#ಕಪಾಲ_ಭಾತಿ_ಎಂಬ_ಉತ್ಕೃಷ್ಟ_ಯೋಗ
#ಇಡೀ_ದೇಹದ_ಅಂಗಾಗಗಳಿಗೆ_ಆರೋಗ್ಯ_ವೃದ್ಧಿ
#ಸಿದ್ದ_ಸಮಾದಿ_ಯೋಗ_2008ರ_ತರಬೇತಿಯಲ್ಲಿ_ಕಲಿತದ್ದು.
#ತರಬೇತಿ_ನೀಡಿದವರು_ದಿವಂಗತ_ಕುಮಾರ್_ಗುರೂಜಿ.
#ಭಾರತೀಯ_ಪ್ರಾಚೀನ_ಯೋಗ_ವಿಧ್ಯೆ_ಇದು.
#ಭಾರತೀಯ_ಆಯುಷ್_ಸಚಿವಾಲಯ_ಇದರ_ಬಗ್ಗೆ_ಹೆಚ್ಚಿನ_ಮಾಹಿತಿ_ಘೋಷಿಸಿದೆ.
https://youtu.be/QqQHGz8xO8s?feature=shared
ಕಪಾಲಭಾತಿ ಎಂಬ ವೇಗದ ಉಸಿರಾಟದ ವ್ಯಾಯಾಮ ಅಥವಾ ಪ್ರಾಣಯಾಮ ಯೋಗಿಗಳು ತಮ್ಮ ಮೆದಳನ್ನು ಸ್ವಚ್ಚಗೊಳಿಸಲು ಅಭ್ಯಾಸ ಮಾಡುತ್ತಾರೆ.
ಕಪಾಲ ಅಂದರೆ ತಲೆ ಬುರುಡೆ ಭಾತಿ ಅಂದರೆ ಹೊಳೆಯುವುದು.
ಕಮ್ಮಾರನ ತಿದಿಯಂತೆ ಉಸಿರಾಟದ ಈ ವ್ಯಾಯಾಮ ಸರಿಯಾದ ತರಬೇತುದಾರರಿಂದಲೇ ಕಲಿಯಬೇಕು ಮತ್ತು ಇದನ್ನು ಅಧಿಕ ರಕ್ತದೊತ್ತಡ ಇರುವವರು, ಮೂಗಿನಲ್ಲಿ ಧೀರ್ಘ ಕಾಲದ ರಕ್ತ ಸ್ರಾವ ಇದ್ದವರು, ಪಾರ್ಶ್ವವಾಯು, ಮೈಗ್ರೇನ್ ಮತ್ತು ಹೊಟ್ಟೆಯಲ್ಲಿ ಹುಣ್ಣು ಇದ್ದವರು ಇದನ್ನು ಮಾಡಬಾರದು.
2008ರಲ್ಲಿ ನಮ್ಮ ಕೃಷ್ಣ ಸರಸ ಕಲ್ಯಾಣಮಂಟಪದಲ್ಲಿ ಸಿದ್ಧ ಸಮಾದಿ ಯೋಗ (ಪ್ರಭಾಕರ ಗುರೂಜಿ ಸಂಸ್ಥೆ )ತರಬೇತಿ ಶಿಭಿರ ನಡೆದಾಗ ನಾನು ನನ್ನ ಪತ್ನಿ ಮಗಳು ಮಗ ಮತ್ತು ನನ್ನಣ್ಣನ ಕುಟುಂಬದ ಎಲ್ಲರೂ ಈ ಕ್ಲಾಸ್ ಗಳಿಗೆ ಸೇರಿ ತರಬೇತಿ ಪಡೆದಿದ್ದೆವು ಆಗ ತರಬೇತಿ ನೀಡಿದ ಸಿದ್ದ ಸಮಾದಿ ಯೋಗದ ಶಿಕ್ಷಕರು ಕುಮಾರ್ ಗುರೂಜಿ (ಇತ್ತೀಚಿಗೆ ಇಹ ಲೋಕ ತ್ಯಜಿಸಿದರು) ಅತ್ಯಂತ ಶಿಸ್ತಿನ ತರಬೇತಿ ನೀಡಿದ್ದರು.
