1974-75ರಲ್ಲಿ ನಮ್ಮ ತಂದೆ ವಜಿ೯ನಿಯಾ ತಂಬಾಕು ಬೆಳೆದಿದ್ದರು ಸದರಿ ಕಂಪನಿ ಆನಂದಪುರO ಮತ್ತು ತ್ಯಾಗತಿ೯ ಭಾಗದಲ್ಲಿನ ಅನೇಕ ರೈತರೊಂದಿಗೆ ಬೆಳೆ ಖರೀದಿಸುವ ಒಪ್ಪ೦ದ ಮಾಡಿ ಬ್ಯಾಂಕಿನಿಂದ ಬೆಳೆ ಸಾಲ ಮತ್ತು ತಂಬಾಕು ಹದ ಮಾಡುವ ಮನೆ (ಬ್ಯಾರನ್) ಗೆ ರೈತರ ಜಮೀನು ಅಡಮಾನ ಮಾಡಿ ಸಾಲ ಕೊಡಿಸಿತ್ತು ಒಂದೇ ವಷ೯ದಲ್ಲಿ ಸದರಿ ಸ೦ಸ್ಥೆ ನಾಪತ್ತೆ ಆದ್ದರಿಂದ ಸಾಲ ಮಾಡಿದ ರೈತರು ಹೈರಾಣ ಆದರು ಹಾಗಾಗಿ ಸಕಾ೯ರಕ್ಕೆ ಸಾಲ ಮನ್ನಕ್ಕಾಗಿ ನಷ್ಟ ಮಾಡಿದ ಕಂಪನಿ ವಿರುದ್ಧ ಕ್ರಮಕ್ಕಾಗಿ ಸಂಘಟಿತರಾಗಿ ಹೋರಾಟ ಪ್ರಾರಂಬಿಸಿದ್ದರು ಈ ಸಂಬಂದದ ಸಭೆಗಳು ಆನಂದಪುರದ ನಮ್ಮ ಮನೇಲಿ ನಡೆಯುತ್ತಿತ್ತು.
ಆಗ ತ್ಯಾಗತಿ೯ ಭಾಗದಿಂದ ಗುರುಮೂತಿ೯ ರಾಯರು, ಬರೂರು ಸದಾಶಿವಪ್ಪ ಗೌಡರು, ಬರೂರು ಬಂಗಾರಪ್ಪನವರು ಬರುತ್ತಿದ್ದರು ಆಗ ನಾನು 5ನೇ ತರಗತಿ ಮತ್ತು ತಂಬಾಕಿನ ಗಿಡದ ನಸ೯ರಿ ಕೆಲಸ, ತಂಬಾಕು ಹದ ಮಾಡುವುದು ಗ್ರೇಡ್ ಮಾಡುವುದರಲ್ಲಿ ಎಕ್ಸ್ಪಟ್೯ ಆಗಿದ್ದೆ.
ಮುಂದೆ 2005ರಲ್ಲಿ ಈ ವಜಿ೯ನಿಯ ಕ೦ಪನಿಯ ಮಾಲಿಕರ ಬೇಟಿ ಮಾಡುವ ಸಂದಭ೯ ಹೈದ್ರಾಬಾದ್ ನಲ್ಲಿ ಬಂದಿತ್ತು ಆಗ ಅವರಲ್ಲಿ ನಮ್ಮ ತಂದೆ ನಿಮ್ಮ ಕಂಪನಿ ಕರಾರಿನ ಪ್ರಕಾರ ಒಂದು ವಷ೯ ತಂಬಾಕು ಬೆಳೆದಿದ್ದು ಮರುವಷ೯ ನೀವು ಕರಾರಿನ ಪ್ರಕಾರ ರೈತರಿಗೆ ಸಹಕರಿಸದಿಂದ ನಷ್ಟ ಆದ ಬಗ್ಗೆ ವಿವರಿಸಿದೆ, ಇಂದಿರಾ ಗಾಂಧಿಯವರ ನಿಕಟವತಿ೯ ಆಗಿದ್ದ ಅನೇಕ ಬಾರಿ ಸಂಸದ ಸದಸ್ಯರಾಗಿದ್ದ ಅವರು ಅದಕ್ಕೆ ಕಾರಣ ತಿಳಿಸಿದರು ಇವರು ಭಾರತದಿಂದ ರಷ್ಯಾಕ್ಕೆ ದೊಡ್ಡ ಪ್ರಮಾಣದಲ್ಲಿ ಸಿಗರೇಟು ರಪ್ತು ಮಾಡುವವರು, ರಷ್ಯಾದಲ್ಲಿ ಬಂಡುಕೋರರ ಕ್ರಾ೦ತಿ ಅದರಿ೦ದ ನಡೆದ ಆಂತರಿಕ ಯುದ್ಧದಲ್ಲಿ ಇವರ ಸಿಗರೇಟು ತುಂಬಿದ ಕಂಟೈನರ್ ಗಳು ಯಾರದೊ ಪಾಲಾಗಿ ದೊಡ್ಡ ನಷ್ಟದಿಂದ ಕನಾ೯ಟಕದಲ್ಲಿ ರೈತರ ಜೊತೆಯ ಖರೀದಿ ಒಪ್ಪ೦ದ ನಿಂತಿತ್ತು ಅಂತ ತಿಳಿಸಿದ್ದರು ಇದನ್ನ ಕೇಳಲು ನಮ್ಮ ತಂದೆ ಆಗಿ ಎಲ್ಲಾ ಹೋರಾಟಗಾರರು ಇಹಲೋಕ ತ್ಯಜಿಸಿದ್ದರು.
