#ಕನಸಲ್ಲಿ_ಯಾವಾಗಲೂ_ಆನೆಗಳೇ_ಕಾಣುವ_ನನಗೆ_ಆನೆ_ಸಾಕುವ_ಆಸೆ_ಬಾಲ್ಯದಿಂದ
#ಕೇರಳದ_ಮುಖ್ಯಮಂತ್ರಿ_ಕರುಣಾಕರನ್_ಆನೆ_ಹರಕೆಗೆ_ಸಕ್ಕರೆಬೈಲಿನ_ಆನೆ.
#ಅವತ್ತಿನ_ಬೆಲೆ_65_ಸಾವಿರ_ರೂಪಾಯಿ.
#ವಿಳಂಬವಾಗಿದ್ದ_ಆನೆ_ಹಸ್ತಾಂತರ
#ಹರಕೆಯ_ಆನೆ_ಹಸ್ತಾಂತರಕ್ಕೆ_ನಾನೂ_ಭಾಗಿಯಾಗಿದ್ದು.
#ಬಾಲ್ಯದಿಂದ_ಆನೆ_ಸಾಕುವ_ಕನಸು_ನನಸಾಗಲೇ_ಇಲ್ಲ.
ಕೇರಳದ ಮುಖ್ಯಮಂತ್ರಿ ಕೆ.ಕರುಣಾಕರನ್ ಗುರುವಾಯೂರು ಕೃಷ್ಣ ದೇವಾಲಯಕ್ಕೆ ಆನೆ ನೀಡುವ ಹರಕೆ ತೀರಿಸಲು ರಾಜ್ಯ ಸರಕಾರಕ್ಕೆ ಆನೆಗಾಗಿ ಅರ್ಜಿ ಸಲ್ಲಿಸಿದ್ದರು, ಅಂತಿಮವಾಗಿ ನಮ್ಮ ಶಿವಮೊಗ್ಗ ಜಿಲ್ಲೆಯ ಸಕ್ಕರೆಬೈಲು ಆನೆ ಸಫಾರಿಯಿಂದ 65 ಸಾವಿರ ಡಿಡಿ ಪಾವತಿಸಿಕೊಂಡು ಆನೆ ನೀಡಲು ಆಗಿನ ಜನತಾ ದಳದ ಸರ್ಕಾರ ಆದೇಶಿಸಿತ್ತು.
ಆದರೆ ಕರುಣಾಕರನ್ ಕ್ಷೇತ್ರ ಮಾಲಾದ ಚುನಾವಣಾ ಉಸ್ತುವಾರಿ ಪಣಿಕರ್ ಶಿವಮೊಗ್ಗಕ್ಕೆ DD ಜೊತೆ ಬಂದು ಎಷ್ಟೇ ಪ್ರಯತ್ನಿಸಿದರೂ ಆನೆ ಹಸ್ತಾಂತ ಕೆಲಸ ಮಾತ್ರ ವಿಳಂಬ ಆಗುತ್ತಿತ್ತು ಕಾರಣ ಕರ್ನಾಟಕ ರಾಜ್ಯದಲ್ಲಿ ಆಗಿನ ಜನತಾ ದಳ ಸರ್ಕಾರ ಕೇರಳ ಕಾಂಗ್ರೇಸ್ ಗೆ ಸಹಕರಿಸುತ್ತಿರಲಿಲ್ಲವಂತೆ.
ಆಗ ಶಿವಮೊಗ್ಗದ ಜಿಲ್ಲಾ ಪಂಚಾಯತ್ ನಲ್ಲಿ ನನ್ನದೇ ಆದ ಹೋರಾಟಗಳಿಂದ ನಾನು ಪ್ರಸಿದ್ದಿ ಪಡೆದಿದ್ದರಿಂದ ಪಣಿಕರ್ ನನ್ನ ಸಹಾಯ ಕೇಳಿದರು, ಆಗಿನ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಶ್ರೀಮತಿ ಬಲ್ಕೀಷ್ ಬಾನು ಅವರು ಜನತಾ ದಳದವರು ಮತ್ತು ಜೆ.ಹೆಚ್.ಪಟೇಲರ ಅನುಯಾಯಿಗಳು.
