Blog number 1818. ನಡಿಗೆಯ ಕರಾರುವಕ್ಕಾದ ಹೆಜ್ಜೆಯ ಲೆಖ್ಖ ಮಾಡಿ ನಮ್ಮ ಸೆಲ್ ಫೋನ್ ನಲ್ಲಿ ತೋರಿಸುವ ಸ್ಮಾರ್ಟ್ ವಾಚ್ ಸ್ಥೂಲಕಾಯ ನಿವಾರಣೆ - ಪಿಟ್ ನೆಸ್ ಗೆ ಪ್ರಯತ್ನಿಸುವವರಿಗೆ ಒಂದು ಆಧುನಿಕ ಹೆಲ್ತ್ ಲ್ಯಾಬ್ ಆಗಿದೆ..
https://youtube.com/shorts/bLRwtrovDT0?feature=shared
#ಲೆಖ್ಖಾಚಾರ_ತೂಕ_ಕರಾರುವಕ್ಕು_ಆಗಿರಬೇಕೆಂದರೆ.
#ಆದುನಿಕ_ಸಾದನಗಳು_ಬೇಕು.
#ಸ್ಮಾರ್ಟ್_ವಾಚ್_ನಿಜಕ್ಕೂ_ಉಪಯುಕ್ತ.
ನನ್ನ ಪ್ರತಿ ನಿತ್ಯದ ಬೆಳಗಿನ ವಾಕಿಂಗ್ ಒಂದು ಗಂಟೆ ಈ ಸಮಯದಲ್ಲಿ 7000 ಹೆಜ್ಜೆ ನಡೆಯುತ್ತಿದ್ದೇನೆ ಎಂದೇ ಬಾವಿಸಿದ್ದೆ ಆದರೆ ಸ್ಮಾರ್ಟ್ ವಾಚ್ ಮಾತ್ರ 4600 ರಿಂದ 4700 ಹೆಜ್ಜೆ ಅಂತ ಗುರುತಿಸುತ್ತಿತ್ತು.
ನನಗೆ ಇದರಿಂದ ಗೊಂದಲ ಉಂಟಾಗಿತ್ತು, ಈ ಸ್ಮಾರ್ಟ್ ವಾಚ್ ಯಾವುದೋ ಆ್ಯಪ್ ಮೂಲಕ ಹೆಜ್ಜೆ ಗುರುತು ಮಾಡುತ್ತಿದೆ ಮತ್ತು ಇದು ನಿಖರವಾಗಿಲ್ಲ ಅಂತ ಅನ್ನಿಸಿ ಅನೇಕ ರೀತಿಯ ಕ್ರಾಸ್ ಚೆಕ್ ಮಾಡಿದೆ.
ನಂತರ ಗೊತ್ತಾಯಿತು ನನ್ನ ತಪ್ಪು ಅದೇನೆಂದರೆ ಪ್ರಾರಂಬಿಕವಾಗಿ 30 ಹೆಜ್ಜೆ ಹೋಗಿ 30 ಹೆಜ್ಜೆ ವಾಪಾಸು ಬರುತ್ತೇನೆ ಅಂದರೆ 60 ಹೆಜ್ಜೆ ನಿಖ್ಖಿ ಆಗಿರುತ್ತದೆ ನಂತರ ರಭಸದ ವೇಗಕ್ಕೆ ಎರೆಡೂ ತುದಿಯಲ್ಲಿ 5 ಹೆಜ್ಜೆ ಮೊದಲೇ ತಿರುಗುವುದರಿಂದ ಹೋಗಿ ಬರುವಾಗ 20 ಹೆಜ್ಜೆ ಕಳೆದು ಹೋಗುತ್ತಿತ್ತು ಇದರಿಂದ ದೈನಿಕ ಗುರಿ ಆದ 7000 ಹೆಜ್ಜೆ ಸಾಧ್ಯವಾಗುತ್ತಿರಲಿಲ್ಲ ಅಂತ ತಡವಾಗಿ ಗೊತ್ತಾಯಿತು.
