#ಅರಿಶಿಣ_ಔಷದಿಯೂ_ಹೌದು
#ಮಾರುಕಟ್ಟೆಯಲ್ಲಿರುವ_ಅರಿಶಿಣಪುಡಿ_ನಂಬಲಹ೯_ಗುಣಮಟ್ಟ_ಹೊಂದಿಲ್ಲ.
ಎಷ್ಟೇ ಗುಣಮಟ್ಟದ ಅರಿಶಿಣ ಪುಡಿ ಅಂತ ಖರೀದಿಸಿ ತಂದರೂ ಅದರಲ್ಲಿ ಒಂದಲ್ಲ ಒಂದು ಕೊರತೆ ಇದ್ದಿದ್ದೇ ಆದ್ದರಿಂದ ಕಳೆದ ವರ್ಷದಿಂದ ನಾವೇ ಅರಿಶಿಣದ ಪುಡಿ ಮಾಡಿ ಕೊಂಡು ಬಳಸುವ ಅನುಕೂಲದ ದಾರಿ ಮಾಡಿಕೊಂಡಿದ್ದೇನೆ.
ಹಸಿ ಅರಿಶಿಣ ಮಣ್ಣಿಂದ ತೆಗೆದು ತೊಳೆದು ಅದರ ಬೇರು ಇತ್ಯಾದಿ ನಿವಾರಿಸಿ, ಸಣ್ಣದಾಗಿ ತುಂಡರಿಸಿ ಬಿಸಿಲಲ್ಲಿ ಒಣಗಿಸಿ ನಂತರ ಬೇಕಾದಾಗೆಲ್ಲ ಅರಿಷಿಣದ ಹುಡಿ ಮಾಡಿಕೊಳ್ಳುವುದು.
ಅರಿಶಿಣದ ಹುಡಿ ವಾಣಿಜ್ಯ ಉದ್ದೇಶಕ್ಕಾಗಿ ಮಾಡುವವರು ಅರಿಶಿಣದ ಕೊಂಬೆ ಬೇಯಿಸಿ ನಂತರ ಒಣಗಿಸಿ ಹಿಟ್ಟು ಮಾಡುತ್ತಾರೆ ಆದರೆ ಈ ಮಾದರಿಯಲ್ಲಿ ಬೇಯಿಸಿದ ನೀರಲ್ಲಿ ಅರಿಶಿಣದ ಔಷದಿ ಗುಣಗಳು ಹೊರ ಹೋಗುತ್ತದೆ ಎಂಬ ಮಾತಿದೆ.
ಅರಿಶಿಣ ಹಸಿಯಾಗಿ ತುಂಡರಿಸಿ ಒಣಗಿಸಿ ಅರಿಶಿಣದ ಪುಡಿ ಮಾಡುವ ಮಾದರಿಯೇ ಸರಿ ಅಂತ ನನ್ನ ಅನುಭವ.
Comments
Post a Comment