#ವಿನಯ್ ಗುರೂಜಿ ಸರಿಯಾಗಿ ಮಾತಾಡಿದ್ದಾರೆ#
ಸರಿ ಅಂತ ಗೊತ್ತಿದ್ದರೂ ವಿರೋದಿಸಿದರೆ ನಾಗನ ಶಾಪ ತಟ್ಟುತ್ತದೆಂಬ ಭಯದಿಂದ ಅನೇಕರು ಮೌನ.
ಸರಿ ವಿಚಾರ ಜನಮನಕ್ಕೆ ತಲುಪಿದರೆ ತಮ್ಮ ಆದಾಯಕ್ಕೆ ನಷ್ಟ ಎಂಬ ಫಲಾನುಭವಿಗಳು ಕ್ರೋದದಿಂದ ನಾಗರ ಹಾವಿನ೦ತೆ ಭುಸು ಗುಟ್ಟುತ್ತಿದ್ದಾರೆ.
ಮೊದಲೆಲ್ಲ ಮನುಷ್ಯನ ಮೇಲೆ ದೈವ ಅವಾಹನೆ ಆಗುತ್ತೆ ಅಂದರೆ ಅಪಹಾಸ್ಯ ಮಾಡುತ್ತಿದ್ದ ಬ್ರಾಹ್ಮಣ ಪುರೋಹಿತರೆ ಈಗ ಈ ಲಾಭದಾಯಕ ಉದ್ದಿಮೆಯಲ್ಲಿ ನಾಗ ಪಾತ್ರಿಗಳಾಗಿ ನತಿ೯ಸುತ್ತಿದ್ದಾರೆ.
ದೊಡ್ಡ ಈ ಪ್ರದಶ೯ನ ಮೇಳ ನಡೆಸಿ ಕೊಟ್ಯಾಂತರ ಖಚು೯ ಮಾಡಿದರೆ ನಾಗ ಶಾಪಗಳೆಲ್ಲ ಕಳೆದು ಪಾವನನಾಗುತ್ತಾರೆಂಬ ಮೂಡನಂಬಿಕೆ ಆಳಕ್ಕೆ ಬೇರು ಬಿಟ್ಟಿದೆ.
ಕರಾವಳಿಯ ಈ ಕರಾಮತ್ತನ್ನ ಘಟ್ಟ ಪ್ರದೇಶವಾದ ಶಿವಮೊಗ್ಗ ಚಿಕ್ಕಮಗಳೂರು ವ್ಯಾಪಿಸುತ್ತಿದೆ.
ಹಾವಾಡಿಗರನ್ನು ಹಾವು ಹಿಡಿಯದಂತೆ ಅವರ ಕೇರಿಯಲ್ಲಿ ನಾಗರಕಟ್ಟೆ ಪ್ರತಿಷ್ಟಾಪಿಸಿದ್ದಾರೆ.
ನಾಗ ದೋಷ ಎಂದರೆ ಹಾವು ಸಾಯಿಸಲೇ ಬೇಕೆಂದಿಲ್ಲ, ಬೇರೆಯವರು ಸಾಯಿಸಿದ್ದು ನೋಡಿದರೂ ಸಾಕು, ಅಷ್ಟೇ ಅಲ್ಲ ಸತ್ತ ಹಾವು ನೋಡಿದರೂ ಬಂತು, ಅದಾವುದೂ ಇಲ್ಲದಿದ್ದರೆ ನಿಮ್ಮ ಕುಟುಂಬದ 7 ತಲೆಮಾರಿನಲ್ಲಿ ಯಾರೆ ಈ ಮೇಲಿನ ಅಂಶ ಪಡೆದಿದ್ದರೂ ನಿಮಗೆ ನಾಗ ದೋಷ ಗ್ಯಾರಂಟಿ ಅಂತೆ.
7 ತಲೆ ಮಾರಿನ ಸಾಕ್ಷಿ ಕೇಳಿದರೆ ದೈವದ ಪಾತ್ರಿ ಹೇಳಿಕೆ ನೀಡುತ್ತದೆ, ಮುಂದೆ ಬೇರೆ ಯಾವ ಮಾಗ೯ವು ಇಲ್ಲ ಇರುವುದು ನಾಗರಾದನೆ ಎಂಬ ದುಭಾರಿ ಖಚಿ೯ನ ಆಡಂಬರದ ಒಡ್ಡೋಲಗ.
ಕಳೆದ ತಿಂಗಳು ನನ್ನ ತಾಯಿಯ ಮೂಲ ಮನೆಯಲ್ಲಿ ದಶ೯ನ ಮಾಡಿಸಿದಾಗ ನಾಗ ದೋಷ ಉಂಟೇOದು ಅದರ ಪರಿಹಾರಕ್ಕಾಗಿ ನಾಗಾರಾದನೆ ಮಾಡಬೇಕೆಂದು ಪಾತ್ರಿ ಹೇಳಿದರೆಂದು ಅದಕ್ಕಾಗಿ ಸದರಿ ಮೂಲ ಮನೆಗೆ ಸಂಬಂದ ಪಟ್ಟ ಪ್ರತಿ ಕುಟುಂಬ 8 ಸಾವಿರ ವಂತಿಕೆ ನೀಡಬೇಕೆಂದು ನೂರು ವಷ೯ದ ಹಿಂದೆ ಕರಾವಳಿ ತೊರೆದು ಬಂದ ನಮಗೆಲ್ಲ ಟ್ಯಾಕ್ಸ್ ಹಾಕಲಾಗಿತ್ತು, ನಂಬಿಕೆಯೆ ದೇವರೆಂದು ಹಣ ಅಲ್ಲಿನವರ ಬ್ಯಾಂಕ್ ಖಾತೆಗೆ ಹಾಕಿದ್ದೆ, ಲಕ್ಷಾಂತರ ಖಚು೯ ಮಾಡಿದ ನಾಗಾರಾದನೆಯ ಚಿತ್ರಗಳನ್ನ ನೋಡಿದೆ.
ನಿಜಕ್ಕೂ ಇಂತಹದನ್ನ ಪ್ರೋತ್ಸಾಹಿಸದೆ ದಿಟ್ಟವಾಗಿ ವಿರೋದಿಸಲು ಹೇಳಿಕೆ ನೀಡಿದ ವಿನಯ್ ಗುರೂಜಿ ಪ್ರಶಂಸನೀಯ ಹೊಸ ತಲೆಮಾರಿನ ಗುರೂಜಿ ಆಗಿದ್ದಾರೆ.
Comments
Post a Comment