ಶಿವಾಜಿ ಮಹಾರಾಜರ ಜನ್ಮ ದಿನಾಚರಣೆಯ ಈ ಸಂದರ್ಭದಲ್ಲಿ ನಮ್ಮ ಸಮೀಪದ ಚೆನ್ನಗಿರಿಯ ಹೊದಿಗೆರೆಯಲ್ಲಿರುವ ಶಿವಾಜಿ ಮಹಾರಾಜರ ತಂದೆ ಷಹಾಜಿ ಮಹಾರಾಜರ ಸಮಾದಿ, ಹೊಸನಗರ ತಾಲ್ಲೂಕಿನ ಬಿದನೂರು ನಗರದ ಅರಮನೆಕೊಪ್ಪದಲ್ಲಿ ಶಿವಾಜಿ ಮಹಾರಾಜರ ಪುತ್ರ ಛತ್ರಪತಿ ರಾಜಾರಾಮರಿಗೆ ಕೆಳದಿ ರಾಣಿ ಚಿನ್ನಮ್ಮ ಆಶ್ರಯ ನೀಡಿದ್ದ ರಹಸ್ಯ ಅರಮನೆ, ನಗರದಲ್ಲಿ ರಾಜಾರಾಮರು ನಿರ್ಮಿಸಿರುವ ಪಾರ್ವತಿ ಮತ್ತು ಸುಬ್ರಮಣ್ಯ ದೇವಾಲಯ ಇತಿಹಾಸ ಆಸಕ್ತರಿಗೆ ಕೈ ಬೀಸಿ ಕರೆಯುತ್ತಿದೆ.
#ಶಿವಮೊಗ್ಗ_ಜಿಲ್ಲೆಗೂ_ಶಿವಾಜಿ_ವಂಶಸ್ಥರಿಗೂ_ಇದೆ_ಸಂಬಂಧ.
#ಶಿವಾಜಿ_ಮಹಾರಾಜರ_ತಂದೆ_ಸಮಾದಿ_ಹೊದಿಗೆರೆಯಲ್ಲಿದೆ.
#ಶಿವಾಜಿ_ಮಹಾರಾಜರ_ಮಗ_ಛತ್ರಪತಿ_ರಾಜಾರಾಮರು_ಆಶ್ರಯ_ಪಡೆದ_ರಹಸ್ಯ_ಅರಮನೆ_ಬಿದನೂರಿನ_ಅರಮನೆಕೊಪ್ಪದಲ್ಲಿದೆ.
#ಛತ್ರಪತಿ_ರಾಜಾರಾಮರು_ಬಿದನೂರು_ನಗರದಲ್ಲಿ_ನಿರ್ಮಿಸಿರುವ_ಪಾರ್ವತಿ_ಮತ್ತು_ಸುಬ್ರಮಣ್ಯ_ದೇವಾಲಯ
19- ಪೆಬ್ರುವರಿ-1630 ಛತ್ರಪತಿ ಶಿವಾಜಿ ಮಹಾರಾಜರ ಜನ್ಮ ದಿನಾಚಾರಣೆ ದೇಶದಾದ್ಯಂತ ವಿಜೃ೦ಬಣೆಯಿಂದ ನಡೆಯುತ್ತಿದೆ.
ಒಂದು ಕಾಲದಲ್ಲಿ ಶಿವಮೊಗ್ಗ ಜಿಲ್ಲೆಯ ಈಗ ಜಿಲ್ಲಾ ಪುನರ್ ವಿಂಗಡನೆಯಲ್ಲಿ ದಾವಣಗೆರೆ ಜಿಲ್ಲೆಯ ಚೆನ್ನಗಿರಿ ತಾಲ್ಲೂಕಿನ ಹೊದಿಗೆರೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ತಂದೆ ಛತ್ರಪತಿ ಷಹಾಜಿ ಮಹಾರಾಜರ ಸಮಾದಿ ಇದೆ.
ಇದು ಈಗ ರಾಷ್ಟ್ರೀಯ ಸ್ಮಾರಕ, ಇಲ್ಲಿಗೆ ಮಹಾರಾಷ್ಟ್ರದ ಬಾಳಾ ಠಾಕ್ರೆ, ಶರದ್ ಪವಾರ್ ಅಂತವರೆಲ್ಲ ಬೇಟಿ ನೀಡಿದ್ದಾರೆ, ಮರಾಠರಿಗೆ ಇದು ತುಂಬಾ ಪುಣ್ಯ ಸ್ಥಳ ಆಗಿದೆ.
