ಲಿ ಇದ್ದಾಗ  ಬುಜ್ ಭೂಕಂಪದಲ್ಲಿ ಇಡೀ ಕುಟುಂಬ ಬದುಕಿ ಬಂದಿದ್ದೆ ದೇವರ ಕೃಪೆಯಿಂದ ಅವತ್ತು 30 ಡಿಗ್ರಿ ವಾಲಿಕೊಂಡ ಇವರ ಅಪಾರ್ಟ್ಮೆಂಟ್ ಅಕ್ಕ ಪಕ್ಕದ ಕಟ್ಟಡಗಳು ನೆಲಸಮ ಆದದ್ದು ಪರಿಚಿತರು ಸಹೋದ್ಯೋಗಿಗಳು ಈ ದುರಂತದಲ್ಲಿ ಇಲ್ಲವಾಗಿದ್ದು ಇಂತಹ ಬೀಕರ ಕ್ಷಣಗಳು ಅವರಿಗೆ ಎಲ್ಲದೂ ನಶ್ವರ ಎಂದು ಸಾಬೀತಾಗಿದೆ ಇನ್ನೆಲ್ಲಿಯ ಜಾತಿ ಅಂದರು.
  ಅವರು ನನ್ನ ಮಾತು ಒಪ್ಪಿದರು ಹುಬ್ಬಳ್ಳಿಯ ಅವರ ಮನೆಗೆ ಆಹ್ವಾನಿಸಿದರು ಶಿಶುನಾಳದ ಷರೀಪರ ಗದ್ದುಗೆ ದರ್ಶನ ಮಾಡಿ ಅವರ ಹುಬ್ಬಳ್ಳಿ ಮನೆಗೆ ಹೋಗಿ ಸಿಹಿ ಬದಲಿಸಿಕೊಂಡೆವು.
 ಆ ವರ್ಷದ ಮಾರ್ಚ್ ತಿಂಗಳಲ್ಲಿ ನಿಶ್ಚಿತಾರ್ಥ ನಿಗದಿ ಆಯಿತು ಒಂದು ಬೆಳಿಗ್ಗೆ ಬೀಗರ ಕುಟುಂಬ ಬಸ್ಸಿನಲ್ಲಿ ನಮ್ಮ ಕಲ್ಯಾಣ ಮಂಟಪಕ್ಕೆ ಆಗಮಿಸಿತು ಆಗಲೇ ನನ್ನ ಭೀಗರು ನನ್ನ ತಮ್ಮ ಬರುತ್ತಿದ್ದಾನೆ ಒಂದು ನಿಮಿಷ ಕಾಯೋಣ ಅಂದರು ಅಷ್ಟರಲ್ಲಿ ಪೋಲಿಸ್ ಸೈರನ್ ಶಬ್ದ ಕೇಳಿದ್ದರಿಂದ ಇಲ್ಲೇ ಬರುತ್ತಿದ್ದಾನೆ ಅಂದಾಗ ನನಗೆ ಯಾರಂತ ಗೊತ್ತಾಗಲಿಲ್ಲ.
 ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ಕೃಷ್ಣ ದೀಕ್ಷಿತರು ನನ್ನ ಬೀಗರ ಖಾಸಾ ತಮ್ಮ ಅಂತ ನನಗೆ ಗೊತ್ತೇ ಇರಲಿಲ್ಲ ಅಷ್ಟರಲ್ಲಿ ಆಗಮಿಸಿದ ಜಡ್ಜ್ ದಂಪತಿಗಳು ನನ್ನ ಬೀಗರ ಕಾಲಿಗೆರೆಗಿದರು, ಬೀಗರು ನನ್ನನ್ನ ತಮ್ಮ ಬೀಗರೆಂದು ಪರಿಚಯಿಸಿದರು.
  ನನಗೆ ಮೊದಲೇ ತಿಳಿಸಲಿಲ್ಲ ಕನಿಷ್ಟ ಅವರ ಸ್ಥಾನಮಾನಕ್ಕೆ ಗೌರವಿಸುವಂತೆ ಹೂವಿನ ಹಾರವಾದರೂ ತರುತ್ತಿದ್ದೆ ಅಂದಾಗ ಜಡ್ಜ್ ಸಾಹೇಬರು ಅದೇನು ಬೇಡ ನನ್ನ ಅಣ್ಣ ನನ್ನನ್ನು ಓದಿಸಿದ್ದು ನಾನು ಈಗ ಈ ಸ್ಥಾನದಲ್ಲಿರಲು ಕಾರಣ ಮತ್ತು ನನ್ನ ವಿವಾಹ ಮಾಡಿಸಿದ್ದು ನನ್ನ ಅಣ್ಣ ಆದ್ದರಿಂದ ನನ್ನಣ್ಣನ ಏಕೈಕ ಪುತ್ರನ ನಿಶ್ಚಿತಾರ್ಥ ವಿವಾಹದಲ್ಲಿ ನಾನಿರಲೇ ಬೇಕೆಂದರು.
  ನನ್ನ ಮತ್ತು ನನ್ನ ಸಹೋದರ ಕುಟುಂಬದ ಜೊತೆ ಆತ್ಮೀಯವಾಗಿ ಸಮಯ ಕಳೆದು ನಿಶ್ಚಿತಾರ್ಥದ ನಂತರ ನನ್ನ ಮತ್ತು ನನ್ನ ಸಹೋದರನ ಮನೆಗೆ ಬಂದು ಮಾತಾಡಿ ಹೋಗಿದ್ದರು, ಅದೇ ವರ್ಷ ನವೆಂಬರ್ 10 ರ ವಿವಾಹ ಮಹೋತ್ಸವಕ್ಕೂ ಬಂದರು.
   ನಾನು ನೇರವಾಗಿ ಹೋಗಿ ಕರೆದದ್ದು ನನ್ನ ಗುರುಗಳಾದ ಬೆಂಗಳೂರಿನ ಡಾ. ವಿಶ್ವಪತಿ ಶಾಸ್ತ್ರೀಗಳು ಮತ್ತು ಬೆಂಗಳೂರಿನಲ್ಲಿ ನೆಲೆಸಿರುವ ಸಣ್ಣ ಅಕ್ಕ ಭಾವನ ಕುಟುಂಬಕ್ಕೆ, ಸಾಗರದಲ್ಲಿ ನೆಲೆಸಿರುವ ದೊಡ್ಡಕ್ಕ ಬಾವನ ಕುಟುಂಬ, ನನ್ನ ರಿಜಿಸ್ಟರ್ ಮದುವೆಗೆ ಗಾರ್ಡಿಯನ್ ಆಗಿದ್ದ ತೀ.ನಾ. ಶ್ರೀನಿವಾಸ್ ಮತ್ತು ಹಿರಿಯರಾದ ಆಹಮದ್ ಅಲೀ ಖಾನ್ ಸಾಹೇಬರು, ಕೆ.ಎಂ. ಲಿಂಗಪ್ಪನವರು,ಅಬಕಾರಿ ಗುತ್ತಿಗೆದಾರರಾಗಿದ್ದ ನಾರಾಯಣ ರಾವ್, ವಕೀಲರಾದ S.N. ಮಂಜುನಾಥರನ್ನು ಮಾತ್ರ ಉಳಿದೆಲ್ಲ ಹೇಳಿಕೆ ಮಾಡಿದ್ದು ನನ್ನ ಅಣ್ಣ ಮತ್ತು ಆಪ್ತ ಗೆಳೆಯರು ಕಾರಣ ನನ್ನ 140 ಕೇಜಿ ದಾಟಿದ ತೂಕ ನನಗೆ ನಡೆಯಲು ಸಾಧ್ಯವಿಲ್ಲವಾಗಿತ್ತು.
