#ಶಿವಮೊಗ್ಗ_ತಾಳಗುಪ್ಪ_ಬ್ರಾಡ್_ಗೇಜ್_ಹೋರಾಟ_ಮತ್ತು_ಸಾಗರ_ರೈಲು_ನಿಲ್ದಾಣಕ್ಕೆ
#ರಾಮಮನೋಹರ_ಲೋಹಿಯ_ನಾಮ_ಫಲಕ_ಅನಾವರಣದ_23_ವರ್ಷದ_ಹಿಂದಿನ_ನೆನಪುಗಳು.
#ಜಾಪರ್_ಪರೀಪ್_ಬದರಿನಾರಾಯಣಆಯ್ಯಂಗಾರ್_ಶಂಕುಸ್ಥಾಪನೆ_ಮಾಡಿದ್ದ_ಶಿವಮೊಗ್ಗ_ತಾಳಗುಪ್ಪ_ಬ್ರಾಡ್ಗೇಜ್_ಕಾಮಗಾರಿ.
#ಈ_ಮಾರ್ಗ_ನಷ್ಟದ_ಮಾರ್ಗ_ಎ೦ದು_ಪರಿವರ್ತನೆ_ಕಾಮಗಾರಿ_ವಿಳಂಬ.
#ಶಿವಮೊಗ್ಗ_ತಾಳಗುಪ್ಪ_ಬ್ರಾಡ್_ಗೇಜ್_ಹಂದಿಗೋಡು_ಕಾಯಿಲೆ_ಪೀಡಿತರಿಗೆ
#ಪುನರ್ವಸತಿ_ಒತ್ತಾಯಿಸಿ_35_ಜನರ_ನಿಯೋಗದ_ದೆಹಲಿ_ಚಲೋ
#ನಿಯೋಗ_ನೇತೃತ್ವದ_ಕಾಗೋಡು_ಹೋರಾಟದ_ನೇತಾರ_ಗಣಪತಿಯಪ್ಪನವರು.
#ದೆಹಲಿಯಲ್ಲಿ_ಜಾರ್ಜ್_ಪರ್ನಾಂಡೀಸ್_ಶ್ರೀನಿವಾಸಪ್ರಸಾದ್_ರಾಜ್ಯಸಭಾ_ಸದಸ್ಯರಾದ_ಜವರೇಗೌಡರು_ಸಹಾಯ_ಮಾಡಿದ್ದರು
#ಎರೆಡು_ಸಾವಿರ_ಇಸವಿಯ_ದೆಹಲಿ_ಚಲೋ_ನೆನಪು.
#ರಾಮಮನೋಹರ_ಲೋಹಿಯ_ಹೆಸರಿನ_ನಾಮಕರಣ_23_ವರ್ಷದಿಂದ_ಉದ್ದೇಶಪೂರ್ವಕವಾಗಿ_ಕಡೆಗಾಣಿಸಲಾಗಿದೆ
ಯಡೂರಪ್ಪನವರು ಮುಖ್ಯಮಂತ್ರಿ ಆಗಿದ್ದಾಗ ರಾಜ್ಯ ಸರ್ಕಾರದ ಹಣ ಬಿಡುಗಡೆ ಮಾಡಿ ಕೇಂದ್ರ ರೈಲ್ವೆ ಇಲಾಖೆಯ ಹಣದ ಜೊತೆ ಸೇರಿಸಿ ಶಿವಮೊಗ್ಗ ತಾಳಗುಪ್ಪ ಬ್ರಾಡ್ ಗೇಜ್ ಪರಿವರ್ತನೆ ಮಾಡಿದ್ದರು.
ಈಗ ಈ ಮಾರ್ಗದ ವಿದ್ಯುದೀಕರಣ ಕೆಲಸ ಮುಕ್ತಾಯದ ಹಂತ ತಲುಪಿದೆ ಕೆಲವೇ ದಿನದಲ್ಲಿ ವಿದ್ಯುತ್ ಚಾಲಿತ ರೈಲು ಸಂಚಾರ ಮಾಡಲಿದೆ.
2000 ಇಸವಿಯಲ್ಲಿ ಭಾರತದ ಉಪ ಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿ ಅನುಮತಿ ನೀಡಿದ್ದ ಸಾಗರ ರೈಲು ನಿಲ್ದಾಣದ ಪುನರ್ ನಾಮಕರಣ 23 ವರ್ಷದಿಂದ ನೆನೆಗುದಿಗೆ ಬಿದ್ದಿದ್ದು ಬೇಸರದ ಸಂಗತಿ ಆಗಿದೆ.
