Blog number 1817. ನನ್ನ 7ನೇ ತರಗತಿ ಕ್ಲಾಸ್ ಟೀಚರ್ ಜಯಂತಿ ವಾಲ್ಮೀಕಿ ಆಳ್ವಾರ್ 46 ವರ್ಷದ ನಂತರ ಬೇಟಿ ಮತ್ತು ಗುರುಕಾಣಿಕೆ ಸಮಪ೯ಣೆ.
#ನಲವತ್ತಾರು_ವರ್ಷದ_ನಂತರ_ಬೇಟಿ
#ನನಗೆ_ಏಳನೆ_ತರಗತಿಯಲ್ಲಿ_ಕ್ಲಾಸ್_ಟೀಚರ್
#ಶ್ರೀಮತಿ_ಜಯಂತಿ_ಆಳ್ವಾರ್
#ಇವತ್ತು_ಅವರ_ಇಡೀ_ಕುಟುಂಬ_ನಮ್ಮ_ಅತಿಥಿಗಳು.
ನನ್ನ ಏಳನೇ ತರಗತಿಯ ಕ್ಲಾಸ್ ಟೀಚರ್ ಶ್ರೀಮತಿ ಜಯಂತಿ ವಾಲ್ಮಿಕಿ ಆಳ್ವಾರ್, ಇವರ ಸರ್ಕಾರಿ ಶಾಲಾ ಶಿಕ್ಷಕ ವೃತ್ತಿ ಆನಂದಪುರಂನ ಸರ್ಕಾರಿ ಮಾಧ್ಯಮಿಕ ಶಾಲೆಯಲ್ಲಿ 1976 ರಲ್ಲಿ ನಾವು 6ನೇ ತರಗತಿಯಲ್ಲಿ ಇದ್ದಾಗ ಪ್ರಾರಂಭ ಆಯಿತು, 1977 ರಲ್ಲಿ ನಾವೆಲ್ಲ 7 ನೇ ತರಗತಿಗೆ ಬಂದಾಗ ನಮಗೆ ಕ್ಲಾಸ್ ಟೀಚರ್ ಇವರು.
ಪಬ್ಲಿಕ್ ಪರೀಕ್ಷೆಯಲ್ಲಿ 7ನೇ ತರಗತಿಯಲ್ಲಿ ಎಲ್ಲರೂ ತೇರ್ಗಡೆ ಆಗಲೇ ಬೇಕೆಂಬ ಗುರಿ ಇವರದ್ದು ಆದ್ದರಿಂದ 7 ನೇ ತರಗತಿಯ ವಿದ್ಯಾರ್ಥಿಗಳಿಗೆ ಸಂಜೆ ಎಲ್ಲಾ ಸಬ್ಜೆಕ್ಟ್ ಗಳ ಟ್ಯೂಷನ್ ಆನಂದಪುರಂನ ಇತಿಹಾಸ ಪ್ರಸಿದ್ಧ ರಂಗನಾಥ ದೇವಾಲಯದ ಆವರಣದಲ್ಲಿ ನಡೆಸುತ್ತಿದ್ದರು.
ಈ ದೇವಾಲಯದ ಅರ್ಚಕರು ಇವರ ತಂದೆ ಶ್ರೀ ವಾಲ್ಮೀಕಿ ಆನಂದ ಆಳ್ವಾರ್ ಇವರೆಲ್ಲ ಹುಟ್ಟಿ ಬೆಳೆದದ್ದು ಇಲ್ಲೇ, ಇವರ ತಂದೆ ಮಣ್ಣಾಗಿದ್ದೂ ಆನಂದಪುರಂನಲ್ಲಿ.
ವಿವರಗಳಿಗೆ ಈ ಲಿಂಕ್ ಕ್ಲಿಕ್ ಮಾಡಿ ಓದಿ
https://arunprasadhombuja.blogspot.com/2021/05/7-sr.html
ಆ ವರ್ಷ 7 ನೇ ತರಗತಿಯ ಪಬ್ಲಿಕ್ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಟಾಪರ್ ಗಳು ಎಲೆ ಬೀಮಣ್ಣರ ಮಗಳು ರಾಧಾ (ಸ್ಟಾಪ್ ನರ್ಸ್ ಆಗಿದ್ದಾರೆ), ಹೊಸೂರು ಪಂಚಾಯ್ತಿಯ ಚಿಪ್ಪಳಿ ಅಶೋಕ (ಎಲ್ ಬಿ ಕಾಲೇಜ್ ಉಪನ್ಯಾಸಕರಾಗಿದ್ದರು ಈಗ ಇಹ ಲೋಕ ತ್ಯಜಿಸಿದ್ದಾರೆ), ಆಸ್ಪತ್ರೆ ಮಂಜಪ್ಪರ ಪುತ್ರ ರವೀಂದ್ರ (ಈಗ KSRTC ಯಿಂದ VRS ಪಡೆದಿದ್ದಾರೆ), ಆನಂದಪುರಂನ ರಂಗನಾಥ ಭಟ್ಟರ ಅಣ್ಣರ ಮಗ ಮಹೇಶ ಮತ್ತು ನಾನು.