  ಶೃಂಗೇಶರು 5000 ವಿವಾಹ ಆಮಂತ್ರಣ ಪತ್ರಿಕೆ ಅವರ ಸಂಸ್ಥೆಯಲ್ಲಿ ಛಾಪಿಸಿ ಕೊಟ್ಟರು.
  ನನ್ನ ನಿರೀಕ್ಷೆ ಈ ಮದುವೆಗೆ 600 ಜನ ಭಾಗವಹಿಸ ಬಹುದು ಎಂದು ಆದರೆ ನನ್ನ ಸಹೋದರ ಮತ್ತು ಆಪ್ತರು ಒಪ್ಪಲೇ ಇಲ್ಲ, ಹೆಚ್ಚಿನ ಉಸ್ತುವಾರಿ ವಹಿಸಿದ್ದ ಮಾಫೀರ್ ಬಫೆ ವ್ಯವಸ್ಥೆ ಮಾಡಲೇ ಬೇಕೆಂದರೂ ನಾನು ಒಪ್ಪಲಿಲ್ಲ 2000 ಜನರಿಗೆ ಊಟ ಜನ ಹೆಚ್ಚಾದರೆ ಬಂದವರಿಗೆಲ್ಲರಿಗೂ ಅಡುಗೆ ಮಾಡಲು ಶಿವಮೊಗ್ಗದ ಖ್ಯಾತ ಬಾಣಸಿಗರಾದ ನಿದಿಗೆ ಮಂಜಣ್ಣ ತಂಡ ತಯಾರಾದರು ಎರೆಡು ದಿನ ಮೊದಲೇ 5000 ಸಿಹಿ ಪ್ಯಾಕೆಟ್ ತಯಾರಿ ಮಾಡಿದರು ಕಾರಣ ನನ್ನ ನಿರೀಕ್ಷೆ ಅಂತೆ 600 ರಿಂದ 1000 ಜನ ಬಂದರೆ ಉಳಿದ ಸಿಹಿ ಹಂಚಬಹುದು ಆದರೆ ನಿರೀಕ್ಷೆ ಮೀರಿ ಜನ ಬಂದರೆ ಎಷ್ಟೇ ಜನರಿಗೆ ಅಡುಗೆ ಮಾಡಬಹುದು ಸಿಹಿ ತಿಂಡಿ ತಕ್ಷಣ ಮಾಡಲು ಸಾಧ್ಯವಿಲ್ಲ ಎಂಬ ಅವರ ತರ್ಕ ಒಪ್ಪಿದೆ.
  ಅವತ್ತು ಮದುವೆಗೆ ಬಂದವರು ನನ್ನ ನಿರೀಕ್ಷೆ ಸುಳ್ಳು ಮಾಡಿದರು ಬಫೆ ವ್ಯವಸ್ಥೆ ಮಾಡದೇ ಇದ್ದಿದ್ದರಿಂದ ನೂಕು ನುಗ್ಗಲಿನಿಂದ ಅನೇಕ ಆತ್ಮೀಯರು ಊಟ ಮಾಡಲಿಲ್ಲ, ನಾವೆಲ್ಲ ಊಟ ಮಾಡಿ ಮುಗಿಸುವಾಗ 4 ಗಂಟೆ ದಾಟಿತ್ತು.
  ನಮ್ಮ ಊರಿನ ಮುಸಲ್ಮಾನ್ ಮುಖಂಡರು ಬಂದು ನನಗೆ ಸನ್ಮಾನಿಸಿದರು ಇವೆಲ್ಲ ಆ ದಿನದ ಸವಿ ನೆನಪುಗಳು.
  ಮಗಳು ಅಳಿಯ ಬೆಂಗಳೂರಲ್ಲಿ ಉದ್ಯೋಗ ನಿಮಿತ್ತ ನೆಲೆಸಿದಾಗ ಕೆಲ ಸಂದರ್ಭದಲ್ಲಿ ಅಳಿಯ ಹೊರ ರಾಜ್ಯಕ್ಕೆ ಹೋದಾಗ ನನ್ನ ಮಗಳನ್ನು ಅವರ ಮನೆಯಲ್ಲೇ ಉಳಿಸಿಕೊಂಡರು ಇದೆಲ್ಲ ನನಗೆ ನನ್ನ ಬೀಗರ ಕುಟುಂಬದ ಸೌಹಾರ್ದವಾದ ಜಾತ್ಯಾತೀತ ನಡೆಗಳು ಇಷ್ಟವಾಯಿತು.
  ಭೀಗರ ಕುಟುಂಬದ ಮೂಲ ಶಿಕಾರಿಪುರ ಸಮೀಪದ ಸರ್ವಜ್ಞನ ಮಾಸೂರು, ಭೀಗರ ತಂದೆ ಮಾಸೂರಿನ ಸಾಹುಕಾರ್ ಶ್ರೀಪಾದ ದೀಕ್ಷಿತರು ದೊಡ್ಡ ಜಮೀನ್ದಾರರಾಗಿದ್ದವರು ಅವರು ಸ್ವಾತಂತ್ರ ಪೂರ್ವದಲ್ಲಿ ಹುಲಿ ಮರಿ ಸಾಕಿದ್ದ ಕಥೆ ಆ ಊರಿನ ನನ್ನ ಗೆಳೆಯರು ಹೇಳುತ್ತಾರೆ ನನ್ನ ಅಳಿಯನಿಗೆ ಅಜ್ಜನ ಹೆಸರನ್ನೇ ಇಟ್ಟಿದ್ದಾರೆ ಮತ್ತು ಅಳಿಯ ಅಜ್ಜನ ತದ್ರೂಪ.
   ಮಾಸೂರಿನವರೇ ಆದ ಪಿ.ವಿ. ಇಕ್ಕೇರಿ ನಾನು ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದಾಗ ಸಾಗರ ತಾಲ್ಲೂಕಿನ E.0 ಆಗಿದ್ದರು ನಂತರ ಶಿವಮೊಗ್ಗ ಜಿಲ್ಲಾಧಿಕಾರಿ ಆದರು ಮಾಸೂರಿನಲ್ಲಿ ಜಿಲ್ಲಾಧಿಕಾರಿ ಆದ ಇಕ್ಕೇರಿ ಮತ್ತು ಹೈಕೋರ್ಟ್ ನ್ಯಾಯಾಧೀಶರಾದ ಕೃಷ್ಣ ದೀಕ್ಷಿತರನ್ನು ಒಂದೇ ವೇದಿಕೆಯಲ್ಲಿ ಗೌರವಿಸಿದ್ದಾಗಿ ಮಾಸೂರಿನ ಮಿತ್ರರು ನನ್ನ ಮಗಳ ವಿವಾಹ ನಂತರ ತಿಳಿಸಿದ್ದರು.
  ಇದೆಲ್ಲ ಇವತ್ತು ಮಗಳ ಮದುವೆಯ ನಾಲ್ಕನೇ ವಾರ್ಷಿಕೊತ್ಸವದಲ್ಲಿ ನೆನಪಾಯಿತು ಮತ್ತು ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ನನ್ನ ಮನಸ್ಸಿಗೆ ಮುದ ನೀಡಿದ ಗೆಳೆಯ ನಾಗೇಂದ್ರ ಸಾಗರ್ ತೆಗೆದ ಫೋಟೋ ಮತ್ತು ಅವತ್ತು ಅವರು ಬರೆದ ಪೋಸ್ಟ್ ನಾನು ಇಲ್ಲಿ ಲಗತ್ತಿಸಿದ್ದೇನೆ ಇದು ನನ್ನ ಜೀವನದ ತೆರೆದ ಪುಟವೂ ಹೌದು.....
  
