Skip to main content

Blog number 1836. ಸಾಮಾಜಿಕ ಜಾಲ ತಾಣದ ವ್ಯಾಪ್ತಿ ... ಗೆಳೆಯ ರೈತ ಹೋರಾಟಗಾರ ಎನ್.ಡಿ. ವಸಂತ ಕುಮಾರ್ ನನ್ನ ಲೇಖನಕ್ಕೆ ಪ್ರತಿಕ್ರಿಯಿಸಿರುವುದು ಅವರಿಗೆ ಸಿದ್ಧ ಸುಮಾದಿ ಯೋಗದ ತರಬೇತಿಯಿಂದ ಲಭಿಸಿದ ಮಾನಸಿಕ ಸ್ಥಿರತೆ ಮತ್ತು ಮನೋದೈರ್ಯಕ್ಕೆ ಕಾರಣವಾಗಿದೆ.

#ಸಾಮಾಜಿಕ_ಜಾಲ_ತಾಣದ_ವ್ಯಾಪ್ತಿ.

#ನಾನು_ಅವರ_ಹೆಸರು_ಬಳಸದೆ_ಲೇಖನ_ಬರೆದೆ

#ಅವರೇ_ಪ್ರತಿಕ್ರಿಯಿಸಿ_ಇದು_ನನ್ನದೇ_ಕಥೆ_ನನ್ನ_ಹೆಸರು_ಹೇಳಲು_ಅವಮಾನ_ಇಲ್ಲ_ಎಂದಿದ್ದರು.

#ಆದ್ದರಿಂದ_ಗೆಳೆಯ_ಹೋರಾಟಗಾರ_ಎನ್_ಡಿ_ವಸಂತಕುಮಾರ್_ಅವರ_ಪೋಟೋ_ಪ್ರತಿಕ್ರಿಯೆಯೊಂದಿಗೆ.

#ಸಿದ್ದ_ಸಮಾದಿ_ಯೋಗದ_ತರಬೇತಿ_ಅವರಿಗೆ_ಈ_ಮಾನಸಿಕ_ಸ್ಥಿರತೆ_ದೈರ್ಯ_ತಂದಿದೆ.

 #ಮೊದಲಿಗೆ_ಅವರ_ಪ್ರತಿಕ್ರಿಯೆ_ಓದಿ_ಈ_ಪ್ರತಿಕ್ರಿಯೆಗೆ_ಕಾರಣವಾದ_ನನ್ನ_ಲೇಖನ_ಕೊನೆಯಲ್ಲಿ_ಇದೆ ...

     "ನೀವು ಬರೆದದ್ದು ಕಥೆಯಲ್ಲ ಸತ್ಯಕಥೆ. ನಾನೇ ಪೂರ್ಣ ಮರೆತಿರುವ ಒಂದೊಂದು ಶಬ್ದವನ್ನೂ ನೆನಪಿಟ್ಟುಕೊಂಡಿರುವ ನಿಮ್ಮ ಸ್ಮರಣ ಶಕ್ತಿಗೆ  ಹ್ಯಾಟ್ಸಾಪ್."

  #ಅರುಣ್_ಪ್ರಸಾದ್_ರವರಿಗೆ_ನಮಸ್ಕಾರಗಳು.

 ವ್ಯಕ್ತಿಯ ಹೆಸರು ಹೇಳಲಿಚ್ಚಿಸದ ನಿಮ್ಮ ಔದಾರ್ಯಕ್ಕೆ ಧನ್ಯವಾದಗಳು. ಆದರೆ ಆ ವ್ಯಕ್ತಿ ನಾನೇ(#ಎನ್_ಡಿ_ವಸಂತಕುಮಾರ್) ಎಂದು ಹೇಳಿಕೊಳ್ಳಲು ನನಗೆ ಯಾವುದೇ ಅವಮಾನವಿಲ್ಲ. ಏಕೆಂದರೆ ನೀವು ಹೇಳಿರುವುದು ಅಕ್ಷರಷಃ ಸತ್ಯ. 

