Blog number 1812. ಶೇಖ್ ತಬ್ರೇಜ್ ಭಾಷಾ ವಿವಾಹ ಆಮಂತ್ರಣ ನೀಡಲು ಬಂದಾಗ 25 ವರ್ಷದ ಹಿಂದಿನ ನೆನಪು ಇಬ್ಬರಿಗೂ ನೆನಪಾಯಿತು.
#ಇಪ್ಪತ್ತೈದು_ವರ್ಷದ_ಹಿಂದೆ_ಈ_ಹುಡುಗನಿಗೆ_ಗೋಳು_ಹೊಯ್ಯುತ್ತಿದ್ದೆ.
#ಇವತ್ತು_ಮದುವೆ_ಕಾರ್ಡ್_ಕೊಡಲು_ಬಂದಾಗ_ನೆನಪಾಯಿತು.
#ಈ_ಕುಟುಂಬದ_ಎಲ್ಲಾ_ಆರೂ_ಮಕ್ಕಳು_ಪ್ರತಿಭಾವಂತರು
#ನಮ್ಮ_ಊರಿನ_ಜಮೀನ್ದಾರ್_ನಗರದ_ಬುಡನ್_ಸಾಹೇಬರ_ಮರಿ_ಮಗ
#ಈಗ_ಬೆಂಗಳೂರಿನಲ್ಲಿ_ಉದ್ಯೋಗಿ_ಶೇಖ್_ತಬ್ರೇಜ್_ಭಾಷಾ
1997-98 ರಲ್ಲಿ ಶೇಖ್ ತಬ್ರೇಜ್ ಒಂದನೇ ತರಗತಿ ಅಥವ 2ನೇ ತರಗತಿ ಇರಬೇಕು ಇವರ ಮಾವಂದಿರಾದ ಶೇಖ್ ಆಹ್ಮದ್ ಮತ್ತು ಶೇಖ್ ಅಮೀರ್ ಏಕೈಕ ಸಹೋದರಿ ಮನೆ ಅವರ ಮನೆ ಪಕ್ಕದಲ್ಲೇ ಇತ್ತು.
ಅವರಿಗೆ ಅತ್ಯಂತ ಕಷ್ಟದಲ್ಲೂ ತನ್ನ ನಾಲ್ಕು ಗಂಡು ಮಕ್ಕಳು ಮತ್ತು ಇಬ್ಬರು ಹೆಣ್ಣು ಮಕ್ಕಳನ್ನು ವಿದ್ಯಾವಂತರಾಗಿಸಲೇ ಬೇಕೆಂಬ ದೂರ ದೃಷ್ಟಿ ಇತ್ತು.
ಹೊಟ್ಟೆ ಬಟ್ಟೆ ಕಟ್ಟಿ ಈ ತಾಯಿ ತನ್ನ ಗುರಿ ತಲುಪಲು ಈ ಮಕ್ಕಳ ಓದಿನ ಶ್ರದ್ದೆ ಕೂಡ ಕಾರಣವಾಯಿತು ಎಲ್ಲರೂ ವಿದ್ಯಾವಂತರಾಗಿದ್ದಾರೆ, ನಾಲ್ಕು ಗಂಡು ಮಕ್ಕಳು ಒಳ್ಳೆಯ ಹುದ್ದೆಯಲ್ಲಿದ್ದಾರೆ.
ಇವತ್ತು ಮದುವೆ ಆಹ್ವಾನ ಪತ್ರಿಕೆ ನೀಡಲು ಬಂದ ತಬ್ರೇಜ್ ಗೆ ನಾನು ಪ್ರತಿ ನಿತ್ಯ ಅ.... ಆ.... ಹೇಳು, ಒಂದು ಎರೆಡು ನೂರರ ತನಕ ಹೇಳು, ಎರಡೊಂದೆರೆಡು ಮಗ್ಗಿ ಹೇಳು, ಕನ್ನಡ ಪಠ್ಯದ ಪದ್ಯ ಹೇಳು, ಕನ್ನಡ ಸಿನಿಮಾ ಹಾಡು ಹೇಳು, ಹಿಂದಿ ಹಾಡು ಹೇಳು ಅಂತ ಗೋಳು ಕೊಡುತ್ತಿದ್ದರು ಈ ಮಗು ಶ್ರದ್ದೆಯಿಂದ ಎರೆಡೂ ಕೈ ಕಟ್ಟಿ ಕೊಂಡು ಅವರ ಶಾಲಾ ಶಿಕ್ಷಕರ ಎದರು ವಿದೇಯನಾಗಿ ಬಾಯಿ ಪಾಠ ಒಪ್ಪಿಸುವಂತೆ ನನ್ನ ಎದುರು ಒಂದೇ ಒಂದು ತಪ್ಪು ಆಗದಂತೆ ಹೇಳುತ್ತಿತ್ತು.
ರಿಲಯೆನ್ಸ್ ಬ್ರಾಂಡ್ ನಲ್ಲಿ ಒಳ್ಳೆಯ ಹುದ್ದೆಯಲ್ಲಿರುವ ತಬ್ರೇಜ್ ವಿವಾಹ ಬೆಂಗಳೂರಿನ ಇನ್ಪಾಂಟ್ರಿ ರೋಡಿನ ಗುಲಿಸ್ತಾನ್ ಶಾಧಿ ಮಹಲಿನಲ್ಲಿ ಇದೇ ತಿಂಗಳ ನವೆಂಬರ್ 25 ರಂದು ನಿಗದಿ ಆಗಿದೆ.
ಬಹಳ ವರ್ಷದ ನಂತರ ಬೇಟಿ ಆಗಿ ಹಿಂದಿನ ದಿನಗಳ ನೆನಪುಗಳನ್ನು ಇಬ್ಬರೂ ನೆನಪಿಸಿಕೊಂಡೆವು, ಪುಟ್ಟ ಬಾಲಕ ತಬ್ರೇಜ್ ಐಕ್ಯೂ ಕಡಿಮೆ ಆಗಿರಲಿಲ್ಲ ಇವತ್ತು ವಿವಾಹ ಆಹ್ವಾನ ನೀಡಲು ಬಂದ ಪ್ರೌಡ ತಬ್ರೇಜ್ ಕೂಡ ಪ್ರಪಂಚ ಜ್ಞಾನ ಹೊಂದಿರುವುದನ್ನು ಸುಮಾರು ಅರ್ದ ಗಂಟೆಯ ಆತ್ಮೀಯ ಮಾತು ಕಥೆಯಲ್ಲಿ ಗಮನಿಸಿದೆ.
ಪ್ರೀತಿಯ ತಬ್ರೇಜ್ ವಿವಾಹ ಮಹೋತ್ಸವ ಸಮಾರಂಭ ಯಶಸ್ವಿ ಆಗಲಿ, ನೂತನ ದಂಪತಿಗಳಿಗೆ ದೇವರು ಆಯುರಾರೋಗ್ಯ - ಆಯಸ್ಸು- ಐಶ್ವಯ೯ ದಯಪಾಲಿಸಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.
Comments
Post a Comment