ಈ ಮಾರ್ಗದ ಮೀಟರ್ ಗೇಜ್ ಪರಿವರ್ತನೆ ಭೂಮಿ ಪೂಜೆ ನೆರವೇರಿಸಿದವರು ಆಗಿನ ರೈಲ್ವೆ ಮಂತ್ರಿ ಜಾಪರ್ ಷರೀಪರು.
ಜಾಪರ್ ಷರೀಪರು ರೈಲ್ವೇ ಮಂತ್ರಿಗಳಾಗಿದ್ದಾಗ ಆನಂದಪುರಂನ ಮಾಜಿ ಸಂಸದರು, ವಿದ್ಯಾ ಮಂತ್ರಿಗಳೂ ಆಗಿದ್ದ ವಯೋವೃದ್ದ ಬದರೀನಾರಾಯಣ ಅಯ್ಯಂಗಾರ್ ರನ್ನು ಬೆಂಗಳೂರಿಂದ ಹೆಲಿಕಾಪ್ಟರ್ ನಲ್ಲಿ ಕರೆತಂದು ಶಿವಮೊಗ್ಗ ತಾಳಗುಪ್ಪ ರೈಲು ಮಾರ್ಗ ಮೀಟರ್ ಗೇಜ್ ಪರಿವರ್ತನೆ ಭೂಮಿ ಪೂಜೆ ನೆರವೇರಿಸಿದ್ದರು, ಇದು ಬದರೀನಾರಾಯಣ ಅಯ್ಯಂಗಾರರ ಶಿವಮೊಗ್ಗ ಜಿಲ್ಲೆಯ ಕೊನೆಯ ಬೇಟಿ.
ಬ್ರಾಡ್ ಗೇಜ್ ಪರಿವರ್ತನೆ ಮಾಡಲು ಆಗಿನ ಮೀಟರ್ ಗೇಜ್ ರೈಲು ನಿಲ್ಲಿಸಿದರು ನಂತರ ಬೀರೂರು ಶಿವಮೊಗ್ಗ ಬ್ರಾಡ್ ಗೇಜ್ ಆದರೂ ಶಿವಮೊಗ ತಾಳಗುಪ್ಪ ಬ್ರಾಡ್ ಗೇಜ್ ಪರಿವರ್ತನೆ ಪ್ರಾರಂಭವಾಗಲೇ ಇಲ್ಲ.
ಈ ಸಂದರ್ಭದಲ್ಲಿ ದೆಹಲಿ ರೈಲ್ವೇ ಅಧಿಕಾರಿಗಳು ಶಿವಮೊಗ್ಗ - ತಾಳಗುಪ್ಪ ರೈಲು ಮಾರ್ಗ ನಷ್ಟದ ಮಾರ್ಗ ಎಂದು ಘೋಷಿಸಿ ಬಿಟ್ಟರು ಆದ್ದರಿಂದ ಈ ಮಾರ್ಗ ಬ್ರಾಡ್ ಗೇಜ್ ಮಾಡುವ ಅವಶ್ಯಕತೆಯೇ ಇಲ್ಲ ಎಂದು ರೈಲ್ವೆ ಇಲಾಖೆ ನಿರ್ದರಿಸಿ ಬಿಟ್ಟಿತು.
ಇದು ಮಲೆನಾಡು ಪ್ರದೇಶದ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ನಿರ್ಲಕ್ಷವಾಗಿತ್ತು ಇದರಿಂದ ಶಿವಮೊಗ್ಗ ಜಿಲ್ಲೆಯ ಅಭಿವೃದ್ಧಿಯನ್ನು ಕೇಂದ್ರ ಸರ್ಕಾರ ಕಡೆಗಾಣಿಸಿದೆ ಎಂದೇ ಈ ಪ್ರದೇಶದಲ್ಲಿನ ಜನರ ಭಾವನೆಯಾಗಿತ್ತು.