ನಮ್ಮ ಕೊನೆಯ ಮಗ ರಿಷಿಗೆ 3 ತಿಂಗಳಾಗಿರುವಾಗ 2003 ಅಕ್ಟೋಬರ್‌ ತಿಂಗಳಲ್ಲಿ ಸಾಗರದ ಡಾಕ್ಟರ್ ಕೈ ಚಲ್ಲಿದ್ದಾಗ ನನ್ನಲ್ಲಿ ಹಣವಿಲ್ಲದೇ ಪರಿತಪಿಸುತ್ತಾ ಕುಳಿತಿದ್ದಾಗ ನೀವು ಅಕಸ್ಮಾತ್ ದೇವರಂತೆ ಬಂದು ಜೋಬಲ್ಲಿರುವ ಎಲ್ಲಾ ಹಣವನ್ನು ಕೊಟ್ಟು ಶಿವಮೊಗ್ಗಕ್ಕೆ ಕಳಿಸಿದಿರಿ. ಸಂಜಪ್ಪ ಆಸ್ಪತ್ರೆಯಲ್ಲಿ ತುಂಬಾ ಶ್ರಮಪಟ್ಟು ಮಗನನ್ನು ಉಳಿಸಿಕೊಟ್ಟರು. ಈಗ ಅವನಿಗೆ 19 ವರ್ಷ.

    2004 ರ ಎಪ್ರಿಲ್ ನಲ್ಲಿ ನನಗೆ ಜಿ.ಬಿ.ಎಸ್ ಎನ್ನುವ ಸುಮಾರು 20 ಲಕ್ಷಕ್ಕೊಬ್ಬರಿಗೆ ಬರುವ ಕಾಯಿಲೆ ನನಗೆ ಬಂದು  ನನ್ನ ಕೈಕಾಲು ಸೇರಿದಂತೆ ಇಡೀ ದೇಹ ನಿಸ್ಥೇಜಗೊಂಡಿತ್ತು. ಆ ಸಮಯದಲ್ಲಿ ಮಣಿಪಾಲಿನ ಕಸ್ತೂರಬಾ, ಬೆಂಗಳೂರಿನ ಸಾಯಿಬಾಬ, ನಿಮ್ಹಾನ್ಸ್, ಸೈಂಟ್ ಜಾನ್ಸ್ ನಂತಹ ಹಲವು ಆಸ್ಪತ್ರೆಗಳಲ್ಲಿ ತಿಂಗಳಾನುಗಟ್ಟಲೆ ಚಿಕಿತ್ಸೆ ಪಡೆದು ಶವವಾಗದೆ, ಜೀವಂತ ಶವವಾಗಿ ಮನೆ ಸೇರಿ ವರ್ಷಾನುಗಟ್ಟಲೆ ನರಳಿದ್ದು ಈಗ ನೆನಪು ಮಾತ್ರ.
  
   ಆ ಸಂದರ್ಭದಲ್ಲಿ ನಾನು ಮನೆಯಿಂದ ಒಯ್ದ ಹಣ ಕೇವಲ 2 ಸಾವಿರ ಮಾತ್ರ. ಆ ಸಂದರ್ಭದಲ್ಲಿ ನಿಮ್ಮ ಚುನಾವಣಾ ವೆಚ್ಚದ ಹಣದಲ್ಲಿ 50 ಸಾವಿರ ಕಳಿಸಿದ್ದು ಸೇರಿದಂತೆ ನೀವು ಹಲವು ರೀತಿಯಲ್ಲಿ ಮಾಡಿದ ಅನೇಕ ಸಹಾಯ, #ನೀವು_ಹಾಗೂ_ಸಿನಿಮಾ_ನಟ_ದೊಡ್ಡಣ್ಣ ಸೈಂಟ್ ಜಾನ್ ಆಸ್ಪತ್ರೆಗೆ ಬಂದು ಯೋಗ ಕ್ಷೇಮ ವಿಚಾರಿಸಿದ್ದು ಮರೆಯಲಾದೀತೆ.     

     ಇಷ್ಟಾದ ನಂತರ ಎಲ್ಲೋ ಒಂದು ಕನ್ನಡಿ ಹಿ೦ದಿನ ಗಂಟಿಗೆ ಆಸೆ ಪಟ್ಟು ನಿಮಗೆ ನೋವು ನೀಡಿದೆ. ಕ್ಷಮೆ ಕೇಳಿದ ನಂತರ ಮತ್ತೆ ಮೊದಲಿನಂತೆ ಹಾಗೆಯೇ ಇದ್ದೇವೆ.