2018 ರಲ್ಲಿ ನನ್ನ ಹೊಕ್ಕುಳಿನಲ್ಲಿ ಹರ್ನಿಯಾ ಆಗಿದ್ದರಿಂದ ಅದರ ಶಸ್ತ್ರಚಿಕಿತ್ಸೆಗೆ ವೈದ್ಯರು ಶಿಪಾರಸ್ಸು ಮಾಡಿದ್ದರು ಆದರೆ ನನ್ನ ತಂದೆ ಇದಕ್ಕೆ ಸುಲಭ ಚಿಕಿತ್ಸೆ ನೀಡುತ್ತಿದ್ದನ್ನು ನೋಡಿದ್ದೆ ಅದೇನೆಂದರೆ ಹೊಟ್ಟೆ ಸುತ್ತ ಬಿಗಿಯಾಗಿ ಬಟ್ಟೆ ಸುತ್ತುವುದರಿಂದ ಕ್ರಮೇಣ ಹೊಟ್ಟೆಯ ಸ್ನಾಯುಗಳ ಗೋಡೆಯ ಬಿರುಕು ಕೂಡಿಕೊಂಡ ನಂತರ ಹರ್ನಿಯಾ ಇರುವುದಿಲ್ಲ ಆದ್ದರಿಂದ ಈ ಸ್ವಯಂ ಚಿಕಿತ್ಸೆ ನಾಲ್ಕು ವರ್ಷ ನಿರಂತರವಾಗಿ ಮಾಡುತ್ತಿದ್ದ ಕಾಲದಲ್ಲಿ ಕಪಾಲಭಾತಿ ಮಾತ್ರ ನನ್ನ ನಿತ್ಯ ಅಭ್ಯಾಸದಿಂದ ತಾತ್ಕಾಲಿಕವಾಗಿ ನಿಲ್ಲಿಸಿದ್ದೆ ಈಗ ಸಂಪೂರ್ಣ ಗುಣವಾಗಿದ್ದರಿಂದ ಈಗ ಕಳೆದ ವರ್ಷದಿಂದ ಪ್ರಾರಂಬಿಸಿದ್ದೇನೆ ಈಗ ಪ್ರತಿ ದಿನ ನೂರು ಕಪಾಲಭಾತಿ ಮಾಡುತ್ತಿದ್ದೇನೆ ಮೊದಲೆಲ್ಲ 500 ಮಾಡುತ್ತಿದ್ದೆ.
ಈ ಬಗ್ಗೆ ಯೋಗ ತಜ್ಞ ಡಾಕ್ಟರ್ ಬಸವರಾಜ ಸಿದ್ದಾಶ್ರಮ ಮತ್ತು ಇವರ ಪೂರ್ವಾಶ್ರಮದ ಸಹೋದರ ಯೋಗಿ ಶಾಂತಮುನಿ ಸ್ವಾಮಿಗಳ ಹತ್ತಿರ ಚರ್ಚಿಸಿದ್ದಾಗ ಅವರ ಅಭಿಪ್ರಾಯ ಕಪಾಲಭಾತಿ ಒಂದೇ ನಿರಂತರವಾಗಿ ಮಾಡಿದರೆ ಬೇರಾವ ಯೋಗಾಸನ ವ್ಯಾಯಮ ಬೇಡವೇ ಬೇಡ ಅಷ್ಟು ಪರಿಣಾಮಕಾರಿ ಈ ಭಾರತೀಯ ಪ್ರಾಚೀನ ಯೋಗಾಸನದ ಕಪಾಲಭಾತಿ ಅಂದಿದ್ದರು.
ಭಾರತೀಯ ಆಯುಷ್ ಸಚಿವಾಲಯ ಕೂಡ ಕಪಾಲಭಾತಿ ನಿತ್ಯ ಮಾಡುವುದರಿಂದ ದೇಹದ ಆರೋಗ್ಯದಲ್ಲಿ ಏನೇನು ಲಾಭ ಎಂದು ಘೋಷಿಸಿದೆ ನೋಡಿ....
ಇನ್ಸುಲಿನ್ ಹೆಚ್ಚು ಉತ್ಪಾದಿಸಲು ಕಾರಣವಾಗುತ್ತದೆ.
ಜೀರ್ಣಾಂಗ ಸರಿಪಡಿಸುತ್ತದೆ, ಮಲಬದ್ದತೆ, ಗ್ಯಾಸ್ಟ್ರಿಕ್, ಹೃದಯದ ಉರಿ ಶಮನವಾಗುತ್ತದೆ.
ರಕ್ತ ಸಂಚಾರ ಸರಾಗಗೊಳಿಸಿ ದೇಹದ ಹಾರ್ಮೋನು ನಿಯಂತ್ರಣ, ಸ್ತ್ರೀಯರ ಗರ್ಭಕೋಶದ ಪೈಬ್ರಾಯಿಡ್ ನಿವಾರಣೆ ಮಾಡುತ್ತದೆ.
ನಿದಾನವಾಗುವ ರಕ್ತ ಸಂಚಾರ ಸರಿಪಡಿಸುತ್ತದೆ, ಶ್ವಾಸಕೋಶದ ಸಾಮರ್ಥ್ಯ ವೃದ್ದಿ ಮಾಡುತ್ತದೆ, ತೂಕ ನಿಯಂತ್ರಣ, ನೆನಪಿನ ಶಕ್ತಿ, ಏಕಾಗ್ರತೆ ಜಾಸ್ತಿ ಮಾಡುತ್ತದೆ ಎಂದು ತನ್ನ ಸಂಶೋದನೆಗಳಿಂದ ತಿಳಿಸಿದೆ.
ಇದನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಿದೆ.
Comments
Post a Comment