https://youtu.be/dM17nk5Q1Bs?feature=shared
#ಶಾಂತಾರಾಮ_ಹೆಗಡೆಕಟ್ಟೆ_ಗೊತ್ತಿಲ್ಲದವರು_ಅಪರೂಪ.
#ಅನಿವಾಸಿ_ಭಾರತೀಯರಾದ_ಇವರು_ನೇರ_ನಡೆ_ನುಡಿಯವರು
#ನಿಷ್ಟೂರವಾದಿ_ಲೋಕವಿರೋದಿ_ಎಂಬಂತೆ_ಇವರಿಗೆ_ವಿರೋದಿಗಳು_ಹೆಚ್ಚು.
#ಇವರ_ಹವ್ಯಕ_ಸಮಾಜದಲ್ಲಿ_ಇಂಜಿನಿಯರಿಂಗ್_ವೈದ್ಯಕೀಯ_ಶಿಕ್ಷಣ_ಸಂಸ್ಥೆಗಳ_ಕನಸು_ಕಂಡವರು_ಇವರು.
#ಎಲ್ಲಾ_ಅನಿವಾಸಿ_ಭಾರತೀಯ_ಹವ್ಯಕರಂತೆ_ಇವರ_ಜಾತಿಯ_ಮಠಕ್ಕೆ_ಕೈತುಂಬಾ_ದೇಣಿಗೆ_ನೀಡಿದವರು
#ಮೊದ_ಮೊದಲು_ಮಠದ_ಸ್ವಾಮಿಗಳನ್ನು_ಸಮರ್ಥಿಸುತ್ತಾರೆ.
#ನಂತರ_ನ್ಯಾಯಾಲಯಕ್ಕೆ_ಸಲ್ಲಿಸಿದ_ಚಾರ್ಜ್_ಶೀಟ್_FSL_ವರದಿ_ಇವರ_ನಿಲುವು_ಬದಲಿಸುತ್ತದೆ.
#ಈ_ಬಗ್ಗೆ_ಸಾಮಾಜಿಕ_ಜಾಲತಾಣದಲ್ಲಿ_ಬರೆದಾಗ_ಇವರನ್ನು_ಅವ್ಯಾಚ್ಯ_ಶಬ್ದಗಳಿಂದ_ನಿಂದಿಸುತ್ತಾರೆ
#ಅದರಿಂದ_ಇವರು_ಅವರ_ವಿರುದ್ದ_ಸಿಡಿದೇಳುತ್ತಾರೆ.
#ಹವ್ಯಕ_ಬ್ರಾಹ್ಮಣರಲ್ಲಿ_ಇವರ_ಹೆಸರು_ಎಲ್ಲರಿಗೂ_ಗೊತ್ತು.
#ಕಳೆದ_ಶುಕ್ರವಾರ_ಶಾಂತರಾಮ_ಹೆಗಡೆಕಟ್ಟೆ_ದಂಪತಿಗಳು_ನನ್ನ_ಅತಿಥಿಗಳು.
#ಇವರಿಗೆ_ನಾನು_ಕೆಲ_ಪ್ರಶ್ನೆ_ಕೇಳಿದ್ದೆ_ಅದಕ್ಕೆ_ಅವರ_ಉತ್ತರದ_ವಿಡಿಯೋದ_ಮೊದಲ_ಭಾಗ_ಇಲ್ಲಿದೆ.
ಅನಿವಾಸಿ ಭಾರತೀಯರಾದ ಉತ್ತರ ಕನ್ನಡ ಜಿಲ್ಲೆಯ ಕುಮುಟಾ ಸಮೀಪದ ಹೆಗಡೆಯ ಶಾಂತಾರಾಮ ಹೆಗಡೆಕಟ್ಟೆ ನನ್ನ ಪೇಸ್ ಬುಕ್ ಗೆಳೆಯರು.
ಮೊನ್ನೆ ಶುಕ್ರವಾರ (17- ನವೆಂಬರ್ -2023) ಶಾಂತರಾಮ ಹೆಗಡೆ ಕಟ್ಟೆ ದಂಪತಿಗಳು ಬೆಂಗಳೂರಿಂದ ಹೊನ್ನಾವರದಲ್ಲಿ ಭಾನುವಾರ ನಡೆಯಲಿದ್ದ ಸಂಬಂದಿಗಳ ವಿವಾಹ ಮಹೋತ್ಸವದಲ್ಲಿ ಭಾಗವಹಿಸಲು ಪ್ರಯಾಣಿಸುವಾಗ ನಮ್ಮಲ್ಲಿ ಕಾಫಿ ಬ್ರೇಕ್ ತೆಗೆದುಕೊಂಡು ನನ್ನ ಕಛೇರಿಗೆ ಆಗಮಿಸಿದ್ದರು.