   ಈ ಸಂದರ್ಭದಲ್ಲಿ ಒಂದು ವಿಚಾರ ನಿಮಗೆ ತಿಳಿಸಲೇಬೇಕು. ಯಾವುದೇ ಕುಟುಂಬದಲ್ಲಿ ಗಾಂಜಾ(ಡ್ರಗ್ಸ್) ವ್ಯಸನಿಯೊಬ್ಬ ಹುಟ್ಟಿದರೆ, ಜೀವಮಾನವಿಡಿ ದುಡಿಯದೇ, ಹಣಕ್ಕೋಸ್ಕರ ಯಾರನ್ನು ಬೇಕಾದರೂ ಬಲಿ ಕೊಡಲು ಹಿಂಜರಿಯಲಾರ. 31 ವರ್ಷ ಸಾಕಿ ಸಲಹಿ ಸಾಲ ಮಾಡಿ (ಬಿ.ಇ) ಓದಿಸಿ, ಸಾಲ ತೀರಿಸಲು ಹಲವಾರು ವರ್ಷ ಕೋರ್ಟ್‌ ಮೆಟ್ಟಿಲೇರಿ, ಹತ್ತಾರು ಲಕ್ಷ ಸಾಲ ಮಾಡಿ ಮದುವೆ ಮಾಡಿದ ಅಪ್ಪನನ್ನೆ ನೀನು ಏನು ಮಾಡಿದ್ದೀಯೆ ಎಂದು ಕೇಳುತ್ತಾನೆ. 

    ಇತಿಹಾಸದಲ್ಲಿ ಅಪ್ಪನನ್ನೆ ಸಾಯಿಸಿ ರಾಜ್ಯದ ಅಧಿಕಾರಕ್ಕೇರಿದ ಅನೇಕ ಉದಾಹರಣೆಗಳಿವೆ. ಆದರೆ ಅಪ್ಪನನ್ನು ಜೀವಂತ ಸಮಾಧಿ ಮಾಡಿ ರೌಡಿಯ ಫೋಜ್ ಕೊಟ್ಟು ಬೀಗುತ್ತಿರುವ ಈತನಿಗೆ ಕಾಲವೇ ಉತ್ತರ ಕೊಡಬಹುದು. ಉತ್ತರ ಸಿಗದೆಯೂ ಇರಬಹುದು. ಏಕೆಂದರೆ ಈ ಜಗತ್ತಿನಲ್ಲಿ ದುಡಿಯುವವರೆಲ್ಲ ನೆಮ್ಮದಿಯಿಂದ ಇಲ್ಲ. ಬೇರಯವರ ಬೆವರಿಂದಲೇ ಜೀವಿಸುವವರು ಹಾಯಾಗಿದ್ದಾರೆ. ಕನಿಷ್ಟ ನೀನು ತಿನ್ನವ ಅನ್ನವಾದರೂ ನಿನ್ನ ಬೆವರಿನದ್ದಾಗಿರಬೇಕು ಎಂದು 31 ವರ್ಷದವನಿಗೆ ಹೇಳಿದ್ದೇ ನನ್ನ ಅಪರಾದವಾಗಿದೆ.

  ಇದೇ ರೀತಿ 32 ವರ್ಷ ಸಂಸಾರ ಮಾಡಿದ ಹೆಂಡತಿ ಮಾಧಕ ವ್ಯಸನಿ ಮಗನೊಂದಿಗೆ ಸೇರಿಕೊಂಡು, ಅವನಿಗೆ ಜೊತೆಯಾಗಿ ಆಸ್ತಿಗಾಗಿ ಯಾವ ಮಟ್ಟಕ್ಕೆ ಇಳಿಯಬಹುದೋ ಅದನ್ನೆಲ್ಲ ಮಾಡಿದ್ದಾಳೆ.

ತಾವು ಮಾಡಿದ ಆರೋಪಗಳು ಸತ್ಯ ಅಲ್ಲ ಎಂದು ಇಬ್ಬರಿಗೂ ಗೊತ್ತು. ಈ ಆರೋಪ ಕೇವಲ ನನ್ನ ಆಸ್ತಿಗಾಗಿ ಎನ್ನುವುದು ಅವರ ಆತ್ಮಕ್ಕೆ ಗೊತ್ತಿದೆ. ಇನ್ನಾದರೂ ಈ ಆಸ್ತಿಯ ಮೇಲೇ ಕೋಟಿಗಟ್ಟಲೆ ಸಾಲ ಇದೆ, ಇದರಲ್ಲಿ ಕನಿಷ್ಠಪಕ್ಷ 10 ರೂಪಾಯಿಯೂ ನಮ್ಮದಿಲ್ಲ ಎನ್ನುವ ಅರಿವು ಇವರಿಗಾದರೆ ಸಾಕು. 