     "ಆನಂದಪುರದ ಅರುಣ್ ಪ್ರಸಾದ್ ನನ್ನ ಅಂತರಂಗದ ಮಿತ್ರರಲ್ಲಿ ಒಬ್ಬರು.. ಶಿವಮೊಗ್ಗ ಜಿಲ್ಲಾ ಪಂಚಾಯ್ತಿಯ ಮಾಜಿ ಸದಸ್ಯರು. ಇಂದು ಅವರ ಮಗಳ ಮದುವೆಯಿತ್ತು. ಎನಿತೇ ಕೆಲಸವಿದ್ದರೂ ಹೋಗಲೇ ಬೇಕು ಎಂದು ಕೊಂಡಿದ್ದೆ.. ಹಾಗಾಗಿ ಇಂದು ನೀಚಡಿಯಲ್ಲಿ ಹಮ್ಮಿಕೊಂಡಿದ್ದ ಜೇನುಕೃಷಿ ಕಾರ್ಯಾಗಾರ ನಡೆಸಿಕೊಟ್ಟು ಅಳುಕುತ್ತಲೇ ಅವರದೇ ಮಾಂಗಲ್ಯ ಮಂದಿರದಲ್ಲಿ ಕಾಲಿರಿಸಿದಾಗ ಹೊತ್ತು ಮೂರಕ್ಕೆ ಹತ್ತಿರ ಬಂದಿತ್ತು.. 

