Skip to main content

ಮಹಾರಾಷ್ಟ್ರದ ರತ್ನಗಿರಿಯಿಂದ ಕೇರಳದ ಕಾಸರಗೋಡಿನ ತನಕ ಮಲೆನಾಡ ಪಶ್ಚಿಮ ಘಟ್ಟದ ಪ್ರದೇಶದಲ್ಲಿ ಜುಟ್ಟು ಕಾಳಿಂಗ ಸರ್ಪದ ರೋಚಕ ಕಥೆಗಳಿದೆ ಏಕೆ ? ಆದರೆ ಜುಟ್ಟು ಕಾಳಿಂಗ ಅಸ್ತಿತ್ವದಲ್ಲಿ ಮಾತ್ರ ಇಲ್ಲ !?

#ಜುಟ್ಟು_ಕಾಳಿಂಗ_ನೋಡಿದೀರಾ?!

#ಮಲೆನಾಡ_ಪಶ್ಚಿಮಘಟ್ಟದ_ಜನರಲ್ಲಿರುವ_ನಂಬಿಕೆಗಳು.

#ಆನಂದಪುರಂನ_ಪಾಳುಬಿದ್ದ_ಕೆಳದಿ_ಅರಸರ_ಕೋಟೆಯಲ್ಲಿ_ಜುಟ್ಟು_ಕಾಳಿಂಗದ_ಕಥೆ.

#ಅರಸರ_ಕಾಲದ_ನಿದಿ_ಕಾಯುತ್ತಿದೆ_ಅಂತೆ.

#ಈರೀತಿಯ_ಜುಟ್ಟು_ಕಾಳಿಂಗದ_ಕಥೆ_ಮಹಾರಾಷ್ಟ್ರದ_ರತ್ನಗಿರಿಯಿಂದ_ಕೇರಳದ_ಕಾಸರಗೋಡಿನ_ತನಕ_ಇದೆ.
  
      ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.
   ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.
  ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.
   ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.
    ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ ಅರಸರು ದಟ್ಟ ಕಾಡಿನ ನಡುವೆ ನಿಮಿ೯ಸಿರುವ, ರಾಜ ಪರಿವಾರದ ಕೊಳಗಳ ಸಂಕೀಣ೯ದ ಹಳ್ಳಿಯ, ನಮ್ಮ ದೊಡ್ಡಮ್ಮನ ಮನೆಯ ಕಟಾಂಜನದಲ್ಲಿ, ವಿದ್ಯುತ್ ಇಲ್ಲದ ಕತ್ತಲ ರಾತ್ರಿಯಲ್ಲಿ,ಈ ರೀತಿ ನಮ್ಮ ಮಾವ ಕಥೆ ಹೇಳುವಾಗ ನಾವೆಲ್ಲ ಇಡೀ ರಾತ್ರಿ ಜುಟ್ಟು ಕಾಳಿಂಗದ ಕನಸಲ್ಲಿ ರಾತ್ರಿ ಎಲ್ಲ ಕುಮುಟು ಹಾರುತ್ತಿದ್ದೆವು.
  ಮೂಡ ನಂಬಿಕೆ ವಿರೋದಿ ಆಗಿದ್ದ ನಮ್ಮ ತಂದೆ ಅದೆಲ್ಲ ಸುಳ್ಳು ಅಂದಾಗ ಕೆಲವರು ನಾನು ಸ್ವತಃ ನೋಡಿದ್ದು ಸುಳ್ಳ? ಅಂತ ವಾದ ಮಾಡುತ್ತಿದ್ದರು,ಆಗ ನಮ್ಮ ತಂದೆ ಮನುಷ್ಯರಿಗೆ ಅಂಗವಿಕಲತೆ ಇದ್ದ ಹಾಗೆ ಎಲ್ಲೋ ಒಂದು ಹಾವಿಗೆ ಹಾಗೆ ಕೂದಲು ಬಂದಿರ ಬಹುದು ಅಂತಿದ್ದರು.
    1995 ಅಥವ 96 ಇರಬೇಕು, ಆನಂದಪುರದ ಕನ್ನಡ ಸಂಘದವರು ಆನಂದಪುರದ ಕೆಳದಿ ಅರಸರ ಶಿಥಿಲವಾದ ಕೋಟಿ ಪ್ರದೇಶ ಸ್ವಚ್ಚ ಮಾಡಲು ಪ್ರಾರಂಭಿಸಿದ್ದರು.
   ಅವರ ಉದ್ದೇಶ ಆ ವಷ೯ದ ಕನ್ನಡ ರಾಜ್ಯೋತ್ಸವದ ಧ್ವಜಾರೋಹಣ ಆನಂದಪುರಕ್ಕೆ ಎತ್ತರ ಪ್ರದೇಶದಲ್ಲಿರುವ ಕೋಟೆ ಬುರುಜಿನ ಮೇಲೆ ನೆರವೇರಿಸುವುದು.
   ಅವರ ಕೈಯಲ್ಲಿ ಸಾಧ್ಯವಾಗುವ ಸ್ವಚ್ಚತೆ ಮುಗಿದ ಮೇಲೆ, ' ಅವರಿಗೆ ಅಸಾಧ್ಯವಾದ ಬಿದಿರು ಮಟ್ಟಿ ತೆಗೆಯುವ ಕೆಲಸ, ಇದು ಎಲ್ಲರೂ ಮಾಡುವವರಲ್ಲ ಬಸವನ ಹೊಂಡದ ರಾಜಾನಾಯ್ಕರ ಮಗ ಮಂಜಣ್ಣ ಎಕ್ಸ್ಪಟ೯ ಅಂತ ಅವನನ್ನ ಸಂಪಕಿ೯ಸಿದ್ದಾರೆ. ಆದರೆ ಅಷ್ಟು ಸುಲಭದಲ್ಲಿ ಅವನು ಒಪ್ಪುವವನಲ್ಲ, ಹಾಗಾಗಿ ನನ್ನ ಮಾತು ಕೇಳುತ್ತಾನೆ ಅಂತ ತಿಳಿದು ನನ್ನ ಹತ್ತಿರ ಬಂದರು.