    ನಿಮಗೆ ಗೊತ್ತಿರುವಂತೆ ನಾವು ವಾಸವಾಗಿರುವ ಮನೆಯ ನಿವೇಶನದ ಸಾಲ, ಮನೆ ಕಟ್ಟಲು ಮಾಡಿದ ಸಾಲ, ಮುದ್ರಣಾಲಯಲಯಕ್ಕೆ ಮಾಡಿದ ಸಾಲ,  ತೋಟ ಮಾಡಲು ಮಾಡಿದ ಸಾಲ,  ಮನೆ ನವೀಕರಣಕ್ಕೆ ಮಾಡಿದ ಸಾಲ,  ಮದುವೆ ಸಾಲ ವಾಹನದ ಸಾಲ, ಜೀವನ ನಿರ್ವಹಣೆ ಸಾಲ, ಇತ್ಯಾದಿ. ನಾನು ಇಲ್ಲಿವರೆಗೂ ಕಟ್ಟಿದ ಹಾಗೂ ಕಟ್ಟಬೇಕಾದ ಬಡ್ಡಿ ಸುಮಾರು 50 ಲಕ್ಷಕ್ಕೂ ಅಧಿಕ. ನಮಗೆ ಜಮೀನು ಬರೆದುಕೊಟ್ಟವರಿಗೂ ಹಣ ಕೊಡುವುದಿದೆ. ಡೆವಲಪರ್ ಸುಮಾರು 2 ಕೋಟಿ ಹೂಡಿಕೆ ಮಾಡಿದ್ದಾರೆ. ನಿಮ್ಮಂತಹ ಅನೇಕ ಆತ್ಮೀಯರು 15 ಲಕ್ಷ, 10 ಲಕ್ಷ, 7 ಲಕ್ಷ , 5 ಲಕ್ಷ, 2 ಲಕ್ಷ ಹೀಗೆ ನಂಬುಗೆಯ ಮೇಲೆ ಹಣ ಕೊಟ್ಟಿರುವುದೇ 1 ಕೋಟಿಗೂ ಅಧಿಕ ಇದೆ. ನಿಮಗೂ ಈ ಪೀಲ್ಡಿನ ಅನುಭವ ಇದೆ.

    ದುಡಿಯದೇ ಬೇರೆಯವರ ಬೆವರಿನಲ್ಲಿಯೇ ನಾಚಿಕೆಯಿಲ್ಲದೇ ಜೀವಿಸುವವರಿಗೆ ಇದೆಲ್ಲ ಅರ್ಥ ಆಗುವುದಿಲ್ಲ. 

    ಈ ಜಗತ್ತಿನಲ್ಲಿ ಸುಮಾರು 20 ರಿಂದ 60 ನೇ ವಯಸ್ಸಿನವರೆಗಿನ ವ್ಯಕ್ತಿ, ಬೆವರು ಸುರಿಸಿ ದುಡಿದರೆ ಮಾತ್ರ ಒಂದು ತುತ್ತು ಅನ್ನ ತಿನ್ನುವ ಅರ್ಹತೆ ಬರುತ್ತದೆ. ಆಸ್ತಿ ಸಂಪಾದನೆ ಮಾಡಲಾರದ ಯಾವುದೇ ವ್ಯಕ್ತಿಗೆ ಆಸ್ತಿ ಮಾರುವ ಅರ್ಹತೆ ಖಂಡಿತಾ ಇರುವುದಿಲ್ಲ, ಮಾರುವ ಯೋಚನೆಯೂ ಬರಬಾರದು ಎಂದು ನಂಬಿರುವವನು ನಾನು.

    ಈಗ ಮನೆಯಲ್ಲಿ ಭಾಗ ಮಡಿಕೊಂಡು ಪ್ರತ್ಯೇಕವಾಗಿದ್ದೇನೆ.
ಇತಿ
N.D. ವಸಂತ್ ಕುಮಾರ್
ರೈತ ಹೋರಾಟ.
24- ನವೆಂಬರ್ -2022.