ನನ್ನ ಟೇಬಲ್ ಮೇಲಿದ್ದ ನಮ್ಮ ಊರಿನಲ್ಲಿರುವ ಕೆಳದಿ ರಾಜ ವೆಂಕಟಪ್ಪ ನಾಯಕರು ತಮ್ಮ ರಾಣಿ ಚಂಪಕಾಳ ಸ್ಮರಣಾರ್ಥ ನಾಲ್ಕು ನೂರು ವರ್ಷದ ಹಿಂದೆ ನಿರ್ಮಿಸಿರುವ ಸ್ಮಾರಕ #ಚಂಪಕ_ಸರಸ್ಸು ಪೋಟೋ ನೋಡಿ ಅವರ ಶ್ರೀಮತಿ ಈ ಸ್ಮಾರಕ ನೋಡುವ ಆಸಕ್ತಿ ವ್ಯಕ್ತ ಪಡಿಸಿದರು ಕಾರಣ ಅವರು ಈ ಸ್ಮಾರಕ ಆದರಿಸಿದ ಕಾದಂಬರಿ ಓದಿದ್ದರಂತೆ!..ನಂತರ ಅವರ ಪತಿ ಶಾಂತರಾಮರು ಆ ಕಾದಂಬರಿಯ ಬರೆದದ್ದು ನಾನೇ ಅಂತ ಅವರಿಗೆ ತಿಳಿಸಿದಾಗ ಅವರಿಗೆ ಆಶ್ಚರ್ಯ.
ನಾವಿಬ್ಬರೂ ಪರಸ್ಪರ ಬೇಟಿ ಆಗ ಬೇಕೆಂದು ಕೆಲ ವರ್ಷದಿಂದ ಬಯಸಿದ್ದೆವು ಆದರೆ ಅದಕ್ಕೆ ಕಾಲ ಕೂಡಿ ಬಂದಿದ್ದು ಈ ದಿನ .
ಶಾಂತ ಸ್ವಭಾವದವರು, ಮಾತಿನಲ್ಲಿ ಹಾಸ್ಯ ಚಟಾಕಿ ಹಾರಿಸುತ್ತಾ ತಮ್ಮ ವಿಚಾರವನ್ನ ತರ್ಕಬದ್ದವಾಗಿ ಮಂಡಿಸುತ್ತಾರೆ.
ಎಲ್ಲಾ ಅನಿವಾಸಿ ಭಾರತೀಯರಂತೆ ಇವರೂ ತಮ್ಮ ಹವ್ಯಕ ಜಾತಿಯ ಅಭಿವೃದ್ದಿಗಾಗಿ, ಇಲ್ಲಿನ ಆರ್ಥಿಕವಾಗಿ ದುರ್ಬಲವಾಗಿ ಇರುವ ಇವರ ಜಾತಿಯ ಪ್ರತಿಭಾವಂತ ಮಕ್ಕಳಿಗಾಗಿ ಇವರ ಜಾತಿಯ ರಾಮಚಂದ್ರಪುರ ಮಠದಿಂದ ಇಂಜಿನಿಯರಿಂಗ್, ಮೆಡಿಕಲ್ ಕಾಲೇಜುಗಳು ನಿರ್ಮಾಣವಾಗುವ ಕನಸು ಕಂಡವರು.
ಈ ಮಠದ ಅನೇಕ ಕಾರ್ಯಕ್ರಮಗಳಿಗೆ ಪ್ರಾರಂಭದಲ್ಲಿ ದೇಣಿಗೆ ನೀಡಿದವರು, ನಂತರ ಅಪಾದನೆಗಳು ಈ ಮಠದ ಸ್ವಾಮಿಗಳ ಮೇಲೆ ಬಂದಾಗ ಇದು ಸುಳ್ಳು ಎ೦ದು ಸ್ವಾಮಿಗಳ ಸಮರ್ಥಿಸಿ ಕೊಳ್ಳುತ್ತಾರೆ ನಂತರ ನ್ಯಾಯಾಲಯದಲ್ಲಿ ಸಲ್ಲಿಕೆ ಆದ ಚಾರ್ಜ್ ಶೀಟ್, FSL ವರದಿಗಳನ್ನು ನೋಡಿದ ನಂತರ ಇವರು ಭ್ರಮನಿರಸರಾಗಿ ಬದಲಾಗುತ್ತಾರೆ.
ಈ ಬಗ್ಗೆ ಸಾಮಾಜಿಕ ಜಾಲ ತಾಣದಲ್ಲಿ ಈ ಅನಾಚಾರಕ್ಕೆ ವಿರೋದ ವ್ಯಕ್ತಪಡಿಸಿ ಬರೆಯುತ್ತಾರೆ, ಸತ್ಯದ ಪರವಾಗಿ ಇವರು ಚರ್ಚೆ ಮಾಡಿದರೆ ಅನೇಕರು ಇವರನ್ನು ಅವ್ಯಾಚ್ಯವಾಗಿ ನಿಂದಿಸುತ್ತಾರೆ ಆಗ ಇವರಿಗೆ ಅನ್ನಿಸುವುದು ತಮ್ಮ ಕುಲಬಾಂಧವರ ಈ ಕೆಲಸ ಸರಿಯಲ್ಲ, ತಪ್ಪು ಮಾಡಿದವರ ಸಮರ್ಥನೆಗಿಂತ ತಪ್ಪು ಮಾಡುವುದು ತಡೆಯದಿದ್ದರೆ ತಮ್ಮ ಸಮಾಜ ಎಷ್ಟೇ ಬುದ್ದಿವಂತರಾದರೂ ಸಮಾಜದ ಅಭಿವೃದ್ಧಿ ಸಾಧ್ಯವಿಲ್ಲ ಎಂದು ತೀರ್ಮಾನಿಸುತ್ತಾರೆ.