  ಕೆಳದಿ ಅರಸ ವೆಂಕಟಪ್ಪ ನಾಯಕರು ಕೆಳದಿ ಅರಸರಲ್ಲೇ ಹೆಚ್ಚು ಕಾಲ ಆಡಳಿತ ಮಾಡಿದವರು. ಅವರು ಆನಂದಪುರದ ಈ ಕೋಟೆಯ ಅರಮನೆಯಲ್ಲಿ ಚಂಪಕ ಎಂಬ ಸುರಸುಂದರಿ. ರಂಗೋಲಿ ಚಿತ್ರದ ಪ್ರವೀಣೆಯನ್ನ ವಿವಾಹವಾಗಿ ಜೀವನ ಮಾಡಿದ್ದರು. ಅವಳು ಶೂದ್ರಳು ಎಂಬ ಕಾರಣದಿಂದ ನಡೆದ ಅನೇಕ ಘಟನೆಗಳಿಂದ ಅವರ ಪ್ರೇಮ ವಿವಾಹ ದುರಂತವಾಯಿತು, ಚಂಪಕಳ ಸ್ಮರಣೆಗಾಗಿ ಆನಂದಪುರದಲ್ಲಿ ಅವರು ನಿರ್ಮಿಸಿರುವ "ಚಂಪಕ ಸರಸು" ಅವರ ಅಮರ ಪ್ರೇಮದ ಮಂದಿರವಾಗಿದೆ.
  100 ವಷ೯ದ ಹಿಂದೆ ಬ್ರಿಟಿಷ್ ಅಧಿಕಾರಿ ರೈಸ್ ಬರೆದ ಪ್ರವಾಸ ಕಥನದಲ್ಲಿ, ಈ ಕೋಟೆಯ ಸುಂದರ ವಣ೯ನೆ ಇದೆ ಈ ಎಲ್ಲಾ ಹಿನ್ನೆಲೆಯಲ್ಲಿ,ಸ್ಥಳೀಯ ಕನ್ನಡ ಸಂಘ ಕನ್ನಡ ಧ್ವಜಾರೋಹಣ ಇಲ್ಲಿ ನೆರವೇರಿಸಿದರೆ ಮುಂದಿನ ದಿನದಲ್ಲಿ ಆನಂದಪುರದ ಇತಿಹಾಸ, ಸದಾ ಮುಂದಿನ ತಲೆಮಾರಿನ ಜನಪದಕ್ಕೆ ತಲುಪತ್ತದೆ ಎಂದು,ಈ ಕೋಟೆ ಮೇಲಿನ ಬಿದಿರು ಮಟ್ಟಿಗಳನ್ನ ನನ್ನ ಸ್ವ೦ತ ಕಚಿ೯ನಲ್ಲಿ ಬಸವನ ಹೊಂಡದ ಮಂಜಣ್ಣನಿಂದ ತೆಗೆಸಿ, ಸುಡಿಸಿ ಕೊಡುವುದಾಗಿ ಮತ್ತು  ಮುಂದೆ ಪ್ರತಿ ವಷ೯ ಕನ್ನಡ ರಾಜ್ಯೋತ್ಸವದ ಧ್ವಜರೋಹಣ, ಕನ್ನಡ ಸಂಘದವರು ಇಲ್ಲೇ  ನೆರವೇರಿಸುವ ಒಪ್ಪಿಗೆ ಕೂಡ ನೀಡಿದರು.
  ನಂತರ ಮಂಜಪ್ಪನ ಹಿಡಿದು, ಕೆಲಸ ಒಪ್ಪಿಸಿ ಮುಂಗಡ ಹಣ ನೀಡಿದೆ. ಅವನು ಅನೇಕ ಕಡೆ ಆಗಲೇ ಇಂತಹ ಕೆಲಸ  ಹಿಡಿದು ಕೊಂಡು, ಪಡೆದ ಹಣ ಎಲ್ಲ ಕುಡಿದು ಕಾಲಿ ಮಾಡಿ ಕೊಂಡಿದ್ದ. 
     ಅವರೆಲ್ಲ ನಿತ್ಯ ಬೆಳಗಿನ ಜಾವವೇ ಬಂದು ಇವನನ್ನ ಹಿಡಿದುಕೊಂಡು ಹೋಗುತ್ತಿದ್ದರಿಂದ,ಅವನಿಗೆ ಈ ಕೆಲಸ ಒಪ್ಪಲು ಇಷ್ಟ ಇರಲಿಲ್ಲ, ನನ್ನ ಒತ್ತಾಯಕ್ಕೆ ಒಪ್ಪಿದ್ದ.
   ನಂತರ ಕನ್ನಡ ರಾಜ್ಯೋತ್ಸವ ಹತ್ತಿರ ಬಂದರೂ ಮುಂಗಡ ಅಂತ. ಪದೇ ಪದೇ ಗುತ್ತಿಗೆಯ ಅದ೯ಕಿ೦ತ ಹೆಚ್ಚು ಹಣ ಪಡೆದ ಮಂಜಪ್ಪ ನಾಪತ್ತೆ!. ಅಂತೂ ಇಂತು ಅವನನ್ನ ಬೇರೆಯವರು ಬೆಳಗಿನ ಜಾವ ಸೀಜ್ ಮಾಡಿ ಕೆಲಸಕ್ಕೆ ಕರೆದೊಯ್ವ೦ತೆ ನಾವು ಒಂದು ಬೆಳಿಗ್ಗೆ ಅವನನ್ನ ಹಿಡಿದು ಕೆಲಸಕ್ಕೆ ಹಚ್ಚಿದೆವು.
  ಎರಡನೆ ದಿನ ಮಧ್ಯಾಹನವೇ ಮಂಜಪ್ಪ, ತನ್ನ ಹತ್ಯಾರುಗಳ ಜೊತೆಯಲ್ಲಿ ಬಂದು "ನನ್ನ ಹತ್ತಿರ ಈ ಕೆಲಸ ಸಾಧ್ಯವಿಲ್ಲ" ಅಂತ ಉಸಿರು ಬಿಡುತ್ತಾ ಕುಳಿತು ಬಿಟ್ಟ.
      ಅರಣ್ಯ ಇಲಾಖೆಯವರು ಹೆದರಿಸಿದರಾ?, ಸಾಧ್ಯವಿಲ್ಲ ಅವರಿಗೂ ಕೋಟೆ ಸ್ವಚ್ಚ ಮಾಡುವ ಮಾಹಿತಿ ನೀಡಿತ್ತು. ಇನ್ಯಾರು ಇವನಿಗೆ ತೊಂದರೆ ಕೊಟ್ಟಿರಬಹುದು? ಅಂತ ಯೋಚಿಸುತ್ತಾ, ಕುಡಿಯಲು ನೀರು ಕೊಟ್ಟು ಉಪಚರಿಸಿದೆವು.
