Skip to main content

Blog number 1815. ಅಜಿನೊಮೊಟೋ, ಟೇಸ್ಟಿಂಗ್ ಪೌಡರ್, ಚೈನಿಸ್ ಸಾಲ್ಟ್ ನಮ್ಮ ನಿತ್ವದ ಆಹಾರದಲ್ಲಿ ನಮ್ಮ ದೇಹ ಸೇರುವ ನಿದಾನ ವಿಷ.

#ಚೈನೀಸ್_ಸಾಲ್ಟ್_ಎಂಬ_ಹೆಸರಿನ_ಅಜಿನೋಮೊಟೊ 

#ಚೈನೀಸ್_ಪುಡ್_ದಾಟಿ_ದಕ್ಷಿಣಭಾರತೀಯ_ಸಾಂಬಾರ್_ತಿಳಿಸಾರು_ತಲುಪಿದೆ

#ಭಾರತ_ಸರ್ಕಾರದ_ಪುಡ್_ಅಂಡ್_ಡ್ರಗ್_ಅಡ್ಮಿನಿಸ್ಟ್ರೇಷನ್_ಇದರ_ಬಳಕೆಗೆ_ಅನುಮತಿ_ನೀಡಿದೆ.

#ನಾಲಿಗೆಗೆ_ರುಚಿ_ಆರೋಗ್ಯಕ್ಕೆ_ಹಾನಿಕರ

#ಅಜಿನೋಮೊಟೋ_ಅಥವ_MSG

#ಟೇಸ್ಟಿಂಗ್_ಪೌಡರ್_ಎಂಬ_ಹೆಸರು_ಬಳಕೆಯಲ್ಲಿದೆ.

#ಈಗ_ಎಲ್ಲಾ_ಹೋಟೆಲ್_ಬೇಕರಿಗಳಲ್ಲಿ_ಭರಪೂರ_ಬಳಕೆ.

#ಈ_ಮನುಷ್ಯನನ್ನು_ಕೊಲ್ಲೂವ_ನಿದಾನ_ವಿಷ_ಬೇಕಾ?

#ಎಲ್ಲಾ_ಆಹಾರ_ಉತ್ಪಾದಕರು_ಅಡುಗೆಯವರು_ಇದನ್ನು_ಬಳಸಬಾರದು.