   ಇವರ ಮೇಲಿನ ಪ್ರತಿ ಕ್ರಿಯೆಗೆ ಕಾರಣವಾದ ನನ್ನ ಕಳೆದ ವರ್ಷದ ಲೇಖನ 23- ನವೆಂಬರ್-2022 ರಂದು ಪೇಸ್ ಬುಕ್ ಲ್ಲಿ ಪೋಸ್ಟ್ ಆಗಿದ್ದದ್ದು ಕೆಳಗೆ ಲಗತ್ತಿಸಿದೆ ಓದಿ....
  #ಒಂದು_ಬಂಗಾರದ_ಹವಳದ_ಹರಳಿನ_ಉ೦ಗುರದ_ಕಥೆ

#ಹವಳ_ದರಿಸಿದರೆ_ದೆಶೆ_ಎಂಬ_ಜೋತಿಷ್ಯರ_ಉವಾಚ

#ಗೆಳೆಯರ_ಸಂಕಷ್ಟ_ಪರಿಹರಿಸಿದ_ಹವಳದ_ಮಹಾತ್ಮೆ

#ಗೆಳೆಯರಿಗೆ_ಕೈಕೊಟ್ಟ_ಬಡ್ಡಿ_ವ್ಯಾಪಾರಿ

#ಹಳೇ_ಸಾಲ_ಹತ್ತು_ಸಾವಿರ_ನೀಡಿದರೆ_ಇಪ್ಪತ್ತು_ಸಾವಿರ_ನೀಡುವ_ಸುಳ್ಳು_ಭರವಸೆ

#ಮ೦ಗಳೂರು_ಆಸ್ಪತ್ರೆಯಲ್ಲಿ_ಹೆಂಡತಿಯ_ಆಪರೇಷನ್

https://arunprasadhombuja.blogspot.com/2022/11/blog-number-1080.html

  ಸಂಪನ್ನ ಸಜ್ಜನ ಮತ್ತು ರೈತ ಹೋರಾಟದ ಗೆಳೆಯರು ಆ ದಿನ ತಮ್ಮ 4 - 5 ವರ್ಷ ಪ್ರಾಯದ ತಮ್ಮ ಎರಡನೇ ಮಗನ ಜೊತೆ ಮನೆಗೆ ಬಂದು ಹೇಳಿದ ಕಥೆ ಕೇಳಿ ನಾನು ಕಣ್ಣೀರಾದೆ ನೀವೂ ಕೇಳಿ ಇದು 22 ವರ್ಷದ ಹಿಂದಿನ ಕಥೆ....
   ಅವರ ಪತ್ನಿಗೆ ಥ್ಯರಾಯಿಡ್ ಆಪರೇಷನ್ ಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲು ಮಾಡಿದ್ದರು ಮತ್ತು ಆಪರೇಷನ್ ಗೆ  20 ಸಾವಿರ ಹಣ ಪಾವತಿ ಮಾಡಬೇಕಾಗಿತ್ತು.
  ಗೆಳೆಯರ ಆರ್ಥಿಕ ಪರಿಸ್ಥಿತಿ ಆ ದಿನಗಳಲ್ಲಿ ತುಂಬಾ ಸ೦ಕಷ್ಟದಲ್ಲಿತ್ತು ಸಾಗರದ ಮಾರಿಗುಡಿ ಹಿಂಬಾಗದ ಒಂದು ಅವರ ಕುಲಭಾಂದವ ತ್ಯಾಗರ್ತಿ ಸಮೀಪದ ವೀರಾಪುರದ ಪೈನಾನ್ಷಿಯರ್ ಹತ್ತಿರ ತಮ್ಮ ಸಮಸ್ಯೆ ಹೇಳಿಕೊಂಡಿದ್ದಾರೆ ಆತ ನಿಮ್ಮ ಹತ್ತಿರ ಈಗ ಎಷ್ಟು ಹಣ ಇದೆ ಅಂದಿದ್ದಾನೆ ಹತ್ತು ಸಾವಿರ ಹೇಗೋ ಹೊಂದಿಸಿದ್ದೇನೆ ಇನ್ನೂ ಹತ್ತು ಸಾವಿರ ಬೇಕಾಗಿದೆ ಅಂದಾಗ ಆ ಪೈನಾನ್ಷಿಯರ್ ಒಂದು ಉಪಾಯ ಹೇಳಿದ್ದಾನೆ ಏನೆಂದರೆ ಆ ಹತ್ತು ಸಾವಿರ ಪೈನಾನ್ಷಿಯರ್ ಗೆ ಪಾವತಿ ಮಾಡುವುದರಿಂದ ಅದು ರೈತ ಹೋರಾಟಗಾರರ ಹಿಂದಿನ ಸಾಲ ಚುಕ್ತಾ ಮಾಡುವುದು ಮತ್ತು ತಕ್ಷಣ 20 ಸಾವಿರ ಮಂಜೂರು ಮಾಡುವುದು.
