Blog number 1811.ಸುವರ್ಣ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ನಮ್ಮ ಜಿಲ್ಲೆಯ ಏಕೈಕ ರಾಜ್ಯೋತ್ಸವ ಪ್ರಶಸ್ತಿಗೆ ಬಾಜನರಾದ ರಂಗಾಯಣದ ಮಾಜಿ ನಿರ್ದೇಶಕ ಚಿದಂಬರ್ ರಾವ್ ಜಂಬೆ ಅವರಿಗೆ ಅಭಿನಂದಿಸುತ್ತಾ...
#ಸುವಣ೯_ರಾಜ್ಯೋತ್ಸವ_ಪ್ರಶಸ್ತಿ_ಪಡೆದ_ನಮ್ಮ_ತಾಲ್ಲೂಕಿನ_ಖ್ಯಾತ_ರಂಗಕರ್ಮಿ_ಚಿದಂಬರ್_ರಾವ್_ಜಂಬೆ
#ಕೇಂದ್ರ_ಸರ್ಕಾರದ_ಪ್ರತಿಷ್ಟಿತ_ಸಂಗೀತ_ನಾಟಕ_ಅಕಾಡೆಮಿ_ಪ್ರಶಸ್ತಿ_2015ರಲ್ಲಿ_ಪಡೆದವರು
#ಸಿದ್ದಿ_ಜನಾಂಗದವರಿಂದ_ನಾಟಕ_ಮಾಡಿಸಿ_1984ರಲ್ಲಿ_ಅವರನ್ನು_ಹೊರಜಗತ್ತಿಗೆ_ಪರಿಚಯಿಸಿದವರು.
#ಚಿದಂಬರ್_ರಾವ್_ಜಂಬೆ_ಅವರಿಗೆ_ಅಭಿನಂದನೆಗಳು.
ನನಗೆ ಅನ್ನಿಸಿದ್ದು...
15 ವಷ೯ದ ಹಿಂದೆಯೇ ಇವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡ ಬೇಕಿತ್ತು ಯಾಕೆಂದರೆ 2015ರಲ್ಲಿಯೇ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಂದ ಇವರು ಕೇಂದ್ರ ಸರ್ಕಾರದ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು.
1984 ರಲ್ಲಿ ಯಲ್ಲಾಪುರ ತಾಲೂಕಿನ ಮಂಚಿಕೇರಿಯಲ್ಲಿ ಸಿದ್ಧಿ ಜನಾಂಗದವರಿಗಾಗಿ Things falls Apart ಎಂಬ ಕಾದಂಬರಿ ಆಧಾರಿತ ನಾಟಕ ಶಿರನಾಲೆ ಎಂಬ ಕುಗ್ರಾಮದ ಕಾಡಿನ ಮಧ್ಯ ಕೊಳ್ಳಿ ಬೆಳಕಿನಲ್ಲಿ ನಡೆಸಿದ ನಾಟಕ ಪ್ರದರ್ಶನ ಸಿಧ್ಧಿ ಜನಾಂಗದ ಗಿರಿಜಾ ಸಿದ್ಧಿ, ಗೀತಾ ಸಿದ್ದಿ, ಗಿರೀಶ್ ಸಿದ್ದಿ, ರೇಣುಕಾ ಸಿದ್ದಿ, ಪ್ರಶಾಂತ್ ಸಿದ್ದಿ, ಬಾಗ್ಯ ಸಿದ್ಧಿ ಮುಂತಾದ ಸಿದ್ಧಿ ಜನಾಂಗದ ಕಲಾವಿದರು ಹೊರ ಜಗತ್ತಿಗೆ ಬರಲು ಕಾರಣವಾಯಿತು.
ಈ ವರ್ಷದ ಪ್ರಾರಂಭದಲ್ಲಿ 5- ಫೆಬ್ರವರಿ - 2023ರಂದು ಜಂಬೆ ನನ್ನ ಕಛೇರಿಗೆ ಬಂದು ಕೆಲ ಸಮಯ ಆತ್ಮೀಯವಾಗಿ ಕಳೆದದ್ದು ನನಗೆ ತುಂಬಾ ಇಷ್ಟವಾಯಿತು.
ಈ ಲಿಂಕ್ ಕ್ಲಿಕ್ ಮಾಡಿ ನೋಡಿ https://arunprasadhombuja.blogspot.com/2023/02/blog-number-1214.html.
Comments
Post a Comment