ವಧೂವರರು ಫೋಟೋ ಶೂಟೌಟಿನಲ್ಲಿದ್ದರೆ ಮುಂದಿನ ಸಾಲಿನಲ್ಲಿ ಕುಳಿತಿದ್ದ ಗೆಳೆಯ ಅರುಣ್ ಪ್ರಸಾದ್ ಆತ್ಮೀಯವಾಗಿ ಬರ ಮಾಡಿಕೊಂಡರು. ವಿವಾಹ ವೃತ್ತಾಂತ ಹೇಳುತ್ತಲೇ ಬಂಧು ಮಿತ್ರರ ಪರಿಚಯವನ್ನು ಎಂದಿನ ಅದೇ ಆತ್ಮೀಯತೆಯಿಂದ ಮಾಡಿಕೊಟ್ಟರು.. ಅವರಲ್ಲಿನ ಈ ವಿಶೇಷ ಗುಣವೇ ನಾವುಗಳು ಆತ್ಮೀಯರಾಗಲು ಕಾರಣವಾದದ್ದು.. 

ಸುಮಾರು ಇಪ್ಪತ್ತೈದು ವರ್ಷಗಳ ಸ್ನೇಹ ನಮ್ಮದು. ರಾಜಕಾರಣ, ಇಸಂಗಳ ಯಾವುದೇ ಲೆಕ್ಕಾಚಾರಗಳನ್ನು ಮೀರಿದ್ದು.. ಜೀವನದಲ್ಲಿ ಜೊತೆ ಜೊತೆಯಾಗಿಯೇ ಹಲವು ಏರಿಳಿತಗಳನ್ನು ಕಂಡವರು. 