ಈ ವೇಳೆಯಲ್ಲಿ ಕಾಗೋಡು ಹೋರಾಟದ ನೇತಾರ ಗಣಪತಿಯಪ್ಪ, ಶಿವಮೊಗ್ಗದ ಮಾಜಿ ವಿದಾನ ಪರಿಷತ್ ಸದಸ್ಯರಾದ ಜಿ.ಮಾದಪ್ಪ, ಸಮಾಜವಾದಿ ಲೇಖಕ ಕೋಣಂದೂರು ವೆಂಕಪ್ಪ ಗೌಡರು, ಹೋರಾಟಗಾರ ಕಲ್ಲೂರು ಮೇಘರಾಜ್ ಮತ್ತು ನಾನು ಸೇರಿ ಈ ಬಗ್ಗೆ ಸಮಾಲೋಚನೆ ಮಾಡಿದೆವು.
ಡಾ.ರಾಮಮನೋಹರ ಲೋಹಿಯಾರು ಕಾಗೋಡು ರೈತ ಹೋರಾಟಕ್ಕೆ ಬಂದು ಭಾಗವಹಿಸಿದಾಗ ಸಾಗರ ರೈಲು ನಿಲ್ದಾಣದ ವಿಶ್ರಾಂತಿ ಕೊಠಡಿಯಲ್ಲಿ ತಂಗಿದ್ದಾಗ ಅವರ ಬಂದನವಾಗಿದ್ದು ಆ ಕಾಲದಲ್ಲಿ ಬಹು ದೊಡ್ಡ ಸುದ್ದಿ, ಬಿಬಿಸಿ ವಾರ್ತೆ, ರಷ್ಯಾದ ಆಗಿನ ಪ್ರಸಿದ್ದ ಪತ್ರಿಕೆ ಪ್ರಾವ್ಡಾದಲ್ಲಿ ಮುಖ ಪುಟದ ಸುದ್ಧಿ ಆಗಿತ್ತು ಆ ಐತಿಹಾಸಿಕ ಘಟನೆ ಆದರಿಸಿ ಡಾ.ರಾಮಮನೋಹರರ ಒಡನಾಡಿ ಜಾರ್ಜ್ ಪನಾ೯ಂಡೀಸರ ಮೂಲಕ ಸಾಗರ ರೈಲು ನಿಲ್ದಾಣಕ್ಕೆ ಡಾ.ರಾಮಮನೋಹರ ಲೋಹಿಯಾ ರೈಲು ನಿಲ್ದಾಣ ನಾಮಕರಣದ ಹೋರಾಟ ಪ್ರಾರಂಬಿಸಿದರೆ ಶಿವಮೊಗ್ಗ ತಾಳಗುಪ್ಪ ರೈಲು ಮಾರ್ಗ ನಷ್ಟದ ಕಾರಣದಿಂದ ಮುಚ್ಚುವ ಅಧಿಕಾರಿಗಳ ಉದ್ದೇಶ ಕೈ ಬಿಡುತ್ತಾರೆಂಬ ಆಶಾಭಾವನೆ ಮತ್ತು ತಂತ್ರವಾಗಿತ್ತು.
ಜೊತೆಗೆ ಹಂದಿಗೋಡು ಕಾಯಿಲೆ ಪೀಡಿತರ ಪುನರ್ವಸತಿಗಾಗಿ ಮನವಿ ನೀಡಲು ಸ್ವತಃ ಹಂದಿಗೋಡು ಕಾಯಿಲೆ ಪೀಡಿತರಾದ ರಿಪ್ಪನ್ ಪೇಟೆ ಸಮೀಪದ ಬರುವೆ ಶ್ರೀದರ್ ಕೂಡ ಜೊತೆಯಾಗಿದ್ದರು.
ಆಗಿನ ರಾಜ್ಯಸಭಾ ಸದಸ್ಯರಾದ ಜವರೇಗೌಡರು ದೆಹಲಿಯ ಪೂಸಾ ಅಗ್ರಿಕಲ್ಚರಲ್ ಯುನಿವರ್ಸಿಟಿಯ ಗೆಸ್ಟ್ ಹೌಸ್ ನಲ್ಲಿ ಕರ್ನಾಟಕದ ನಮ್ಮ ನಿಯೋಗ ತಂಗಲು ವ್ಯವಸ್ಥೆ ಮಾಡಿದ್ದರು.
