Blog number 1842. ಶಂಭೂರಾಮನಿಗಾಗಿ ಮೊನಿ ಮೇಕ್ಸ್ ಮೆನಿ ಥಿಂಗ್ಸ್ ಗಾಧೆ ಕೊಂಚ ಮಾರ್ಪಾಡು ಮಾಡಿ ಬಿಸ್ಕೀಟ್ ಮೇಕ್ಸ್ ಮೆನಿ ಥಿಂಗ್ಸ್ ಅಂತ ಮಾಡಿದೆ.
https://youtu.be/ghIEwVr6yzI?feature=shared
#ಬಿಸ್ಕೀಟ್_ಮೇಕ್ಸ್_ಮೆನಿ_ಥಿಂಗ್ಸ್
#ನಮ್ಮ_ಶಂಭೂರಾಮನಿಗೆ
#ಮೊನಿ_ಮೇಕ್ಸ್_ಮೆನಿ_ಥಿಂಗ್ಸ್
#ನಮಗೆ_ನಿಮಗೆ
#ಗಾದೆ_ಮಾತು.
ಸಾಕು ನಾಯಿಗಳಿಗೆ ಬಿಸ್ಕೇಟ್ ಗಳ ಬಗ್ಗೆ ವಿಪರೀತ ಆಕರ್ಷಣೆ ಎಷ್ಟರ ಮಟ್ಟಿಗೆ ಅಂದರೆ ನಾಯಿ ಬಿಸ್ಕೇಟ್ ಗಳ ತಯಾರಿ ಮತ್ತು ಮಾರಾಟ ವಿಶ್ವದಾದ್ಯಂತ ಕೆಲವು ಬಿಲಿಯನ್ ಡಾಲರ್ ವಹಿವಾಟು ದಾಟಿದೆ.
ನಾನ್ ವೆಜ್ ಬಿಸ್ಕೇಟ್, ಚಿಕನ್ ಪ್ಲೇವರ್ ಬಿಸ್ಕೇಟ್ ಹೀಗೆ ತರಹಾವಾರಿ ಇದೆ ಹಾಗಂತ ಎಲ್ಲಾ ಬಿಸ್ಕೇಟ್ ಗಳನ್ನು ಸಾಕು ನಾಯಿ ತಿನ್ನುವುದಿಲ್ಲ ಮತ್ತು ಕೆಲ ಕಾಂಬಿನೇಷನ್ ಬಿಸ್ಕೇಟ್ ಕೆಲ ನಾಯಿಗಳ ಆರೋಗ್ಯ ಏರುಪೇರು ಮಾಡುವುದರಿಂದ ಸೂಕ್ತ ಬಿಸ್ಕೇಟ್ ಪೆಟ್ ಡಾಕ್ಟರ್ ಸಜೆಸ್ಟ್ ಮಾಡುತ್ತಾರೆ.
ಈ ಬಿಸ್ಕತ್ತುಗಳಿದ್ದರೆ ಮಾತ್ರ ನಾಯಿ ಮರಿ ಇದ್ದಾಗ ತರಬೇತಿ ಸರಾಗವಾಗುತ್ತದೆ, ಇದೊಂತರ ಲಂಚ ಕೊಟ್ಟು ಅವುಗಳ ತರಬೇತಿ ನೀಡುವ ಪರಿ ಇದು.
ಮುಂದಿನ ಮಾರ್ಚ್ ತಿಂಗಳಿಗೆ 3 ವರ್ಷ ತಲುಪುವ ನಮ್ಮ ಶಂಭೂರಾಮ ನಿತ್ಯ ಬೆಳಿಗ್ಗೆ ನನ್ನ 7000 ಹೆಜ್ಜೆ ಪೂರ್ಣ ಮಾಡುವ ನನ್ನ ವಾಕಿಂಗ್ ಸಾಥಿ ಇದಕ್ಕೆ ಒಂದೂಕಾಲು ಗಂಟೆಯಿಂದ ಒಂದೂವರೆ ಗಂಟೆ ಅವಧಿ ನನ್ನ ಜೊತೆ ಇರುತಾನೆ.
ಪ್ರಾರಂಭದ ಅರ್ದ ಗಂಟೆ ಅವನು ಹೆಚ್ಚಿನ ಜೋಶ್ ಮತ್ತು ಎನರ್ಜಿಯಿಂದ ಕುಣಿಯುವ ಓಡುವ ಅವನು ನಂತರ ಅಲ್ಲಲ್ಲಿ ಕುಳಿತು ನನ್ನ ನಡಿಗೆಯನ್ನು ಮಾನಿಟರಿಂಗ್ ಮಾಡುತ್ತಾನೆ ಏನು ಮಾಡಿದರೂ ಏಳುವುದಿಲ್ಲ ಆಗಲೇ ನಾನು ನಿತ್ಯ ವಾಕಿಂಗ್ ನಲ್ಲಿ ಅವನಿಗಾಗಿ ತಂದಿಟ್ಟುಕೊಳ್ಳುವ ನಾಲ್ಕು ಚಿಕ್ಕ ಬಿಸ್ಕತ್ತು ಹೊರ ತೆಗೆಯುತ್ತೇನೆ.
Comments
Post a Comment