ವಿರೋದ ಪಕ್ಷದ ನನ್ನ ಹೋರಾಟ ಸದಾ ಬೆಂಬಲಿಸುವ ಪ್ರಜಾಪ್ರಭುತ್ವ ಮೌಲ್ಯಗಳಿಗೆ ಬೆಲೆ ನೀಡುವ ವಿದ್ಯಾವಂತ ಮುಸ್ಲಿಂ ಮಹಿಳೆ ಆದ್ದರಿಂದ ಅವರ ಸಹಾಯ ಪಡೆದು ಅವತ್ತೇ ಸಂಜೆ ಆನೆ ಲಾರಿ ಏರಿ ಕೇರಳದ ಗುರುವಾಯೂರು ದೇವಸ್ಥಾನದ ಕಡೆ ಹೊರಟಿತು.
ಪಣಿಕರ್ ಕೇರಳಕ್ಕೆ ಆಹ್ವಾನಿಸಿದರು, ಕರುಣಾಕರ್ ಬೇಟಿಗೂ ವ್ಯವಸ್ಥೆ ಮಾಡಿದರು ಆದರೆ ಸಮಯ ಕೂಡಿ ಬರಲಿಲ್ಲ, 1996ರ ಚುನಾವಣೆಯಲ್ಲಿ ಅವರು ಸೋತರು ಪಣಿಕ್ಕರ್ ಇದಾರೋ ಇಲ್ಲ ಗೊತ್ತಿಲ್ಲ.
ಆದರೆ ಕೇರಳದ ಮುಖ್ಯಮಂತ್ರಿ ಕೆ.ಕರುಣಾಕರ್ ಅವರ ಹರಕೆಯ ಆನೆ ಸಲ್ಲಿಸುವ ಕೆಲಸದಲ್ಲಿ ನನ್ನ ತೃಣ ಮಾತ್ರದ ಸಹಕಾರ ಗುರುವಾಯೂರು ಶ್ರೀಕೃಷ್ಣನಿಗೆ ತಲುಪಿದೆ ಎಂಬ ಭಾವನೆ ನನ್ನದು.
ಗುಂಡೂರಾವ್ ಸರ್ಕಾರದ ಪತನದ ನಂತರ ಅನೇಕ ವರ್ಷಗಳ ನಂತರ 1989 ರಲ್ಲಿ ಸಾಗರ ವಿಧಾನ ಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಕಾಗೋಡು ತಿಮ್ಮಪ್ಪರ ವಿಜಯೋತ್ಸವಕ್ಕೆ ಆನೆ ತರಿಸಿದ್ದೆ.
ಈಗಲೂ ಊರಿಗೆ ಬರುವ ಆನೆಗೆ ಮತ್ತು ಮಾಹುತರಿಗೆ ಕಪ್ಪ ಕಾಣಿಕೆ ಸಲ್ಲಿಸಿ ಸಂತೋಷ ಪಡುವುದು ನನ್ನ ಅಭ್ಯಾಸ, ನನ್ನ ಮತ್ತು ಆನೆ ಸಂಬಂದ ನೋಡಿದ ಗೆಳೆಯರಾದ ತರಕಾರಿ ವ್ಯಾಪಾರಿ ನ್ಯಾಮತಿ ಉಮೇಶರು, ಯಾವುದೋ ಒಂದು ಮಠದ ಆನೆ ಒಂದು ತಿಂಗಳು ಸಾಕಲು ನನ್ನ ಸುಪರ್ದಿಗೆ ಬಿಡುವ ಮಾತು ಕಥೆ ಆಗಿತ್ತು ಅಷ್ಟರಲ್ಲಿ ಅವರಿಗೆ ಪಾರ್ಶ್ವವಾಯು ಆಗಿದ್ದರಿಂದ ಕಾರ್ಯರೂಪಕ್ಕೆ ಬರಲಿಲ್ಲ.
ಆದರೆ ನನ್ನ ಜೀವನದಲ್ಲಿ ಆನೆ ಸಾಕುವ ಮತ್ತು ಈಜು ಕೊಳ ನಿರ್ಮಿಸುವ ಆಸೆ ಇನ್ನೂ ನನಸಾಗಿಲ್ಲ, ಆದ್ದರಿಂದ ಮುಂದಿನ ದಿನದಲ್ಲಿ ಆ ಕನಸು ನನಸು ಮಾಡುವ ಪ್ರಯತ್ನ ಮಾಡಬೇಕಾಗಿದೆ.
ಆನೆನಾದರೂ ಸಾಕಬಹುದು ಮಾಹುತರನ್ನು ಸಾಕುವುದು ಕಷ್ಟ ಅನ್ನುತ್ತಾರೆ!?
Comments
Post a Comment