ಕೇಂದ್ರದ ಆಹಾರ ಮತ್ತು ಪಡಿತರ ಮಂತ್ರಿ ಶ್ರೀನಿವಾಸ್ ಪ್ರಸಾದ್ ರೂ ನಮ್ಮ ಹೋರಾಟಕ್ಕೆ ಬೆಂಬಲ ನೀಡಿ ಪ್ರೋತ್ಸಾಹಿಸಿದರು.
ಶಿವಮೊಗ್ಗ ಜಿಲ್ಲೆಯ ಅಭಿವೃದ್ದಿ ಬಗ್ಗೆ ಆಸಕ್ತಿ ಹೊಂದಿದ್ದ ಈಗ 23 ವರ್ಷದ ಹಿಂದೆ ನಮ್ಮ ದೆಹಲಿ ಚಲೋ ಯಾತ್ರೆಯ ಜವಾಬ್ದಾರಿ ವಹಿಸಿದವರು ಕಾಗೋಡು ಹೋರಾಟದ ನೇತಾರ ಗಣಪತಿಯಪ್ಪ, ಸಮಾಜವಾದಿ ಲೇಖಕ ಕೋಣಂದೂರು ವೆಂಕಪ್ಪ ಗೌಡರು, ಮಾಜಿ ವಿದಾನಪರಿಷತ್ ಸದಸ್ಯರಾದ ಜಿ.ಮಾದಪ್ಪನವರು, ಕಲ್ಲೂರು ಮೇಘರಾಜ್ ಮತ್ತು ನಾನು.
ಸಂಗಾತಿಗಳಾಗಿ ಬಂದ ಹೋರಾಟಗಾರರು ತೀರ್ಥಹಳ್ಳಿಯ ಬಸವಾನಿಯ ಕೆ.ಶ್ವೇತ ಕುಮಾರ್, ಪತ್ರಕರ್ತ ಕಬಸೆ ಅಶೋಕ್ ಮೂರ್ತಿ, ಮೇಗರವಳ್ಳಿ ಪ್ರೀತಿ ಶರತ್, ಹೊಸನಗರ ತಾಲೂಕಿನ ಉಮಾಕಾಂತ್, ಪರಮೇಶ್ವರಪ್ಪ, ಗರ್ತಿಕೆರೆ ಬಿಳಿ ನಾಯಕ್, ಪಾ. ನಾ. ಜಗದೀಶ್, ಸಾಗರ ತಾಲ್ಲೂಕಿನ ಅಬ್ಬಾಸ್ ಕಾಕ, ಯಡೇಹಳ್ಳಿ ಕೆರಿಯಪ್ಪ, ಆನಂದಪುರಂ ಮಂಜುನಾಥ್ ಶೇಟ್, ತಾಳಗುಪ್ಪದ ಲಿಂಗರಾಜ ಯಾದವ್, ಹೋಟೆಲ್ ಅಣ್ಣಪ್ಪ ಪೂಜಾರ್, ರಿಪ್ಪನ್ ಪೇಟೆಯ ರೈತ ಸಂಘದ ಟೈಲರ್ ಮಂಜಪ್ಪ, ಕುಕ್ಕಳ್ಳಿಯ ರೈತ ಮುಖಂಡರುಗಳು, ಆರ್.ಎ.ಅಬ್ದುಲ್ ಖಾದರ್, ಕೆರೆಹಳ್ಳಿ ಕೀರ್ತಿರಾಜ್, ಮಾದಾಪುರ ಲೋಕಪ್ಪ, ಆರ್.ಎನ್.ಮಂಜಪ್ಪ, ಕೆರೆಹಳ್ಳಿ ದೇವರಾಜ್, ಯೋಗೇಶ್ವರ್ ಗೌಡರು, ಮಂಜುನಾಥ ಆಚಾರ್, ಶ್ರೀಮತಿ ನಾಗರತ್ನಮ್ಮ, ಶ್ರೀಮತಿ ಭಾನುಮತಿ ಶೆಟ್ಟಿ, ಚಿದಾನಂದ, ಅಯನೂರು ವಾಸು ನಾಯ್ಕ, ಉಳ್ಳೂರು ರಾಜೇಂದ್ರ, ಹಿರೇಮನೆ ಅನಂತ್ ವಕೀಲರು,ಭದ್ರಾವತಿ ಹೆಚ್.ಎಂ.ಮಂಜುನಾಥ ಮುಂತಾದ 35 ಜನ ಶಿವಮೊಗ್ಗ ತಾಳಗುಪ್ಪ ಬ್ರಾಡ್ ಗೇಜ್ ಪರಿವರ್ತನೆಗೆ ಒತ್ತಾಯಿಸಿ ದೆಹಲಿ ಚಲೋ ಮಾಡಿದ್ದರು.