#ಹೋಟೆಲ್_ಮಾಲಿಕರಲ್ಲಿ_ಇದರ_ಬಗ್ಗೆ_ಪಾಪ_ಪ್ರಜ್ಞೆ_ಬರಲಿ.
   ಸಕ್ಕರೆಯ ಹರಳಿನಂತಹ ಈ ಅಜಿನೋ ಮೋಟೋ ಅಥವ MSG ಅಥವ ಟೇಸ್ಟಿಂಗ್ ಪೌಡರ್ ಬಳಸದ ಹೋಟೆಲ್ ವಿರಳ ಇದನ್ನು ಬಳಸದೆ ಅಡುಗೆ ಮಾಡಲು ಸಾಧ್ಯವಿಲ್ಲ ಎಂಬ ತೀರ್ಮಾನಕ್ಕೆ ಅಡುಗೆ ಭಟ್ಟರು ಬಂದಾಗಿದೆ.
  ಇದನ್ನು ಬಳಸಿದರೆ ಅಡುಗೆಯಲ್ಲಿ ಹೇಗೆ ಕೊರತೆ ಆದರೂ ಇದು ನೀಡುವ ವಿಶೇಷ ರುಚಿ - ಖಾರಾ - ಪರಿಮಳದಿಂದ ಊಟ ತಿಂಡಿ ನಾಲಿಗೆಗೆ ಕ್ಷಣಿಕವಾಗಿ ರುಚಿ ನೀಡುತ್ತದೆ, ಪದೇ ಪದೇ ತಿನ್ನಲೇ ಬೇಕೆಂಬ ವಾಂಚೆ ಮೂಡಿಸುತ್ತದೆ.
 ಇದನ್ನು ಹೆಚ್ಚು ಬಳಸುವ ಸ್ಥಳಕ್ಕೆ ಹೆಚ್ಚು ಗ್ರಾಹಕರು ಬರುತ್ತಾರೆ ಆದ್ದರಿಂದ ಅಜಿನೋಮೊಟೋ ಬಳಸದ ಹೋಟೆಲ್ ತುಂಬಾ ಕಡಿಮೆ.
  ಆದರೆ ಅಜಿನೋಮೋಟೋ ನಿರಂತರ ಸೇವನೆಯಿಂದ ಇದು ಮನುಷ್ಯನ ಅಪದಮನಿಗಳನ್ನು ನಿರ್ಬಂಧಿಸುತ್ತದೆ ಇದರಿಂದ ಹೃದಯಾಘಾತಗಳು ಹೆಚ್ಚು.
  ಎದೆ ನೋವು, ಉಸಿರಾಟದ ಸಮಸ್ಯೆ, ಡಯಾಬಿಟಿಸ್, ಹೃದ್ರೋಗ ಮಕ್ಕಳಲ್ಲಿ ಬುದ್ದಿಶಕ್ತಿ ಕುಂಟಿತ ಮತ್ತು ದೈಹಿಕ ಬೆಳವಣಿಗೆಯಲ್ಲಿ ಸ್ಥೂಲಕಾಯಕ್ಕೆ ಕಾರಣ ಆಗುತ್ತಿದೆ.
   ಸಣ್ಣ ವಯಸ್ಸಲ್ಲಿ ಹೃದಯ ಸ್ಥಂಬನದಿಂದ ಮೃತರಾಗುತ್ತಿರುವ ಈಗಿನ ಯುವ ಜನಾಂಗದಲ್ಲಿ ಈ ಅಜಿನೋಮೋಟೋ ಕಾರಣವಾದರೂ ಇದರ ಬಳಕೆಯ ದುಷ್ಪರಿಣಾಮದ ಅರಿವೇ ಇಲ್ಲದ ಹೋಟೆಲ್ ಮಾಲಿಕರಿಂದ ಗ್ರಾಹಕರಿಗೆ ಈ ನಿದಾನ ವಿಷ ನಿರಂತರವಾಗಿ ಉಣಬಡಿಸಲಾಗುತ್ತಿದೆ.
   ಅಜಿನೋಮೊಟೋ ಬಳಸುವವರು ಅತಿಯಾಗಿ ಬೆವರುವುದು, ತಲೆ ತಿರುಗುವಿಕೆ ಮತ್ತು ಮೆದುಳಿನ ಪ್ರಾರಂಬಿಕ ಆರೋಗ್ಯ ಸಮಸ್ಯೆಯಿಂದ ಬಳಲುವಾಗಲೇ ಈ ಬಗ್ಗೆ ಜಾಗೃತರಾಗಬೇಕು.
  ಅಜಿನೋಮೋಟೋ ಅಥವ MSG ಎಂಬ ಇದು ನೈಸರ್ಗಿಕವಾಗಿ ಕಂಡುಬರುವ ಅಮೈನೋ ಆಮ್ಲದ ಒಂದು ರೂಪ ಇದನ್ನು ಕಬ್ಬು, ಸಕ್ಕರೆ, ಸೋಡಿಯಂ ಅಥವ ಜೋಳದಂತ ಸಸ್ಯ ಆದಾರಿತ ಪದಾರ್ಥಗಳಿಂದ ತಯಾರಿಸುತ್ತಾರೆ ಎನ್ನಲಾಗಿದೆ ಆದರೆ ಇದು ಹಂದಿಯ ಪ್ರಾಣಿ ಜನ್ಯದಿಂದ ತಯಾರಿಸಲಾಗುತ್ತಿದೆ ಎಂದು ಇಂಡೋನೇಷಿಯದಲ್ಲಿ ಬಹಿಷ್ಕಾರವೂ ಹಾಕಲಾಗಿತ್ತು. 
