Blog number 1825. ಬದುಕಿದ್ದಾಗ ತೆಗಳಲಾರದವ ಆ ವ್ಯಕ್ತಿ ಸತ್ತ ಮೇಲೆ ಹೊಗಳಿದರೂ ತೆಗಳಿದರೂ ಅದಕ್ಕೆ ಪ್ರತಿಕ್ರಿಯಿಸಲು ಅವನಿರುವುದಿಲ್ಲ ಇದು ಸತ್ತವರನ್ನ ತೆಗಳುವ ವಿಕೃತ ಮನಸ್ಸಿನ ಆನಂದ ಮಾತ್ರ.
#ರವಿಬೆಳೆಗೆರೆ_ಯಾರನ್ನೂ_ಮೆಚ್ಚಿಸಲು_ಬರೆದವರಲ್ಲ_ಅವರು_ಹಠಮಾರಿ
#ಆದರೆ_ಅವರ_ಬರವಣಿಗೆ_ಮೆಚ್ಚಿದವರು_ಅಪಾರ_ಸಂಖ್ಯೆಯಲ್ಲಿದ್ದಾರೆ.
#ರವಿಬೆಳೆಗೆರೆ_ಬರಹಗಳಿಂದ_ಮತ್ತು_ನನ್ನ_ಜನಪರ_ಹೋರಾಟಕ್ಕೆ_ಹಾಯ್_ಬೆಂಗಳೂರಲ್ಲಿ_ಬೆಂಬಲಿಸಿ_ಬರೆದ_ವರದಿಗಳಿಂದ
#ನಾನು_ರವಿಬೆಳೆಗೆರೆ_ಅಭಿಮಾನಿ
#ಪ್ರತಿವರ್ಷ_ಅವರ_ಸಂಸ್ಮರಣಾ_ದಿನ_ನಾನು_ಅವರನ್ನು_ಸ್ಮರಿಸಿ_ನನಗೆ_ತೋಚಿದ_ಅಕ್ಷರ_ನುಡಿನಮನ_ಅರ್ಪಿಸುತ್ತೇನೆ.
#ಇದನ್ನು_ಕೆಲ_ಗೆಳೆಯರು_ಸಹಿಸದೆ_ಕೆಟ್ಟದಾಗಿ_ಪ್ರತಿಕ್ರಿಯೆ_ಬರೆಯುವುದು_ಬೇಸರ_ಅನ್ನಿಸುತ್ತೆ.
#ಇದಕ್ಕೆ_ನನ್ನ_ಉತ್ತರಕ್ಕಿಂತ
#ಶಿವಮೊಗ್ಗದ_ಹೋರಾಟಗಾರ_ವಕೀಲ_ಮಿತ್ರರಾದ_ಶ್ರೀಪಾಲ್_ಬರೆದಿರುವ_ಪೋಸ್ಟ್
#ವ್ಯಕ್ತಿ_ಬದುಕಿದ್ದಾಗಲೇ_ತೆಗಳಲಾರದವರು_ಸತ್ತ_ಮೇಲೆ_ತೆಗಳುವುದು_ಸರಿ_ಅಲ್ಲ_ಎನ್ನುವುದು_ಸೂಕ್ತ_ಅನ್ನಿಸಿತು.
ಇದು ವಾಸ್ತವ ಮತ್ತು ಸತ್ಯವಾದ ಮಾತು, ಹೊಗಳಿದರೂ ತೆಗಳಿದರೂ ಪ್ರತಿಕ್ರಿಯಿಸಲು ಸತ್ತವರು ಇರುವುದಿಲ್ಲ.
ತೆಗಳಿ ತಮ್ಮ ವಿಕೃತ ಮನಸ್ಸು ಜಾಹೀರುಗೊಳಿಸಿ ಸಮಾಜದಲ್ಲಿ ಸಣ್ಣವರಾಗುವುದಕ್ಕಿಂತ,ಹೊಗಳಲಾಗದಿದ್ದಂತ ದ್ವೇಷ ಇದ್ದರೆ ಮೌನವಾಗಿದ್ದು ತಮ್ಮ ವೈಕ್ತಿತ್ವ ಕಾಪಾಡಿಕೊಳ್ಳಬೇಕಾದ್ದು ಸ್ವಸ್ಥ ಸಮಾಜದ ನಾಗರೀಕರ ಕತ೯ವ್ಯ ಕೂಡ.
ಇದಕ್ಕಾಗಿ ಗಾದೆ ಒಂದು ಇದೆ #ತಲೆ_ತೂಕ_ತಪ್ಪಿದರೂ_ನಾಲಿಗೆ_ತೂಕ_ತಪ್ಪ_ಬಾರದು ಅಂತ.
ಜನ ಪರವಾಗಿದ್ದವರಿಗೆ ವ್ಯವಸ್ಥೆಯ ಭಾಗವಾಗಿರುವ ತೋಳ್ಬಲ, ಹಣಬಲ ಮತ್ತು ಅಧಿಕಾರ ಬಲದಿಂದ ನೀಡುವ ತೊಂದರೆಗಳನ್ನ ಖಡಾಖಂಡಿತಾವಾಗಿ ಅವರಷ್ಟು ದೈಯ೯ವಾಗಿ ವಿರೋದಿಸಿ, ಜನಪರ ಹೋರಾಟಗಳಿಗೆ ನೀಡುತ್ತಿದ್ದ ನೈತಿಕ ದೈಯ೯ ಬೇರಾರಿಂದ ಸಾಧ್ಯವಾಗಿಲ್ಲ ಎನ್ನುವುದು ಅಷ್ಟೇ ಸತ್ಯ.
ಇಂತಹ ಬೆಂಬಲದ ಬರಹದಿಂದ ಸಾವಿರಾರು ಮಾನನಷ್ಟ ಕೇಸ್ ಗಳಿಂದಲೂ ಇವರನ್ನು ಕುಗ್ಗಿಸಲಾಗಲಿಲ್ಲ.
ಚಿತ್ರ ನಟಿಗೆ ಏಡ್ಸ್ ಬಂದಿದೆ ಅಂತ ಬರದಿದ್ದೇ ಹಿಡಿದುಕೊಂಡು ಈಗಲೂ ಚೊರಿಯುತ್ತಾರೆ,ಅದು ಬರೆದ ಮರು ವಾರವೇ ಕ್ಷಮೆ ಯಾಚಸಿ ಆಗಿದೆ ಅದು ಮುಗಿದ ಅಧ್ಯಾಯ ಎಲ್ಲರ ವೃತ್ತಿ ಜೀವನದಲ್ಲಿ ಇಂತಹದ್ದೊಂದು ಆಗೇ ಆಗಿರುತ್ತದೆ ಅದಕ್ಕೆ ಒಂದು ಗಾದೆ ಮಾತಿದೆ ನಡೆಯುವವ ಎಡವುತ್ತಾನೆ.
Comments
Post a Comment