ಆಗಿನ ಉಪ ಪ್ರದಾನಿ ಎಲ್.ಕೆ.ಅಡ್ವಾನಿಯವರು ಈ ನಿಯೋಗದ ಮನವಿ ಪುರಸ್ಕರಿಸಿ ಕರ್ನಾಟಕ ಸರ್ಕಾರಕ್ಕೆ ಡಾ.ರಾಮಮನೋಹರ ಲೋಹಿಯಾ ಎಂದು ಸಾಗರದ ರೈಲು ನಿಲ್ದಾಣಕ್ಕೆ ಪುನರ್ ನಾಮಕರಣಕ್ಕೆ ಪರಿಶೀಲನೆಗಾಗಿ ಕಳಿಸಿದ್ದರು, ಸದರಿ ಮನವಿ ಕರ್ನಾಟಕ ಸಕಾ೯ರ ಶಿವಮೊಗ್ಗ ಜಿಲ್ಲಾಡಳಿತ ವರದಿ ಮತ್ತು ಸಾಗರದ ಆಗಿನ ಪುರಸಭೆಯ ಒಪ್ಪಿಗೆಯೊಂದಿಗೆ ಉಪ ಪ್ರಧಾನಿ ಕಛೇರಿಗೆ ರಾಜ್ಯ ಸರ್ಕಾರ ತನ್ನ ನಿರಾಕ್ಷೇಪಣಿ ನೀಡಿದ ಆದಾರದಿಂದ ಉಪ ಪ್ರಧಾನಿಗಳು ರೈಲ್ವೆ ಇಲಾಖೆಗೆ ಸಾಗರ ಜಂಬಗಾರು ಎಂಬ ಹೆಸರು ಡಾ.ರಾಮಮನೋಹರ ಲೋಹಿಯಾ ಎಂದು ಮರು ನಾಮಕರಣ ಮಾಡಲು ಅದೇಶಿಸಿದ್ದು 23 ವಷ೯ದಿಂದ ರೈಲ್ವೆ ಇಲಾಖೆ ಕಾಯ೯ರೂಪಕ್ಕೆ ತರದೆ ತಡೆ ಹಿಡಿದಿದೆ.
13 - ಜೂನ್ - 2000ದಂದು ಸಾಗರದ ಪೋಲಿಸ್ ಠಾಣೆ ವೃತ್ತದಲ್ಲಿ ರಾಮ ಮನೋಹರ ಲೋಹಿಯಾ ರೈಲ್ವೇ ನಿಲ್ದಾಣವೆಂಬ ನಾಮ ಫಲಕ ವಿಧಾನ ಪರಿಷತ್ ಸದಸ್ಯೆ ಶ್ರೀಮತಿ ಪ್ರಪುಲ್ಲಾ ಮದುಕರ್ ಅನಾವರಣಗೊಳಿಸಿದರು, ಈ ಸಮಾರಂಭದಲ್ಲಿ, ಕಾಗೋಡು ಹೋರಾಟದ ನೇತಾರ ಗಣಪತಿಯಪ್ಪ, ರೈತ ನಾಯಕರಾದ ಕೆ.ಟಿ.ಗಂಗಾದರ್, ಸಾಹಿತಿ ನಾ.ಡಿಸೋಜ, ಸಾಹಿತಿ ಕೋಣಂದೂರು ವೆಂಕಪ್ಪ ಗೌಡರು, ಮಾಜಿ ಶಾಸಕ ಧರ್ಮಪ್ಪ, ಸಭೆಯಲ್ಲಿ ಅನಾರೋಗ್ಯದಿಂದ ಗೆೈರಾದ ಕೆ.ವಿ.ಸುಬ್ಬಣ್ಣ ಸಂದೇಶ ವಾಚಿಸಲು ಕಳಿಸಿದ್ದರು.
ಲೋಹಿಯಾ ಜೊತೆ ಬಂದನಕ್ಕೆ ಒಳಗಾಗಿದ್ದ ಸಮಾಜವಾದಿ ಹೋರಾಟಗಾರ ಜಿ.ಆರ್.ಜಿ ನಗರ್ ಮತ್ತು ಅವರ ಪತ್ನಿಯವರನ್ನು ಸನ್ಮಾನಿಸಲಾಯಿತು.