      ಆಗ ಮಂಜಪ್ಪ ಹೇಳಿದ್ದು ಜುಟ್ಟು ಕಾಳಿಂಗ ಸಪ೯ದ ಉಪಟಳ !!?.
   ಇವನು ಅಲ್ಲಿ ಹೋದ ಕೂಡಲೆ, ಜುಟ್ಟು ಕಾಳಿಂಗ ಒಂದು ಓಡಿಸಿಕೊಂಡು ಬರುತ್ತೆ, ಇವನು ತಗ್ಗಿನಲ್ಲಿ ಓಡಿ ಜೀವ ಉಳಿಸಿಕೊಂಡು ಬಂದಿದಾನೆ ಅಂತ.
   ನನಗೆ ಇದು ಸತ್ಯವಲ್ಲ ಅಂತ ಅನಿಸುತ್ತೆ ಅಂದಾಗ,ಮಂಜಪ್ಪ ಎಲ್ಲರಿಗೂ ಸವಾಲು ಹಾಕಿದ. "ಈಗಲೇ ಬನ್ನಿರಿ ತೋರಿಸುತ್ತೇನೆ, ಅದರಿಂದ ಬಚಾವ್ ಆಗೋದು ನಿಮಗೆ ಸೇರಿದ್ದು" ಅಂದಾಗ ನನ್ನ ಗೆಳೆಯರು ಸಣ್ಣದಾಗಿ ಹೆದರಿದರು, ಅಲ್ಲಿ ನಿಧಿ ಇದೆ ಅದಕ್ಕಾಗಿ ಸಪ೯ ಕಾವಲು ಅಂತೆಲ್ಲ ತಪ್ಪಿಸಿಕೊಳ್ಳಲು ಪ್ರಾರಂಬಿಸಿದ್ದರು.
  ಕನ್ನಡ ರಾಜ್ಯೋತ್ಸವ ಹತ್ತಿರದಲ್ಲಿದೆ, ಹೇಗಾದರು ಮಾಡಿ ಸ್ವಚ್ಚ ಮಾಡಿಸಲೇಬೇಕೆಂಬ ನನ್ನ ಶಪಥ ಈಡೇರಿಸಲು ನಾವೆಲ್ಲ ಮಂಜಪ್ಪನ ಜೊತೆ ಹೋಗುವುದೆಂದು ನಿದ೯ರಿಸಿದೆ.
     ಮಂಜಪ್ಪನನ್ನ ಸರಾಯಿ ಕೊಟ್ಟೆ (ಆಗ ಸ್ಯಾಚೆಟಗಳಲ್ಲಿ ಸರಾಯಿ ಮಾರಾಟ ಮಾಡುತ್ತಿದ್ದರು) ಮತ್ತು ಹೆಚ್ಚಿನ ಸಂಬಾವನೆ ಜೋತೆಯಲ್ಲಿ ರಾಜ್ಯೋತ್ಸವದ ದಿನ ಸನ್ಮಾನ ಇತ್ಯಾದಿ ಆಸೆ ತೋರಿಸಿ ಒಪ್ಪಿಸಿದೆ, ಆದರೆ ಜುಟ್ಟು ಕಾಳಿOಗ ಸಪ೯ ಕೋಟೆ ನಿದಿ ಕಾಯುತ್ತೆ ಅನ್ನುವ ತೀಮಾ೯ನಕ್ಕೆ ಬಂದ ಗೆಳೆಯರು ಮಾತ್ರ ಹೆದರಿಕೆ ಇಂದ ಬರಲು ತಯಾರಿಲ್ಲ. ಅವರಿಗೆಲ್ಲ ಈ ಕೋಟೆಯ 600 ವಷ೯ದ ಇತಿಹಾಸ, ಶಿಥಿಲವಾಗಿ ಸುಮಾರು 150 ವಷ೯ ಆಗಿರುವುದು, ಹಾವು ಬದುಕಿದರೆ ಅದರ  ಆಯುಸ್ಸು ಮತ್ತು 60 ವಷ೯ದ ಹಿಂದೆ ಶಿವಮೊಗ್ಗ ತಾಳಗುಪ್ಪ ರೈಲು ಮಾಗ೯ಕ್ಕಾಗಿ, ಕೋಟೆ ನಡುವೇ ಸೀಳಿ ರೈಲು ಮಾಗ೯ ಹಾಕಿದ್ದೆಲ್ಲ ಮನವರಿಕೆ ಮಾಡಿ ಮಂಜಪ್ಪನಿಂದ ಕೋಟೆ ಸ್ವಚ್ಚ ಮಾಡುವ ಕೆಲಸ ಪುನರಾರಂಭ ಮಾಡಿದೆವು.
  ಯಾವತ್ತೂ ಮನುಷ್ಯನ ಸಸ್ಪಳದಲ್ಲಿ ಅಲ್ಲಿ ಜುಟ್ಟು ಕಾಳಿಂಗ ಬಿಡಿ ಆಡ೯ನರಿ ಹಾವು ಕಾಣಲಿಲ್ಲ, ಕನ್ನಡ ಧ್ವಜ ರಾರಾಜಿಸಿತು.
    ಮೊನ್ನೆ ಇದೇ ಮಾಗ೯ದಲ್ಲಿ ಹೋಗುವಾಗ ಆನಂದ ಪುರದ ಕೋಟೆ ಮೇಲಿನ ಕನ್ನಡ ಧ್ವಜ ನೋಡಿ ಇದೆಲ್ಲ ನೆನಪಾಯಿತು.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂ...

