#ನಿನ್ನೆ_ನನ್ನ_ಅತಿಥಿ_ಮಾಜಿ_ಸಂಸದ_ಕೆಜಿ_ಶಿವಪ್ಪರ_ಪುತ್ರ_ಪ್ರಶಾಂತ್
#ಮಾಜಿ_ಮುಖ್ಯಮಂತ್ರಿ_ಬಂಗಾರಪ್ಪ_ಚಿತ್ರ_ನಟ_ರಾಜಕುಮಾರರ_ಸಂಬಂದಿ
#ನಮ್ಮ_ಆನಂದಪುರಂನಲ್ಲಿ_ಇವರ_ನವಚೇತನಾ_ವೇದಿಕೆ_ಮಂಗಳೂರಿನ_ಕೆ_ಎಸ್_ಹೆಗ್ಗಡೆ_ಆಸ್ಪತ್ರೆ_ಸಹಯೋಗದ_ಆರೋಗ್ಯ_ಶಿಭಿರ
#ರಾಜಕಾರಣದಲ್ಲಿ_ಇವರಿಗೆ_ಇರುವ_ಆಸಕ್ತಿ_ಮುಂದಿನ_ತಲೆಮಾರಿನ_ರಾಜಕಾರಣಕ್ಕೆ_ದಾರಿ.
ನಿನ್ನೆ ಸಂಜೆ ಪ್ರಶಾಂತ್ ಹೊಸಕೊಪ್ಪದ ರಮೇಶ್, ತಳಗೇರಿಯ ವಿಶ್ವನಾಥ ಮತ್ತು ಘಂಟಿನಕೊಪ್ಪದ ನನ್ನ ಮಿತ್ರ ಗಜೇಂದ್ರ ಜೊತೆ ನನ್ನ ಕಛೇರಿಗೆ ಬಂದಿದ್ದರು ಇದು ನನ್ನ ಅವರ ಪ್ರಥಮ ಭೇಟಿ.
ಇವರ ತಂದೆ 1992ರಲ್ಲಿ ಶಿವಮೊಗ್ಗ ಲೋಕ ಸಭಾ ಚುನಾವಣೆಯ ಅಭ್ಯರ್ಥಿ ಆದಾಗ ಮೊದಲ ಚುನಾವಣಾ ಪ್ರಚಾರ ಸಭೆಯ ಉದ್ಘಾಟನೆ ಜ್ಯೂವಲ್ ರಾಕ್ ಹೋಟೆಲ್ ಸಮೀಪದ ಶಿವಮೊಗ್ಗದ ದುರ್ಗಿಗುಡಿಯ ಸರ್ಕಾರಿ ಶಾಲೆ ಮತ್ತು ದೇವಸ್ಥಾನದ ಆವರಣದಲ್ಲಿ ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೇಸ್ ಹಮ್ಮಿ ಕೊಂಡಿತ್ತು ಆ ಸಭೆಯಲ್ಲಿ ಪ್ರಸ್ತಾವಿಕ ಭಾಷಣ ನನ್ನದು ಆಗ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾಗಿದ್ದವರು ನನ್ನ ಮಿತ್ರ ಮತ್ತು ಆಗಿನ ಮುಖ್ಯ ಮಂತ್ರಿ ಬಂಗಾರಪ್ಪರ ಕಟ್ಟಾ ಶಿಷ್ಯ ಮಲ್ಲಿಕಾರ್ಜುನ್ ರಾವ್.
ಈ ಚುನಾವಣೆಯ ಪ್ರಚಾರಕ್ಕೆ ರಾಜೀವ್ ಗಾಂಧಿ ಬಂದಿದ್ದರು ಆಗ ಇವರ ಎದರು ಪರಾಭವಗೊಂಡವರು ಬಿಜೆಪಿಯ ಅಭ್ಯರ್ಥಿ ಯಡ್ಯೂರಪ್ಪನವರು.
ಕೆ.ಜಿ. ಶಿವಪ್ಪರ ಕೊನೆಯ ಬೇಟಿ ಸೊರಬದ ದಂಡಾವತಿ ಆಣೆಕಟ್ಟು ವಿರೋದಿ ಹೋರಾಟದ ಸತ್ಯಾಗ್ರಹ ಸ್ಥಳಕ್ಕೆ ಕಾಗೋಡು ಹೋರಾಟದ ನೇತಾರ ಗಣಪತಿಯಪ್ಪ, ಮಾಜಿ ಶಾಸಕರಾದ ಸ್ವಾಮಿ ರಾವ್, ತೀನಾ ಶ್ರೀನಿವಾಸ್ ಮತ್ತು ಸಾಗರದ ಪತ್ರಕರ್ತ ಮಿತ್ರರ ಜೊತೆ ಹೋಗುವಾಗ ದೂಗೂರಿನಲ್ಲಿರುವ ದಲಿತ ಹೋರಾಟಗಾರ ಪರಮೇಶ್ ಮನೆಯಲ್ಲಿ ಎಲ್ಲರೂ ಚಹಾ ಸ್ವೀಕಾರ ಮಾಡಿದ್ದು.