ಷಹಾಜಿ ರಾಜೆ ಬೊಸಲೆ ಅವರ ಮೂಲ ಹೆಸರು ಅವರು ಇಲ್ಲಿ ಶಿಕಾರಿಗೆ ಹೋದಾಗ ಕುದುರೆಯಿಂದ ಜಾರಿ ಬಿದ್ದು ದಿನಾಂಕ 23- ಜನವರಿ -1664 ರಲ್ಲಿ ಮೃತರಾದರೆಂದು ಹೊದಿಗೆರೆಯ ಸಮಾದಿಯಲ್ಲಿ ನಿರ್ಮಿಸಿದ್ದಾರೆ, ಈ ಸಮಾದಿ ನಿರ್ವಹಣೆಗೆ ಆದಿಲ್ ಷಹಾ ಎರೆಡು ಹಳ್ಳಿಗಳನ್ನು ಉಂಬಳೆ ನೀಡಿದ ಇತಿಹಾಸ ಇದೆ.
ಸ್ಥಳಿಯ ಜನಪದದಲ್ಲಿ ಬೇರೆಯ ಕಥೆಯೂ ಇದೆ ಅವರಿಗೆ ಇಲ್ಲಿ ಒಬ್ಬಳು ಪ್ರಿಯತಮೆ ಇದ್ದಳು ಹಾಗಾಗಿ ಆಗಾಗ್ಗೆ ಅವರು ಇಲ್ಲಿ ಬಂದು ತಂಗುತ್ತಿದ್ದರು ಆಗ ಮೋಸದಿಂದ ಅವರ ಹತ್ಯೆ ಆಯಿತು ಅವರ ಪ್ರಿಯತಮೆಯ ವಂಶಸ್ಥರು ಈಗಲೂ ಅತ್ಯಂತ ಶ್ರೀಮಂತರು ಅನ್ನುತ್ತದೆ ಆ ಕಥೆ.
ಷಹಾಜಿ ಮಹಾರಾಜರ ಎರಡನೆ ಪುತ್ರ ಶಿವಾಜಿ ಮಹಾರಾಜರು, ಶಿವಾಜಿ ಮಹಾರಾಜರ ಎರಡನೆ ಪುತ್ರ ಛತ್ರಪತಿ ರಾಜರಾಮ ಮಹಾರಾಜರು ಔರಂಗಜೇಬರಿಂದ ತಪ್ಪಿಸಿಕೊಂಡು ಕೆಳದಿ ರಾಣಿ ಚೆನ್ನಮ್ಮರ ಆಶ್ರಯ ಪಡೆಯುತ್ತಾರೆ. ಇದರಿಂದ ಔರಂಗ ಜೇಬರು ತಮ್ಮ ಪುತ್ರ ಅಜ್ಮತ್ ಆಗಾನ ನೇತೃತ್ವದಲ್ಲಿ ಕೆಳದಿ ಮೇಲೆ ದಂಡೆತ್ತಿ ಬರುತ್ತಾರೆ ಆದರೂ ರಾಣಿ ಚೆನ್ನಮ್ಮ ರಾಜರಾಮರನ್ನು ಸಂರಕ್ಷಿಸುತ್ತಾಳೆ.
ಸುಮಾರು ಎರೆಡು ವರ್ಷ ಛತ್ರಪತಿ ರಾಮರಾಜ ಮಹಾರಾಜರು ಬಿದನೂರಿನಿಂದ ಸುಮಾರ 10 ಕಿ.ಮಿ. ದೂರದಲ್ಲಿರುವ ಶರಾವತಿ ನದಿ ತಟದ ಅರಮನೆಕೊಪ್ಪದಲ್ಲಿನ ರಹಸ್ಯ ಅರಮನೆಯಲ್ಲಿ ಗುಪ್ತವಾಗಿ ಇರಿಸಿರುತ್ತಾರೆ.