ಇದಕ್ಕೆ ಪರಿಹಾರ ಕಂಡುಕೊಳ್ಳಲೇ ಬೇಕಾಗಿತ್ತು ಯಾಕೆಂದರೆ ಪ್ರತಿ ನಿತ್ಯ 7000 ಹೆಜ್ಜೆ ನಡೆದರೆ ದೈಹಿಕವಾಗಿ ಪಿಟ್ ನೆಸ್ ಮತ್ತು ಆರೋಗ್ಯ ಸರಿ ಇರುತ್ತದೆ ಎಂಬ ತಜ್ಞರ ಅಭಿಪ್ರಾಯ ಆದ್ದರಿಂದ ಈಗ ಸಂಜೆ 5 ರಿಂದ 5.30 ರ ತನಕ ಅರ್ಧ ಗಂಟೆ ವಾಕಿಂಗ್ ಸೇರಿಸಿಕೊಂಡಿದ್ದೇನೆ ಇದರಿಂದ ಬೆಳಿಗ್ಗೆ ಮತ್ತು ಸಂಜೆಯ ನಡಿಗೆಯಿಂದ 7000 ಹೆಜ್ಜೆ ಗಡಿ ದಾಟುತ್ತಿದೆ ಕ್ರಮಿಸುವ ದೂರ ಒಟ್ಟು 5 ಕಿ.ಮಿ. ದಾಟುತ್ತಿದೆ.
ಇದು ನನ್ನ ಮನೆ ಹಿಂಭಾಗದಲ್ಲಿ ನಾನು ಮಾಡಿಕೊಂಡ 20 ಮೀಟರ್ ಉದ್ದದ ವಾಕಿಂಗ್ ಟ್ರಾಕ್ ನಲ್ಲಿ ಈ ವಾಕಿಂಗ್ ಟ್ರಾಕ್ ನಿರ್ಮಾಣಕ್ಕೆ ಮತ್ತು ಫೇವರ್ಸ್ ಅಳವಡಿಸಲು ಆಗಿದ ವೆಚ್ಚ ಟ್ರೆಡ್ ಮಿಲ್ ನ ಕಾಲು ಭಾಗದಷ್ಟು ಮಾತ್ರ.
ಇದು ವಾಕಿಂಗ್ ಟ್ರಾಕ್ ಮತ್ತು ಮನೆ ಹಿಂದಿನ ಅಂಗಳವಾಗಿ ದೂಳು ಕೆಸರಿಲ್ಲದ, ಮಳೆ ನೀರು ಭೂಮಿಗೆ ಇಂಗುವ, ಯಾವತ್ತಾದರೂ ಇದು ಬೇಡವಾದರೆ ಈ ಪೇವರ್ಸ್ ಸುಲಭವಾಗಿ ತೆಗೆದು ಬೇರೆ ಕಡೆ ಸಾಗಿಸಬಹುದು ಅತ್ತ ಅಳವಡಿಸ ಬಹುದು.
ಸ್ಮಾರ್ಟ್ ವಾಚ್ ಇನ್ನೂ ಅನೇಕ ನಮ್ಮ ದೇಹದ ಒಳಗಿನ ಅಂಗಾಗಗಳ ಮಾನಿಟರಿಂಗ್ ಮಾಡಿ ದಾಖಲಿಸುತ್ತದೆ ಆದ್ದರಿಂದ ಸ್ಥೂಲಕಾಯ ನಿವಾರಣೆಗೆ, ಪಿಟ್ ನೆಸ್ ಕಾಪಾಡಿಕೊಳ್ಳಲು, ಹೃದಯ ಸಂಬಂದಿ ಸಮಸ್ಯೆಗಳಿದ್ದವರಿಗೆ ಇದು ಮನೆಯಲ್ಲೇ ಇರುವ ಲ್ಯಾಬ್ ಆಗಿದೆ.
Comments
Post a Comment