  ಅವತ್ತೇ ಸಂಜೆಯ 8 ಗಂಟೆಯ ಜೋಗ್ ಮಂಗಳೂರು ಗಜಾನನ ಬಸ್ಸಿನಲ್ಲಿ ಮಂಗಳೂರು ತಲುಪಿ ಬೆಳಿಗ್ಗೆ ಅವರ ಪತ್ನಿಯ ಆಪರೇಷನ್ ಗೆ 20 ಸಾವಿರ ಪಾವತಿಸಬೇಕಾದ್ದರಿಂದ ಕೈಯಲ್ಲಿದ್ದ ಹತ್ತು ಸಾವಿರ ಪೈನಾನ್ಷಿಯರ್ ಗೆ ನೀಡಿದರು.
  ಅವತ್ತು ಮದ್ಯಾಹ್ನ 3 ಗಂಟೆಗೆ 20 ಸಾವಿರ ನೀಡುವ ಭರವಸೆಯಂತೆ ಸಾಗರದ ಮಾರಿಗುಡಿ ಹಿಂಬಾಗದ ಪೈನಾನ್ಷಿಯರ್ ಆಫೀಸಿಗೆ ಹೋದರೆ ಅವರು ನಾಪತ್ತೆ ರಾತ್ರಿ 8 ಗಂಟೆ ತನಕ ಪ್ರಯತ್ನಿಸಿದರೂ ಆತ ಸಿಗಲೇ ಇಲ್ಲ.
  ಅನಿವಾರ್ಯವಾಗಿ ಹಣ ಇಲ್ಲದೇ ಜೋಗ್ ಮಂಗಳೂರು ಬಸ್ಸಿಗೆ ಚಿಕ್ಕ ಮಗನೊಂದಿಗೆ ಹತ್ತಿದ್ದಾರೆ, ಬೆಳಿಗ್ಗೆ ಬರಿಗೈಯಲ್ಲಿ ಬಂದ ಪತಿಯನ್ನು ನೋಡಿ ಆಪರೇಷನ್ ಆಗಬೇಕಾಗಿದ್ದ ಪತ್ನಿ ಗಾಭರಿ ಆಗಿದ್ದಾರೆ ಮತ್ತು ಅಸಹಾಯಕರಾಗಿ ನಿಮ್ಮ ಹಣೆಬರನೇ ಹೀಗೆ ಅಂದಾಗ ಇವರೂ ಅವಮಾನಿತರಾಗಿದ್ದಾರೆ ಪತ್ನಿಯ ಸಹೋದರ ಹೇಗೋ ವ್ಯವಸ್ಥೆ ಮಾಡುವ ದೈರ್ಯದ ಮಾತಾಡಿದ್ದರಿಂದ ಸಂಜೆ 5 ರ ಅದೇ ಮಂಗಳೂರಿ೦ದ ಜೋಗಕ್ಕೆ ವಾಪಾಸು ಬರುವ ಬಸ್ಸಿಗೆ ಮಗನ ಜೊತೆ ಮರು ಪ್ರಯಾಣಕ್ಕಾಗಿ ಮ೦ಗಳೂರು ಬಸ್ ನಿಲ್ದಾಣಕ್ಕೆ ಬಂದರೆ ಅಲ್ಲಿ ಗಾಡಿಗಳಲ್ಲಿ ಮಾರಾಟ ಮಾಡುವ ಮಾವಿನ ಹಣ್ಣು ನೋಡಿ ಮಗ ವರಾತ ಶುರು ಮಾಡಿದ್ದಾನೆ.
  ಅವನಿಗೆ ಮಾವಿನ ಹಣ್ಣು ಕೊಡಿಸಿದರೆ ಇವರಿಗೆ ಸಾಗರಕ್ಕೆ ಬರುವ ಬಸ್ ಚಾರ್ಜ್ ಕೋತಾವಾಗುವದರಿಂದ ಮಗನ ಆಸೆಗೆ ತಣ್ಣೀರೆರಚಿ ಅವನ ಅಳು ರಂಪಾಟವನ್ನು ಹೇಗೋ ಸಹಿಸಿ ಊರು ಮುಟ್ಟಿದ್ದಾರೆ.
  ಆದರೆ ಅವರ ಮನಸ್ಸು ಅಗ್ನಿ ಪರ್ವತವಾಗಿತ್ತು, ಬಡ್ಡಿ ವ್ಯಾಪಾರಿಯ ವಂಚನೆ, ಪತ್ನಿ ಹತಾಷೆಯಿಂದ ವ್ಯಕ್ತಪಡಿಸಿದ ಮಾತಿನ ಘಾಸಿ, ಮಗನಿಗೆ ಅವನಿಷ್ಟ ಪಟ್ಟ ಮಾವಿನ ಹಣ್ಣು ಕೊಡಿಸದ ಅಸಹಾಯಕತೆ ಅವರಿಗೆ ಜೀವನದ ಮೇಲಿನ ನಿರಾಶೆಗೆ ಕಾರಣವಾಗಿತ್ತು.