ಆಗ ಈ ಹೋರಾಟಕ್ಕೆ ನನ್ನ ಸಹೋದರ ನಾಗರಾಜ್ ಅದ್ಯಕ್ಷರಾಗಿ ಕಾನೂನು ಸಲಹೆಗಾರರಾಗಿ ಸಾಗರದ ಖ್ಯಾತ ವಕೀಲರಾದ ಕೆ.ಟಿ.ಶೆಟ್ಟರು ಸಮಾವೇಶ ಇತ್ಯಾದಿ ಅಂತ ಒಡಾಡುತ್ತಿದ್ದರು ಈ ಹೋರಾಟಕ್ಕೆ ಆಗ ವಿರೋದ ಪಕ್ಷದ ನಾಯಕರಾದ ದೇವೇಗೌಡರು, ರೈತ ಮುಖಂಡರಾದ ನಂಜುಂಡ ಸ್ವಾಮಿ ಹೆಚ್ಚು ಸಹಕಾರ ನೀಡಿದ್ದರು (ದೇವೇಗೌಡರು ಆಗ Post Card ನಲ್ಲಿ ಸ್ವತಃ ಬರೆಯುತ್ತಿದ್ದ ಪತ್ರ ನಮ್ಮ ಸಂಗ್ರಹದಲ್ಲಿದೆ).
ಇದೆಲ್ಲ ನೆನಪಾಗಿದ್ದು ತ್ಯಾಗತಿಯಲ್ಲಿ ಗುರುಮೂತಿ೯ ರಾಯರು ಶಾಲೆ ಪ್ರಾರಂಬಿಸಿ ಅದಕ್ಕೆ 20 ಎಕರೆ ದಾನ ನೀಡಿದ ಭೂಮಿ ಕಳೆದು ಹೋಗಿದೆ ಅಂತ ಹುಡುಕಿ ಕೊಡಿ ಅಂತ ಚಳವಳಿ ಪ್ರಾರಂಬಿಸಿದ್ದಾರೆ ಸ್ಥಳಿಯ ಯುವಕರು ಅಲ್ಲಿ ಗುರುಮೂತಿ೯ ರಾಯರ ಹೆಸರು ಮುನ್ನೊಲೆಗೆ ಬಂದಿದೆ.
ನಾನು ಜಿ.ಪಂ.ಸದಸ್ಯನಾಗಿದ್ದಾಗ ಈ ಊರು ನನ್ನ ವ್ಯಾಪ್ತಿಗೆ ಬಂದಿತ್ತು ಆಗಲೂ ಈ ವಿಚಾರ ಆಗಾಗ್ಗೆ ಪ್ರಸ್ತಾಪನೆ ಆಗಿ ಹಾಗೆ ಮಲಗಿ ಬಿಡುತ್ತಿತ್ತು ಕಾರಣ ಶಾಲಾ ಸಮಿತಿ ಸಿಬ್ಬOದಿ ಮತ್ತು ಅತಿಕ್ರಮದಾರರಲ್ಲಿ ಒಳ್ಳೆ ಹೊಂದಾಣಿಕೆ ಇದ್ದಿದ್ದು.