  ಇದನ್ನು ಪ್ರಾರಂಭದಲ್ಲಿ ಚೈನಿಸ್ ಅಡುಗೆ ರೆಸಿಪಿಯಲ್ಲಿ ಕಡ್ಡಾಯವಾಗಿ ಸೂಪ್, ನ್ಯೂಡಲ್ಸ್, ಮಂಚೂರಿಯನ್, ಪ್ರೈಡ್ ಪುಡ್, ಜಂಕ್ ಫುಡ್ ನಲ್ಲಿ ಬಳಸಲು ಪ್ರಾರಂಭವಾಗಿ ಈಗ ದಕ್ಷಿಣ ಭಾರತದ ತಿಳಿಸಾರಿಗೂ ಬಳಸುವ ತನಕ ಪಾಕ ಪ್ರವೀಣರು ಮುಂದಾಗಿದ್ದಾರೆ.
  ಹಾಗಂತ ಅಜಿನೋಮೋಟೋ ಎಂಬ ಜಪಾನ್ ನ ಬಹುರಾಷ್ಟ್ರೀಯ ಕಂಪನಿ 36 ದೇಶದಲ್ಲಿ 33 ಸಾವಿರ ಕಾರ್ಮಿಕರ ಲಕ್ಷಾಂತರ ಕೋಟಿಯ ವಹಿವಾಟು ಕ೦ಪನಿ ಆಗಿದೆ.
  1908 ರಲ್ಲಿ ಜಪಾನಿನ ರಸಾಯನ ಶಾಸ್ತ್ರಜ್ಞ ಕಿಕುನೆ ಇರೆಡ ಇದನ್ನು ಕಂಡು ಹಿಡಿದಿದ್ದು ಇದನ್ನು 1909 ರಿಂದ ವಾಣಿಜ್ಯವಾಗಿ ಉತ್ಪಾದನೆ ಪ್ರಾರಂಬಿಸಿದ್ದು ಜಪಾನಿನ ಅಜಿನೋಮೋಟೋ ಎಂಬ ಬಹುರಾಷ್ಟ್ರೀಯ ಕಂಪನಿ 
  ಇದು ಕ್ಯಾನ್ಸರ್ ಕಾರಕ ಎಂದು ಮುಂದುವರಿದ ರಾಷ್ಟ್ರಗಳು ಜನ ಜಾಗೃತಿ ಮೂಡಿಸುವ ಕೆಲಸ ಪ್ರಾರಂಬಿಸಿದೆ ಆದರೆ ಭಾರತ ಸರ್ಕಾರದ ಪುಡ್ & ಡ್ರಗ್ ಅಡ್ಮಿನಿಸ್ಟ್ರೇಷನ್ ಇದನ್ನು ಸುರಕ್ಷಿತವೆಂದು ಗುರುತಿಸಿರುವುದು ದುರಂತ.
  ಇದನ್ನು ಹೆಚ್ಚು ಬಳಸುವ ಚೈನಾದಲ್ಲಿ ಕ್ಯಾನ್ಸರ್ ನಿಂದ ಬಳಲುವವರು ಅಮೇರಿಕಾಗಿಂದ ಒಂದೂವರೆ ಪಟ್ಟು ಹೆಚ್ಚು ಮತ್ತು ಜೀರ್ಣಾಂಗದ ಕ್ಯಾನ್ಸರ್ ರೋಗದಿಂದ ಸಾಯುವವರ ಸಂಖ್ಯೆ ಹೆಚ್ಚಾಗಿದೆ ಎಂಬ ಸಮೀಕ್ಷಾ ವರದಿಗಳಿದೆ.
   ನನ್ನ ಆಹಾರ ಉದ್ಯಮದಲ್ಲಿ ಪ್ರಾರಂಭದಿಂದಲೂ ಅಜಿನೋಮೋಟೋ, ಅಪಾಯಕಾರಿ ಕೃತಕ ಬಣ್ಣ ಮತ್ತು ಕೃತಕ ಪ್ಲೇವರ್ ಬಳಕೆ ನಿಷೇದ ಮಾಡಿದ್ದೇನೆ ಇದರಿಂದ ಜನರಿಗೆ ಈ ನಿದಾನ ವಿಷ ಉಣಬಡಿಸುತ್ತಿಲ್ಲ ಎಂಬ ಸಮಾಧಾನವಿದೆ ಆದ್ದರಿಂದ ರುಚಿ ವ್ಯತ್ಯಾಸವಾದರೂ ಪರವಾ ಇಲ್ಲ ಆರೋಗ್ಯಕರ ಆಹಾರ ಶುಚಿಯಾಗಿ ನೀಡುವ ನನ್ನ ಉದ್ದೇಶ 12 ವಷ೯ದಿಂದ ಸಫಲವಾಗಿದೆ.
  ಈ ವಿಧಾನ ವಿಷ ಆಹಾರ ಸೇವಿಸುವವರು ಗೊತ್ತಿಲ್ಲದೇ ಸೇವಿಸುತ್ತಿದ್ದಾರೆ ಆದರಿಂದ ಸಣ್ಣ ವಯಸ್ಸಿನ ಅನೇಕರು ಹೃದಯ ಸಂಬಂದಿ ಸಾವಿಗೆ  ಹೋಟೆಲ್ ಮಾಲಿಕರು ಕಾರಣವಾಗುತ್ತಿರುವುದು ಮತ್ತು ಇದನ್ನು ಆಹಾರದಲ್ಲಿ ಇದನ್ನ ಸೇರಿಸಿ ಆಹಾರ ತಯಾರಿಸುವ ಅಡುಗೆ ಸಿಬ್ಬಂದಿಗಳೂ ಶಾಮೀಲಾಗುತ್ತಿರುವುದು ಅಘಾತಕಾರಿ ವಿಷಯವಾಗಿದೆ.
  ದಿನೇ ದಿನೇ ಭಾರತದಲ್ಲಿ ಅಜಿನೋಮೋಟೋ ಬಳಕೆ ಹೆಚ್ಚಾಗುತ್ತಿರುವುದು ದುರಂತವೇ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...