ನನಗಿನ್ನೂ ನೆನಪಿದೆ. ಆಗ ಇವರು ಅದೀಗಷ್ಟೆ ಜಿಲ್ಲಾ ಪಂಚಾಯ್ತಿಯ ಸದಸ್ಯರಾಗಿದ್ದರು. ವೈಯಕ್ತಿಕ ಕೆಲಸಕ್ಕಾಗಿ ಯಡೇಹಳ್ಳಿಯಲ್ಲಿರುವ ಇವರ ಮನೆಗೆ ಹೋದಾಗ ಇವರ ಮಗಳು ಮುಗ್ಧ ನಡೆನುಡಿಗಳಿಂದ ಮೋಡಿ ಮಾಡುತ್ತಿದ್ದ ಪುಟ್ಟ ಬಾಲೆ. ಈಗ ಹಸೆಮಣೆ ಏರಿದ್ದಾಳೆ. 

ಅದನ್ನೇ ಮಾತಾಡಿದೆವು. ಜೀವನದ ಜಂಜಾಟಗಳಲ್ಲಿ, ಬದುಕಿನ ಭರಾಟೆಯಲ್ಲಿ ದಿನಗಳು ಸಾಗಿದ್ದೇ ಗೊತ್ತಾಗುವುದಿಲ್ಲ. ಮಕ್ಕಳು ನಮ್ಮಷ್ಟೆತ್ತರಕ್ಕೆ ಬೆಳೆದು ಹೀಗೆ ಹೊಸ ಸಂಸಾರ ಕಟ್ಟಿಕೊಂಡ ಹೊತ್ತಿನಲ್ಲಿ ಹೊರಳಿ ನೋಡಿದಾಗ ಅರೇ ಇದು ನಾವೇ ಹಾಸಿ ಬಂದ ಮಾರ್ಗವೇ ಎಂದು ಅಚ್ಚರಿ ಆಗುತ್ತದೆ. ಮಕ್ಕಳು ಎಷ್ಟು ಬೇಗ ಬೆಳೆದರಲ್ಲ ಅನ್ನುತ್ತಲೇ ಹೊಸ ಬದುಕಿಗೆ ತೆರೆದುಕೊಳ್ಳುತ್ತೇವೆ.. 

ಮಧ್ಯಾಹ್ನದಿಂದ ಹಿಡಿದು ಅರುಣ್ ಪ್ರಸಾದ್ ಮಗಳನ್ನು ಹರಸಿ ಬಾಳ ಸಂಗಾತಿಯೊಂದಿಗೆ ಕಳಿಸಿ ಕೊಡುವಾಗಿನ ಭಾವುಕ ಕ್ಷಣಗಳವರೆಗೆ ನಾನು ಅವರೊಂದಿಗಿದ್ದೆ. ಜೀವನದ ಇಂಥವೆಲ್ಲ ಕ್ಷಣಗಳನ್ನು ಸಾಮಾನ್ಯದ ಆಗು ಹೋಗುಗಳಂತೇ ಸ್ವೀಕರಿಸಬೇಕು ಎಂಬ ಎಣಿಕೆಯಿದ್ದರೂ ಇಂತಹ ಸಂದರ್ಭದಲ್ಲಿ ಮನವು ತನ್ನಿಂದ ತಾನೇ ಭಾವುಕವಾಗುತ್ತದೆ. ಆರ್ದ್ರಗೊಳ್ಳುತ್ತದೆ. 