ಈ ಹೋರಾಟದಲ್ಲಿರುವ ಸಮಾನ ಮನಸ್ಕರ ಜೊತೆ ಕೈ ಜೋಡಿಸುತ್ತಾರೆ, ಇವರ ಪ್ರಖರ ವಾಗ್ಜರಿಯಿಂದ ಶತ್ರುಗಳ ಪಾಳೆಯದಲ್ಲಿ ಅಷ್ಟೇ ವಿರೋದ ಕಟ್ಟಿಕೊಳ್ಳುತ್ತಾರೆ, ನ್ಯಾಯದ ಪರವಾಗಿ ಇರುವವರು ಧೈರ್ಯವಾಗಿ ಎದುರು ಬರಲು ಸಾಧ್ಯವಿಲ್ಲ ಆದ್ದರಿಂದ ಅವರೆಲ್ಲ ಶಾಂತರಾಮ ಹೆಗಡೆ ಕಟ್ಟೆಯವರ ಅಭಿಮಾನಿಗಳಾಗಿದ್ದಾರೆ ಹೀಗಾಗಿ ಶಾಂತರಾಮ ಹೆಗಡೆ ಕಟ್ಟೆ ಅವರು ಹವ್ಯಕ ಬ್ರಾಹ್ಮಣರಲ್ಲಿ ಗೊತ್ತಿಲ್ಲ ಎನ್ನುವವರು ಯಾರೂ ಇಲ್ಲ.
ತಾವೆಲ್ಲ ವಿದ್ಯಾವಂತರಾಗಿ, ವಿದೇಶಗಳಲ್ಲಿ ದುಡಿದು ತಮ್ಮ ಸ್ವಂತ ಜಾತಿಯಲ್ಲಿ ನಡೆಯುವ ಅನಾಚಾರ ವಿರೋದಿಸದಿದ್ದರೆ ತಾವೂ ಈ ಅಪರಾದಗಳನ್ನು ಬೆಂಬಲಿಸಿದಂತೆ ಆಗುತ್ತದೆ ಆದ್ದರಿಂದ ನಾನು ವಿರೋದಿಸುತ್ತೇನೆ, ಈ ಹೋರಾಟ ನನಗೆ ನೆಮ್ಮದಿ ತಂದಿದೆ ಎನ್ನುತ್ತಾರೆ.
ಇವರು ಮತ್ತು ಜಿಗಳೆಮನೆ ಗಣಪತಿ ಭಟ್ಟರು ಅಡ್ಮಿನ್ ಆಗಿರುವ ಸತ್ಯ ಶೋದ ಮಂಡಳಿ ಗ್ರೂಪಿನಲ್ಲೂ ನಾನು ಸೇರಿದ್ದರಿಂದ ಅಲ್ಲಿಯೂ ಇವರೆಲ್ಲರ ಚರ್ಚೆಯನ್ನು ನೋಡುತ್ತಿರುತ್ತೇನೆ.
ಶಾಂತಾರಾಮ ಹೆಗಡೆ ಕಟ್ಟೆ ಮತ್ತು ಚಿಂತಕ ಅರವಿಂದ ಚೊಕ್ಕಾಡಿ ಅವರ ಚರ್ಚೆ - ಜಗಳಗಳು, ಕೆಲವೊಮ್ಮೆಮೋದಿ ಮತ್ತು ಬಿಜೆಪಿ ಪರವಾಗಿ ಇವರ ಪೋಸ್ಟ್ ಗಳು, ರಾಹುಲ್ ಗಾಂಧಿ ಹಾಗೂ ರಾಮಚಂದ್ರಪುರ ಮಠದ ಸ್ವಾಮಿಗಳ ವಿರುದ್ದವಾಗಿರುವ ಪೋಸ್ಟ್ ಗಳು ಕುತೂಹಲಕಾರಿಯಾಗಿರುತ್ತದೆ ಈ ಬಗ್ಗೆ ನಾನು ಕೇಳಿದ ಪ್ರಶ್ನೆಗಳಿಗೆ ಶಾಂತಾರಾಮರು ನೀಡಿದ ಉತ್ತರಗಳು ಮೂರು ಭಾಗಗಳಾಗಿ ವಿಡಿಯೋ ಮಾಡಿದ್ದು ಅದರ ಮೊದಲ ಭಾಗ ಇಲ್ಲಿದೆ.
Comments
Post a Comment