  ಅಂತಿಮವಾಗಿ ನನ್ನಲ್ಲಿ ತಿಳಿಸಬೇಕೆಂಬ ಗೆಳೆತನದ ಸಲಿಗೆಯಿಂದ ನನ್ನ ಹತ್ತಿರ ಹೇಳಿಕೊಳ್ಳಲು ಬಂದಿದ್ದರು ಇದೆಲ್ಲ ಕೇಳಿ ನನಗೂ ದುಃಖವಾಯಿತು ಆ ಕಾಲದಲ್ಲಿ ನಾನೂ ಸಂಕಷ್ಟದ ದಿನಗಳಲ್ಲಿದ್ದೆ ಆದರೆ ಆ ಕ್ಷಣದಲ್ಲಿ ನಾನೊಂದು ನಿರ್ಧಾರಕ್ಕೆ ಬಂದೆ ನನ್ನ ಸಂಕಷ್ಟ ಪರಿಹಾರಕ್ಕಾಗಿ ಜ್ಯೋತಿಷಿಗಳ ಸಲಹೆಯಂತೆ ನನ್ನ ಕೈ ಬೆರಳಿನಲ್ಲಿದ್ದ ಹವಳದ ಬಂಗಾರದ ಉಂಗುರ ತೆಗೆದು ಅವರ ಕೈಯಲ್ಲಿ ಇಟ್ಟೆ ಆದರೆ ಅದನ್ನು ಗೆಳೆಯರು ಸ್ವೀಕರಿಸಲು ನಿರಾಕರಿಸಿದರು ಅವರ ನಿರ್ದಾರ ಬೇರೆಯಾಗಿತ್ತು.
  ಅವರಿಗೆ ಆಪ್ತ ಸಮಾಲೋಚನೆ ನೀಡಿ ಅಪ್ಪ ಮಗನಿಗೆ ಊಟ ಮಾಡಿಸಿ ಆ ನನ್ನ ಉಂಗುರ ಮಾರಾಟ ಮಾಡಿ ಈ ಸಂದಿಗ್ಧ ಪರಿಸ್ಥಿತಿ ತಪ್ಪಿಸುಕೊಳ್ಳಲು ಒಪ್ಪಿಸಿದೆ.
  ಎರೆಡು ದಶಕದಲ್ಲಿ ಅವರು ಅವರ ಎಲ್ಲಾ ಸಂಕಷ್ಟದಾಟಿದ್ದಾರೆ, ಮನೆ ಅಡಿಕೆ ತೋಟ ಮಾಡಿದ್ದಾರೆ, ಸಾಲಗಳಿಂದ ಹೊರಬಂದಿದ್ದಾರೆ, ಸಾಗರ ಪಟ್ಟಣದಲ್ಲಿ 4-5 ಎಕರೆ ಭೂ ಪರಿವರ್ತನೆ ಮಾಡಿ ನಿವೇಶನಗಳನ್ನು ಮಾರಾಟ ಮಾಡುವ ಹಂತದಲ್ಲೇ ಮತ್ತೆ ಸಂಸಾರದಲ್ಲಿ ಬಿರುಗಾಳಿಯಿಂದ ಮನೆ ತೊರೆದು ಕಾರ್ ಶೆಡ್ ನಲ್ಲಿದ್ದೇನೆ ತನ್ನ ಜೀವ ಅಪಾಯದಲ್ಲಿದೆ ಎಂದು ಪೋನಾಯಿಸಿ ಇದೆಲ್ಲ ಹೇಳಿಕೊಂಡರು ಅವರೇ ನಾನು ಮರೆತಿದ್ದ ಹವಳದ ಉಂಗುರದ ಕಥೆ ನೆನಪಿಸಿದರು.
  ದೈರ್ಯ ಹೇಳಿದೆ, ಅವರ ಸಂಸಾರದಲ್ಲಿ ಸುಖ ನೆಮ್ಮದಿ ಮತ್ತೆ ನೆಲಸಲಿ ಎಂದು ಹಾರೈಸಿದೆ.
   ಆದರೆ ಕುಟುಂಬಗಳಲ್ಲಿ ಹಣವೇ ಪ್ರಮುಖ ಪಾತ್ರ ವಹಿಸುವ ಮತ್ತು ಅದು ಅನಾಹುತಕಾರಿ ಸನ್ನಿವೇಷ ಸೃಷ್ಟಿಸುವ ಪರಿ ಕೇಳಿ ವಿಷಾದ ಅನ್ನಿಸಿತು.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂ...