ಮಗಳ ಮೇಲೆ ಒಬ್ಬ ತಂದೆಯಲ್ಲಿ ಇರುವ ಅದೇ ಅಂತಃಕರಣದ ಪ್ರೀತಿಯನ್ನು ಅರುಣ ಪ್ರಸಾದರ ಕಣ್ಣೊಳಗೆ ಕಂಡೆ. ಮತ್ತು ಮುಂದಿನದು ನನ್ನ ಪಾಳಿಯಲ್ಲವೇ ಎಂದುಕೊಳ್ಳುತ್ತ ಕ್ಷಣಕಾಲ ತಲ್ಲಣಗೊಂಡೆ. 

ಮಗಳನ್ನು ಬೀಳ್ಕೊಡುವ ಮುನ್ನ ಅವರ ಮನೆಯಲ್ಲಿ ಅವರ ಮಗ ಮಾಡಿಕೊಟ್ಟ ಕಾಫಿ ಗುಟುಕರಿಸುತ್ತ ಇರುವಾಗ ಬಾಲವಾಡಿಸುತ್ತ ಬಂದ ನಾಯಿಯನ್ನು ತೋರಿಸಿ ಇದು ಮಗಳ ಮುದ್ದಿನ ನಾಯಿ. ಇನ್ನು ಅವಳಿಲ್ಲದ ದಿನಗಳಲ್ಲಿ ಎಷ್ಟು ನೋಯುತ್ತದೇನೋ ಎಂದರು.. ಅಂಗಳದಲ್ಲಿನ ಹೂಗಿಡಗಳನ್ನು ತೋರಿ ಮಗಳ ಆರೈಕೆಯ ತೋಟವಿದು ಎಂದಿದ್ದರು. 

ನಮ್ಮ ಬಾಳ ಪಯಣದಲ್ಲಿ ಅನೂಹ್ಯವಾದ ಬಂಧಕ್ಕೆ ಕಾರಣವಾದ ಮಕ್ಕಳು ಮುಂದೆ ತಮ್ಮ ಸ್ವಂತ ಬದುಕನ್ನು ಕಟ್ಟಿ ಕೊಳ್ಳುವ ಮಹತ್ವದ ಕಾಲಘಟ್ಟವಿದು. ಒಂದು ಕಡೆ ಹೇಳಿಕೊಳ್ಳಲಾಗದ ನೋವು. ಮತ್ತೊಂದೆಡೆ ಅನಿವಾರ್ಯತೆ. ತಿರುಗುತ್ತಲೇ ಇರುವ ಕಾಲಚಕ್ರ. ಪಯಣ ನಿಲ್ಲುವುದಿಲ್ಲ.. 

ಅರುಣ್ ಪ್ರಸಾದ್, ಬಹು ಕಾಲದ ನಂತರ ನಿಮ್ಮೊಂದಿಗೆ ಮತ್ತೊಮ್ಮೆ ಆತ್ಮೀಯ ಕ್ಷಣಗಳನ್ನು ಕಳೆದಿರುವೆ.. ದಯವಿಟ್ಟು ಕ್ಷಮಿಸಿ, ನಿಮ್ಮ ಮಗಳ ಮದುವೆಯ ಸಂದರ್ಭದಲ್ಲಿ ಕೆಲವು ಜವಾಬ್ದಾರಿಯನ್ನು ನಾನು ತೆಗೆದುಕೊಳ್ಳ ಬಹುದಿತ್ತು. ತಪ್ಪಿನ ನೋವು ನನ್ನಲ್ಲಿದೆ. ನೂತನ ವಧೂವರರಿಗೆ ಹೃದಯಪೂರ್ವಕ ಹಾರೈಕೆಗಳು. ಮತ್ತು ನಮ್ಮ ಸ್ನೇಹಯಾನ ಹೀಗೆಯೇ ಮುಂದುವರೆಯುತ್ತಲಿರಲಿ ಎನ್ನುವ ಆಶಯ ನನ್ನದು."