7ನೇ ತರಗತಿಯ ವಾರ್ಷಿಕೋತ್ಸವದಲ್ಲಿ ರಾಣಿ ರತ್ನಾಜಿ ನಾಟಕದಲ್ಲಿ ನನ್ನದು ಕುಮಾರ ರಾಮನ ಪಾತ್ರ ನಿರ್ದೇಶನ ರಾಜಪ್ಪ ಮಾಸ್ತರದ್ದು, ನಿರ್ವಹಣೆ ಜಯಂತಿ ಮೇಡಂ ಅವರದ್ದು.
ಜಿಲ್ಲಾ ಮಟ್ಟದ ಮೆರಿಟ್ ಸ್ಕಾಲರ್ ಶಿಪ್ ಪರೀಕ್ಷೆ ಶಿವಮೊಗ್ಗದ ಡಿಡಿಪಿಐ ಕಛೇರಿ ಆವರಣ ಪಕ್ಕದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಾಗ ನಾನೋಬ್ಬನೆ ಉತ್ತೀರ್ಣನಾಗಿ 8-9- 10 ನೆ ತರಗತಿಯಲ್ಲಿ ಓದುವಾಗ ಪ್ರತಿ ವರ್ಷ 500 ರೂಪಾಯಿ ಸಿಗುತ್ತಿತ್ತು ಇದು ಆ ಕಾಲದಲ್ಲಿ 2 ಜೊತೆ ಬಟ್ಟೆ ಹವಾಯಿ ಚಪ್ಪಲಿ ಕೊಡಿಸಿಯೂ ನನ್ನ ಅಣ್ಣನ ಹತ್ತಿರ ಹಣ ಉಳಿಯುತ್ತಿತ್ತು.
1977 ರ 7ನೇ ತರಗತಿ ನಂತರ ಸಾಗರದ ಮುನ್ಸಿಪ್ ಹೈಸ್ಕೂಲ್ ಇಂಗ್ಲೀಷ್ ಮೀಡಿಯಂಗೆ ಸೇರಿದ್ದರಿಂದ ನಂತರದ ಹೈಸ್ಕೂಲು ಓದು ಆಗಿನ ಜೀವನ ಜಂಜಾಟದಿಂದ 1982ರಲ್ಲಿ ಆನಂದಪುರಂ ತೊರೆದ ಕ್ಲಾಸ್ ಟೀಚರ್ ಜಯಂತಿ ಮೇಡಂ ಅವರ ಸಂಪರ್ಕ ಕಳೆದು ಕೊಂಡಿದ್ದೆ.
ಅದು ಪುನಃ ಸಂಪರ್ಕ ಆಗಿದ್ದು ಕೇವಲ ಎರೆಡು ವರ್ಷದ ಹಿಂದೆ ಸಾಮಾಜಿಕ ಜಾಲ ತಾಣದಿಂದ (ಪೇಸ್ ಬುಕ್) ಅವರು ನಿವೃತ್ತಿ ಹೊಂದಿದ್ದರು ಮತ್ತು ನನಗೆ 56 ವರ್ಷ ದಾಟಿತ್ತು.
ಇವತ್ತು ಇವರ ತಂಗಿ ಶ್ರೀಮತಿ ಪುಷ್ಪಾ ದಂಪತಿಗಳ ವಿವಾಹ ವಾರ್ಷಿಕೋತ್ಸವದ ಅಂಗವಾಗಿ ಇಡೀ ಕುಟುಂಬ ಇವರು ಹುಟ್ಟಿ ಬೆಳೆದ ಊರಾದ ಆನಂದಪುರ೦ಗೆ ಬಂದು ಇವರ ತಂದೆ ಸುಮಾರು 40 ವರ್ಷ ಅರ್ಚಕರಾಗಿದ್ದ ಶ್ರೀರಂಗನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲು ಆಗಮಿಸಿದ್ದರು.
ನಾನು ಮಧ್ಯಾಹ್ನ 12ರ ನಂತರ ಇವರ ಬೇಟಿ ನಿಗದಿ ಆಗಿತ್ತು , ನಮ್ಮ ಮಲ್ಲಿಕಾ ವೆಜ್ ಬೆಳಗಿನ ಉಪಹಾರ ಬೆಳ್ಳುಳ್ಳಿ ಬಳಸದ ಚಟ್ನಿ - ಸಾಂಬರ್ ಇವರಿಗಾಗಿ ವ್ಯವಸ್ಥೆ ಮಾಡಿಸಿದ್ದೆ ಇವರೆಲ್ಲರೂ ನಮ್ಮ ಮಲ್ಲಿಕಾ ವೆಜ್ ನಲ್ಲಿ ಇಡ್ಲಿ ವಡೆ - ಮಲೆನಾಡಿನ ವಿಶೇಷವಾದ ಹಲಸಿನ ಎಲೆ ಕೊಟ್ಟೆ ಕಡಬು - ಖಾಲಿ ದೋಸೆ - ಪಿಲ್ಟರ್ ಕಾಫಿ ಸೇವಿಸಿ ಬಿಲ್ ಪಾವತಿಸಲೇ ಬೇಕೆಂಬ ಅವರ ಒತ್ತಾಯ ನಾನು ನಿರಾಕರಿಸಿದೆ.
Comments
Post a Comment