ನನ್ನ ಜೊತೆ ಈ ಕಾರ್ಯಕ್ರಮದ ಜವಾಬ್ದಾರಿ ವಹಿಸಿದವರು ಕಲ್ಲೂರು ಮೇಘರಾಜ್, ಬಿ.ಆರ್.ಜಯಂತ್ ಮತ್ತು ರೈತ ಸಂಘದ ಸಾಗರ ತಾಲೂಕಿನ ಅಧ್ಯಕ್ಷರಾಗಿದ್ದ ಸೇನಾಪತಿ ಗೌಡರು .
ಈ ಕಾರ್ಯಕ್ರಮ ಯಶಸ್ವಿಗಾಗಿ ಹೆಚ್ಚಿನ ಶ್ರಮ ವಹಿಸಿದವರು ವಕೀಲರಾದ ಹೆಚ್.ಬಿ.ರಾಘವೇಂದ್ರ, ಹಿರೇಮನೆ ಅನಂತ, ಸಾಗರದ ಹಸನ್, ಹೋಟೆಲ್ ಅಣ್ಣಪ್ಪ, ರಾಜು ದೇವಾಡಿಗ, ಬಾಳಿಗುಂಡಿ ಅಣ್ಣಪ್ಪ, ಬನದ ಕೊಪ್ಪದ ಪರಮೇಶ್, ಉಳ್ಳೂರು ರಾಜೇಂದ್ರ, ಎಂ.ಡಿ. ಖಾನ್, ಕಲೀಮುಲ್ಲಾ ಟೈಲರ್, ಅಬ್ಬಾಸ್ ಕಾಕ, ತಾಳಗುಪ್ಪ ಲಿಂಗರಾಜ್ ಯಾದವ್, ಇಡುವಾಣಿ ಹಿತಕರ ಜೈನ್, ಪತ್ರಕರ್ತರಾದ ತ.ಮ.ನರಸಿಂಹ ರಿಪ್ಪನ್ ಪೇಟೆ, ಅಶೋಕ್ ಮೂರ್ತಿ, ಜಿ.ನಾಗೇಶ್, ಶಂಕರ್, ಗುತ್ತಿಗೆದಾರರಾದ ವಿಜಯ ಕುಮಾರ್ ಜೈನ್, ರೈತ ಹೋರಾಟದ ವಸಂತ್ ಕುಮಾರ್, ಹಾಳಸಸಿ ರತ್ನ ಕುಮಾರ್ ಜೈನ್, ರೈತ ಮುಖಂಡ ಗುಳ್ಳಳ್ಳಿ ಬಸವರಾಜ ಗೌಡರು, ಹಾಳ ಸಸಿ ಚಂದ್ರ ಕುಮಾರ್ ಜೈನ್, ಹೋರಾಟಗಾರ ರಿಪ್ಪನ್ ಪೇಟೆ ಟಿ.ಆರ್.ಕೃಷ್ಣಪ್ಪ. ಮತ್ತು ಅನೇಕ ಯುವಕರು ಸೇರಿದ್ದರು.
ಇದೇ ದಿನ ಸಾಗರದ ಪುರಸಭೆಯಲ್ಲಿ ಲೋಹಿಯಾ ನಾಮಕರಣ ವಿರೋದಿಸಿ ಪುರಸಭಾ ಸದಸ್ಯರಾದ ತೀ.ನಾ.ಶ್ರೀನಿವಾಸ್, ಶ್ರೀಮತಿ ಶರಾವತಿ ಸಿ.ರಾವ್, ಖಾಸಿಂ, ಕೋಯಾ ಸಾಹೇಬರು ಠರಾವು ಮಾಡಿಸಿದ್ದರು.
ಈ ಕೆಲಸ ಸುಲಭವಾಗಿ ಮಾಡ ಬಹುದಾಗಿದ್ದ ಯಡೂರಪ್ಪನವರು ಮಾತ್ರ ಯಾಕೋ ಈ ವಿಚಾರದಲ್ಲಿ ಆಸಕ್ತಿ ವಹಿಸಲೇ ಇಲ್ಲ.
Comments
Post a Comment