ಶ್ರೀಧರ ಸ್ವಾಮಿ ವರದಳ್ಳಿ ಪವಾಡ ಪುರುಷರು.

   ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ವರದಳ್ಳಿಯ ತಪಸ್ವಿ ಶ್ರೀಧರ ಸ್ವಾಮಿಗಳು.   ವರದಳ್ಳಿ ಶ್ರೀಧರ ಸ್ವಾಮಿಗಳ ಬಗ್ಗೆ ಕೇಳಿದ್ದು, ಓದಿದ್ದು ಮತ್ತು ಅವರ ಒಡನಾಡಿಗಳನ್ನ ಭೇಟಿ ಮಾಡಿದ್ದು ಬಿಟ್ಟರೆ ಅವರನ್ನ ಪ್ರತ್ಯಕ್ಷವಾಗಿ ನೋಡಿಲ್ಲ.     ನಾವು ಚಿಕ್ಕವರಿದ್ದಾಗ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುವಾಗ ಆಗಿನ ಕಾಲದ ಖ್ಯಾತ ಚಲನಚಿತ್ರ ನಟ ಉದಯ ಕುಮಾರ್ ಅರಳಿ ಮರದ ಗ್ಯಾರೇಜ್ ಹತ್ತಿರ ಬಂದಿದ್ದಾರೆ ಅಂತ ಊರಿನ ಜನರೆಲ್ಲ ಗುಂಪು ಗುಂಪಾಗಿ ಓಡುತ್ತಿದ್ದರು, ನಾವು ಚಿಕ್ಕ ಮಕ್ಕಳೆಲ್ಲ ಅವರನ್ನ ಹಿಂಬಾಲಿಸಿದೆವು.       ಅಲ್ಲಿ ಒಂದು ಬಿಳಿ ಅಂಬಾಸಡರ್ ಕಾರು ನಿಂತಿದ್ದು ಅದರ ಅಡಿಯಲ್ಲಿ ಮಲಗಿ ಮೆಕ್ಯಾನಿಕ್ ದುರಸ್ತಿ ಮಾಡುತ್ತಿದ್ದರೆ ಎತ್ತರದ ಮಣ್ಣು ದಿಬ್ಬದ ಮೇಲೆ ನಮ್ಮ ನಟ ಉದಯ ಕುಮಾರ್ ಸಿಗರೇಟು ಸೇದಿ ಹೊಗೆ ಬಿಡುತ್ತಿದ್ದರು. ಯಾರೂ ಅವರ ಹತ್ತಿರ ಮಾತಾಡುವ ದೈಯ೯ ವಹಿಸಲಿಲ್ಲ ಆದರೆ ನೆರೆದ ಜನ ಮಾತಾಡಿಕೊಳ್ಳುತ್ತಿದ್ದ ಮಾತಿನ ಸಾರಾಂಶವೆಂದರೆ ವರದಳ್ಳಿಯಲ್ಲಿ ತಪಸ್ಸು ಮಾಡುತ್ತಿದ್ದ ಶ್ರೀಧರ ಸ್ವಾಮಿಗಳು ದೇಹತ್ಯಾಗ ಮಾಡಿದ್ದಾರೆ ಅದನ್ನ ಕೇಳಿ ಅವರ ಭಕ್ತ ಮತ್ತು ಶಿಷ್ಯರಾದ ಖ್ಯಾತ ಚಿತ್ರ ನಟ ಉದಯ ಕುಮಾರ್ ಬರುವಾಗ ಕಾರು ಹಾಳಾಗಿ ದುರಸ್ತಿಗಾಗಿ ನಿಂತಿದ್ದಾರೆ, ದುಃಖದಲ್ಲಿ ಇರೋದರಿಂದ ಆ ರೀತಿ ಸಿಗರೇಟು ಸೇದಿ ಬೂದಿ ಮಾಡುತ್ತಿದ್ದಾರೆ ಅವರ ಹತ್ತಿರ ಯಾರೂ ಮಾತಾಡ ಬೇಡಿ ಅಂತ ...