* ಆನಂದಪುರದ ಖ್ಯಾತ ಉದ್ದಿಮೆದಾರ ಟಿ.ಎನ್.ಸುಬ್ಬರಾವ್ ಗೆ ನುಡಿ ನಮನ *
ಸುಬ್ಬರಾವ್ ಸ್ವಯಂ ಉದ್ಯೋಗ ಮಾಡುವ ಗ್ರಾಮೀಣ ಪ್ರದೇಶದ ಸ್ವಯಂ ಉದ್ಯೋಗಿಗಳಿಗೆ ರೋಲ್ ಮಾಡೆಲ್ ಅಂತ ಬರೆದಿದ್ದೆ, ನಿನ್ನೆ ಅವರ ನುಡಿ ನಮನ ಕಾಯ೯ಕ್ರಮದಲ್ಲಿ ಅವರ ಶ್ರೀಮತಿಯವರ ಸಹೋದರ ಪ್ರೌಡ ಶಾಲಾ ಶಿಕ್ಷಕ, ಬರಹಗಾರರಾದ ಎನ್.ಡಿ.ಹೆಗ್ಗಡೆ ಒಂದು 40 ಪುಟದ ಸಂಕ್ಷಿಪ್ತ ಮತ್ತು ಸವಿವರವಾದ ಒಂದು ಸುಬ್ಬರಾವ್ ರ ಸ್ಮರಣಾಥ೯ "ಆನಂದದ ಕಣ್ಮಣಿ ಸುಬ್ಬರಾಯರು" ಎ೦ಬ ಪುಸ್ತಕ ಮುದ್ರಿಸಿ ಸುಬ್ಬರಾವರ ಅಭಿಮಾನಿಗಳಿಗೆ, ಮಿತ್ರರಿಗೆ ಮತ್ತು ಬಂದುಗಳಿಗೆ ವಿತರಿಸಿದ್ದಾರೆ.
ಇದರಲ್ಲಿ ಸುಬ್ಬರಾಯರ ಜೀವನ ಯಾತ್ರೆ ಮತ್ತು ಅನೇಕರಿಗೆ ಗೊತ್ತಿಲ್ಲದ ಅವರ ಸಾದನೆ ನಮೂದಿಸಿದ್ದಾರೆ.
ಶೂನ್ಯ ಬಂಡವಾಳದಿ೦ದ ಕೋಟ್ಯಾದಿಪತಿ ಆದ ಸುಬ್ಬರಾವ್ ರ ಬಗ್ಗೆ ಈ ಸ್ಮರಣ ಸಂಚಿಕೆ ಬರೆದು ಪ್ರಕಟಿಸಲು ಎನ್.ಡಿ.ಹೆಗ್ಗಡೆ ಸಹೋದರಿ (ಸುಬ್ಬರಾವ್ ರ ಪತ್ನಿ) ಮತ್ತು ಪುತ್ರ ಸಹಾಯ ಸಹಕಾರ ನೀಡಿದ್ದು ಅಭಿನಂದನೀಯ, ಶಿವಮೊಗ್ಗದ ರಾಯಲ್ ಪ್ರಿOಟಿಂಗ್ ಪ್ರೆಸ್ ನ ಮಾದವಾಚಾಯ೯ರು ಸುಂದರವಾಗಿ ಮುದ್ರಿಸಿದ್ದಾರೆ.
ನಿನ್ನೆಯ ಕಾಯ೯ಕ್ರಮಕ್ಕೆ ಎನ್.ಡಿ.ಹೆಗ್ಗಡೆ ಮತ್ತು ಸಂಸ್ಥೆಯ ಈವರೆಗಿನ ಏಳಿಗೆಗೆ ಬೆನ್ನು ಮೂಳೆಯಂತೆ ಕಾಯ೯ನಿವ೯ಹಿಸುತ್ತಿರುವ ಆನಂದಪುರದ ಕ್ರೀಡಾಪಟು ಪ್ರಾಣೆಶ್ ಬಂದು ಕರೆದಿದ್ದರು ನಾನು ಪುತ್ತೂರಿಗೆ ಹೋಗಬೇಕಾದ್ದರಿಂದ ಬಾಗವಹಿಸಲಾಗಲಿಲ್ಲ, ಸುಬ್ಬರಾವ್ ರ ಪಿಯುಸಿ ಕ್ಲಾಸ್ ಮೇಟ್ ಆದ ನನ್ನ ಸಹೋದರ ನಾಗರಾಜ್ ಭಾಗವಹಿಸಿ ತಿಳಿಸಿದ್ದೇನೆಂದರೆ ಎನ್.ಡಿ.ಹೆಗ್ಗಡೆ ಅಚ್ಚುಕಟ್ಟಾಗಿ ಕಾಯ೯ಕ್ರಮ ನಡೆಸಿದರು, ಪ್ರಾಣೆಶ್ ಅತ್ಯುತ್ತಮವಾಗಿ ನುಡಿನಮನ ಅಪಿ೯ಸಿದರಂತೆ.
ಪ್ರತಿ ತಿಂಗಳು ಮೆಸ್ಕಾಂಗೆ 30 ರಿಂದ 35 ಲಕ್ಷ ಹಣ ಪಾವತಿಸುವ, ಪ್ರತಿ ವಷ೯ GST, Income Tax ಅಂತ 5 ರಿಂದ 6 ಕೋಟಿ ಹಣ ಪಾವತಿಸುವ ಕೊಂಗನಾಸಳ್ಳಿ ಎಂಬ ಕುಗ್ರಾಮದ ಸುಬ್ಬರಾವ್ ಬೆಂಗಳೂರಿನಂತ ಶಹರ ಸೇರದೆ ಆನಂದಪುರದ೦ತ ಹೋಬಳಿ ಕೇ೦ದ್ರದಲ್ಲಿ ಯಶಸ್ವಿ ಉದ್ದಿಮೆದಾರರಾಗಿ ಸಾದನೆ ಮಾಡಿದ್ದು ದೊಡ್ಡ ಸೋಜಿಗ.
ಏನೂ ಸಾದಿಸದಂತವರಿಗೆ ಪ್ರಶಸ್ತಿ, ಸನ್ಮಾನ ಮತ್ತು ಡಾಕ್ಟರೇಟ್ ದಯಪಾಲಿಸುವ ಸಕಾ೯ರ ಮತ್ತು ಸಮಾಜಕ್ಕೆ ಸುಬ್ಬರಾವ್ ರಂತ ಸಾದಕರು ಒಂದು ಸವಾಲು ಕೂಡ, ಸುಬ್ಬರಾಯರ ನುಡಿ ನಮನ ಯಶಸ್ವಿಗೊಳಿಸಿದ ಎನ್.ಡಿ.ಹೆಗ್ಗಡೆ ಮತ್ತು ಪ್ರಾಣೆಶ್ ಅಭಿನಂದನೀಯರು.
# ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ# ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?. ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ. ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು. ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು. ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...
Comments
Post a Comment