ಇನಾಂದಾರ್ ಗುರುಮೂತಿ೯ ರಾಯರಿಗೆ ಮೂವರು ಹೆಣ್ಣು ಮಕ್ಕಳು ಮಾತ್ರ ಈಗ ಅವರೆಲ್ಲ ಬೆಂಗಳೂರಿನಲ್ಲಿ ನೆಲೆಸಿದ್ದಾರೆ, ಗುರುಮೂತಿ೯ ರಾಯರು ಅತ್ಯಂತ ಹಿಂದುಳಿದ ತ್ಯಾಗತಿ೯ಯ ಬಡಮಕ್ಕಳಿಗೆ ವಿದ್ಯಾಭ್ಯಾಸಕ್ಕಾಗಿ ತಮ್ಮ ಮನೆಯಲ್ಲೇ ಶಾಲೆ ಪ್ರಾರಂಬಿಸುತ್ತಾರೆ ನಂತರ ತಮ್ಮ 20 ಎಕರೆ ಜಮೀನು ದಾನಪತ್ರ ಮಾಡಿ ಸಮಿತಿಗೆ ಹತ್ತಾಂತರಿಸುತ್ತಾರೆ ಇದು ಈಗ ಈ ಊರಿನ ಕೇಂದ್ರ ಸ್ಥಾನದ ಪ್ರತಿಷ್ಟಿತ ಶಾಲೆ ಆಗಿದೆ ಆದರೆ ಗುರುಮೂತಿ೯ ರಾಯರು ನೀಡಿದ 20 ಎಕರೆಯಲ್ಲಿ 10 ಎಕರೆ ಮಾತ್ರ ಶಾಲಾ ಬೌOಡರಿ ಆಗಿದೆ ಉಳಿದ 10 ಎಕರೆ ಅತಿಕ್ರಮಿಸಿ ಮಾರಾಟ ಕೂಡ ಮಾಡಿದ್ದಾರೆ ಕಣ್ಣಎದುರಲ್ಲೇ ಈ ರೀತಿ ನಡೆದರೂ ಯಾರೂ ವಿರೋದಿಸದೇ ಇರುವುದು ದುರOತ.
ಗುರುಮೂತಿ೯ ರಾಯರು ಈ ಊರಲ್ಲಿ ಅಕ್ಕಿ ಗಿರಣಿ ಕೂಡ ಸ್ಥಾಪಿಸಿದ್ದರು, ಸ್ವಾತಂತ್ರ ಪೂವ೯ದಲ್ಲಿ ಎರಡು ವಷ೯ ಬೀಕರ ಬರಗಾಲ ಬಂದಾಗ ತಮ್ಮ ಸಂಗ್ರಹದಲ್ಲಿನ ಭತ್ತ ನೊಂದ ರೈತರಿಗೆ ದೊಡ್ಡ ಪ್ರಮಾಣದಲ್ಲಿ ಹಂಚಿದ್ದರು ಹಾಗಾಗಿ ಮೈಸೂರು ರಾಜರು ಇವರಿಗೆ ವಿಶೇಷ ಗೌರವ ನೀಡಿದ್ದರು, ಇವರು ಮೈಸೂರು ರಾಜಸ್ಥಾನಕ್ಕೆ ವಿಶೇಷ ಪ್ರತಿನಿಧಿಯೂ ಆಗಿದ್ದರು.
ತ್ಯಾಗತಿ೯ಯ ಶಾಲಾ ಜಮೀನು ಹೊರಾಟ ಗುರುಮೂತಿ೯ ರಾಯರ ದೊಡ್ಡ ಮಗಳು ಅಳಿಯಂದಿರಿಗೆ ತಿಳಿದು ಅವರು ಈ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ ಅವಶ್ಯ ಬಿದ್ದರೆ ಶಿಕ್ಷಣ ಸಚಿವರಿಗೆ ಸಂಪಕಿ೯ಸುವುದಾಗಿ ಹೇಳಿದ್ದಾರೆ.
ಗುರುಮೂತಿ೯ ರಾಯರ ಮೊದಲ ಮಗಳಾದ ಶ್ರೀಮತಿ ಸುಧಾ ಮತ್ತು ಅವರ ಪತಿ ಡಾ.ಎನ್.ಎಸ್.ವಿಶ್ವಪತಿ ಶಾಸ್ತ್ರೀಗಳು ನಮ್ಮ ಆತ್ಮೀಯರು ನವೆಂಬರ್ ನಲ್ಲಿ ನಡೆದ ನನ್ನ ಮಗಳ ಮದುವೆ ಇವರ ನೇತೃತ್ವದಲ್ಲಿ ನಡೆಯಿತು.
ದೇವೇಗೌಡರಿಗೆ ಪ್ರದಾನಿ ಆಗುವ ಜಾತಕ ಬಲ ಇದೆ ಅಂದವರು, ಅವರು ಪ್ರದಾನಿ ಆದಾಗ ಅವರೊಡನೆ ಇದ್ದವರು ನಮ್ಮ ಊರಿನ ವರಸಿದ್ಧಿವಿನಾಯಕ ದೇವಸ್ಥಾನದ ಟ್ರಸ್ಟನ ಗೌರವಾಧ್ಯಕ್ಷರು.
ಅವರ ಸೆಲ್ ನಂಬರ್+919448018711
Comments
Post a Comment