ಮುಖ್ಯಮಂತ್ರಿ ಬಂಗಾರಪ್ಪರ ಪತ್ನಿ, ಇವರ ತಂದೆ ಸಂಸದ ಕೆ.ಜಿ. ಶಿವಪ್ಪರ ಪತ್ನಿ, ಶಾಸಕ ಜಿ.ಡಿ.ನಾರಾಯಣಪ್ಪರ ಪತ್ನಿ ಮತ್ತು ರಾಘವೇಂದ್ರ ರಾಜಕುಮಾರ್ ಪತ್ನಿಯ ತಾಯಿ ಸಿದ್ದಾಪುರದವರು ಅಕ್ಕ ತಂಗಿಯರು, ಈಗಿನ ಸಿರ್ಸಿ ವಿದಾನ ಸಭಾ ಸದಸ್ಯ ಬೀಮಣ್ಣ ಈ ಸಹೋದರಿಯರ ಸಹೋದರ ಇವರಿಗೆ ಮಾವ, ಬಂಗಾರಪ್ಪರ ಪುತ್ರಿ ಡಾ.ರಾಜಕುಮಾರ್ ಪುತ್ರ ಚಿತ್ರನಟ ಶಿವರಾಜ ಕುಮಾರ್ ಪತ್ನಿ, ಇನ್ನೊಬ್ಬ ಪುತ್ರಿ ಪ್ರಜಾವಾಣಿ ಸಂಪಾದಕರ ಪತ್ನಿ, ಪ್ರಶಾಂತರ ಸಹೋದರಿ ಕಾರ್ಕಳದ ಮಾಜಿ ಮಂತ್ರಿ ಹಾಲಿ ಶಾಸಕ ಸುನೀಲ್ ಕುಮಾರ್ ಪತ್ನಿ, ಜಿಲ್ಲಾ ಮಂತ್ರಿ ಮದುಬಂಗಾರಪ್ಪ, ಮಾಜಿ ಮಂತ್ರಿ ಕುಮಾರ್ ಬಂಗಾರಪ್ಪ ಇವರ ತಾಯಿಯ ಸ್ವಂತ ಅಕ್ಕನ ಮಕ್ಕಳು.
ಇಂತಹ ರಾಜ್ಯದ ಪ್ರಭಾವಿ ರಾಜಕಾರಣದ ಕಾಂಗ್ರೇಸ್ ಮತ್ತು ಬಿಜೇಪಿ ಪಕ್ಷಗಳ ಪ್ರಭಾವಿ ರಾಜಕಾರಣಿಗಳ ಸಂಬಂದಿ ಮತ್ತು ರಾಜ್ಯದ ಸೆಲೆಬ್ರಿಟಿಗಳಾದ ಡಾಕ್ಟರ್ ರಾಜ್ ಕುಟುಂಬದ ಸಂಬಂದ ಇರುವ ಸ್ವತಃ ಇವರ ತಂದೆ ಒಂದು ಅವಧಿಯ ಸಂಸದರಾಗಿರುವುದು ಬಾವ ಕಾರ್ಕಳದ ಸುನೀಲ್ ಕುಮಾರ್ ಬಿಜೆಪಿಯಲ್ಲಿರುವುದು ಯುವಕ ಪ್ರಶಾಂತ್ ಸಾಗರದ ರಾಜಕಾರಣದಲ್ಲಿ ಮುಂದೆ ಬರಲು ಟ್ರಂಪ್ ಕಾರ್ಡ್ ಆಗಿರುವುದು ಸುಳ್ಳಲ್ಲ.
ಪ್ರಶಾಂತರ ನವಚೇತನಾ ವೇದಿಕೆ ಮತ್ತು ಮಂಗಳೂರಿನ ಕೆ.ಎಸ್.ಹೆಗ್ಗಡೆ ಆಸ್ಪತ್ರೆ ಸಂಯುಕ್ತ ಆಶ್ರಯದಲ್ಲಿ ಡಿಸೆಂಬರ್ 3 ರಂದು ಆನಂದಪುರ೦ನಲ್ಲಿ ಆರೋಗ್ಯ ತಪಾಸಣೆ ಶಿಭಿರ ಹಮ್ಮಿಕೊಂಡಿದ್ದಾರೆ.
ಅವರು ಈ ಹಿಂದೆ ಉದ್ಯೋಗ ಮೇಳ ನಡೆಸಿದ್ದು ಕೇಳಿದ್ದೆ ಈ ರೀತಿ ಜನರ ತಲುಪುವ ಇವರ ಕಾರ್ಯ ಪ್ರಶಂಸನೀಯವಾಗಿದೆ, ಪೆಟ್ರೋಲ್ ಬಂಕ್ - ಜಲ್ಲಿ ಕ್ರಷರ್ - ಅಡಿಕೆ ಕೃಷಿ- ಹಿಂದೆ ಶಿವಮೊಗ್ಗದಲ್ಲಿ ಕಾರ್ ಶೋರೂಂ ಕೂಡ ತೆರೆದಿದ್ದರು.
ನಿನ್ನೆ ಇವರ ಜೊತೆ ಮಾತಾಡಿದಾಗ ಅನ್ನಿಸಿದ್ದು ಪ್ರಶಾಂತ್ ಗೆ ಇರುವ ಪ್ರಪಂಚ ಜ್ಞಾನ, ಸಾಮಾನ್ಯ ಪ್ರಜ್ಞೆ, ಜನ ಸಾಮಾನ್ಯರ ಜೊತೆ ಬೆರೆಯುವ ಪರಿ ಮುಂದಿನ ತಲೆಮಾರಿನ ಜಿಲ್ಲಾ ರಾಜಕಾರಣದಲ್ಲಿ ಇವರದ್ದೊಂದು ಚಾಪು ಮೂಡಿಸಲಿದೆ ಅನ್ನಿಸಿತು.
Comments
Post a Comment