✍️ ನಾಗೇಂದ್ರ ಸಾಗರ್...

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂ...

ಶ್ರೀಧರ ಸ್ವಾಮಿ ವರದಳ್ಳಿ ಪವಾಡ ಪುರುಷರು.

   ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ವರದಳ್ಳಿಯ ತಪಸ್ವಿ ಶ್ರೀಧರ ಸ್ವಾಮಿಗಳು.   ವರದಳ್ಳಿ ಶ್ರೀಧರ ಸ್ವಾಮಿಗಳ ಬಗ್ಗೆ ಕೇಳಿದ್ದು, ಓದಿದ್ದು ಮತ್ತು ಅವರ ಒಡನಾಡಿಗಳನ್ನ ಭೇಟಿ ಮಾಡಿದ್ದು ಬಿಟ್ಟರೆ ಅವರನ್ನ ಪ್ರತ್ಯಕ್ಷವಾಗಿ ನೋಡಿಲ್ಲ.     ನಾವು ಚಿಕ್ಕವರಿದ್ದಾಗ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುವಾಗ ಆಗಿನ ಕಾಲದ ಖ್ಯಾತ ಚಲನಚಿತ್ರ ನಟ ಉದಯ ಕುಮಾರ್ ಅರಳಿ ಮರದ ಗ್ಯಾರೇಜ್ ಹತ್ತಿರ ಬಂದಿದ್ದಾರೆ ಅಂತ ಊರಿನ ಜನರೆಲ್ಲ ಗುಂಪು ಗುಂಪಾಗಿ ಓಡುತ್ತಿದ್ದರು, ನಾವು ಚಿಕ್ಕ ಮಕ್ಕಳೆಲ್ಲ ಅವರನ್ನ ಹಿಂಬಾಲಿಸಿದೆವು.       ಅಲ್ಲಿ ಒಂದು ಬಿಳಿ ಅಂಬಾಸಡರ್ ಕಾರು ನಿಂತಿದ್ದು ಅದರ ಅಡಿಯಲ್ಲಿ ಮಲಗಿ ಮೆಕ್ಯಾನಿಕ್ ದುರಸ್ತಿ ಮಾಡುತ್ತಿದ್ದರೆ ಎತ್ತರದ ಮಣ್ಣು ದಿಬ್ಬದ ಮೇಲೆ ನಮ್ಮ ನಟ ಉದಯ ಕುಮಾರ್ ಸಿಗರೇಟು ಸೇದಿ ಹೊಗೆ ಬಿಡುತ್ತಿದ್ದರು. ಯಾರೂ ಅವರ ಹತ್ತಿರ ಮಾತಾಡುವ ದೈಯ೯ ವಹಿಸಲಿಲ್ಲ ಆದರೆ ನೆರೆದ ಜನ ಮಾತಾಡಿಕೊಳ್ಳುತ್ತಿದ್ದ ಮಾತಿನ ಸಾರಾಂಶವೆಂದರೆ ವರದಳ್ಳಿಯಲ್ಲಿ ತಪಸ್ಸು ಮಾಡುತ್ತಿದ್ದ ಶ್ರೀಧರ ಸ್ವಾಮಿಗಳು ದೇಹತ್ಯಾಗ ಮಾಡಿದ್ದಾರೆ ಅದನ್ನ ಕೇಳಿ ಅವರ ಭಕ್ತ ಮತ್ತು ಶಿಷ್ಯರಾದ ಖ್ಯಾತ ಚಿತ್ರ ನಟ ಉದಯ ಕುಮಾರ್ ಬರುವಾಗ ಕಾರು ಹಾಳಾಗಿ ದುರಸ್ತಿಗಾಗಿ ನಿಂತಿದ್ದಾರೆ, ದುಃಖದಲ್ಲಿ ಇರೋದರಿಂದ ಆ ರೀತಿ ಸಿಗರೇಟು ಸೇದಿ ಬೂದಿ ಮಾಡುತ್ತಿದ್ದಾರೆ ಅವರ ಹತ್ತಿರ ಯಾರೂ ಮಾತಾಡ ಬೇಡಿ ಅಂತ ...