ಶ್ರೀಧರ ಸ್ವಾಮಿ ವರದಳ್ಳಿ ಪವಾಡ ಪುರುಷರು.

   ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ವರದಳ್ಳಿಯ ತಪಸ್ವಿ ಶ್ರೀಧರ ಸ್ವಾಮಿಗಳು.   ವರದಳ್ಳಿ ಶ್ರೀಧರ ಸ್ವಾಮಿಗಳ ಬಗ್ಗೆ ಕೇಳಿದ್ದು, ಓದಿದ್ದು ಮತ್ತು ಅವರ ಒಡನಾಡಿಗಳನ್ನ ಭೇಟಿ ಮಾಡಿದ್ದು ಬಿಟ್ಟರೆ ಅವರನ್ನ ಪ್ರತ್ಯಕ್ಷವಾಗಿ ನೋಡಿಲ್ಲ.     ನಾವು ಚಿಕ್ಕವರಿದ್ದಾಗ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುವಾಗ ಆಗಿನ ಕಾಲದ ಖ್ಯಾತ ಚಲನಚಿತ್ರ ನಟ ಉದಯ ಕುಮಾರ್ ಅರಳಿ ಮರದ ಗ್ಯಾರೇಜ್ ಹತ್ತಿರ ಬಂದಿದ್ದಾರೆ ಅಂತ ಊರಿನ ಜನರೆಲ್ಲ ಗುಂಪು ಗುಂಪಾಗಿ ಓಡುತ್ತಿದ್ದರು, ನಾವು ಚಿಕ್ಕ ಮಕ್ಕಳೆಲ್ಲ ಅವರನ್ನ ಹಿಂಬಾಲಿಸಿದೆವು.       ಅಲ್ಲಿ ಒಂದು ಬಿಳಿ ಅಂಬಾಸಡರ್ ಕಾರು ನಿಂತಿದ್ದು ಅದರ ಅಡಿಯಲ್ಲಿ ಮಲಗಿ ಮೆಕ್ಯಾನಿಕ್ ದುರಸ್ತಿ ಮಾಡುತ್ತಿದ್ದರೆ ಎತ್ತರದ ಮಣ್ಣು ದಿಬ್ಬದ ಮೇಲೆ ನಮ್ಮ ನಟ ಉದಯ ಕುಮಾರ್ ಸಿಗರೇಟು ಸೇದಿ ಹೊಗೆ ಬಿಡುತ್ತಿದ್ದರು. ಯಾರೂ ಅವರ ಹತ್ತಿರ ಮಾತಾಡುವ ದೈಯ೯ ವಹಿಸಲಿಲ್ಲ ಆದರೆ ನೆರೆದ ಜನ ಮಾತಾಡಿಕೊಳ್ಳುತ್ತಿದ್ದ ಮಾತಿನ ಸಾರಾಂಶವೆಂದರೆ ವರದಳ್ಳಿಯಲ್ಲಿ ತಪಸ್ಸು ಮಾಡುತ್ತಿದ್ದ ಶ್ರೀಧರ ಸ್ವಾಮಿಗಳು ದೇಹತ್ಯಾಗ ಮಾಡಿದ್ದಾರೆ ಅದನ್ನ ಕೇಳಿ ಅವರ ಭಕ್ತ ಮತ್ತು ಶಿಷ್ಯರಾದ ಖ್ಯಾತ ಚಿತ್ರ ನಟ ಉದಯ ಕುಮಾರ್ ಬರುವಾಗ ಕಾರು ಹಾಳಾಗಿ ದುರಸ್ತಿಗಾಗಿ ನಿಂತಿದ್ದಾರೆ, ದುಃಖದಲ್ಲಿ ಇರೋದರಿಂದ ಆ ರೀತಿ ಸಿಗರೇಟು ಸೇದಿ ಬೂದಿ ಮಾಡುತ್ತಿದ್ದಾರೆ ಅವರ ಹತ್ತಿರ ಯಾರೂ ಮಾತಾಡ ಬೇಡಿ ಅಂತ ...