ಈ ಸಂದರ್ಭದಲ್ಲಿ ಬಿದನೂರು ನಗರದಲ್ಲಿ ಛತ್ರಪತಿ ರಾಮ ರಾಜರು ಪಾವ೯ತಿ ದೇವಸ್ಥಾನ ಮತ್ತು ಸುಬ್ರಮಣ್ಯ ದೇವಸ್ಥಾನ ಕಟ್ಟುತ್ತಾರೆ.
ಈಗ ಅರಮನೆಕೊಪ್ಪದ ರಹಸ್ಯ ಅರಮನೆ ಸ್ಥಳಿಯ ಕೃಷಿಕರಾದ ಮಂಜುನಾಥ ಭಟ್ಟರ ಸುಪರ್ದಿಯಲ್ಲಿದೆ ಈ ಬಗ್ಗೆ ಕಳೆದ ವರ್ಷ ಪ್ರಖ್ಯಾತ ಮರಾಠಿ ಚಾನಲ್ ABP MARARATI MAJHA ಒಂದು ಸೀರಿಯಲ್ ಮಾಡಿತ್ತು ಇದಕ್ಕೆ ಸ್ಥಳಿಯ ಇತಿಹಾಸ ಸಂಶೋದಕರಾದ ಅಂಬ್ರಯ್ಯ ಮಠರ ಸಹಕಾರವೂ ಪಡೆದಿದ್ದರು ಇದನ್ನು ಈ ಕೆಳಕಂಡ ಲಿಂಕ್ ನಲ್ಲಿ ನೋಡ ಬಹುದು
https://youtu.be/H0f1pW_z_vk
ಈ ಐತಿಹಾಸಿಕ ಶಿವಾಜಿ ಮಹಾರಾಜರ ಮಗನಿಗೆ ಆಶ್ರಯ ನೀಡಿದ ರಹಸ್ಯ ಅರಮನೆ ಶಿಥಿಲವಾಗುತ್ತಿದೆ, ಕರ್ನಾಟಕ ಸರ್ಕಾರ ಸೂಕ್ತ ಪರಿಹಾರ ನೀಡಿ ಹಾಲಿ ಮಾಲಿಕರಿಂದ ಪಡೆದು ಈ ಸ್ಮಾರಕ ಸಂರಕ್ಷಿಸಿ ಪ್ರವಾಸಿಗರಿಗೆ ಮತ್ತು ಸಂಶೋದಕರಿಗೆ ಮುಕ್ತ ಮಾಡಬೇಕು. ಶಿವಾಜಿ ಮಹಾರಾಜರ ಕರಳ ಕುಡಿಯ ರಕ್ಷಣೆಗಾಗಿ ಬಲಾಡ್ಯ ಔರಂಗಜೇಬನನ್ನು ಎದುರು ಹಾಕಿಕೊಂಡ ಕೆಳದಿ ವೀರರಾಣಿ ಚೆನ್ನಮ್ಮರ ಶೌರ್ಯ ಕೂಡ ಮರೆಯುವಂತಿಲ್ಲ.
ಶಿವಾಜಿ ಮಹಾರಾಜರ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಚೆನ್ನಗಿರಿಯ ಹೊದಿಗೆರೆಯಲ್ಲಿರುವ ಶಿವಾಜಿ ಮಹಾರಾಜರ ತಂದೆ ಷಹಾಜಿ ಮಹಾರಾಜರ ಸಮಾದಿಗೆ ಮತ್ತು ಹೊಸನಗರ ತಾಲ್ಲೂಕಿನ ಬಿದನೂರು ನಗರದ ಸಮೀಪದ ಅರಮನೆಕೊಪ್ಪದಲ್ಲಿರುವ ಶಿವಾಜಿ ಮಹರಾಜರ ಪುತ್ರ ಛತ್ರಪತಿ ರಾಮರಾಜರನ್ನು ರಹಸ್ಯವಾಗಿಟ್ಟ ಗುಪ್ತ ಅರಮನೆ ಮತ್ತು ನಗರದಲ್ಲಿ ರಾಮ ರಾಜರು ನಿರ್ಮಿಸಿರುವ ಪಾರ್ವತಿ ಮತ್ತು ಸುಬ್ರಮಣ್ಯ ದೇವಾಲಯ ವೀಕ್ಷಿಸಲು ಮರೆಯಬಾರದು
Comments
Post a Comment